ಆಪಲ್ನಿಂದ 2021ನೇ ಇಸವಿಯ ಮೊದಲ ಕಾರ್ಯಕ್ರಮ ಇಂದು (ಏಪ್ರಿಲ್ 20) ನಡೆಯಲಿದೆ. ಇಂದಿನ ಕಾರ್ಯಕ್ರಮಕ್ಕೆ “Spring Loaded” ಎಂದು ಹೆಸರಿಡಲಾಗಿದೆ. ಈ ಸಂದರ್ಭದಲ್ಲಿ ಕಂಪೆನಿಯಿಂದ ಹೊಸ ಐಪ್ಯಾಡ್ ಪ್ರೋ, ಐಮ್ಯಾಕ್ ಸೇರಿ ಇನ್ನೂ ಹಲವು ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗುವುದು ಎಂಬ ನಿರೀಕ್ಷೆ ಇದೆ. ಆಪಲ್ನ ಇಂದಿನ ಕಾರ್ಯಕ್ರಮವು ವರ್ಚುವಲ್ ಆಗಿರಲಿದ್ಎದು, ಕ್ಯಾಲಿಫೋರ್ನಿಯಾದ ಕುರ್ಟಿನೋದಲ್ಲಿ ಇರುವ ಆಪಲ್ ಪಾರ್ಕ್ನ ಸ್ಟೀವ್ ಜಾಬ್ಸ್ ಥಿಯೇಟರ್ನಿಂದ ನೇರ ಪ್ರಸಾರ ಇರಲಿದೆ. ಹಲವು ಚಾನೆಲ್ ಮೂಲಕ ಈ ಕಾರ್ಯಕ್ರಮದ ನೇರಪ್ರಸಾರ ಮಾಡಲಾಗುತ್ತದೆ.
ಐಫೋನ್, ಐಪ್ಯಾಡ್, ಮ್ಯಾಕ್, ಪಿಸಿ, ಸ್ಮಾರ್ಟ್ಫೋನ್ ಅಥವಾ ವೆಬ್ ಬ್ರೌಸರ್ ಇರುವ ಇತರ ಯಾವುದೇ ಸಾಧನಗಳಲ್ಲಿ ಆಪಲ್ ವೆಬ್ಸೈಟ್ ಮೂಲಕ, ಅಷ್ಟೇ ಅಲ್ಲ, ಆಪಲ್ನ ಯೂಟ್ಯೂಬ್ ಚಾನೆಲ್ನಲ್ಲೂ ಕಾರ್ಯಕ್ರಮ ವೀಕ್ಷಿಸಬಹುದು.
ಅಂದ ಹಾಗೆ ಈ ಕಾರ್ಯಕ್ರಮವು IST 10:30 AM (10 AM PDT)ಗೆ ಆಪಲ್ ಕಾರ್ಯಕ್ರಮ ಶುರು ಆಗಲಿದೆ. ಆಪಲ್ನಿಂದ ಹೊಸ ಐಪ್ಯಾಡ್ ಪ್ರೋ ಸರಣಿ, ರಚನೆ ಬದಲಿಸಿರುವ ಐಮ್ಯಾಕ್ ಬಿಡುಗಡೆ ಆಗುವ ಸಾಧ್ಯತೆ ಇದೆ. ಇನ್ನು ವರದಿಗಳ ಪ್ರಕಾರ, ಮೂರನೇ ತಲೆಮಾರಿನ ಆಪಲ್ ಪೆನ್ಸಿಲ್, ಏರ್ಪಾಡ್ಸ್ 3 ಕೂಡ ಬಿಡುಗಡೆ ಮಾಡಬಹುದು. ಅದೇ ರೀತಿ ಆಪಲ್ ಹೊಸ ಐಪ್ಯಾಡ್ ಪ್ರೋ ಸರಣಿ ಹೊರತರುವ ವದಂತಿ ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿದೆ. ಮುಂದಿನ ತಲೆಮಾರಿನ ಐಪ್ಯಾಡ್ ಪ್ರೋ 2021 ವರ್ಷದ ಮೊದಲಾರ್ಧದಲ್ಲಿ ಬಿಡುಗಡೆ ಆಗುವ ಬಗ್ಗೆ ಕಳೆದ ವರ್ಷದಿಂದ ವದಂತಿ ಇದೆ. ಈ ವರ್ಷ ಆಪಲ್ನಿಂದ ಮಿನಿ- ಎಲ್ಇಡಿ ಡಿಸ್ಪ್ಲೇ ಐಪ್ಯಾಡ್ ಪ್ರೋ ಬಿಡುಗಡೆ ಮಾಡುವ ಬಗ್ಗೆಯೂ ಸುದ್ದಿ ಹರಿದಾಡುತ್ತಿದೆ.
ಐಪ್ಯಾಡ್ ಪ್ರೋ 12.9- ಇಂಚಿನ ಮಾಡೆಲ್ ಮಿನಿ- ಎಲ್ಇಡಿ ಡಿಸ್ಪ್ಲೇ ಜತೆ ಬರುವ ಬಗ್ಗೆಯೂ ವರದಿಯಿದೆ. ಈ ತಿಂಗಳ ಕೊನೆಗೆ ಆಪಲ್ನಿಂದ ಎರಡು ಐಪ್ಯಾಡ್ ಮಾಡೆಲ್ಗಳನ್ನು ಬಿಡುಗಡೆ ಮಾಡಬಹುದು ಎಂದು ಮೂಲಗಳು ಮಾಹಿತಿ ನೀಡಿವೆ. ಒಎಲ್ಇಡಿ ಡಿಸ್ಪ್ಲೇ ನೀಡುವ ಅನುಕೂಲಗಳನ್ನೇ ಈ ತಂತ್ರಜ್ಞಾನವೂ ನೀಡುತ್ತದೆ. ಆದರೆ ಅದರಲ್ಲಿನ ಕೆಲವು ಮಿತಿಯನ್ನೂ ಈ ತಂತ್ರಜ್ಞಾನದಲ್ಲಿ ಸರಿಪಡಿಸಲಾಗಿದೆ ಎನ್ನಲಾಗುತ್ತಿದೆ. ಐಪ್ಯಾಡ್ ಪ್ರೋ ಜತೆಗೆ ಮೂರನೇ ತಲೆಮಾರಿನ ಆಪಲ್ ಪೆನ್ಸಿಲ್ ಕೆಲಸವೂ ನಡೆಯುತ್ತಿದೆ ಎಂದು ವರದಿ ಆಗಿತ್ತು. ಆದರೆ ಐಪ್ಯಾಡ್ ಪ್ರೋಗೆ ಇರುವಷ್ಟು ಪ್ರಾಮುಖ್ಯ ಪೆನ್ಸಿಲ್ಗೆ ಇಲ್ಲ. ಆಪಲ್ನಿಂದ ಗ್ಲಾಸಿ ಪೆನ್ಸಿಲ್, ಅದರಲ್ಲೂ ಬೇರ್ಪಡಿಸಬಹುದಾದ ನಿಬ್ನೊಂದಿಗೆ ಬರುವ ಕುರಿತು ಈಚೆಗೆ ಮಾಹಿತಿ ಸೋರಿಕೆ ಆಗಿತ್ತು.
ಇನ್ನು ರಚನೆ ಬದಲಾದ ಆಪಲ್ ಐಮ್ಯಾಕ್ ಏಪ್ರಿಲ್ 20ನೇ ತಾರೀಕು ಬಿಡುಗಡೆ ಆಗುವ ಬಗ್ಗೆ ಅಂದಾಜು ಮಾಡಲಾಗುತ್ತಿದೆ. ಲವ್ಟುಡ್ರೀಮ್ ಬಹಿರಂಗ ಮಾಡಿದ ಸುದ್ದಿಯಂತೆ, ಹೊಸ ಐಮ್ಯಾಕ್ ಮಾಡೆಲ್ಗಳು ಇಂದು ಬಿಡುಗಡೆ ಆಗುತ್ತವೆ. ಆಪಲ್ನಿಂದ ಮುಂದೆ ಬಿಡುಗೆ ಆಗಲಿರುವ ಐಮ್ಯಾಕ್ಗಳಲ್ಲಿ ಕಂಪೆನಿಯದೇ ಸಿಲಿಕಾನ್ ಚಿಪ್ ಬಳಸಲಾಗುತ್ತದೆ ಎಂಬ ಸುದ್ದಿ ಇದೆ. ಚಿಪ್ ಮಾತ್ರವಲ್ಲದೆ, ಹಲವು ಬಣ್ಣಗಳ ಆಯ್ಕೆಯೊಂದಿಗೆ ಬರಲಿದೆ ಎಂಬ ಮಾಹಿತಿಯೂ ಇದೆ. ಪ್ರೋ ಡಿಸೈನ್ ಎಕ್ಸ್ಡಿಆರ್ ಅನ್ನೇ ಹೋಲುವಂತೆ ಈ ವರ್ಷದ ಐಮ್ಯಾಕ್ ಮಾಡೆಲ್ಗಳ ಡಿಸೈನ್ ಇರಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಡಿಸ್ಪ್ಲೇ ವಿಚಾರಕ್ಕೆ ಬಂದರೆ, ಈಗಿರುವ 21.5 ಹಾಗೂ 27 ಇಂಚಿನದಕ್ಕಿಂತ ದೊಡ್ಡದು ಬಿಡುಗಡೆ ಮಾಡಬಹುದು ಎಂಬ ನಿರೀಕ್ಷೆ ಇದೆ.
ಇದನ್ನೂ ಓದಿ: Apple iPhone 12: ಆಪಲ್ ಐಫೋನ್ 12ರ ಜೋಡಣೆ ಭಾರತದಲ್ಲೇ ಆರಂಭ
(Apple company various product launch event today at California. Live streaming of this event in various channels. Here is the timing and other details)