Bounce Infinity E1: ಭಾರತದ ಮೊದಲ ಬೌನ್ಸ್​ ಇ-ಸ್ಕೂಟರ್​ ಚಾರ್ಜಿಂಗ್​ ಇನ್ನು ಮತ್ತಷ್ಟು ಸುಲಭ

| Updated By: Pavitra Bhat Jigalemane

Updated on: Dec 26, 2021 | 11:45 AM

ಭಾರತದ ಮೊದಲ ಇ-ಸ್ಕೂಟರ್​ ಆಗಿದ್ದು, ಇದು ಬ್ಯಾಟರಿ ಆಸ್​ ಎ ಸರ್ವಿಸ್​ (Battery as a service)  ಎನ್ನುವ ವೈಶಿಷ್ಟ್ಯತೆಯನ್ನು ಪರಿಚಯಿಸುತ್ತಿದೆ. ಎಂದರೆ ಗ್ರಾಹಕರು ಸ್ಕೂಟರ್ ನ ಬ್ಯಾಟರಿಯನ್ನು ಸರ್ವಿಸ್​ ರೂಪದಲ್ಲಿ ಪಡೆಯಬಹುದಾಗಿದೆ. 

Bounce Infinity E1: ಭಾರತದ ಮೊದಲ ಬೌನ್ಸ್​ ಇ-ಸ್ಕೂಟರ್​ ಚಾರ್ಜಿಂಗ್​ ಇನ್ನು ಮತ್ತಷ್ಟು ಸುಲಭ
ಬೌನ್ಸ್​ ಸಿಇಒ ವಿವೇಕಾನಂದ ಹಲ್ಲೆಕೆರೆ
Follow us on

ಬೆಂಗಳೂರಿನ ಸ್ಟಾರ್ಟ್​ ಅಫ್​  ಬೌನ್ಸ್​ ​ ಸ್ಕೂಟರ್ ಎಲೆಕ್ಟ್ರಿಕ್ ಸ್ಕೂಟರ್​ ಬೌನ್ಸ್​ಇನ್ಫನಿಟಿ ಇ.1 ( Bounce Infinity E1) ಬಿಡುಗಡೆ ಮಾಡಿದೆ. ಇದು ಭಾರತದ ಮೊದಲ ಇ-ಸ್ಕೂಟರ್​ ಆಗಿದ್ದು, ಇದು ಬ್ಯಾಟರಿ ಆಸ್​ ಎ ಸರ್ವಿಸ್​ (Battery as a service)  ಎನ್ನುವ ವೈಶಿಷ್ಟ್ಯತೆಯನ್ನು ಪರಿಚಯಿಸುತ್ತಿದೆ. ಎಂದರೆ ಗ್ರಾಹಕರು ಸ್ಕೂಟರ್ ನ ಬ್ಯಾಟರಿಯನ್ನು ಸರ್ವಿಸ್​ ರೂಪದಲ್ಲಿ ಪಡೆಯಬಹುದಾಗಿದೆ.  ಬೌನ್ಸ್​ನ ಸ್ಟಾಪಿಂಗ್​ ನೆಟ್​ವರ್ಕ್​ ಮೂಲಕ ಖಾಲಿ ಬ್ಯಾಟರಿಯನ್ನು ಹಿಂದಿರುಗಿಸಿ ಪೂರ್ಣ ಪ್ರಮಾಣದಲ್ಲಿ ಚಾರ್ಜ್​ ಆದ ಬ್ಯಾಟರಿಯನ್ನು ಪಡೆಯಬಹುದು. ಇದರಿಂದ ಜನರು ತಾವೇ ಸ್ಕೂಟಿಗೆ ಚಾರ್ಜ್​ಮಾಡಿಕೊಳ್ಳುವ ತೊಂದರೆ ಇರುವುದಿಲ್ಲ. ಈ ರೀತಿಯ ಸೇವೆಯು ಭಾರತದಲ್ಲಿ ಮೊದಲ ಬಾರಿಗೆ ಜಾರಿಗೆ ತರಲಾಗಿದೆ. ಇದು ಇತರ ಸಾಮಾನ್ಯ ಸ್ಕೂಟರ್​ಗೆ ಹೋಲಿಸಿದರೆ ಶೇ.40ರಷ್ಟು ವೆಚ್ಚವನ್ನು ಕಡಿಮೆ ಮಾಡುತ್ತದೆ ಎನ್ನುತ್ತಾರೆ ಬೌನ್ಸ್ ಸ್ಕೂಟರ್​​ ಸಿಎಒ ವಿವೇಕಾನಂದ ಹಲ್ಲೆಕೆರೆ ( Vivekananda Hallekere)

ಬೌನ್ಸ್​​ನ  ಎಲೆಕ್ಟ್ರಿಕ್​ ಸ್ಕೂಟರ್​ ಗ್ರಾಹಕರಿಗೆ  45,099ರೂಗೆ  (ದೆಹಲಿ ಎಕ್ಸ್​ ಶೋರೂಂ) ದೊರೆಯಲಿದೆ. ಅಲ್ಲದೆ 2022ರ  ಮಾರ್ಚ್​ನಿಂದ  ಮುಂಗಡವಾಗಿ ಬುಕ್​ ಮಾಡಿದರೆ 499ರೂ ಕ್ಯಾಶ್​ಬ್ಯಾಕ್​ ಕೂಡ ದೊರೆಯಲಿದೆ. ಈ ಬಗ್ಗೆ ಸ್ಟಾರ್ಟ್​ ಅಫ್​ನ ಸಿಇಒ ಈವರೆಗೆ ದಹಲಿ, ಬೆಂಗಳೂರುನಂತಹ ಮಹಾನಗರಗಳಲ್ಲಿ 200 ಭಾಗಗಳಲ್ಲಿ ಬ್ಯಾಟರಿ ಸ್ಟೇಷನ್​ಗಳನ್ನು ಸ್ಥಾಪಿಸಲಾಗಿದೆ. ಈ ಮೂಲಕ 50 ಸಾವಿರ ಸ್ಪಾಪ್​ಗಳನ್ನು ಪೂರೈಸಿದ್ದು, 2 ಕೋಟಿ ಇವಿ ಕಿಲೋಮೀಟರ್​ಗಳನ್ನು ಸಕ್ರಿಯಗೊಳಿಸಿದೆ ಎಂದಿದ್ದಾರೆ. ಇದರ ಜತೆಗೆ ಬೌನ್ಸ್​​ ಇ ಸ್ಕೂಟರ್​ ತಯಾರಿಕೆಯಲ್ಲಿ ಮುಂದಿನ 12 ತಿಂಗಳಿನಲ್ಲಿ 100ಯುಎಸ್ಡಿ ಮಿಲಿಯನ್​ ಹೂಡಿಕೆ ಮಾಡಲು ನಿರ್ಧರಿಸಲಾಗಿದೆ. ಸಾಮಾನ್ಯ ಜನರಿಗೂ ಬ್ಯಾಟರಿಯನ್ನು ಎಕ್ಸ್​ಚೇಂಜ್​ ಮಾಡಿಕೊಳ್ಳಲು ಅನುಕೂಲವಾಗುಂತೆ  ಪ್ರಮುಖ ಶೇರ್​ ಪಾರ್ಟ್​ನರ್ಸ್​ ಮೂಲಕ ದೇಶದ ಹಲವು ನಗರಗಳಲ್ಲಿ ಬ್ಯಾಟರಿ ಸ್ಟಾಪಿಂಗ್​ ಕೇಂದ್ರವನ್ನು ಸ್ಥಾಪಿಸಲಾಗುವುದು. ಈ ಮೂಲಕ ಗ್ರಾಹಕರಿಗೆ ಪ್ರತಿ ಒಂದು ಕಿಲೋಮೀಟರ್​ಗೆ ಖಾಲಿಯಾದ ಬ್ಯಾಟರಿಯನ್ನು ಬದಲಿಸಿಕೊಳ್ಳುವ ಸೌಲಭ್ಯ ದೊರೆಯುತ್ತದೆ ಎಂದು ಅವರು ಮುಂದಿನ ಯೋಜನೆ ಬಗ್ಗೆ ಮಾಹಿತಿ  ನೀಡಿದ್ದಾರೆ.

10 ನಗರಗಳಲ್ಲಿ ಪ್ರಮುಖ ಪಾರ್ಕಿಂಗ್​ ಸ್ಥಳಗಳು, ಕಾರ್ಪೋರೆಟ್​ ಕಂಪನಿಗಳ ಬಳಿ, ಮಾಲ್​ ಸೇರಿದಂತೆ 3,500ಕ್ಕೂ ಹೆಚ್ಚು  ಸ್ಥಳಗಳಲ್ಲಿ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಲು ಬೌನ್ಸ್​​ ಈಗಾಗಲೇ Nobroker, Park+, Readyassist, Helloworld, Kitchens@, Goodbox ಸೇರಿ ಹಲವು ಕಂಪನಿಗಳ ಜತೆ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ ಗ್ರಾಹಕರಿಗೆ ದಾರಿ ಮಧ್ಯೆ ಬ್ಯಾಟರಿ ಖಾಲಿಯಾಗಿ ನಿಂತುಕೊಳ್ಳುವ ಸಂದರ್ಭ ಬರುವುದಿಲ್ಲ.

ಈ ರೀತಿಯ ವ್ಯವಸ್ಥೆ ಇದ್ದಾಗಲೂ ಗ್ರಾಹಕರು ಬೌನ್ಸ್​ ಇನ್ಫಿನಿಟಿ ಇ1  ನಿಂದ ಬ್ಯಾಟರಿಯನ್ನು ತೆಗೆದು ಅವರಿಗೆ ಅನುಕೂಲವಾಗುವಂತೆ ಮನೆ, ಕಚೇರಿಗಳಲ್ಲಿ ಚಾರ್ಜ್​ ಹಾಕಿಕೊಳ್ಳಬಹುದು. ಆದರೆ ಸ್ಕೂಟರ್​68,999ರೂಗಳ ಇನ್ಫನಿಟಿ E1 2kWh ಲಿಥೀಯಂ ಐಯಾನ್​ ಬ್ಯಾಟರಿ ಪ್ಯಾಕ್​ ಹೊಂದಿರುತ್ತದೆ. ಸಾಮಾನ್ಯ ವಿದ್ಯುತ್​ ಸಾಕೇಟ್​ಗಳ ಮೂಲಕ ಇದನ್ನು ಚಾರ್ಜ​ ಮಾಡಲು 4ರಿಂದ5 ಗಂಟೆಗಳ ಸಮಯ ಬೇಕಾಗಬಹುದು. ಗ್ರಾಹಕರು ಸ್ಕೂಟಿಯನ್ನು ಪವರ್​ ಮತ್ತು ಇಕೋ ಎಂದು ಎರಡು ವಿಧಾನದಲ್ಲಿ ಬಳಸಬಹುದು. 3 ವರ್ಷಗಳ ಅಥವಾ 5 ಸಾವಿರ ಕಿಮೀ ವರೆಗಿನ ವಾರಂಟಿಯನ್ನು ಬೌನ್ಸ್​  ಎಲೆಕ್ಟ್ರಿಕ್ ಸ್ಕೂಟರ್​ ಬೌನ್ಸ್​ಇನ್ಫನಿಟಿ ಎ.1  ಹೊಂದಿದೆ ಎಂದು ಹೇಳಿದ್ದಾರೆ.