
ಬೆಂಗಳೂರು (ಅ. 26): ಆಪಲ್ ಸೆಪ್ಟೆಂಬರ್ ಆರಂಭದಲ್ಲಿ ಐಫೋನ್ 17 (Apple) ಸರಣಿಯನ್ನು ಬಿಡುಗಡೆ ಮಾಡಿತು. ಇದರಲ್ಲಿ ಒಟ್ಟು ನಾಲ್ಕು ಮಾದರಿಗಳನ್ನು ಅನಾವರಣ ಮಾಡಲಾಯಿತು. ಈ ಫೋನುಗಳ ಇಂದು ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸುತ್ತಿವೆ. ಇವುಗಳಲ್ಲಿ, ಐಫೋನ್ 17 ಪ್ರೊ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ, ಅದರ ಕಿತ್ತಳೆ ರೂಪಾಂತರವು ಸಖತ್ ಟ್ರೆಂಡಿಂಗ್ನಲ್ಲಿದೆ. ಈ ಫೋನ್ ತನ್ನ ಪ್ರೀಮಿಯಂ ವೈಶಿಷ್ಟ್ಯಗಳು ಮತ್ತು ಅದ್ಭುತ ವಿನ್ಯಾಸದೊಂದಿಗೆ ಮಾರುಕಟ್ಟೆಯಲ್ಲಿ ಅಲೆಗಳನ್ನೇ ಸೃಷ್ಟಿಸುತ್ತಿದೆ. ಐಫೋನ್ 17 ಪ್ರೊ (256GB) ನ ಮೂಲ ಬೆಲೆ ₹1,34,900, ಆದರೆ ಈಗ ನೀವು ಇದನ್ನು ಎಕ್ಸ್ಚೇಂಜ್ ಮತ್ತು ಬ್ಯಾಂಕ್ ಕೊಡುಗೆಗಳ ಮೂಲಕ ಅಮೆಜಾನ್‌ನಲ್ಲಿ ಅತಿ ಕಡಿಮೆ ಬೆಲೆಗೆ ಪಡೆಯಬಹುದು.
ಅಮೆಜಾನ್‌ನ ಟ್ರೇಡ್-ಇನ್ ಪ್ರೋಗ್ರಾಂ ತಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ಅಪ್‌ಗ್ರೇಡ್ ಮಾಡಲು ಬಯಸುವ ಬಳಕೆದಾರರಿಗೆ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ನೀವು ಐಫೋನ್ 17 ಪ್ರೊ (256GB) ಮೇಲೆ ₹58,000 ವರೆಗೆ ರಿಯಾಯಿತಿ ಪಡೆಯಬಹುದು. ಈ ರಿಯಾಯಿತಿಯು ನಿಮ್ಮ ಹಳೆಯ ಸಾಧನದ ಸ್ಥಿತಿ ಮತ್ತು ಮಾದರಿಯನ್ನು ಅವಲಂಬಿಸಿರುತ್ತದೆ. ಈ ಕೊಡುಗೆಯೊಂದಿಗೆ, ಐಫೋನ್ 17 ಪ್ರೊ ಬೆಲೆ ₹76,900 ಕ್ಕೆ ಇಳಿಯುತ್ತದೆ. ಆಪಲ್‌ನ ಪ್ರೀಮಿಯಂ ಸ್ಮಾರ್ಟ್‌ಫೋನ್ ಖರೀದಿಸಲು ಬಯಸುವವರಿಗೆ ಇದು ಸುವರ್ಣಾವಕಾಶ.
ವಿನಿಮಯ ಕೊಡುಗೆಯ ನಂತರ, ನೀವು ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನೊಂದಿಗೆ ಇನ್ನೂ ಹೆಚ್ಚಿನ ರಿಯಾಯಿತಿಗಳನ್ನು ಪಡೆಯಬಹುದು. ಟ್ರೇಡ್-ಇನ್ ಕೊಡುಗೆಯ ಜೊತೆಗೆ, ಈ ಕಾರ್ಡ್ ಬಳಸುವುದರಿಂದ ಹೆಚ್ಚುವರಿಯಾಗಿ ₹6,745 ರಿಯಾಯಿತಿ ಸಿಗುತ್ತದೆ. ಈ ರಿಯಾಯಿತಿಯ ನಂತರ, ಐಫೋನ್ 17 ಪ್ರೊ ಬೆಲೆಯನ್ನು ₹70,155 ಕ್ಕೆ ಇಳಿಸಲಾಗಿದೆ.
Tech Tips: ತಪ್ಪಿಯೂ ಈ 5 ಸಾಧನಗಳನ್ನು ಎಕ್ಸ್ಟೆನ್ಶನ್ ಬೋರ್ಡ್‌ಗೆ ಪ್ಲಗ್ ಮಾಡಬೇಡಿ: ಬ್ಲಾಸ್ಟ್ ಆಗಬಹುದು
ಐಫೋನ್ 17 ಪ್ರೊ 6.3-ಇಂಚಿನ ಸೂಪರ್ ರೆಟಿನಾ XDR OLED ಡಿಸ್ಪ್ಲೇಯನ್ನು 2622×1206 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ. ಇದು ಪ್ರೊಮೋಷನ್ ತಂತ್ರಜ್ಞಾನದೊಂದಿಗೆ 120Hz ವರೆಗಿನ ಅಡಾಪ್ಟಿವ್ ರಿಫ್ರೆಶ್ ದರ, ಆಲ್ವೇಸ್-ಆನ್ ಡಿಸ್ಪ್ಲೇ ಮತ್ತು 3000 ನಿಟ್‌ಗಳ ಗರಿಷ್ಠ ಬ್ರೈಟ್ನೆಸ್ನಿಂದ ಕೂಡಿದೆ. ಇದು 3-ನ್ಯಾನೋಮೀಟರ್ N3P ಪ್ರಕ್ರಿಯೆಯನ್ನು ಆಧರಿಸಿದ ಆಪಲ್ A19 ಪ್ರೊ ಚಿಪ್‌ನಿಂದ ಚಾಲಿತವಾಗಿದೆ. 12GB ವರೆಗೆ RAM ಮತ್ತು Wi-Fi 7 ಮತ್ತು ಬ್ಲೂಟೂತ್ 6 ನಂತಹ ಸಂಪರ್ಕ ವೈಶಿಷ್ಟ್ಯಗಳು ಭವಿಷ್ಯಕ್ಕೆ ಪ್ರಯೋಜನಕಾರಿ ಆಗಿದೆ.
ಐಫೋನ್ 17 ಪ್ರೊ ಟ್ರಿಪಲ್ ಕ್ಯಾಮೆರಾ ಫ್ಯೂಷನ್ ವ್ಯವಸ್ಥೆಯನ್ನು ಹೊಂದಿದೆ. ಇದರಲ್ಲಿ 48MP ಮುಖ್ಯ, 48MP ಅಲ್ಟ್ರಾ-ವೈಡ್ ಮತ್ತು 48MP ಟೆಲಿಫೋಟೋ ಲೆನ್ಸ್ ಸೇರಿವೆ. ಹೊಸ ಟೆಟ್ರಾಪ್ರಿಸ್ಮ್ ವಿನ್ಯಾಸವು 8x ಆಪ್ಟಿಕಲ್ ಮತ್ತು 40x ಡಿಜಿಟಲ್ ಜೂಮ್ ಅನ್ನು ಒದಗಿಸುತ್ತದೆ. 18MP ಮುಂಭಾಗದ ಕ್ಯಾಮೆರಾ 4K HDR ವಿಡಿಯೋ ಮತ್ತು ಸೆಂಟರ್ ಸ್ಟೇಜ್ ಅನ್ನು ಬೆಂಬಲಿಸುತ್ತದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ