ಪಶ್ಚಿಮ ಬಂಗಾಳ: ಮಕ್ಕಳ ಕಲಿಕೆಗೆ ಅಡಚಣೆ ತಪ್ಪಿಸಲು ಮೈಕ್ ಬಳಸದೆ ಮಸೀದಿಯಲ್ಲಿ ನಮಾಜ್

ದೇಶದಲ್ಲಿ ಕೊರೊನಾ ರೂಪಾಂತರಿ ಒಮಿಕ್ರಾನ್ ವೈರಸ್ ದಿನದಿಂದ ದಿನಕ್ಕೆ ಆತಂಕ ಹೆಚ್ಚಿಸುತ್ತಿದೆ. ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ಒಮಿಕ್ರಾನ್ ಕಾಣಿಸಿಕೊಂಡಿದೆ. ಒಮಿಕ್ರಾನ್ ಸೋಂಕಿತರ ಸಂಖ್ಯೆ ಹೆಚ್ಚಾದರೆ ಲಾಕ್​ಡೌನ್​ ಮಾಡುವ ಅನಿವಾರ್ಯತೆಯೂ ಬರುತ್ತದೆ.

ಪಶ್ಚಿಮ ಬಂಗಾಳ: ಮಕ್ಕಳ ಕಲಿಕೆಗೆ ಅಡಚಣೆ ತಪ್ಪಿಸಲು ಮೈಕ್ ಬಳಸದೆ ಮಸೀದಿಯಲ್ಲಿ ನಮಾಜ್
ಮಸೀದಿ ಆವರಣದಲ್ಲಿ ಮಕ್ಕಳಿಗೆ ತರಗತಿ ನಡೆಸಲಾಗುತ್ತಿದೆ
Follow us
TV9 Web
| Updated By: sandhya thejappa

Updated on:Dec 11, 2021 | 9:32 AM

ಕೋಲ್ಕತ್ತ: ಮುಸ್ಲಿಂ ಸಮುದಾಯವರು ದಿನಕ್ಕೆ ಎರಡರಿಂದ ಮೂರು ಬಾರಿ ನಮಾಜ್ ಮಾಡುತ್ತಾರೆ. ಮಸೀದಿಯಲ್ಲಿ ಮುತಲಿ ದಿನಕ್ಕೆ ನಾಲ್ಕೈದು ಬಾರಿ ಅಲ್ಲ ನೆನೆದು ಪ್ರಾರ್ಥಿಸುತ್ತಾರೆ. ಈ ವೇಳೆ ಮಸೀದಿಯ ಸುತ್ತಾಮುತ್ತಾ ನಮಾಜ್ ಕೇಳುವಂತೆ ಮೈಕ್​ನಲ್ಲಿ ಭೋದಿಸುತ್ತಾರೆ. ಆದರೆ ಪಶ್ಚಿಮ ಬಂಗಾಳದ ಮಸೀದಿಯೊಂದರಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡಚಣೆಯಾಗದಂತೆ ಧ್ವನಿವರ್ಧಕ ಬಳಸದೆ ನಮಾಜ್ ಮಾಡುವ ಮೂಲಕ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡಿದ್ದಾರೆ.

ದೇಶದಲ್ಲಿ ಕೊರೊನಾ ರೂಪಾಂತರಿ ಒಮಿಕ್ರಾನ್ ವೈರಸ್ ದಿನದಿಂದ ದಿನಕ್ಕೆ ಆತಂಕ ಹೆಚ್ಚಿಸುತ್ತಿದೆ. ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ಒಮಿಕ್ರಾನ್ ಕಾಣಿಸಿಕೊಂಡಿದೆ. ಒಮಿಕ್ರಾನ್ ಸೋಂಕಿತರ ಸಂಖ್ಯೆ ಹೆಚ್ಚಾದರೆ ಲಾಕ್​ಡೌನ್​ ಮಾಡುವ ಅನಿವಾರ್ಯತೆಯೂ ಬರುತ್ತದೆ. ಹೀಗಾಗಿ ಮುನ್ನಚ್ಚರಿಕೆ ಕ್ರಮವಾಗಿ ಪಶ್ಚಿಮ ಬಂಗಾಳದ ಶಾಲೆಯೊಂದರಲ್ಲಿ ದೈಹಿಕ ಅಂತರ ಕಾಪಾಡುವ ಸಲುವಾಗಿ ಪ್ರಕೃತಿ ಮಡಿಲಿನಲ್ಲಿ ತರಗತಿ ನಡೆಸಲಾಗುತ್ತಿದೆ. ಜಲ್ಪೈಗುರಿಯ ಮಸೀದಿಯ ಪಕ್ಕದಲ್ಲಿ ಮಕ್ಕಳಿಗೆ ತರಗತಿ ನಡೆಸಲಾಗುತ್ತಿದೆ. ಆದರೆ ಮೈಕ್​ನಲ್ಲಿ ನಮಾಜ್ ಮಾಡಿದರೆ ಮಕ್ಕಳ ಕಲಿಕೆಗೆ ತೊಂದರೆಯಾಗುತ್ತದೆ ಎಂಬ ಉದ್ದೇಶದಿಂದ ಮೈಕ್ ಬಳಸದೆ ನಮಾಜ್ ಮಾಡುತ್ತಿದ್ದಾರೆ. ಈ ಮೂಲಕ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

ಈ ಬಗ್ಗೆ ಎಎನ್ಐಗೆ ಪ್ರತಿಕ್ರಿಯೆ ನೀಡಿರುವ ಇಮಾಮ್ ನಜಿಮುಲ್ ಹಕ್ ಎಂಬುವವರು ನಮ್ಮ ಆವರಣದಲ್ಲಿ ಶಬ್ದ ಮುಕ್ತ ತರಗತಿಗಳಿಗಾಗಿ ನಾವು ಧ್ವನಿವರ್ಧಕಗಳಿಲ್ಲದೆ ನಮಾಜ್ ಮಾಡುತ್ತಿದ್ದೇವೆ. ಶಿಕ್ಷಣವಿಲ್ಲದೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಹೀಗಾಗಿ ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿದ್ದೇವೆ ಅಂತ ತಿಳಿಸಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿದ ಶಿಕ್ಷಕ ಇಂದ್ರನೀಲ್ ಸಹಾ, ಮಸೀದಿ ಅಧಿಕಾರಿಗಳಿಂದ ಉತ್ತಮ ಸಹಕಾರ ಸಿಗುತ್ತಿದೆ. ಇಲ್ಲಿ ಮೊಬೈಲ್ ನೆಟ್​ವರ್ಕ್ ಇಲ್ಲ. ವಿದ್ಯಾರ್ಥಿಗಳ ಬಳಿ ಸ್ಮಾರ್ಟ್ಫೋನ್​ಗಳೂ ಇಲ್ಲ. ರಾಜ್ಯ ಸರ್ಕಾರವು 9-12 ನೇ ತರಗತಿಗಳನ್ನು ಪುನರಾರಂಭಿಸಿದೆ. ಆದರೆ ಕೊರೊನಾ ಕಾರಣದಿಂದ ನಾವು ಶಾಲೆಯ ಆವರಣದ ಹೊರಗೆ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸುತ್ತಿದ್ದೇವೆ. ಈ ನಡುವೆ ಮಸೀದಿ ಮುಖಂಡರು ಮೈಕ್ ಬಳಸದೆ ನಮಾಜ್ ಮಾಡುವ ಮೂಲಕ ಸಹಕರಿಸುತ್ತಿದ್ದಾರೆ ಅಂತ ಅಭಿಪ್ರಾಯಪಟ್ಟರು.

Published On - 9:29 am, Sat, 11 December 21