ANI Twitter Block: ಎಎನ್​​​ಐ ಟ್ವಿಟರ್ ಖಾತೆ ಬ್ಲಾಕ್: ಟ್ವಿಟರ್​ ಕೊಟ್ಟ ಕಾರಣ ಹೀಗಿದೆ

|

Updated on: Apr 29, 2023 | 4:10 PM

ದೇಶದ ಪ್ರಮುಖ ಸುದ್ದಿ ಸಂಸ್ಥೆ ಎಎನ್ ಐ ಟ್ವಿಟರ್ ಖಾತೆಯನ್ನು ಬ್ಲಾಕ್ ಮಾಡಲಾಗಿದೆ. ಶನಿವಾರ ಮಧ್ಯಾಹ್ನ ಮೈಕ್ರೋ-ಬ್ಲಾಗಿಂಗ್ ವೆಬ್‌ಸೈಟ್ ANI ಪೇಜ್​​ನ್ನು ಇದ್ದಕ್ಕಿದ್ದಂತೆ ನಿರ್ಬಂಧಿಸಿದೆ.

ANI Twitter Block: ಎಎನ್​​​ಐ ಟ್ವಿಟರ್ ಖಾತೆ ಬ್ಲಾಕ್: ಟ್ವಿಟರ್​ ಕೊಟ್ಟ ಕಾರಣ ಹೀಗಿದೆ
ANI Twitter account block
Follow us on

ನವದೆಹಲಿ: ದೇಶದ ಪ್ರಮುಖ ಸುದ್ದಿ ಸಂಸ್ಥೆ ಎಎನ್ ಐ ಟ್ವಿಟರ್ ಖಾತೆಯನ್ನು ಬ್ಲಾಕ್ ಮಾಡಲಾಗಿದೆ. ಶನಿವಾರ ಮಧ್ಯಾಹ್ನ ಮೈಕ್ರೋ-ಬ್ಲಾಗಿಂಗ್ ವೆಬ್‌ಸೈಟ್ ANI ಪೇಜ್​​ನ್ನು ಇದ್ದಕ್ಕಿದ್ದಂತೆ ನಿರ್ಬಂಧಿಸಿದೆ. ಅನೇಕ ANI ಟ್ವಿಟರ್​​ ಖಾತೆಯನ್ನು ಹುಡುಕಿದಾಗ ಈ ಖಾತೆ ಅಸ್ತಿತ್ವದಲ್ಲಿಲ್ಲ ಎಂದು ಬರೆಯಲಾಗಿದೆ. ಎಎನ್‌ಐ ಎಡಿಟರ್ ಸ್ಮಿತಾ ಪ್ರಕಾಶ್ ಈ ಬಗ್ಗೆ ತಮ್ಮ ವೈಯಕ್ತಿಕ ಟ್ವಿಟರ್​ ಖಾತೆಯಿಂದ ಟ್ವೀಟ್ ಮಾಡಿದ್ದು, ಎಎನ್‌ಐ ಖಾತೆಯನ್ನು ಬ್ಲಾಕ್ ಮಾಡಿದೆ. ಖಾತೆಯನ್ನು ರಚಿಸುವವರ ಕನಿಷ್ಠ 13 ವರ್ಷವಾಗಿರಬೇಕು ಎಂಬ ನಿಯಮವನ್ನು ಹೊಂದಿರಬೇಕು ಎಂದು ಟ್ವಿಟರ್ ಉಲ್ಲೇಖಿಸಿದೆ ಎಂದು ಸ್ಮಿತಾ ಪ್ರಕಾಶ್ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ. ಈ ಬಗ್ಗೆ ತಾವು ಹಂಚಿಕೊಂಡ ಸ್ಕ್ರೀನ್‌ಶಾಟ್ ಟ್ವೀಟ್​​ನ್ನು ಟ್ವಿಟರ್ ಮುಖ್ಯಸ್ಥ ಎಲೋನ್ ಮಸ್ಕ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಇದರ ಜತೆಗೆ ನಾವು ನಮ್ಮ ಖಾತೆಯನ್ನು 13 ವರ್ಷಲ್ಲ ಅದಕ್ಕಿಂದ ಅಧಿಕ ವರ್ಷಗಳ ವರೆಗೆ ನಿವರ್ಹಿಸುತ್ತಿದ್ದೇವೆ ಎಂದು ಸ್ಮಿತಾ ಪ್ರಕಾಶ್ ಬರೆದುಕೊಂಡಿದ್ದಾರೆ.

ಎಎನ್‌ಐ ತನ್ನನ್ನು ಟ್ವಿಟರ್‌ನಲ್ಲಿ ‘ಭಾರತದ ನಂ.1 ಮಲ್ಟಿಮೀಡಿಯಾ ಸುದ್ದಿ ಸಂಸ್ಥೆ ಎಂದು ಹೇಳಿಕೊಂಡಿದೆ. ANI – ANI ಹಿಂದಿ, ANI MP-ರಾಜಸ್ಥಾನ, ANI UP- ಉತ್ತರಾಖಂಡ್ ಇತ್ಯಾದಿ ಇತರ ಟ್ವಿಟರ್ ಹ್ಯಾಂಡಲ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದವು ಎಂದು ಹೇಳಿಕೊಂಡಿದೆ.

 

Published On - 4:10 pm, Sat, 29 April 23