AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BSNL: ಎರಡು ಹೊಸ ಧಮಾಕ ಪ್ಲಾನ್ ಪರಿಚಯಿಸಿದ ಬಿಎಸ್​ಎನ್​ಎಲ್: ದಂಗಾದ ಜಿಯೋ-ಏರ್ಟೆಲ್

BSNL New Prepaid Plans: ಬಿಎಸ್​ಎನ್​ಎಲ್​ 269 ರೂ. ಹಾಗೂ 769 ರೂ. ವಿನ ಎರಡು ಹೊಸ ಪ್ರಿಪೇಯ್ಡ್ ಪ್ಲಾನ್ ಬಿಡುಗಡೆ ಮಾಡಿದೆ. ಅನಿಯಮಿತ ಉಪಯೋಗ ಬಯಸುವವರಿಗೆ ಈ ಯೋಜನೆ ಸಾಕಷ್ಟು ಸಹಕಾರಿ ಆಗಲಿದೆ.

BSNL: ಎರಡು ಹೊಸ ಧಮಾಕ ಪ್ಲಾನ್ ಪರಿಚಯಿಸಿದ ಬಿಎಸ್​ಎನ್​ಎಲ್: ದಂಗಾದ ಜಿಯೋ-ಏರ್ಟೆಲ್
BSNL
TV9 Web
| Updated By: Vinay Bhat|

Updated on:Oct 14, 2022 | 12:41 PM

Share

ಕೆಲವು ವರ್ಷಗಳ ಹಿಂದೆ ಟೆಲಿಕಾಂ ಮಾರಯಕಟ್ಟೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದ ಸರ್ಕಾರಿ ಒಡೆತನದ ಭಾರತೀಯ ಸಂಚಾರ್‌ ನಿಗಮ ಲಿಮಿಟೆಡ್ ಬಿಎಸ್​ಎನ್​ಎಲ್ (BSNL)​ ಇದೀಗ ಪಾತಾಳಕ್ಕೆ ಕುಸಿದಿದ್ದು ಮೇಲೇಳಲು ಹರಸಾಹಸ ಪಡುತ್ತಿದೆ. ಸರಕಾರದ ನೀತಿಗಳು, ಖಾಸಗಿ ಟೆಲಿಕಾಂ ಕಂಪನಿಗಳು ದರ ಸಮರ ಸೇರಿ ಅನೇಕ ಕಾರಣಗಳಿಂದ ಬಿಎಸ್​ಎನ್​ಎಲ್ ಸಾಕಷ್ಟು ಲಾಸ್​ನಲ್ಲಿದೆ. ಇದರ ನಡುವೆ ದೇಶದ ಪ್ರಮುಖ ಮೊಬೈಲ್ ಸೇವಾ ಸಂಸ್ಥೆಗಳಾದ ರಿಲಯನ್ಸ್ ಜಿಯೋ (Reliance Jio), ಏರ್ಟೆಲ್ (Airtel) ಹಾಗೂ ವೋಡಾಫೋನ್ ಐಡಿಯಾ (Vodafone Idea) ಇತ್ತೀಚೆಗೆ ಪೈಪೋಟಿಗೆ ಬಿದ್ದವರಂತೆ ತಮ್ಮ ಯೋಜನೆಗಳನ್ನು ದುಬಾರಿಗೊಳಿಸಿವೆ. ಜೊತೆಗೆ 5ಜಿ ಸೇವೆಯನ್ನು ಕೂಡ ಪರಿಚಯಿಸುತ್ತಿದೆ. ಹೀಗಿರುವಾಗ ಬಿಎಸ್​ಎನ್​ಎಲ್ ಸದ್ದಿಲ್ಲದೆ ಎರಡು ಹೊಸ ಧಮಾಕ ಯೋಜನೆಗಳನ್ನು ಅನಾವರಣ ಮಾಡಿದೆ.

ಬಿಎಸ್​ಎನ್​ಎಲ್​ 269 ರೂ. ಹಾಗೂ 769 ರೂ. ವಿನ ಎರಡು ಹೊಸ ಪ್ರಿಪೇಯ್ಡ್ ಪ್ಲಾನ್ ಬಿಡುಗಡೆ ಮಾಡಿದೆ. ಅನಿಯಮಿತ ಉಪಯೋಗ ಬಯಸುವವರಿಗೆ ಈ ಯೋಜನೆ ಸಾಕಷ್ಟು ಸಹಕಾರಿ ಆಗಲಿದೆ. 269 ರೂ. ಪ್ಲಾನ್​ನಲ್ಲಿ ದಿನಕ್ಕೆ 2GB ಡೇಟಾ ಪ್ರಯೋಜನ ಸಿಗುತ್ತದೆ. ಯಾವುದೇ ನೆಟ್​ವರ್ಕ್​ಗೆ ಅನಿಯಮಿತ ವಾಯಿಸ್ ಕರೆ ಸೌಲಭ್ಯವಿದೆ. ಜೊತೆಗೆ ಪ್ರತಿದಿನ 100 ಎಸ್​ಎಮ್​ಎಸ್ ಉಚಿತ ಪಡೆಯಬಹುದು. ಇದು 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಬಿಎಸ್​ಎನ್​ಎಲ್ ಫ್ರೀ ಟ್ಯೂನ್ ಲಭ್ಯವಿದ್ದು ಇದರ ಮೂಲಕ ನಿಮಗೆ ಬೇಕಾದ ಹಾಡುಗಳನ್ನು ಉಚಿತವಾಗಿ ಹಾಕಬಹುದು. ಇದನ್ನು ಎಷ್ಟು ಬಾರಿ ಬೇಕಾದರೂ ಬದಲಾವಣೆ ಮಾಡಬಹುದಾಗಿದೆ. ಇದರ ಜೊತೆಗೆ ಎರಾಸ್ ನೌ, ಚಾಲೆಂಜೆಸ್ ಡರೇನಾ ಗೇಮ್ಸ್ ಸೇರಿದಂತೆ ಅನೇಕ ಸೌಲಭ್ಯವನ್ನು ಪಡೆಯಬಹುದು.

769 ರೂ. ಪ್ರಿಪೇಯ್ಡ್ ಯೋಜನೆಯಲ್ಲಿ ಕೂಡ ದಿನಕ್ಕೆ 2GB ಡೇಟಾ ಪ್ರಯೋಜನ ಪಡೆಯಬಹುದು. ಅನಿಯಮಿತ ಕರೆ ಸೌಲಭ್ಯ ನೀಡಲಾಗಿದ್ದು 100 ಎಸ್​ಎಮ್​ಎಸ್ ಉಚಿತವಿದೆ. 269 ರೂ. ಪ್ಲಾನ್​ನಲ್ಲಿರುವ ಎಲ್ಲ ಪ್ರಯೋಜನ ಇದರಲ್ಲೂ ಇದೆ. ವ್ಯಾಲಿಡಿಯಲ್ಲಿ ಮಾತ್ರ ವ್ಯತ್ಯಾಸವಿದೆ. ಇದು 90 ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ಎರಡು ಹೊಸ ಪ್ಲಾನ್ ಈಗಾಗಲೇ ಲೈವ್ ಆಗಿದ್ದು ಆಸಕ್ತ ಬಿಎಸ್​ಎನ್​ಎಲ್ ಬಳಕೆದಾರರು ಆ್ಯಕ್ಟಿವ್ ಮಾಡಬಹುದು.

ಇದನ್ನೂ ಓದಿ
Image
Google: ಎಚ್ಚರ: ತಪ್ಪಿಯೂ ನೀವು ಗೂಗಲ್​ನಲ್ಲಿ ಈ ರೀತಿ ಸರ್ಚ್ ಮಾಡಬೇಡಿ
Image
Aadhaar card: ಆಧಾರ್ ಕಾರ್ಡ್​ನಲ್ಲಿ ನಿಮ್ಮ ಹೊಸ ಫೋಟೋ ಅಪ್ಡೇಟ್ ಮಾಡುವುದು ಹೇಗೆ?: ಇಲ್ಲಿದೆ ಸಿಂಪಲ್ ಟಿಪ್ಸ್
Image
Moto G72: 108MP ಕ್ಯಾಮೆರಾದ ಹೊಚ್ಚ ಹೊಸ ಸ್ಮಾರ್ಟ್​ಫೋನ್ ಮಾರಾಟ ಆರಂಭ: ಈ ಆಫರ್ ಮಿಸ್ ಮಾಡ್ಬೇಡಿ
Image
WhatsApp: ನಕಲಿ ವಾಟ್ಸ್​ಆ್ಯಪ್ ಬಗ್ಗೆ ಇರಲಿ ಎಚ್ಚರ!

ಬಿಎಸ್‌ಎನ್ಎಲ್‌ ಟೆಲಿಕಾಂನ ಇತರೆ ದೀರ್ಘಾವಧಿ ಪ್ಲಾನ್‌ಗಳನ್ನು ಪರಿಗಣಿಸುವುದಾದರೆ 1499 ರೂ. ಬೆಲೆಯ ವಾರ್ಷಿಕ ಪ್ಲಾನ್‌ ಗಮನ ಸೆಳೆದಿದೆ. ಈ ಪ್ರಿಪೇಯ್ಡ್‌ ಪ್ಲಾನ್‌ 365 ದಿನಗಳ ಮಾನ್ಯತೆಯನ್ನು ಹೊಂದಿದೆ. ಇದು ಉಚಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMS ಪ್ರಯೋಜನ ನೀಡಲಿದೆ. ಇದಲ್ಲದೆ ಬಿಎಸ್ಎನ್‌ಎಲ್‌ 1999ರೂ. ಬೆಲೆಯ ವಾರ್ಷಿಕ ಪ್ಲಾನ್‌ ಹೊಂದಿದೆ. ಈ ಪ್ಲಾನ್‌ನಲ್ಲಿ 100GB ಹೆಚ್ಚುವರಿ ಡೇಟಾದೊಂದಿಗೆ 500GB ನಿಯಮಿತ ಡೇಟಾವನ್ನು ನೀಡುತ್ತದೆ. ಜೊತೆಗೆ ದಿನಕ್ಕೆ 100 ಎಸ್‌ಎಂಎಸ್‌ಗಳನ್ನು ನೀಡುತ್ತದೆ. ಇದು 365 ದಿನಗಳವರೆಗೆ Eros Now ಮನರಂಜನಾ ಸೇವೆಗೆ ಪ್ರವೇಶವನ್ನು ನೀಡುತ್ತದೆ.

ಬಿಎಸ್​ಎನ್​ಎಲ್​ನ 485 ರೂ. ಗಳ ಯೋಜನೆ ಕೂಡ ಹೆಚ್ಚಿನವರು ಉಪಯೋಗಿಸುತ್ತಿದ್ದಾರೆ. ಇದು ವಾಲಿಡಿಟಿ 90 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ರಿಚಾರ್ಜ್​ ಪ್ಲಾನ್​ ಮೂಲಕ ಗ್ರಾಹಕರಿಗೆ ಅನಿಯಮಿತ ಕರೆ ಸೌಲಭ್ಯ ದೊರೆಯಲಿದೆ. ಜೊತೆಗೆ ಪ್ರತಿದಿನ 1.5GB ಉಚಿತ ಡೇಟಾ ಹಾಗೂ 100 SMS ಸಿಗಲಿದೆ. ಅಂತೆಯೆ 249 ರೂ. ಪ್ಲಾನ್​28 ದಿನಗಳಲ್ಲಿ ಬಳಕೆದಾರರಿಗೆ ಪ್ರತಿದಿನ 1.5GB ಡೇಟಾ ಉಚಿತವಾಗಿ ದೊರೆಯಲಿದೆ. ಇದರಲ್ಲಿ ಅನಿಯಮಿತ ಕರೆ ಸೌಲಭ್ಯ ಪಡೆಯಲಿದ್ದಾರೆ. ಇದರ ಜೊತೆಗೆ ದಿನಕ್ಕೆ 100 ಎಸ್​ಎಮ್​ಎಸ್ ಉಚಿತವಿದೆ.

Published On - 12:41 pm, Fri, 14 October 22

ಯಾರದ್ದೋ ಜಿದ್ದಿನ ಮೇಲೆ ಸಿನಿಮಾ ನಿರ್ಮಿಸುತ್ತಿದ್ದಾರಾ ಯಶ್ ತಾಯಿ?
ಯಾರದ್ದೋ ಜಿದ್ದಿನ ಮೇಲೆ ಸಿನಿಮಾ ನಿರ್ಮಿಸುತ್ತಿದ್ದಾರಾ ಯಶ್ ತಾಯಿ?
ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ
ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ಸುದ್ದಿಗೋಷ್ಠಿ: ಇಲ್ಲಿದೆ ಲೈವ್​
ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ಸುದ್ದಿಗೋಷ್ಠಿ: ಇಲ್ಲಿದೆ ಲೈವ್​