iPhone 14 Series: ಆ್ಯಪಲ್ ಐಫೋನ್ 14 ಅನ್ನು ಮತ್ತೆ ಟ್ರೋಲ್ ಮಾಡಿದ ಪ್ರಸಿದ್ಧ ಸ್ಯಾಮ್​ಸಂಗ್ ಕಂಪನಿ

| Updated By: Vinay Bhat

Updated on: Sep 09, 2022 | 3:05 PM

ಒಂದುಕಡೆ ಹಿಂದಿನ ಐಫೋನ್ ಸರಣಿಗೆ ಹಾಗೂ ಹೊಸ 14 ಸರಣಿಗೆ ಯಾವುದೇ ದೊಡ್ಡ ಮಟ್ಟದ ವ್ಯತ್ಯಾದ ಇಲ್ಲ ಎಂದು ಅನೇಕರು ಹೇಳುತ್ತಿದ್ದರೆ ಇತ್ತ ದಕ್ಷಿಣ ಕೊರಿಯಾ ಮೂಲದ ಪ್ರಸಿದ್ಧ ಸ್ಯಾಮ್​ಸಂಗ್ (Samsung) ಕಂಪನಿ ಕೂಡ ಐಫೋನ್ ಹೆಸರು ಹೇಳದೆ ಟ್ರೋಲ್ ಮಾಡಿದ್ದು ವೈರಲ್ ಆಗುತ್ತಿದೆ.

iPhone 14 Series: ಆ್ಯಪಲ್ ಐಫೋನ್ 14 ಅನ್ನು ಮತ್ತೆ ಟ್ರೋಲ್ ಮಾಡಿದ ಪ್ರಸಿದ್ಧ ಸ್ಯಾಮ್​ಸಂಗ್ ಕಂಪನಿ
Samsung vs Apple
Follow us on

ಜಾಗತಿಕ ಮಾರುಕಟ್ಟೆಯಲ್ಲಿ ಆ್ಯಪಲ್ (Apple)​ ಕಂಪನಿಯ ಬಹುನಿರೀಕ್ಷಿತ ಐಫೋನ್ 14 ಸರಣಿಯ ಸ್ಮಾ(iPhone 14 Series) ರ್ಟ್​​ಫೋನ್​ಗಳು ಬಿಡುಗಡೆ ಆಗಿವೆ. ಇದರಲ್ಲಿ ಐಫೋನ್ 14, ಐಫೋನ್ 14 ಪ್ಲಸ್‌, ಐಫೋನ್‌ 14 ಪ್ರೊ ಮತ್ತು ಐಫೋನ್‌ 14 ಪ್ರೊ ಮ್ಯಾಕ್ಸ್‌ ಹೀಗೆ ಒಟ್ಟು ನಾಲ್ಕು ಸ್ಮಾರ್ಟ್​ಫೋನ್​ಗಳಿವೆ. ಐಫೋನ್ 14 ಲಾಂಚ್ ಆದ ಬಳಿಕ ಇದು ಸಾಕಷ್ಟು ಟ್ರೋಲ್ ಆಗುತ್ತಿದೆ. ಒಂದುಕಡೆ ಹಿಂದಿನ ಐಫೋನ್ ಸರಣಿಗೆ ಹಾಗೂ ಹೊಸ 14 ಸರಣಿಗೆ ಯಾವುದೇ ದೊಡ್ಡ ಮಟ್ಟದ ವ್ಯತ್ಯಾದ ಇಲ್ಲ ಎಂದು ಅನೇಕರು ಹೇಳುತ್ತಿದ್ದರೆ ಇತ್ತ ದಕ್ಷಿಣ ಕೊರಿಯಾ ಮೂಲದ ಪ್ರಸಿದ್ಧ ಸ್ಯಾಮ್​ಸಂಗ್ (Samsung) ಕಂಪನಿ ಕೂಡ ಐಫೋನ್ ಹೆಸರು ಹೇಳದೆ ಟ್ರೋಲ್ ಮಾಡಿದ್ದು ವೈರಲ್ ಆಗುತ್ತಿದೆ.

ಇತ್ತೀಚೆಗಷ್ಟೆ ಸ್ಯಾಮ್​ಸಂಗ್ ಕಂಪನಿ ನಾವು ಬಿಡುಗಡೆ ಮಾಡುವ ಮೊಬೈಲ್ ಐಫೋನ್​ಗಿಂತ ಉತ್ತಮವಾಗಿರುತ್ತದೆ ಎಂಬ ಅರ್ಥದಲ್ಲಿ ಟ್ವೀಟ್ ಮಾಡಿತ್ತು. ಇದೀಗ ಐಫೋನ್ 14 ಬಿಡುಗಡೆ ಆದ ಬಳಿಕ ಮತ್ತೊಂದು ಟ್ವೀಟ್ ಮಾಡಿದ್ದು, ಅದು ಮಡಚಿದ ಫೋನ್ ಬಿಡುಗಡೆ ಮಾಡಿದಾಗ ನಮಗೆ ತಿಳಿಸಿ ಎಂಬರ್ಥದಲ್ಲಿ ಟ್ವೀಟ್ ಮಾಡಿ ಐಫೋನ್​ ಅನ್ನು ಟ್ರೋಲ್ ಮಾಡಿದೆ.

ಸ್ಯಾಮ್​ಸಂಗ್​ ಆಕರ್ಷಕ ಮಡಚುವ ಫೋನ್​ಗಳನ್ನು ರಿಲೀಸ್ ಮಾಡುತ್ತಿದೆ. ಆದರೆ, ಈ ಪ್ರಯೋಗಕ್ಕೆ ಆ್ಯಪಲ್ ಇನ್ನೂ ಮುಂದಾಗಿಲ್ಲ. ಎರಡು ತಿಂಗಳ ಹಿಂದೆ ಆ್ಯಪಲ್ ಫೋಲ್ಡೆಬಲ್ ಅನ್ನು ತಯಾರಿಸುತ್ತಿದೆ ಎಂಬ ಸುದ್ದು ಹರಿದಾಡಿತ್ತು. ಆದರೆ, ಆ್ಯಪಲ್ ಕಂಪನಿ ಇದುವರೆಗೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಹಾಕಿಲ್ಲ. ಈ ವಿಚಾರವನ್ನೇ ಇಟ್ಟುಕೊಂಡು ಸ್ಯಾಮ್​ಸಂಗ್ ಕಂಪನಿ ಆ್ಯಪಲ್ ಅನ್ನು ಟ್ರೋಲ್ ಮಾಡುತ್ತಿದೆ.

ಇದನ್ನೂ ಓದಿ
Motorola Edge 30 Ultra: 200MP ಕ್ಯಾಮೆರಾ, 125W ಫಾಸ್ಟ್ ಚಾರ್ಜರ್: ಮಾರುಕಟ್ಟೆಗೆ ಅಪ್ಪಳಿಸಿದೆ ಹೊಸ ಸ್ಮಾರ್ಟ್​ಫೋನ್: ಬೆಲೆ?
Gmail: ಇಂಟರ್ನೆಟ್ ಇಲ್ಲದೆಯೂ ಇಮೇಲ್ ಕಳುಹಿಸಬಹುದು: ಜಿಮೇಲ್​​ನಲ್ಲಿ ಟ್ರಿಕ್ ಉಪಯೋಗಿಸಿ
Vivo Y75s: 64MP ಕ್ಯಾಮೆರಾ, ಬಲಿಷ್ಠ ಪ್ರೊಸೆಸರ್: ಮಾರುಕಟ್ಟೆಗೆ ಬಂತು ವಿವೋ Y75s ಹೊ ಸ್ಮಾರ್ಟ್​​ಫೋನ್
iPhone 14: ಆ್ಯಪಲ್ ಸಹ-ಸಂಸ್ಥಾಪಕರ ಮಗಳಿನಿಂದಲೇ ಐಫೋನ್ 14 ಬಗ್ಗೆ ಟ್ರೋಲ್: ವೈರಲ್ ಆಗ್ತಿದೆ ಫೋಟೋ

ಇನ್ನು ಐಫೋನ್ 14 ಹಾಗೂ ಐಫೋನ್ 13 ನಡುವೆ ಏನೂ ನೂತನ ಫೀಚರ್​ಗಳಿಲ್ಲ, ಎರಡು ಒಂದೇ ರೀತಿಯ ಫೋನ್ ಎಂದು ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಆ್ಯಪಲ್ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಮಗಳು ಎವಾ ಜಾಬ್ಸ್ ಕೂಡ ಸಾಥ್ ನೀಡಿದ್ದು, ಇನ್​ಸ್ಟಾಗ್ರಾಮ್​ನಲ್ಲಿ ಐಫೋನ್ ಕುರಿತು ಒಂದು ಸ್ಟೇಟಸ್ ಹಾಕಿಕೊಂಡಿದ್ದಾರೆ.

ಎವಾ ಜಾಬ್ಸ್ ಅವರು ಐಫೋನ್ 14 ಲಾಂಚ್ ಆದ ಬೆನ್ನಲ್ಲೆ ಎವಾ ಅವರು ಒಬ್ಬ ವ್ಯಕ್ತಿ ಒಂದೇ ರೀತಿ ಕಾಣುವ ಶರ್ಟ್ ಅನ್ನು ಧರಿಸಿರುವುದು ಮತ್ತು ಕೈಯಲ್ಲಿ ಹಿಡಿದುಕೊಂಡಿರುವ ಫೋಟೋ ಹಂಚಿಕೊಂಡಿದ್ದಾರೆ. ಜೊತೆಗೆ ”ಆ್ಯಪಲ್ ಹೊಸ ಐಫೋನ್ ಬಿಡುಗಡೆ ಮಾಡಿದ ನಂತರ ನಾನು ಐಫೋನ್ 13 ನಿಂದ ಐಫೋನ್14 ಗೆ ಅಪ್‌ಗ್ರೇಡ್ ಆಗುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಹಳೆಯ ಫೋನ್​ಗೂ ಹೊಸ ಫೋನ್​ಗೂ ಯಾವುದೇ ರೀತಿಯ ಬದಲಾವಣೆ ಇಲ್ಲ ಎಂಬ ರೀತಿಯಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಐಫೋನ್ 14 ದೊಡ್ಡ ಮಟ್ಟದಲ್ಲಿ ಟ್ರೋಲ್ ಆಗಲು ಕಾರಣ ಇದು ಬಹುತೇಕ ಕಳೆದ ವರ್ಷ ಬಿಡುಗಡೆ ಆದ ಐಫೋನ್ 13 ಮಾದಿಯ ಫೀಚರ್​ಗಳನ್ನೇ ಹೊಂದಿದೆ. ಐಫೋನ್ 13 6.1 ಇಂಚಿನ ಡಿಸ್‌ ಪ್ಲೇ ಹೊಂದಿದ್ದು, 60Hz ರಿಫ್ರೆಶ್ ರೇಟ್‌, 1200 ನಿಟ್ಸ್‌ ಬ್ರೈಟ್‌ನೆಸ್ ​ನಿಂದ ಕೂಡಿದೆ. ಹಾಗೆಯೇ A15 ಬಯೋನಿಕ್ ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಅಳವಡಿಸಲಾಗಿತ್ತು. ನೂತನ ಐಫೋನ್ 14 ಕೂಡ ಇದೇರೀತಿಯಿದ್ದು ಯಾವುದೇ ಬದಲಾವಣೆಯಿಲ್ಲ.

ಇನ್ನು ಕ್ಯಾಮರಾ ವಿಚಾರಕ್ಕೆ ಬರುವುದಾದರೆ, ಐಫೋನ್ 13 ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದೆ. ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್, ಇನ್ನೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್‌ ಆಂಗಲ್ ಲೆನ್ಸ್‌ ಪಡೆದಿದೆ. ಐಫೋನ್ 14 ನಲ್ಲಿ ಕೂಡ ಕ್ಯಾಮೆರಾ 12 ಮೆಗಾ ಪಿಕ್ಸೆಲ್​ನಲ್ಲಿದೆ. ವಿಶೇಷ ಎಂದರೆ ಕಡಿಮೆ ಬೆಳಕು ಇರುವ ಪ್ರದೇಶದಲ್ಲಿ ಐಫೋನ್ 13 ಗಿಂತ 14 ಅತ್ಯುತ್ತಮ ಫೋಟೋ ಸೆರೆ ಹಿಡಿಯುತ್ತದೆ. ಐಫೋನ್ 14ರ ಮುಖ್ಯ ಫೀಚರ್ ಎಂದರೆ ಸೆಟಲೈಟ್ ಕನೆಟ್ಕಿವಿಟಿ. ಇದು ಐಫೋನ್ 13 ನಲ್ಲಿ ಇಲ್ಲ.