ಕೆಲವು ವರ್ಷಗಳ ಹಿಂದೆ ಟೆಲಿಕಾಂ ಮಾರಯಕಟ್ಟೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದ ಸರ್ಕಾರಿ ಒಡೆತನದ ಭಾರತೀಯ ಸಂಚಾರ್ ನಿಗಮ ಲಿಮಿಟೆಡ್ ಬಿಎಸ್ಎನ್ಎಲ್ (BSNL) ಇದೀಗ ಪಾತಾಳಕ್ಕೆ ಕುಸಿದಿದ್ದು ಮೇಲೇಳಲು ಹರಸಾಹಸ ಪಡುತ್ತಿದೆ. ಸರಕಾರದ ನೀತಿಗಳು, ಖಾಸಗಿ ಟೆಲಿಕಾಂ (Telecom) ಕಂಪನಿಗಳು ದರ ಸಮರ ಸೇರಿ ಅನೇಕ ಕಾರಣಗಳಿಂದ ಬಿಎಸ್ಎನ್ಎಲ್ ಸಾಕಷ್ಟು ಲಾಸ್ನಲ್ಲಿದೆ. ಹೀಗಿದ್ದರೂ ಆಗಾಗ ಆಕರ್ಷಕ ಯೋಜನೆಗಳನ್ನು ಬಿಡುಗಡೆ ಮಾಡಿ ಸದ್ದು ಮಾಡುತ್ತದೆ. ಇದೀಗ ಬಿಎಸ್ಎನ್ಎಲ್ ಅಧಿಕ ಚಂದಾದಾರರನ್ನು ಆಕರ್ಷಿಸಲು ನೂತನವಾಗಿ ಒಟಿಟಿ (OTT) ಪ್ರಯೋಜನ ಒಳಗೊಂಡ ಪ್ಲಾನ್ಗಳನ್ನು ಬಿಡುಗಡೆ ಮಾಡಿ ಧೂಳೆಬ್ಬಿಸುತ್ತಿದೆ. ಈ ನೂತನ ಯೋಜನೆಗಳು ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್ ಪ್ಲಾನ್ ಆಗಿದ್ದು ಮನರಂಜನೆ ಆಯ್ಕೆಗಾಗಿ 9 ಜನಪ್ರಿಯ ಒಟಿಟಿ ಸೌಲಭ್ಯವನ್ನು ಲಭ್ಯ ಮಾಡಿದೆ. ಈ ಕುರಿತ ಮಾಹಿತಿ ಇಲ್ಲಿದೆ.
ಬಿಎಸ್ಎನ್ಎಲ್ನ ಹೊಸ 249 ರೂ. ಬ್ರಾಡ್‌ಬ್ಯಾಂಡ್ ಪ್ಲಾನ್ ಗ್ರಾಹಕರಿಗೆ ಒಟ್ಟು 9 ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ನೀಡುತ್ತದೆ. ಅವುಗಳು ಕ್ರಮವಾಗಿ ಜೀ5, ಸೋನಿಲೈವ್, ವೋಟ್ ಸೆಲೆಕ್ಟ್, ಯುಪ್ ಟಿವಿ, ಆಹಾ, Lionsgate Play, ಹಂಗಾಮಾ ಮತ್ತು ಡಿಸ್ನಿ+ ಹಾಟ್‌ಸ್ಟಾರ್ ಸೇರಿ ಮತ್ತೊಂದು ಒಟಿಟಿಯ ಚಂದಾದಾರಿಕೆ ನೀಡುತ್ತದೆ. ಎಂಟ್ರಿ ಲೆವೆಲ್ ಬ್ರಾಡ್‌ಬ್ಯಾಂಡ್ ಯೋಜನೆಯಲ್ಲಿ ಒಟಿಟಿ ಪ್ರಯೋಜನ ಬಯಸುವ ಬಳಕೆದಾರರಿಗೆ ಈ ನೂತನ ಪ್ಲಾನ್ ಸಹಕಾರಿ ಆಗಲಿದೆ.
ಇದರ ಜೊತೆಗೆ ಬಿಎಸ್ಎನ್ಎಲ್ 499 ರೂ. ಬ್ರಾಡ್‌ಬ್ಯಾಂಡ್ ಯೋಜನೆಯು 40 Mbps ಇಂಟರ್ನೆಟ್ ವೇಗವನ್ನು 3.3TB FUP ಡೇಟಾದೊಂದಿಗೆ ಅನಿಯಮಿತ ವಾಯಿಸ್ ಕರೆ ಸೌಲಭ್ಯ ಪಡೆದಿದೆ. ನಿಗದಿತ FUP ಡೇಟಾ ಬಳಕೆಯ ಮಿತಿ ಮುಗಿದ ಬಳಿಕ, ಡೇಟಾ ವೇಗವು 4 Mbps ಗೆ ಇಳಿಕೆಯಾಗುತ್ತದೆ. ಅಂತೆಯೆ 449ರೂ. ಫೈಬರ್ ಬೇಸಿಕ್ NEO ಪ್ಲ್ಯಾನ್ನಲ್ಲಿ ಬಳಕೆದಾರರಿಗೆ ತಿಂಗಳಿಗೆ 3.3 TB ವರೆಗೆ 30 Mbps ವೇಗವನ್ನು ಬ್ರೌಸ್ ಮಾಡಲು ಅನುವು ಮಾಡಿಕೊಡುತ್ತದೆ. FUP ಡೇಟಾ ಬಳಕೆಯ ಮಿತಿ ಮುಗಿದ ಬಳಿಕ, ಆಪರೇಟರ್ ಡೇಟಾ ವೇಗವನ್ನು 2 Mbps ಗೆ ನಿರ್ಬಂಧಿಸುತ್ತದೆ.
Reliance JIO: 56GB ಡೇಟಾ, ಅನಿಯಮಿತ ಕರೆ: ಜಿಯೋ ಕಂಪನಿಯ ಧಮಾಕ ಆಫರ್
ಬಿಎಸ್ಎನ್ಎಲ್ ಕಳೆದ ವರ್ಷಾಂತ್ಯದಲ್ಲಿ 269 ರೂ. ಹಾಗೂ 769 ರೂ. ವಿನ ಎರಡು ಹೊಸ ಪ್ರಿಪೇಯ್ಡ್ ಪ್ಲಾನ್ ಬಿಡುಗಡೆ ಮಾಡಿತ್ತು. ಇದು ಸಾಕಷ್ಟು ಪ್ರಸಿದ್ದಿ ಪಡೆದಿದೆ. ಅನಿಯಮಿತ ಉಪಯೋಗ ಬಯಸುವವರಿಗೆ ಈ ಯೋಜನೆ ಸಾಕಷ್ಟು ಸಹಕಾರಿ ಆಗಲಿದೆ.
269 ರೂ. ಪ್ಲಾನ್ನಲ್ಲಿ ದಿನಕ್ಕೆ 2GB ಡೇಟಾ ಪ್ರಯೋಜನ ಸಿಗುತ್ತದೆ. ಯಾವುದೇ ನೆಟ್ವರ್ಕ್ಗೆ ಅನಿಯಮಿತ ವಾಯಿಸ್ ಕರೆ ಸೌಲಭ್ಯವಿದೆ. ಜೊತೆಗೆ ಪ್ರತಿದಿನ 100 ಎಸ್ಎಮ್ಎಸ್ ಉಚಿತ ಪಡೆಯಬಹುದು. ಇದು 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಬಿಎಸ್ಎನ್ಎಲ್ ಫ್ರೀ ಟ್ಯೂನ್ ಲಭ್ಯವಿದ್ದು ಇದರ ಮೂಲಕ ನಿಮಗೆ ಬೇಕಾದ ಹಾಡುಗಳನ್ನು ಉಚಿತವಾಗಿ ಹಾಕಬಹುದು. ಇದನ್ನು ಎಷ್ಟು ಬಾರಿ ಬೇಕಾದರೂ ಬದಲಾವಣೆ ಮಾಡಬಹುದಾಗಿದೆ. ಇದರ ಜೊತೆಗೆ ಎರಾಸ್ ನೌ, ಚಾಲೆಂಜೆಸ್ ಡರೇನಾ ಗೇಮ್ಸ್ ಸೇರಿದಂತೆ ಅನೇಕ ಸೌಲಭ್ಯವನ್ನು ಪಡೆಯಬಹುದು.
769 ರೂ. ಪ್ರಿಪೇಯ್ಡ್ ಯೋಜನೆಯಲ್ಲಿ ಕೂಡ ದಿನಕ್ಕೆ 2GB ಡೇಟಾ ಪ್ರಯೋಜನ ಪಡೆಯಬಹುದು. ಅನಿಯಮಿತ ಕರೆ ಸೌಲಭ್ಯ ನೀಡಲಾಗಿದ್ದು 100 ಎಸ್ಎಮ್ಎಸ್ ಉಚಿತವಿದೆ. 269 ರೂ. ಪ್ಲಾನ್ನಲ್ಲಿರುವ ಎಲ್ಲ ಪ್ರಯೋಜನ ಇದರಲ್ಲೂ ಇದೆ. ವ್ಯಾಲಿಡಿಯಲ್ಲಿ ಮಾತ್ರ ವ್ಯತ್ಯಾಸವಿದೆ. ಇದು 90 ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ಎರಡು ಹೊಸ ಪ್ಲಾನ್ ಈಗಾಗಲೇ ಲೈವ್ ಆಗಿದ್ದು ಆಸಕ್ತ ಬಿಎಸ್ಎನ್ಎಲ್ ಬಳಕೆದಾರರು ಆ್ಯಕ್ಟಿವ್ ಮಾಡಬಹುದು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:05 am, Sun, 22 January 23