ಕಳೆದ ಕೆಲವು ತಿಂಗಳುಗಳಿಂದ ಟೆಕ್ ಲೋಕದಲ್ಲಿ ಭರ್ಜರಿ ಸುದ್ದಿಯಲ್ಲಿರುವ ಐಫೋನ್ 13 (iPhone 13) ಬಗ್ಗೆ ಹೊಸ ಮಾಹಿತಿ ಹೊರಬಿದ್ದಿದೆ. ಈ ಹಿಂದೆ ಐಫೋನ್ 13 ಮುಂದಿನ ತಲೆಮಾರಿನ ಫೋನಿನ ಹಿಂಭಾಗದಲ್ಲಿ ಟಚ್ ಐಡಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಆಯ್ಕೆ ನೀಡಲಾಗುತ್ತದೆ ಎನ್ನಲಾಗಿತ್ತು. ಆದರೆ, ಈಗ ಹೊಸ ಮಾಹಿತಿ ಹೊರಬಿದ್ದಿದ್ದು ಈ ಆಯ್ಕೆ ಐಪೋನ್ 13ನಲ್ಲಿ ಲಭ್ಯವಿರುವುದಿಲ್ಲ ಎಂದು ತಿಳಿದುಬಂದಿದೆ.
ಐಫೋನ್ ಪ್ರಿಯರು ಹಿಂಭಾಗದಲ್ಲಿ ಟಚ್ ಐಡಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಬೇಕೆಂದು ಬೇಡಿಕೆ ಇಟ್ಟಿದ್ದರು. ಐಫೋನ್ನಲ್ಲಿ ಫೇಸ್ ಐಡಿ ಆನ್ಲಾಕ್ ಆಯ್ಕೆ ಇದೆ, ಅಲ್ಲದೆ ಮುಖದಲ್ಲಿ ಮಾಸ್ಕ್ ಇದ್ದರೂ ಆನ್ಲಾಕ್ ಮಾಡುವ ಆಯ್ಕೆ ನೀಡಲಾಗಿದೆ. ಆದರೆ, ಎಲ್ಲರಿಗೂ ಈ ಆಯ್ಕೆ ಲಭ್ಯವಿಲ್ಲ. ಹೀಗಾಗಿ ಫೋನ್ ಹಿಂಭಾಗ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಆಯ್ಕೆ ಕೇಳಿದ್ದರು. ಐಫೋನ್ 13 ಸರಣಿಯಲ್ಲಿ ಫೇಸ್ಐಡಿ ಮತ್ತು ಟಚ್ ಐಡಿ ಸೌಲಭ್ಯ ಮಾತ್ರ ಇರಲಿದೆ. ಜೊತೆಗೆ ಡಿಸ್ಪ್ಲೇ ಫಿಂಗರ್ಪ್ರಿಂಟ್ ಆನ್ಲಾಕ್ ಆಯ್ಕೆಯ ಕೆಲಸ ನಡೆಯುತ್ತಿದೆಯಂತೆ. ಆದರ, ಹಿಂಭಾಗದಲ್ಲಿ ಯಾವುದೇ ಆನ್ಲಾಕ್ ಆಯ್ಕೆ ಇಲ್ಲ.
ಇನ್ನೂ ಐಫೋನ್ 13 ನಲ್ಲಿ ವೈರ್‌ಲೆಸ್ ಬಡ್ ಗಳಂತೆ ಇತರ ಸಾಧನಗಳನ್ನು ಚಾರ್ಜ್ ಮಾಡುವ ಸ್ಮಾರ್ಟ್‌ಫೋನ್ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗಿದೆ. ಈಗಾಗಲೇ ಈ ವಿಶೇಷ ವೈಶಿಷ್ಟ್ಯವು ಸ್ಯಾಮ್‌ಸಂಗ್‌ನಂತಹ ಆಂಡ್ರಾಯ್ಡ್ ಸ್ಮಾರ್ಟ್‌ಫೋನುಗಳಲ್ಲಿ ಲಭ್ಯವಿದೆ. ಶೀಘ್ರದಲ್ಲೇ ಈ ಸೌಲಭ್ಯವು ಆ್ಯಪಲ್ ಐಫೋನ್ ಬಳಕೆದಾರರಿಗೂ ಲಭ್ಯವಾಗಲಿದೆ.
ಜೊತೆಗೆ ಈಗಾಗಲೇ ಐಫೋನ್ 12ರ ಸರಣಿಯಲ್ಲಿ ಲಭ್ಯವಿರುವ ಮ್ಯಾಗ್‌ಸೇಫ್ ವೈರ್‌ಲೆಸ್ ಚಾರ್ಜಿಂಗ್ ವೈಶಿಷ್ಟ್ಯವು ಐಫೋನ್ 13 ರಲ್ಲಿಯೂ ದೊರಕಲಿದೆ. ಈ ಮ್ಯಾಗ್‌ಸೇಫ್‌ನ ವಿಶೇಷತೆಯು ಐಫೋನ್ ಮಾದರಿಯ ಫೋನ್‌ಗಳಿಗೆ ವೇಗವರ್ಧಿತ ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸುತ್ತದೆ. ಮ್ಯಾಗ್‌ಸೇಫ್ ಐಫೋನ್ 12ರ ಗಾಜಿನ ಹಿಂಭಾಗದಲ್ಲಿ ವೈರ್‌ಲೆಸ್ ಚಾರ್ಜಿಂಗ್ ಕಾಯಿಲ್ ಅನ್ನು ಬಳಸಲಾಗುತ್ತದೆ.
ಏರ್‌ಪಾಡ್‌ಗಳಂತಹ ಉಪಕರಣಗಳಿಗೆ ರಿವರ್ಸ್ ಚಾರ್ಜಿಂಗ್ ಅನ್ನು ಮತ್ತಷ್ಟು ಬೆಂಬಲಿಸಲು ಆ್ಯಪಲ್ ದೊಡ್ಡ ಕಾಯಿಲ್ ಗಾತ್ರದೊಂದಿಗೆ ಬರಬಹುದು ಎಂಬ ವದಂತಿಕೂಡ ಇದೆ.
ಬಿಡುಗಡೆಗು ಮುನ್ನವೇ ಸ್ಯಾಮ್ಸಂಗ್ನ ಹೊಸ Galaxy A22 5G ಫೋನಿನ ಬೆಲೆ ಸೋರಿಕೆ
How To: ವಿಂಡೋಸ್ 11 ಆಪರೇಟಿಂಗ್ ಸಿಸ್ಟಂ ಬಳಸಲು ನಿಮ್ಮ ಕಂಪ್ಯೂಟರ್ನಲ್ಲಿ ಏನೆಲ್ಲ ಇರಬೇಕು?
(Apple iPhone 13 Will Not Have Touch ID this generation Everything We Know About This Years iPhone)