ಹಿಂದೂ ಧರ್ಮಕ್ಕೆ ಮತಾಂತರ ಆಗಲು ಅಲಿ ಅಕ್ಬರ್ ನಿರ್ಧಾರ; ಬಲವಾದ ಕಾರಣ ನೀಡಿದ ಖ್ಯಾತ ನಿರ್ದೇಶಕ
Malayalam director Ali Akbar: ಬಿಪಿನ್ ರಾವತ್ ನಿಧನಕ್ಕೆ ಸಂಬಂಧಿಸಿದ ಸೋಶಿಯಲ್ ಮೀಡಿಯಾ ಪೋಸ್ಟ್ಗಳಿಗೆ ಕೆಲವು ಮುಸ್ಲಿಮರು ಖುಷಿಯ ಎಮೋಜಿಗಳನ್ನು ಬಳಸಿ ಕಮೆಂಟ್ ಮಾಡಿದ್ದರು. ಅದನ್ನು ಖಂಡಿಸಿ ಅಲಿ ಅಕ್ಬರ್ ಅವರು ಮತಾಂತರದ ನಿರ್ಧಾರ ತೆಗೆದುಕೊಂಡಿದ್ದಾರೆ.
ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ಅಲಿ ಅಕ್ಬರ್ (Ali Akbar) ಅವರು ಹಿಂದೂ ಧರ್ಮಕ್ಕೆ ಮತಾಂತರ ಆಗಲು ನಿರ್ಧರಿಸಿದ್ದಾರೆ. ‘ನಾನು ಮತ್ತು ನನ್ನ ಹೆಂಡತಿ ಹಿಂದೂ ಧರ್ಮಕ್ಕೆ (Hinduism) ಮತಾಂತರ ಆಗುತ್ತೇವೆ. ಇನ್ನೆಂದೂ ನಾವು ಮುಸ್ಲಿಮರಾಗಿ ಮುಂದುವರಿಯುವುದಿಲ್ಲ’ ಎಂದು ಅವರು ಹೇಳಿದ್ದಾರೆ. ಬಿಪಿನ್ ರಾವತ್ (Bipin Rawat) ಅವರ ನಿಧನಕ್ಕೆ ಸಂಬಂಧಿಸಿದ ಸೋಶಿಯಲ್ ಮೀಡಿಯಾ ಪೋಸ್ಟ್ಗಳಿಗೆ ಕೆಲವು ಮುಸ್ಲಿಮರು ಖುಷಿಯ ಎಮೋಜಿಗಳನ್ನು ಕಮೆಂಟ್ ಮಾಡಿದ್ದನ್ನು ಖಂಡಿಸಿ ಅಲಿ ಅಕ್ಬರ್ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಮುಸ್ಲಿಂ ಧರ್ಮದಲ್ಲಿನ ನಂಬಿಕೆಗಳನ್ನು ಕೈ ಬಿಡುವುದಾಗಿ ಅವರು ತಿಳಿಸಿದ್ದಾರೆ.
ಮಿಲಿಟರಿ ಅಧಿಕಾರಿ ಬಿಪಿನ್ ರಾವತ್ ಅವರ ಸಾವಿಗೆ ಅಗೌರವ ಸೂಚಿಸಿದ ದೇಶವಿರೋಧಿ ಮುಸ್ಲಿಮರ ಕೃತ್ಯವನ್ನು ಯಾವುದೇ ಮುಸ್ಲಿಂ ನಾಯಕರೂ ಖಂಡಿಸಿಲ್ಲ. ಹಾಗಾಗಿ ಈ ಧರ್ಮದ ಬಗ್ಗೆ ತಮಗೆ ನಂಬಿಕೆ ಉಳಿದಿಲ್ಲ ಎಂದು ಅಲಿ ಅಕ್ಬರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫೇಸ್ಬುಕ್ನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಈ ವಿಚಾರವನ್ನು ಅವರು ತಿಳಿಸಿದ್ದಾರೆ.
‘ಹುಟ್ಟಿನಿಂದ ನಾನು ಪಡೆದ ಗುರುತನ್ನು ಇಂದು ತ್ಯಜಿಸುತ್ತಿದ್ದೇನೆ. ಇಂದಿನಿಂದ ನಾನು ಮುಸ್ಲಿಂ ಅಲ್ಲ. ಇಂದಿನಿಂದ ನಾನು ಭಾರತೀಯ. ಭಾರತದ ವಿರುದ್ಧ ನಗುವ ಎಮೋಜಿಗಳನ್ನು ಪೋಸ್ಟ್ ಮಾಡಿದ ಜನರಿಗೆ ಇದೇ ನನ್ನ ಉತ್ತರ’ ಎಂದು ಅಲಿ ಅಕ್ಬರ್ ಹೇಳಿದ್ದಾರೆ. ಅಲಿ ಅಕ್ಬರ್ ಮಾಡಿರುವ ಈ ಪೋಸ್ಟ್ಗೆ ಅನೇಕರು ಬೆಂಬಲ ಸೂಚಿಸಿದ್ದಾರೆ. ಅದೇ ರೀತಿ ಕೆಲವು ಮುಸ್ಲಿಮರಿಂದ ವಿರೋಧ ಕೂಡ ವ್ಯಕ್ತವಾಗಿದೆ. ಕೆಲವರು ಅವಾಚ್ಯ ಶಬ್ಧಗಳಿಂದ ಅಲಿ ಅಕ್ಬರ್ ಅವರನ್ನು ನಿಂದಿಸಿದ್ದಾರೆ. ಅಂಥವರಿಗೆ ಅದೇ ರೀತಿಯ ಭಾಷೆಯಲ್ಲಿ ಅಲಿ ಅಕ್ಬರ್ ಉತ್ತರ ನೀಡಿದ್ದಾರೆ.
ಈ ವಿಡಿಯೋ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಫೇಸ್ಬುಕ್ನಿಂದ ಅದು ಕಾಣೆ ಆಗಿದೆ. ಬಳಿಕ ವಾಟ್ಸಪ್ ಮೂಲಕ ವೈರಲ್ ಆಗಿದೆ. ಬಿಪಿನ್ ರಾವತ್ ಅವರ ಸಾವನ್ನು ಸಂಭ್ರಮಿಸುವವರನ್ನು ಪತ್ತೆ ಹಚ್ಚಿ ಸೂಕ್ತ ಶಿಕ್ಷೆ ನೀಡಬೇಕು ಎಂದು ಅಲಿ ಅಕ್ಬರ್ ಅವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:
Published On - 9:54 am, Sat, 11 December 21