ಚಳಿಗಾಲ ಶುರುವಾಗಿ ಡಿಸೈನರ್ ಮತ್ತು ಫ್ಯಾಶನೇಬಲ್ ಶಾಲುಗಳು ಮಾರ್ಕೆಟ್​ಗೆ ಬಂದಾಯ್ತು, ನೀವು ಖರೀದಿಸಿದಿರಾ?

ಚಳಿಗಾಲ ಶುರುವಾಗಿ ಡಿಸೈನರ್ ಮತ್ತು ಫ್ಯಾಶನೇಬಲ್ ಶಾಲುಗಳು ಮಾರ್ಕೆಟ್​ಗೆ ಬಂದಾಯ್ತು, ನೀವು ಖರೀದಿಸಿದಿರಾ?

TV9 Web
| Updated By: shivaprasad.hs

Updated on: Dec 11, 2021 | 9:48 AM

ಚಳಿಗಾಲ ಆರಂಭವಾಗಿದೆ ಮತ್ತು ಶಾಲುಗಳಿಗೆ ಬೇಡಿಕೆಯೂ ಹೆಚ್ಚಾಗಿದೆ. ಅವು ದೊರೆಯುವ ಸ್ಥಳಗಳಿಗೆ ಜನ ಲಗ್ಗೆಯಿಡುತ್ತಿದ್ದಾರೆ. ಆಗಲೇ ಹೇಳಿದಂತೆ ಅರಿಸಿಕೊಳ್ಳಲು ನೂರೆಂಟು ವೈವಿಧ್ಯಮಯ ಮತ್ತು ಡಿಸೈನರ್ ಶಾಲುಗಳಿವೆ.

ಶಾಲುಗಳಿಗೆ ಸ್ಟೇಟಸ್ ಸಿಂಬಲ್ ಮೊದಲಿಂದಲೂ ಇತ್ತು. ಅವು ಈಗ ಫ್ಯಾಶನ್ ಸಿಂಬಲ್ ಸಹ ಗುರುತಿಸಿಕೊಂಡಿವೆ ಅಂತ ನಾವು ಹೇಳಿದರೆ, ಏಯ್ ಸಮ್ನಿರಿ ಮಾರಾಯ್ರೇ ಅಂದಿರಾ. ನಾವು ಹೇಳುತ್ತಿರುವುದು ಶೇಕಡಾ ನೂರಕ್ಕಿಂತ ಹೆಚ್ಚು ಸತ್ಯ ಮಾರಾಯ್ರೇ. ಹಿಂದೊಂದು ಜಮಾನಾ ಇತ್ತು. ಕೇವಲ ಹಿರಿಯರು, ಉಳ್ಳವರು, ಮತ್ತು ಸಿನಿಮಾಗಳಲ್ಲಿ ಶ್ರೀಮಂತ ನಾಯಕ ನಟಿಯ ತಂದೆ ಇಲ್ಲವೇ ತಾಯಿ ಪಾತ್ರ ಮಾಡಿದವರ ಮೈ ಮೇಲೆ ಶಾಲು ಕಾಣುತಿತ್ತು. ಆದರೀಗ ಜಮಾನಾ ಬದಲಾಗಿದೆ. ಕೆಲ ವೆರೈಟಿಯ ಶಾಲುಗಳು ದುಬಾರಿ ನಿಜ ಆದರೆ, ಕೈಗೆಟಕುವ ಬೆಲೆಯಲ್ಲಿ ದೊರಕುವ ಶಾಲುಗಳೂ ಇವೆ. ಮತ್ತೊಂದು ಗಮನಾರ್ಹ ಸಂಗತಿಯೇನೆಂದರೆ, ಶಾಲು ತಯಾರಿಸುವ ಕಂಪನಿಗಳು ಅವುಗಳ ದರ್ಜೆಯನ್ನು ಮತ್ತಷ್ಟು ಎತ್ತರಕ್ಕೆ ಏರಿಸಿವೆ. ಹೌದು ಡಿಸೈನರ್ ಶಾಲುಗಳು ಸಹ ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಈ ವಿಡಿಯೋ ನೋಡಿದರೆ ನಿಮಗೆ ಗೊತ್ತಾಗುತ್ತದೆ.

ಚಳಿಗಾಲ ಆರಂಭವಾಗಿದೆ ಮತ್ತು ಶಾಲುಗಳಿಗೆ ಬೇಡಿಕೆಯೂ ಹೆಚ್ಚಾಗಿದೆ. ಅವು ದೊರೆಯುವ ಸ್ಥಳಗಳಿಗೆ ಜನ ಲಗ್ಗೆಯಿಡುತ್ತಿದ್ದಾರೆ. ಆಗಲೇ ಹೇಳಿದಂತೆ ಅರಿಸಿಕೊಳ್ಳಲು ನೂರೆಂಟು ವೈವಿಧ್ಯಮಯ ಮತ್ತು ಡಿಸೈನರ್ ಶಾಲುಗಳಿವೆ. ಶಾಲು ಯಾವುದೇ ಸ್ವರೂಪದ್ದಾಗಿರಲಿ ಅಂದರೆ, ಕಾಟನ್, ಹ್ಯಾಂಡ್ ಲೂಮ್, ರೇಶ್ಮೆ, ಡಿಸೈನರ್ ಇಲ್ಲವೆ ಉಣ್ಣೆ-ಅದು ಮೈಯನ್ನು ಬೆಚ್ಚಗಿಡಲು ಮಾರಾಟಕ್ಕಿರುವ ಸಾಧನ. ಕಾಲೇಜುಗಳಲ್ಲಿ ಓದುವ ಯುವತಿಯರು ದುಪ್ಪಟ್ಟಾ ಬದಲು ಶಾಲು ಬಳಸುವುದು ಶುರುವಾಗಿ ಬಹಳ ದಿನಗಳಾಗಿದೆ ಮಾರಾಯ್ರೇ.

ಶಾಲು ವಿಂಟರ್ ಫ್ಯಾಶನ್ನಿನ ಒಂದು ಭಾಗ ಆಗಿರೋದು ಅದು ಗಳಿಸುತ್ತಿರುವ ಜನಪ್ರಿಯತೆಯ ದ್ಯೋತಕವಾಗಿದೆ. ಚಳಿಗಾಲ ಬಂತೆಂದರೆ ಜನ ಪುಲ್ ಓವರ್, ಮಫ್ಲರ್, ಟೋಪಿಗಳು, ಸಾಕ್ಸ್ ಮೊದಲಾದವುಗಳನ್ನು ಹುಡುಕಿಕೊಂಡು ಹೋಗುತ್ತಾರೆ. ಅವುಗಳ ಸಾಲಿಗೆ ಈಗ ಡಿಸೈನರ್ ಶಾಲುಗಳು ಸಹ ಸೇರಿವೆ. ಸೂಟುಗಳ ಮೇಲೂ ಜನ ಶಾಲು ಹೊದೆಯಲಾರಂಭಿಸಿದ್ದಾರೆ. ಈ ವಿಡಿಯೋನಲ್ಲಿರುವ ಸೈಫ್ ಅಲಿ ಖಾನ್ ಅವರನ್ನು ನೋಡಿ. ಸೂಟ್​ ಮೇಲೆ ಚೆಕ್ಸ್​ ಶಾಲು!

ಭಾರತದಲ್ಲಿ ಹಲವಾರು ಪ್ರತಿಷ್ಠಿತ ಜವಳಿ ಕಂಪನಿಗಳು ಶಾಲುಗಳನ್ನು ತಯಾರಿಸಿ ಮಾರುತ್ತಿವೆ. ನಿಮಗೂ ಶಾಲಿನ ಬಗ್ಗೆ ಪ್ರೀತಿ ಹುಟ್ಟಿಕೊಂಡಿದ್ದರೆ, ಎದ್ದು ಹೊರಡಿ ಮಾರಾಯ್ರೇ, ಬಗೆಬಗೆಯ ಶಾಲುಗಳು ನಿಮಗಾಗಿ ಕಾಯುತ್ತಿವೆ.

ಇದನ್ನೂ ಓದಿ:   ಅದ್ದೂರಿಯಾಗಿ ನೆರವೇರಿತು ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ ವಿವಾಹ; ಫೋಟೋ, ವಿಡಿಯೋಗಳು ಲೀಕ್