iPhone 14: ಆ್ಯಪಲ್ ಸಹ-ಸಂಸ್ಥಾಪಕರ ಮಗಳಿನಿಂದಲೇ ಐಫೋನ್ 14 ಬಗ್ಗೆ ಟ್ರೋಲ್: ವೈರಲ್ ಆಗ್ತಿದೆ ಫೋಟೋ

Apple iPhone 14 Series: ಅಚ್ಚರಿ ಎಂಬಂತೆ ಆ್ಯಪಲ್ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಮಗಳು ಎವಾ ಜಾಬ್ಸ್ ಇನ್​ಸ್ಟಾಗ್ರಾಮ್​ನಲ್ಲಿ ಐಫೋನ್ ಕುರಿತು ಒಂದು ಸ್ಟೇಟಸ್ ಹಾಕಿಕೊಂಡಿದ್ದು ಇದು ಭರ್ಜರಿ ವೈರಲ್ ಆಗುತ್ತಿದೆ.

iPhone 14: ಆ್ಯಪಲ್ ಸಹ-ಸಂಸ್ಥಾಪಕರ ಮಗಳಿನಿಂದಲೇ ಐಫೋನ್ 14 ಬಗ್ಗೆ ಟ್ರೋಲ್: ವೈರಲ್ ಆಗ್ತಿದೆ ಫೋಟೋ
Eve Jobs and iPhone 14
Follow us
TV9 Web
| Updated By: Vinay Bhat

Updated on: Sep 08, 2022 | 2:49 PM

ಜಾಗತೀಕ ಮಾರುಕಟ್ಟೆಯಲ್ಲಿ ಆ್ಯಪಲ್ (Apple) ಕಂಪನಿ ತನ್ನ ಬಹುನಿರೀಕ್ಷಿತ ಐಫೋನ್ 14 ಸರಣಿಯನ್ನು (iPhone 14 Series) ಅನಾವರಣ ಮಾಡಿದೆ. ಐಫೋನ್ 14, ಐಫೋನ್ 14 ಪ್ಲಸ್‌, ಐಫೋನ್‌ 14 ಪ್ರೊ ಮತ್ತು ಐಫೋನ್‌ 14 ಪ್ರೊ ಮ್ಯಾಕ್ಸ್‌ ಹೀಗೆ ಒಟ್ಟು ನಾಲ್ಕು ಸ್ಮಾರ್ಟ್​ಫೋನ್​ಗಳನ್ನು ಆ್ಯಪಲ್ ಕಂಪನಿ ಲಾಂಚ್ ಮಾಡಿದೆ. 14 ಸರಣಿ ಬಿಡುಗಡೆ ಆದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್ ಕೂಡ ಆಗಿದೆ. ಐಫೋನ್ 14 ಹಾಗೂ ಐಫೋನ್ 13 (iPhone 14) ನಡುವೆ ಏನೂ ನೂತನ ಫೀಚರ್​ಗಳಿಲ್ಲ, ಎರಡು ಒಂದೇ ರೀತಿಯ ಫೋನ್ ಎಂದು ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ.

ಇದರ ನಡುವೆ ಅಚ್ಚರಿ ಎಂಬಂತೆ ಆ್ಯಪಲ್ ಸಹಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಮಗಳು ಎವಾ ಜಾಬ್ಸ್ ಇನ್​ಸ್ಟಾಗ್ರಾಮ್​ನಲ್ಲಿ ಐಫೋನ್ ಕುರಿತು ಒಂದು ಸ್ಟೇಟಸ್ ಹಾಕಿಕೊಂಡಿದ್ದು ಇದು ಭರ್ಜರಿ ವೈರಲ್ ಆಗುತ್ತಿದೆ. ಐಫೋನ್ 14 ಲಾಂಚ್ ಆದ ಬೆನ್ನಲ್ಲೆ ಎವಾ ಅವರು ಒಬ್ಬ ವ್ಯಕ್ತಿ ಒಂದೇ ರೀತಿ ಕಾಣುವ ಶರ್ಟ್ ಅನ್ನು ಧರಿಸಿರುವುದು ಮತ್ತು ಕೈಯಲ್ಲಿ ಹಿಡಿದುಕೊಂಡಿರುವ ಫೋಟೋ ಹಂಚಿಕೊಂಡಿದ್ದಾರೆ. ಜೊತೆಗೆ ”ಆ್ಯಪಲ್ ಹೊಸ ಐಫೋನ್ ಬಿಡುಗಡೆ ಮಾಡಿದ ನಂತರ ನಾನು ಐಫೋನ್ 13 ನಿಂದ ಐಫೋನ್14 ಗೆ ಅಪ್‌ಗ್ರೇಡ್ ಆಗುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಹಳೆಯ ಫೋನ್​ಗೂ ಹೊಸ ಫೋನ್​ಗೂ ಯಾವುದೇ ರೀತಿಯ ಬದಲಾವಣೆ ಇಲ್ಲ ಎಂಬ ರೀತಿಯಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Eve Jobs

ಎವಾ ಜಾಬ್ಸ್​ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ಸ್ಟೋರಿ.

ಐಫೋನ್ 14 ದೊಡ್ಡ ಮಟ್ಟದಲ್ಲಿ ಟ್ರೋಲ್ ಆಗಲು ಕಾರಣ ಇದು ಬಹುತೇಕ ಕಳೆದ ವರ್ಷ ಬಿಡುಗಡೆ ಆದ ಐಫೋನ್ 13 ಮಾದಿಯ ಫೀಚರ್​ಗಳನ್ನೇ ಹೊಂದಿದೆ. ಐಫೋನ್ 13 6.1 ಇಂಚಿನ ಡಿಸ್‌ ಪ್ಲೇ ಹೊಂದಿದ್ದು, 60Hz ರಿಫ್ರೆಶ್ ರೇಟ್‌, 1200 ನಿಟ್ಸ್‌ ಬ್ರೈಟ್‌ನೆಸ್ ​ನಿಂದ ಕೂಡಿದೆ. ಹಾಗೆಯೇ A15 ಬಯೋನಿಕ್ ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಅಳವಡಿಸಲಾಗಿತ್ತು. ನೂತನ ಐಫೋನ್ 14 ಕೂಡ ಇದೇರೀತಿಯಿದ್ದು ಯಾವುದೇ ಬದಲಾವಣೆಯಿಲ್ಲ.

ಇದನ್ನೂ ಓದಿ
Image
iPhone 13 vs iPhone 14: ಐಫೋನ್ 13 ಹಾಗೂ ಐಫೋನ್ 14 ನಡುವೆ ಏನು ವ್ಯತ್ಯಾಸ?: ಯಾವುದು ಬೆಸ್ಟ್?
Image
iPhone 14 Series: ಆ್ಯಪಲ್ ಐಫೋನ್ 14 ಸರಣಿ ಹೇಗಿದೆ?: ಫೋಟೋ ನೋಡಿ
Image
Apple Smart Watch: ಕಾರು ಅಪಘಾತವಾದ್ರೆ ತಕ್ಷಣವೇ ಎಚ್ಚರಿಸುತ್ತೆ ಹೊಸ ಐಫೋನ್ 14 ಹಾಗೂ ಆ್ಯಪಲ್ ವಾಚ್
Image
Apple iPhone 14 Series: ಬಹುನಿರೀಕ್ಷಿತ ಐಫೋನ್ 14 ಸರಣಿ ಬಿಡುಗಡೆ: ಬೆಲೆ ಎಷ್ಟು?, ಏನು ವಿಶೇಷತೆ?

ಇನ್ನು ಕ್ಯಾಮರಾ ವಿಚಾರಕ್ಕೆ ಬರುವುದಾದರೆ, ಐಫೋನ್ 13 ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದೆ. ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್, ಇನ್ನೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್‌ ಆಂಗಲ್ ಲೆನ್ಸ್‌ ಪಡೆದಿದೆ. ಐಫೋನ್ 14 ನಲ್ಲಿ ಕೂಡ ಕ್ಯಾಮೆರಾ 12 ಮೆಗಾ ಪಿಕ್ಸೆಲ್​ನಲ್ಲಿದೆ. ವಿಶೇಷ ಎಂದರೆ ಕಡಿಮೆ ಬೆಳಕು ಇರುವ ಪ್ರದೇಶದಲ್ಲಿ ಐಫೋನ್ 13 ಗಿಂತ 14 ಅತ್ಯುತ್ತಮ ಫೋಟೋ ಸೆರೆ ಹಿಡಿಯುತ್ತದೆ. ಐಫೋನ್ 14ರ ಮುಖ್ಯ ಫೀಚರ್ ಎಂದರೆ ಸೆಟಲೈಟ್ ಕನೆಟ್ಕಿವಿಟಿ. ಇದು ಐಫೋನ್ 13 ನಲ್ಲಿ ಇಲ್ಲ. ಬ್ಯಾಟರಿ ಶಕ್ತಿ ಕೊಂಚ ಹೆಚ್ಚಿದೆಯಷ್ಟೆ. ಐಫೋನ್ 13 ಆರಂಭಿಕ ಬೆಲೆ 69,999 ರೂ. ಆಗಿದ್ದರೆ ಐಫೋನ್ 14ಗೆ 79,999 ರೂ. ನಿಗದಿ ಮಾಡಲಾಗಿದೆ.