AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Apple 14 Series: ಇಂದು ಬಹುನಿರೀಕ್ಷಿತ ಐಫೋನ್ 14 ಸರಣಿ ಬಿಡುಗಡೆ: ಎಷ್ಟು ಗಂಟೆಗೆ?, ಏನೆಲ್ಲ ಫೀಚರ್ಸ್​ ಇದೆ?

Apple Event: ಇಂದು ಸೆಪ್ಟೆಂಬರ್ 7 ರಂದು ಬಹುನಿರೀಕ್ಷಿತ ಆ್ಯಪಲ್ ಐಫೋನ್ 14 ಸಿರೀಸ್ ಅನಾವರಣಗೊಳ್ಳಲಿದೆ. ಆ್ಯಪಲ್ (Apple) ಕ್ಯಾಲಿಫೋರ್ನಿಯಾದ ಪ್ರಧಾನ ಕಚೇರಿಯಲ್ಲಿ ಆ್ಯಪಲ್ ಈವೆಂಟ್ ನಡೆಯಲಿದ್ದು, ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 10;30ಕ್ಕೆ ಕಾರ್ಯಕ್ರಮ ಶುರುವಾಗಲಿದೆ.

Apple 14 Series: ಇಂದು ಬಹುನಿರೀಕ್ಷಿತ ಐಫೋನ್ 14 ಸರಣಿ ಬಿಡುಗಡೆ: ಎಷ್ಟು ಗಂಟೆಗೆ?, ಏನೆಲ್ಲ ಫೀಚರ್ಸ್​ ಇದೆ?
Apple 14 Series
TV9 Web
| Edited By: |

Updated on: Sep 07, 2022 | 6:06 AM

Share

ಬಹುನಿರೀಕ್ಷಿತ ಐಫೋನ್ 14 ಸರಣಿಯ (iPhone 14 Series) ಸ್ಮಾರ್ಟ್​ಫೋನ್​ಗಳು ಬಿಡುಗಡೆ ಆಗಲು ಕೆಲವೇ ಗಂಟೆಗಳಷ್ಟೆ ಬಾಕಿಯಿದೆ. ಇಂದು ಸೆಪ್ಟೆಂಬರ್ 7 ರಂದು ಬಹುನಿರೀಕ್ಷಿತ ಆ್ಯಪಲ್ ಐಫೋನ್ 14 ಸಿರೀಸ್ ಅನಾವರಣಗೊಳ್ಳಲಿದೆ. ಆ್ಯಪಲ್ (Apple) ಕ್ಯಾಲಿಫೋರ್ನಿಯಾದ ಪ್ರಧಾನ ಕಚೇರಿಯಲ್ಲಿ ಆ್ಯಪಲ್ ಈವೆಂಟ್ ನಡೆಯಲಿದ್ದು, ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 10;30ಕ್ಕೆ ಕಾರ್ಯಕ್ರಮ ಶುರುವಾಗಲಿದೆ. ಆ್ಯಪಲ್ ಐಫೋನ್ 14 ಸರಣಿಯ ನಾಲ್ಕು ಮಾದರಿಯ ಫೋನ್​ಗಳು ಬಿಡುಗಡೆ ಆಗಲಿದೆ. ಇದರಲ್ಲಿ ಐಫೋನ್ 14, ಐಫೋನ್ 14 ಪ್ಲಸ್, ಐಫೋನ್ 14 ಪ್ರೊ ಹಾಗೂ ಐಫೋನ್ 14 ಪ್ರೊ ಮ್ಯಾಕ್ಸ್ (iPhone 14 Pro Max) ಫೋನ್​ಗಳು ಸೇರಿವೆ. ಆ್ಯಪಲ್​ನ ಅಧಿಕೃತ ಯೂಟ್ಯೂಬ್ ಚಾನೆಲ್, ಫೇಸ್​ಬುಕ್ ಮತ್ತು ಟ್ವಿಟರ್​ನಲ್ಲಿ ಬಿಡುಗಡೆ ಕಾರ್ಯಕ್ರಮದ ಲೈವ್ ವೀಕ್ಷಿಸಬಹುದು.

ಐಫೋನ್ 13 ಸರಣಿಗಳಿಗೆ ಹೋಲಿಸಿದರೆ ಐಫೋನ್ 14 ನಲ್ಲಿ ಅನೇಕ ಹೊಸ ಹೊಸ ಫೀಚರ್ಸ್ ಇರಲಿದೆಯಂತೆ. ಕಂಪನಿ ಈ ಬಗ್ಗೆ ಯಾವುದೇ ಮಾಹಿತಿಯನ್ನು ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ. ಆದರೆ, ಮೂಲಗಳ ಪ್ರಕಾರ ಹೊಸ ಹೊಸ ಅಪ್ಡೇಟ್ ಇರಲಿದೆ ಎನ್ನಲಾಗಿದೆ. ಐಫೋನ್ 14 ಬೆಲೆ $749 ಇರಲಿದೆ ಎಂಬ ಮಾತಿದೆ. ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 59,440 ರೂ. ವಿಶೇಷ ಎಂದರೆ ಐಫೋನ್ 13 ಆರಂಭಿಕ ಬೆಲೆ ಭಾರತದಲ್ಲಿ 79,999 ರೂ. ಇದೆ. ಭಾರತದಲ್ಲಿ ತೆರಿಗೆ ಮತ್ತು ಇತರೆ ಚಾರ್ಜ್ ಸೇರಿಸಿ ಈ ಫೋನ್​ಗಳ ಬೆಲೆ ಇಲ್ಲಿ ನೀಡಿರುವುದಕ್ಕಿಂತ ಕೊಂಚ ಹೆಚ್ಚಿರಬಹುದೆಂದು ಅಂದಾಜಿಸಲಾಗಿದೆ.

ಇನ್ನು ಈ ಬಾರಿಯ ಐಫೋನ್​ನಲ್ಲಿ ಕೊನೆಗೂ ಸೆಟಲೈನ್ ಕನೆಕ್ಟಿವಿಟಿ ಇರಲಿದೆ. ಇದರ ಮೂಲಕ ಯಾವುದೇ ಸೆಲ್ಯುಲಾರ್ ಸೇವೆ ಇಲ್ಲದಿದ್ದರೂ ಸಹ ಬಳಕೆದಾರರು ಕರೆಗಳನ್ನು ಮಾಡಲು ಮತ್ತು ಸಂದೇಶಗಳನ್ನು ಕಳುಹಿಸಲು ಈ ಉಪಗ್ರಹ ಸಂಪರ್ಕ ಸೌಲಭ್ಯವು ಅನುವು ಮಾಡಿಕೊಡುತ್ತದೆ. ಐಫೋನ್ 14 ಸರಣಿಯ ಜೊತೆಗೆ, ಆ್ಯಪಲ್ ವಾಚ್‌ಗೆ ಕೂಡ ಉಪಗ್ರಹ ಸಂಪರ್ಕವನ್ನು ನೀಡುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.

ಐಫೋನ್ ಸರಣಿಯ ಪ್ರೊ ಮಾದರಿಯ ಮೇಲೆ ಹೊಸ ವಿನ್ಯಾಸ, ಉತ್ತಮ ಕ್ಯಾಮೆರಾ ಮತ್ತು ಇತರ ಸುಧಾರಣೆಗಳನ್ನು ಹೊಂದಿರುತ್ತದೆ. ಐಫೋನ್ 14 ಪ್ರೊ ಮತ್ತು ಐಫೋನ್ 14 ಪ್ರೊ ಮ್ಯಾಕ್ಸ್ ದೊಡ್ಡ ಪ್ರೊಫೈಲ್ ಮತ್ತು ಹೆಚ್ಚುವರಿ ಇಂಟರ್ನಲ್‌ಗಳನ್ನು ನಿರ್ವಹಿಸಲು ಉತ್ತಮ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿವೆ ಎಂದು ವದಂತಿಗಳಿವೆ. ಎರಡೂ ಆವೃತ್ತಿಗಳು 48 ಮೆಗಾಫಿಕ್ಸೆಲ್, 12 ಮೆಗಾಫಿಕ್ಸೆಲ್ ಅಲ್ಟ್ರಾವೈಡ್ ಮತ್ತು ಟೆಲಿಫೋಟೋ ಲೆನ್ಸ್‌ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿರುತ್ತದೆ.

ಈ ಬಾರಿಯ 14 ಸರಣಿಯಲ್ಲಿ ಆನ್ ಡಿಸ್ ಪ್ಲೇ ಫೀಚರ್ ಇರಲಿದೆ ಎಂಬ ಮಾತಿದೆ. ಅಂದರೆ ಐಫೋನ್ ​ನಲ್ಲಿ ಯಾವಾಗಲೂ ಡಿಸ್ ಪ್ಲೇ ಅನ್ನು ಆನ್ ಮಾಡಿಯೇ ಇಡಬಹುದು. ಈ ಆಯ್ಕೆ ಈಗಾಗಲೇ ಆಂಡ್ರಾಯ್ಡ್ ಫೋನ್ ಬಳಕೆದಾರರಿಗೆ ಲಭ್ಯವಿದೆ. ಇದೀಗ ಹೊಸ ಐಒಎಸ್ ಬಳಕೆದಾರರಿಗೆ ಕೂಡ ಈ ಆಯ್ಕೆ ಲಭ್ಯವಾಗಲಿದೆ. ಈ ಹಿಂದಿನ ಐಫೋನ್ ಗಳಿಗೆ ಹೋಲಿಸಿದರೆ ಈ ಬಾರಿ ಬಲಿಷ್ಠ ಬ್ಯಾಟರಿ ಬ್ಯಾಕಪ್ ಕೊಡಲಾಗುತ್ತಂತೆ. ಜೊತೆಗೆ ಫಾಸ್ಟ್ ಚಾರ್ಜರ್ ಸೌಲಭ್ಯ ಬಂದರೂ ಅಚ್ಚರಿ ಪಡಬೇಕಿಲ್ಲ. ಐಫೋನ್ 14 ಪ್ರೊ ಮಾಡೆಲ್​ ನಲ್ಲಿ ಪಂಚ್ ಹೋಲ್ ಡಿಸ್ ಪ್ಲೇ ಇರಲಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಅನೇಕ ಫೋಟೋಗಳು ಸೋರಿಕೆಯಾಗಿವೆ. ಇದರಿಂದ ಡಿಸ್ ಪ್ಲೇಯಲ್ಲಿ ಇನ್ನಷ್ಟು ಜಾಗ ಸಿಗಲಿದೆ.

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ