AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Apple product launch: ಆಪಲ್​ನಿಂದ ಈ ವರ್ಷದ ಮೊದಲ ಕಾರ್ಯಕ್ರಮ, ವಿವಿಧ ಪ್ರಾಡಕ್ಟ್​ಗಳ ಬಿಡುಗಡೆ ನಿರೀಕ್ಷೆ

ಆಪಲ್ ಕಂಪೆನಿಯಿಂದ ವಿವಿಧ ಉತ್ಪನ್ನಗಳ ಬಿಡುಗಡೆ ಮಾಡುವ ಕಾರ್ಯಕ್ರಮ ಇಂದು ನಡೆಯಲಿದೆ. ಕ್ಯಾಲಿಫೋರ್ನಿಯಾದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮದ ನೇರಪ್ರಸಾರ ವಿವಿಧ ಚಾನೆಲ್​ಗಳ ಮೂಲಕ ವೀಕ್ಷಿಸಬಹು್ದು.

Apple product launch: ಆಪಲ್​ನಿಂದ ಈ ವರ್ಷದ ಮೊದಲ ಕಾರ್ಯಕ್ರಮ, ವಿವಿಧ ಪ್ರಾಡಕ್ಟ್​ಗಳ ಬಿಡುಗಡೆ ನಿರೀಕ್ಷೆ
ಆಪಲ್ ಕಂಪೆನಿಯ ಚಿಹ್ನೆ
Follow us
Srinivas Mata
|

Updated on: Apr 20, 2021 | 5:38 PM

ಆಪಲ್​ನಿಂದ 2021ನೇ ಇಸವಿಯ ಮೊದಲ ಕಾರ್ಯಕ್ರಮ ಇಂದು (ಏಪ್ರಿಲ್ 20) ನಡೆಯಲಿದೆ. ಇಂದಿನ ಕಾರ್ಯಕ್ರಮಕ್ಕೆ “Spring Loaded” ಎಂದು ಹೆಸರಿಡಲಾಗಿದೆ. ಈ ಸಂದರ್ಭದಲ್ಲಿ ಕಂಪೆನಿಯಿಂದ ಹೊಸ ಐಪ್ಯಾಡ್ ಪ್ರೋ, ಐಮ್ಯಾಕ್ ಸೇರಿ ಇನ್ನೂ ಹಲವು ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗುವುದು ಎಂಬ ನಿರೀಕ್ಷೆ ಇದೆ. ಆಪಲ್​ನ ಇಂದಿನ ಕಾರ್ಯಕ್ರಮವು ವರ್ಚುವಲ್ ಆಗಿರಲಿದ್ಎದು, ಕ್ಯಾಲಿಫೋರ್ನಿಯಾದ ಕುರ್ಟಿನೋದಲ್ಲಿ ಇರುವ ಆಪಲ್ ಪಾರ್ಕ್​ನ ಸ್ಟೀವ್ ಜಾಬ್ಸ್ ಥಿಯೇಟರ್​ನಿಂದ ನೇರ ಪ್ರಸಾರ ಇರಲಿದೆ. ಹಲವು ಚಾನೆಲ್ ಮೂಲಕ ಈ ಕಾರ್ಯಕ್ರಮದ ನೇರಪ್ರಸಾರ ಮಾಡಲಾಗುತ್ತದೆ.

ಐಫೋನ್, ಐಪ್ಯಾಡ್, ಮ್ಯಾಕ್, ಪಿಸಿ, ಸ್ಮಾರ್ಟ್​ಫೋನ್ ಅಥವಾ ವೆಬ್ ಬ್ರೌಸರ್ ಇರುವ ಇತರ ಯಾವುದೇ ಸಾಧನಗಳಲ್ಲಿ ಆಪಲ್ ವೆಬ್​ಸೈಟ್ ಮೂಲಕ, ಅಷ್ಟೇ ಅಲ್ಲ, ಆಪಲ್​ನ ಯೂಟ್ಯೂಬ್ ಚಾನೆಲ್​ನಲ್ಲೂ ಕಾರ್ಯಕ್ರಮ ವೀಕ್ಷಿಸಬಹುದು.

ಅಂದ ಹಾಗೆ ಈ ಕಾರ್ಯಕ್ರಮವು IST 10:30 AM (10 AM PDT)ಗೆ ಆಪಲ್ ಕಾರ್ಯಕ್ರಮ ಶುರು ಆಗಲಿದೆ. ಆಪಲ್​ನಿಂದ ಹೊಸ ಐಪ್ಯಾಡ್​ ಪ್ರೋ ಸರಣಿ, ರಚನೆ ಬದಲಿಸಿರುವ ಐಮ್ಯಾಕ್ ಬಿಡುಗಡೆ ಆಗುವ ಸಾಧ್ಯತೆ ಇದೆ. ಇನ್ನು ವರದಿಗಳ ಪ್ರಕಾರ, ಮೂರನೇ ತಲೆಮಾರಿನ ಆಪಲ್ ಪೆನ್ಸಿಲ್, ಏರ್​ಪಾಡ್ಸ್ 3 ಕೂಡ ಬಿಡುಗಡೆ ಮಾಡಬಹುದು. ಅದೇ ರೀತಿ ಆಪಲ್ ಹೊಸ ಐಪ್ಯಾಡ್ ಪ್ರೋ ಸರಣಿ ಹೊರತರುವ ವದಂತಿ ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿದೆ. ಮುಂದಿನ ತಲೆಮಾರಿನ ಐಪ್ಯಾಡ್ ಪ್ರೋ 2021 ವರ್ಷದ ಮೊದಲಾರ್ಧದಲ್ಲಿ ಬಿಡುಗಡೆ ಆಗುವ ಬಗ್ಗೆ ಕಳೆದ ವರ್ಷದಿಂದ ವದಂತಿ ಇದೆ. ಈ ವರ್ಷ ಆಪಲ್​ನಿಂದ ಮಿನಿ- ಎಲ್​ಇಡಿ ಡಿಸ್​ಪ್ಲೇ ಐಪ್ಯಾಡ್ ಪ್ರೋ ಬಿಡುಗಡೆ ಮಾಡುವ ಬಗ್ಗೆಯೂ ಸುದ್ದಿ ಹರಿದಾಡುತ್ತಿದೆ.

ಐಪ್ಯಾಡ್ ಪ್ರೋ 12.9- ಇಂಚಿನ ಮಾಡೆಲ್ ಮಿನಿ- ಎಲ್​ಇಡಿ ಡಿಸ್​ಪ್ಲೇ ಜತೆ ಬರುವ ಬಗ್ಗೆಯೂ ವರದಿಯಿದೆ. ಈ ತಿಂಗಳ ಕೊನೆಗೆ ಆಪಲ್​ನಿಂದ ಎರಡು ಐಪ್ಯಾಡ್ ಮಾಡೆಲ್​ಗಳನ್ನು ಬಿಡುಗಡೆ ಮಾಡಬಹುದು ಎಂದು ಮೂಲಗಳು ಮಾಹಿತಿ ನೀಡಿವೆ. ಒಎಲ್​ಇಡಿ ಡಿಸ್​ಪ್ಲೇ ನೀಡುವ ಅನುಕೂಲಗಳನ್ನೇ ಈ ತಂತ್ರಜ್ಞಾನವೂ ನೀಡುತ್ತದೆ. ​ಆದರೆ ಅದರಲ್ಲಿನ ಕೆಲವು ಮಿತಿಯನ್ನೂ ಈ ತಂತ್ರಜ್ಞಾನದಲ್ಲಿ ಸರಿಪಡಿಸಲಾಗಿದೆ ಎನ್ನಲಾಗುತ್ತಿದೆ. ಐಪ್ಯಾಡ್ ಪ್ರೋ ಜತೆಗೆ ಮೂರನೇ ತಲೆಮಾರಿನ ಆಪಲ್ ಪೆನ್ಸಿಲ್ ಕೆಲಸವೂ ನಡೆಯುತ್ತಿದೆ ಎಂದು ವರದಿ ಆಗಿತ್ತು. ಆದರೆ ಐಪ್ಯಾಡ್ ಪ್ರೋಗೆ ಇರುವಷ್ಟು ಪ್ರಾಮುಖ್ಯ ಪೆನ್ಸಿಲ್​ಗೆ ಇಲ್ಲ. ಆಪಲ್​ನಿಂದ ಗ್ಲಾಸಿ ಪೆನ್ಸಿಲ್, ಅದರಲ್ಲೂ ಬೇರ್ಪಡಿಸಬಹುದಾದ ನಿಬ್​ನೊಂದಿಗೆ ಬರುವ ಕುರಿತು ಈಚೆಗೆ ಮಾಹಿತಿ ಸೋರಿಕೆ ಆಗಿತ್ತು.

ಇನ್ನು ರಚನೆ ಬದಲಾದ ಆಪಲ್ ಐಮ್ಯಾಕ್ ಏಪ್ರಿಲ್ 20ನೇ ತಾರೀಕು ಬಿಡುಗಡೆ ಆಗುವ ಬಗ್ಗೆ ಅಂದಾಜು ಮಾಡಲಾಗುತ್ತಿದೆ. ಲವ್​ಟುಡ್ರೀಮ್ ಬಹಿರಂಗ ಮಾಡಿದ ಸುದ್ದಿಯಂತೆ, ಹೊಸ ಐಮ್ಯಾಕ್ ಮಾಡೆಲ್​ಗಳು ಇಂದು ಬಿಡುಗಡೆ ಆಗುತ್ತವೆ. ಆಪಲ್​ನಿಂದ ಮುಂದೆ ಬಿಡುಗೆ ಆಗಲಿರುವ ಐಮ್ಯಾಕ್​ಗಳಲ್ಲಿ ಕಂಪೆನಿಯದೇ ಸಿಲಿಕಾನ್ ಚಿಪ್ ಬಳಸಲಾಗುತ್ತದೆ ಎಂಬ ಸುದ್ದಿ ಇದೆ. ಚಿಪ್ ಮಾತ್ರವಲ್ಲದೆ, ಹಲವು ಬಣ್ಣಗಳ ಆಯ್ಕೆಯೊಂದಿಗೆ ಬರಲಿದೆ ಎಂಬ ಮಾಹಿತಿಯೂ ಇದೆ. ಪ್ರೋ ಡಿಸೈನ್ ಎಕ್ಸ್​ಡಿಆರ್ ಅನ್ನೇ ಹೋಲುವಂತೆ ಈ ವರ್ಷದ ಐಮ್ಯಾಕ್ ಮಾಡೆಲ್​ಗಳ ಡಿಸೈನ್ ಇರಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಡಿಸ್​ಪ್ಲೇ ವಿಚಾರಕ್ಕೆ ಬಂದರೆ, ಈಗಿರುವ 21.5 ಹಾಗೂ 27 ಇಂಚಿನದಕ್ಕಿಂತ ದೊಡ್ಡದು ಬಿಡುಗಡೆ ಮಾಡಬಹುದು ಎಂಬ ನಿರೀಕ್ಷೆ ಇದೆ.

ಇದನ್ನೂ ಓದಿ: Apple iPhone 12: ಆಪಲ್ ಐಫೋನ್ 12ರ ಜೋಡಣೆ ಭಾರತದಲ್ಲೇ ಆರಂಭ

(Apple company various product launch event today at California. Live streaming of this event in various channels. Here is the timing and other details)

ಹಾಸನದಲ್ಲಿ 2 ವರ್ಷದಲ್ಲಿ 507 ಜನರಿಗೆ ಹೃದಯಾಘಾತ: ಕಾರಣ ಬಿಚ್ಚಿಟ್ಟ DHO
ಹಾಸನದಲ್ಲಿ 2 ವರ್ಷದಲ್ಲಿ 507 ಜನರಿಗೆ ಹೃದಯಾಘಾತ: ಕಾರಣ ಬಿಚ್ಚಿಟ್ಟ DHO
ಕಾಂಗ್ರೆಸ್ ಏನು ಮಾಡಿದೆ ಅಂತ ತೋರಿಸ್ತೇವೆ, ಕುಮಾರಸ್ವಾಮಿ ಬರಲಿ: ರವಿ ಗಣಿಗ
ಕಾಂಗ್ರೆಸ್ ಏನು ಮಾಡಿದೆ ಅಂತ ತೋರಿಸ್ತೇವೆ, ಕುಮಾರಸ್ವಾಮಿ ಬರಲಿ: ರವಿ ಗಣಿಗ
ಸಚಿವ ಕೃಷ್ಣಭೈರೇಗೌಡ ಸಭೆಯಲ್ಲಿ ರೀಲ್ಸ್ ನೋಡುತ್ತಾ ಕುಳಿತ ಅಧಿಕಾರಿಗಳು
ಸಚಿವ ಕೃಷ್ಣಭೈರೇಗೌಡ ಸಭೆಯಲ್ಲಿ ರೀಲ್ಸ್ ನೋಡುತ್ತಾ ಕುಳಿತ ಅಧಿಕಾರಿಗಳು
ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ಹುಚ್ಚಾಟ: ಸೀತಾಳಯ್ಯನಗಿರಿಯಲ್ಲಿ ಹೊಡೆದಾಟ
ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ಹುಚ್ಚಾಟ: ಸೀತಾಳಯ್ಯನಗಿರಿಯಲ್ಲಿ ಹೊಡೆದಾಟ
ಗೋಕರ್ಣದಲ್ಲಿ ಮತಾಂತರ ಶಂಕೆ: ಬಡವರು, ರೋಗ ಪಿಡಿತರೇ ಟಾರ್ಗೆಟ್!
ಗೋಕರ್ಣದಲ್ಲಿ ಮತಾಂತರ ಶಂಕೆ: ಬಡವರು, ರೋಗ ಪಿಡಿತರೇ ಟಾರ್ಗೆಟ್!
ಬಿಜೆಪಿ ಮತ್ತು ನಾನು ಪರಸ್ಪರ ಅವಲಂಬಿತರಾಗಿದ್ದೇವೆ: ಬಸನಗೌಡ ಯತ್ನಾಳ್
ಬಿಜೆಪಿ ಮತ್ತು ನಾನು ಪರಸ್ಪರ ಅವಲಂಬಿತರಾಗಿದ್ದೇವೆ: ಬಸನಗೌಡ ಯತ್ನಾಳ್
ರಾಷ್ಟ್ರಪತಿ ಭೇಟಿಗೆ ತೆರಳುವೆ, ಮೋದಿ ಭೇಟಿಗೂ ಸಮಯ ಕೇಳಿದ್ದೇನೆ: ಸಿಎಂ
ರಾಷ್ಟ್ರಪತಿ ಭೇಟಿಗೆ ತೆರಳುವೆ, ಮೋದಿ ಭೇಟಿಗೂ ಸಮಯ ಕೇಳಿದ್ದೇನೆ: ಸಿಎಂ
ರಾಜ್ಯ ರಾಜ್ಯಕಾರಣದಲ್ಲಿ ಯಡಿಯೂರಪ್ಪ ಸಕ್ರಿಯರಾಗುವ ಹಿಂದೆ ಕಾರಣವಿದೆಯೇ?
ರಾಜ್ಯ ರಾಜ್ಯಕಾರಣದಲ್ಲಿ ಯಡಿಯೂರಪ್ಪ ಸಕ್ರಿಯರಾಗುವ ಹಿಂದೆ ಕಾರಣವಿದೆಯೇ?
ಈಶ್ವರಪ್ಪರ ಪ್ರಕಾರ ಅಲ್ಪಸಂಖ್ಯಾತರು ಅನ್ನೋದು ಕೂಡ ಒಂದು ಧರ್ಮ!
ಈಶ್ವರಪ್ಪರ ಪ್ರಕಾರ ಅಲ್ಪಸಂಖ್ಯಾತರು ಅನ್ನೋದು ಕೂಡ ಒಂದು ಧರ್ಮ!
ತಾಯಿಗೆ ಹೊಡೆಯುವಾಗ ತಂದೆಗೆ ಕೈಮುಗಿದು ಬೇಡಿದ ಮಗಳು
ತಾಯಿಗೆ ಹೊಡೆಯುವಾಗ ತಂದೆಗೆ ಕೈಮುಗಿದು ಬೇಡಿದ ಮಗಳು