Apple Smart Watch: ಕಾರು ಅಪಘಾತವಾದ್ರೆ ತಕ್ಷಣವೇ ಎಚ್ಚರಿಸುತ್ತೆ ಹೊಸ ಐಫೋನ್ 14 ಹಾಗೂ ಆ್ಯಪಲ್ ವಾಚ್

Apple Watch Series 8: ಆ್ಯಪಲ್ ಐಫೋನ್ 14 ಸರಣಿ ಜೊತೆಗೆ ಆ್ಯಪಲ್‌ ವಾಚ್‌ ಅಲ್ಟ್ರಾ (Apple Watch Ultra), ಆ್ಯಪಲ್‌ ವಾಚ್‌ ಸೀರಿಸ್‌ 8 ಮತ್ತು ವಾಚ್‌ SE 2 ಕೂಡ ಅನಾವರಣಗೊಂಡಿದೆ. ಇದರಲ್ಲಿ ಆ್ಯಪಲ್ ವಾಚ್‌ ಸಿರೀಸ್ 8 ಸಾಕಷ್ಟು ಗಮನ ಸೆಳೆದಿದೆ.

Apple Smart Watch: ಕಾರು ಅಪಘಾತವಾದ್ರೆ ತಕ್ಷಣವೇ ಎಚ್ಚರಿಸುತ್ತೆ ಹೊಸ ಐಫೋನ್ 14 ಹಾಗೂ ಆ್ಯಪಲ್ ವಾಚ್
Apple Watch
Follow us
TV9 Web
| Updated By: Vinay Bhat

Updated on:Sep 08, 2022 | 3:31 PM

ಬುಧವಾರ ರಾತ್ರಿ ನಡೆದ ಫಾರ್ ಔಟ್ಕಾರ್ಯಕ್ರಮದಲ್ಲಿ ಆ್ಯಪಲ್ ಕಂಪನಿ ಐಫೋನ್ 14 (Apple iPhone 14), ಐಫೋನ್ 14 ಪ್ಲಸ್‌, ಐಫೋನ್‌ 14 ಪ್ರೊ ಮತ್ತು ಐಫೋನ್‌ 14 ಪ್ರೊ ಮ್ಯಾಕ್ಸ್‌ (iPhone 14 Pro Max) ಹೀಗೆ ನಾಲ್ಕು ನೂತನ ಆಕರ್ಷಕ ಫೋನ್​ಗಳನ್ನು ಲಾಂಚ್ ಮಾಡಿದೆ. ಇವುಗಳ ಜೊತೆಗೆ ಆ್ಯಪಲ್‌ ವಾಚ್‌ ಅಲ್ಟ್ರಾ (Apple Watch Ultra), ಆ್ಯಪಲ್‌ ವಾಚ್‌ ಸೀರಿಸ್‌ 8 ಮತ್ತು ವಾಚ್‌ SE 2 ಕೂಡ ಅನಾವರಣಗೊಂಡಿದೆ. ಇದರಲ್ಲಿ ಆ್ಯಪಲ್ ವಾಚ್‌ ಸಿರೀಸ್ 8 ಸಾಕಷ್ಟು ಗಮನ ಸೆಳೆದಿದೆ. ಇದರಲ್ಲಿ ಫಾಲ್ ಡಿಟೆಕ್ಷನ್, ಮೆಡಿಕಲ್‌ ಎಮರ್ಜೆನ್ಸಿ ಸರ್ವಿಸ್‌ ನಂತಹ ಸೇವೆಗಳನ್ನು ಪಡೆದಿದೆ. ಈ ಸಿರೀಸ್‌ನ ವಾಚ್‌ಗಳು ಟೆಂಪ್‌ರೇಚರ್‌ ಸೆನ್ಸಾರ್‌ ಪ್ರತಿ 5 ಸೆಕೆಂಡಿಗೆ ಟೆಂಪ್‌ರೇಚರ್‌ನಲ್ಲಿ ಬದಲಾವಣೆಗಳನ್ನು ಟ್ರ್ಯಾಕ್‌ ಮಾಡಲು ಕೂಡ ಅವಕಾಶ ಕಲ್ಪಿಸಲಾಗಿದೆ.

ಹೊಸ ಆ್ಯಪಲ್‌ ವಾಚ್‌ ಅಲ್ಟ್ರಾಕ್ಕೆ ಕೂಡ ಎಲ್ಲರೂ ಮನಸೋತಿದ್ದಾರೆ. ಮುಖ್ಯವಾಗಿ ಸ್ಪೋರ್ಟ್ಸ್‌ ಪ್ರಿಯರು ಮತ್ತು ಸಾಹಸ ಪ್ರಿಯರಿಗೆ ಇದು ಇಷ್ಟವಾಗಲಿದೆ. ಯುನಿಕ್ ವಿನ್ಯಾಸವನ್ನು ಹೊಂದಿರುವುದರಿಂದ ಎಂತಹದ್ದೆ ಪರಿಸ್ಥಿತಿಯಲ್ಲಿ ಕೂಡ ಬಳಸುವುದಕ್ಕೆ ಸೂಕ್ತವಾಗಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಕನೆಕ್ಟಿವಿಟಿಗಾಗಿ 2 ಸ್ಪೀಕರ್‌ಗಳು, 3 ಮೈಕ್‌ಗಳನ್ನು ಒಳಗೊಂಡಿದೆ. ಇದರಲ್ಲಿರುವ ಕ್ರ್ಯಾಶ್ ಡಿಟೆಕ್ಟರ್ ಆಯ್ಕೆ ಎರಡು ಮೋಷನ್ ಸೆನ್ಸರ್‌ಗಳ ಮೂಲಕ ಕಾರ್ಯನಿರ್ವಹಿಸುತ್ತದೆ. ಈ ಮೂಲಕ ನೀವು ಏನಾದರು ತೊಂದರೆಯಲ್ಲಿರುವುದು ಕಂಡು ಬಂದರೆ, ಅಥವಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಅಪಘಾತವಾದರೆ ಇದು ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ SOS ಕಾಲ್‌ ಕಳುಹಿಸುತ್ತದೆ. ಹೀಗೆ ಎಮರ್ಜೆನ್ಸಿ ಕಂಟ್ಯಾಕ್ಟ್‌ಗಳಿಗೆ ತಕ್ಷಣವೇ ಸೂಚನೆ ನೀಡಲಿದೆ. ಈ ಆಯ್ಕೆ ನೂತನ ಐಫೋನ್ 14 ಸರಣಿಯಲ್ಲೂ ನೀಡಲಾಗಿದೆ.

ಇವುಗಳ ಜೊತೆಗೆ ECG, ರಕ್ತದ ಆಮ್ಲಜನಕದ ಮಾನಿಟರಿಂಗ್ (SpO2), ಮತ್ತು ಫಾಲ್ ಡಿಟೆಕ್ಷನ್‌ ಫೀಚರ್​ಗಳನ್ನು ಕೂಡ ಹೊಂದಿದೆ. ಸಾಮಾನ್ಯವಾಗಿ ಇದು 36 ಗಂಟೆಗಳ ಸ್ಟ್ಯಾಂಡ್‌ಬೈ ಅನ್ನು ಒದಗಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಆ್ಯಪಲ್ ವಾಚ್ ಅಲ್ಟ್ರಾ ಮಲ್ಟಿಬ್ಯಾಂಡ್ ಜಿಪಿಎಸ್ ಜೊತೆಗೆ ಬರುತ್ತದೆ. ಇದರಲ್ಲಿರುವ ಹೊಸ ಬಟನ್ ಇತರ ವಿಷಯಗಳ ಜೊತೆಗೆ ಸ್ಪೋರ್ಟ್ಸ್‌ ಟ್ರ್ಯಾಕಿಂಗ್‌ನೊಂದಿಗೆ ಬಳಕೆದಾರರಿಗೆ ಸಹಾಯ ಮಾಡುತ್ತದೆ. ಇದರಲ್ಲಿ ನೈಟ್‌ ಮೋಡ್ ಆಯ್ಕೆ ಕೂಡ ನೀಡಲಾಗಿದ್ದು, ರಾತ್ರಿ ಸಮಯದಲ್ಲಿ ಶುಭ್ರವಾಗಿ ಘೋಚರಿಸುತ್ತದೆ. ಆ್ಯಪಲ್‌ ವಾಚ್ ಅಲ್ಟ್ರಾ ಬೆಲೆ $799, ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 63,700 ರೂ. ಆಗಿದೆ.

ಇದನ್ನೂ ಓದಿ
Image
Apple iPhone 14 Series: ಬಹುನಿರೀಕ್ಷಿತ ಐಫೋನ್ 14 ಸರಣಿ ಬಿಡುಗಡೆ: ಬೆಲೆ ಎಷ್ಟು?, ಏನು ವಿಶೇಷತೆ?
Image
Amazon: ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಘೋಷಣೆ: ಈ ಬಾರಿ ಏನು ಆಫರ್?, ಎಷ್ಟು ಡಿಸ್ಕೌಂಟ್
Image
Wikipedia Edit Policy: ವಿಕಿಪಿಡಿಯಾ ಲೇಖನವನ್ನು ಯಾರು ಬೇಕಾದರೂ ತಿದ್ದಬಹುದೇ? ಇಲ್ಲಿದೆ ನಿಯಮಗಳ ವಿವರ
Image
Redmi A1: ಶವೋಮಿಯಿಂದ ಊಹಿಸಲಾದ ಸ್ಮಾರ್ಟ್​ಫೋನ್: ಕೇವಲ 6,499 ರೂ.ಗೆ ರೆಡ್ಮಿ A1 ಬಿಡುಗಡೆ

ಆ್ಯಪಲ್ ವಾಚ್ SE ಕೂಡ ಎಮರ್ಜೆನ್ಸಿ ಸರ್ವಿಸ್‌ ಸೇವೆಯನ್ನು ಒಳಗೊಂಡಿದೆ. ಇದಕ್ಕಾಗಿ ಕ್ರ್ಯಾಶ್‌ ಡಿಟೆಕ್ಷನ್‌ ಅಳವಡಿಸಲಾಗಿದೆ. ಇನ್ನು ಆಪಲ್‌ ವಾಚ್‌ ಸಿರೀಸ್‌ 8 ಫಾಲ್ ಡಿಟೆಕ್ಷನ್, ಮೆಡಿಕಲ್‌ ಎಮರ್ಜೆನ್ಸಿ ಸರ್ವಿಸ್‌ ನಂತಹ ಸೇವೆಗಳನ್ನು ಪಡೆದಿದೆ. ಈ ಸಿರೀಸ್‌ನ ವಾಚ್‌ಗಳು ಟೆಂಪ್‌ರೇಚರ್‌ ಸೆನ್ಸಾರ್‌ ಪ್ರತಿ 5 ಸೆಕೆಂಡಿಗೆ ಟೆಂಪ್‌ರೇಚರ್‌ನಲ್ಲಿ ಬದಲಾವಣೆಗಳನ್ನು ಟ್ರ್ಯಾಕ್‌ ಮಾಡಲು ಅವಕಾಶ ನೀಡಲಿದೆ. ಆ್ಯಪಲ್‌ ವಾಚ್‌ ಸಿರೀಸ್‌ 8 GPS ಆವೃತ್ತಿಗೆ $399, ಅಂದರೆ ಭಾರತದಲ್ಲಿ ಅಂದಾಜು 31,800 ರೂ. ವಾಚ್ SE GPS ಆವೃತ್ತಿಗೆ $249, ಅಂದರೆ ಭಾರತಲ್ಲಿ ಸುಮಾರು 19,800 ರೂ. ಎನ್ನಬಹುದು.

Published On - 9:14 am, Thu, 8 September 22

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ