ಇಂದು ಹರಿದ್ವಾರದಲ್ಲಿ ಬಿಪಿನ್​ ರಾವತ್​ ಚಿತಾಭಸ್ಮ ವಿಸರ್ಜನೆ; ಸಿಡಿಎಸ್​ ಸ್ಮರಣಾರ್ಥ ಉತ್ತರಾಖಂಡ್​​ನಲ್ಲಿ ಶಹೀದ್​ ಸೈನ್ಯ ಧಾಮ ನಿರ್ಮಾಣ

Bipin Rawat: ಬಿಪಿನ್​ ರಾವತ್​ ಮೂಲತಃ ಉತ್ತರಾಖಂಡ್​​ನವರೇ ಆಗಿದ್ದಾರೆ. ಅವರ ಅಂತ್ಯಕ್ರಿಯೆನ್ನು ದೆಹಲಿಯಲ್ಲಿಯೇ ಮಾಡಲಾಗಿದ್ದರೂ ಚಿತಾಭಸ್ಮ ವಿಸರ್ಜನೆ ಹರಿದ್ವಾರದಲ್ಲಿ ಆಗಲಿದೆ.

ಇಂದು ಹರಿದ್ವಾರದಲ್ಲಿ ಬಿಪಿನ್​ ರಾವತ್​ ಚಿತಾಭಸ್ಮ ವಿಸರ್ಜನೆ; ಸಿಡಿಎಸ್​ ಸ್ಮರಣಾರ್ಥ ಉತ್ತರಾಖಂಡ್​​ನಲ್ಲಿ ಶಹೀದ್​ ಸೈನ್ಯ ಧಾಮ ನಿರ್ಮಾಣ
ಬಿಪಿನ್​ ರಾವತ್​ ಅಂತ್ಯಕ್ರಿಯೆ
Follow us
TV9 Web
| Updated By: Lakshmi Hegde

Updated on:Dec 11, 2021 | 11:44 AM

ತಮಿಳುನಾಡಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್​ ದುರಂತದಲ್ಲಿ ಮಡಿದ ಸಿಡಿಎಸ್​ ಬಿಪಿನ್​ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್​ ಚಿತಾ ಭಸ್ಮವನ್ನು ಇಂದು ಅವರ ಕುಟುಂಬದವರು ಹರಿದ್ವಾರಕ್ಕೆ ಕೊಂಡೊಯ್ದು ಅಲ್ಲಿ ವಿಸರ್ಜನೆ ಮಾಡಲಿದ್ದಾರೆ. ಡಿಸೆಂಬರ್​ 8ರಂದು ತಮಿಳುನಾಡಿನ ಕೂನೂರು ಬಳಿ ಸೇನಾ ಹೆಲಿಕಾಪ್ಟರ್​ ಪತನಗೊಂಡಿತ್ತು. ಅದರಲ್ಲಿ ಪ್ರಯಾಣ ಮಾಡುತ್ತಿದ್ದ ಸಿಡಿಎಸ್​ ರಾವತ್​ ಮತ್ತು ಅವರ ಪತ್ನಿ ಮಧುಲಿಕಾ ರಾವತ್​ ಹಾಗೂ ಇತರ 11 ಸೇನಾಧಿಕಾರಿಗಳು ಮೃತಪಟ್ಟಿದ್ದಾರೆ. ಅವರಲ್ಲಿ ಬಿಪಿನ್​ ರಾವತ್​ ಮತ್ತು ಅವರ ಪತ್ನಿಯ ಅಂತ್ಯಕ್ರಿಯೆಯನ್ನು ದೆಹಲಿಯ ಬ್ರಾರ್​ ಸ್ಕ್ವೇರ್​​ನಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ. ಈಗ ಇಬ್ಬರ ಚಿತಾಭಸ್ಮವನ್ನೂ ಇಂದು ಬೆಳಗ್ಗೆ 10 ಗಂಟೆ ಹೊತ್ತಿಗೆ ವಿಐಪಿ ಘಾಟ್​​ನಲ್ಲಿ ವಿಸರ್ಜನೆ ಮಾಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. 

ಬಿಪಿನ್​ ರಾವತ್​ ಮೂಲತಃ ಉತ್ತರಾಖಂಡ್​​ನವರೇ ಆಗಿದ್ದಾರೆ. ಅವರ ಅಂತ್ಯಕ್ರಿಯೆನ್ನು ದೆಹಲಿಯಲ್ಲಿಯೇ ಮಾಡಲಾಗಿದ್ದರೂ ಚಿತಾಭಸ್ಮ ವಿಸರ್ಜನೆ ಹರಿದ್ವಾರದಲ್ಲಿ ಆಗಲಿದೆ. ಹಾಗೇ, ಹರಿದ್ವಾರದಲ್ಲಿ ಅಖಾಡ ಮತ್ತು ಸಂತ ಸಮಾಜ ಸೇರಿ, ಬಿಪಿನ್ ರಾವತ್ ಸ್ಮರಣಾರ್ಥ ಒಂದು ಬೃಹತ್​ ಶಹೀದ್​ ಸೈನ್ಯ​ ಧಾಮ (ಹುತಾತ್ಮರ ಧಾಮ) ನಿರ್ಮಾಣ ಮಾಡಲಿದೆ ಎಂದು ಅಖಿಲ ಭಾರತ ಅಖಾಡ ಪರಿಷತ್ ಅಧ್ಯಕ್ಷ  ಮತ್ತು ನಿರಂಜನಿ ಅಖಾಡ ಕಾರ್ಯದರ್ಶಿ ಮಹಂತ್ ರವೀಂದ್ರಪುರಿ ಮತ್ತು ಪ್ರಧಾನ ಕಾರ್ಯದರ್ಶಿ ಮಹಂತ್ ಹರಿಗಿರಿ ತಿಳಿಸಿದ್ದಾರೆ. ಹಾಗೇ ಇದು ಉತ್ತರಾಖಂಡ್​ನಲ್ಲಿ ಈಗಾಗಲೇ ಇರುವ ನಾಲ್ಕು ಧಾಮಗಳೊಟ್ಟಿಗೆ ಐದನೇ ಧಾಮವಾಗಲಿದೆ ಎಂದು ಹೇಳಲಾಗಿದೆ. ಇಲ್ಲಿನ ಎಲ್ಲ ಸಂತ ಸಮಾಜ ಮತ್ತು ಅಖಿಲ ಭಾರತೀಯ ಆಖಾಡ ಪರಿಷತ್​​ ಬಿಪಿನ್ ರಾವತ್​ ಕುಟುಂಬದೊಟ್ಟಿಗೆ ನಿಲ್ಲುತ್ತೇವೆ ಎಂದು ಹೇಳಿದ್ದಾರೆ.

ಇಂದು ಬಿಪಿನ್​ ರಾವತ್​ ಪುತ್ರಿಯರಾದ ಕೃತ್ತಿಕಾ ಮತ್ತು ತಾರಿಣಿ ಚಿತಾಭಸ್ಮವನ್ನು ಹರಿದ್ವಾರಕ್ಕೆ ತಂದು ವಿಸರ್ಜನೆ ಮಾಡಲಿದ್ದಾರೆ. ಈ ವೇಳೆ ಅಲ್ಲಿಗೆ ಉತ್ತರಾಖಂಡ್​ ಮುಖ್ಯಮಂತ್ರಿ ಪುಷ್ಕರ್​ ಸಿಂಗ್​ ಧಮಿ ಮತ್ತು ರಾಜ್ಯದ ರಕ್ಷಣಾ ಸಚಿವ ಅಜಯ್​ ಭಟ್​ ಕೂಡ ಉಪಸ್ಥಿತರಿರುವರು ಎಂದು ಹರಿದ್ವಾರದ ಜಿಲ್ಲಾಧಿಕಾರಿ ವಿನಯ್​ ಶಂಕರ್​ ಪಾಂಡೆ ತಿಳಿಸಿದ್ದಾರೆ. ದೆಹಲಿಯ ಚಿತಾಗಾರದಿಂದ ಡೆಹ್ರಾಡೂನ್​ನ ಜೊಲ್ಲೆ ಗ್ರ್ಯಾಂಟ್ ಏರ್​​ಪೋರ್ಟ್​ವರೆಗೆ ವಾಯುಮಾರ್ಗದ ಮೂಲಕ ಚಿತಾಭಸ್ಮವನ್ನು ತರಲಾಗುವುದು. ಅಲ್ಲಿಂದ ಆರು ಗಂಟೆಗೇ ವಿಮಾನ ಹೊರಟಿದೆ. ನಂತರ ಡೆಹ್ರಾಡೂನ್​ ಏರ್​​ಪೋರ್ಟ್​ನಿಂದ ಹರಿದ್ವಾರಕ್ಕೆ ರಸ್ತೆ ಮಾರ್ಗದ ಮೂಲಕ ಪ್ರಯಾಣ ಮಾಡಲಾಗುವುದು ಎಂದು ಹೇಳಲಾಗಿದೆ.

ಇದನ್ನೂ ಓದಿ: ಚಳಿಗಾಲ ಶುರುವಾಗಿ ಡಿಸೈನರ್ ಮತ್ತು ಫ್ಯಾಶನೇಬಲ್ ಶಾಲುಗಳು ಮಾರ್ಕೆಟ್​ಗೆ ಬಂದಾಯ್ತು, ನೀವು ಖರೀದಿಸಿದಿರಾ?

Published On - 9:44 am, Sat, 11 December 21

ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ
ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ
ಹಿಟ್ಟಿನ ದೀಪ ಹಚ್ಚುವದರ ಹಿಂದಿನ ರಹಸ್ಯವೇನು? ಏನು ಪ್ರಯೋಜನ
ಹಿಟ್ಟಿನ ದೀಪ ಹಚ್ಚುವದರ ಹಿಂದಿನ ರಹಸ್ಯವೇನು? ಏನು ಪ್ರಯೋಜನ