AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ನಿಮ್ಮ ಸ್ಮಾರ್ಟ್​ಫೋನ್ ಹ್ಯಾಕ್ ಆಗಬಹುದು: ಎಚ್ಚರ ವಹಿಸಿ

ಹೆಚ್ಚಾಗಿ ಹ್ಯಾಕ್‌ಗೆ ಒಳಗಾಗುತ್ತಿರುವುದು ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್ ಗಳಾಗಿವೆ. ಇವೇ ಹ್ಯಾಕರ್‌ಗಳು ಇಲ್ಲವೇ ಸೈಬರ್ ಅಪರಾಧಿಗಳ ಪಾಲಿನ ಟಾರ್ಗೆಟ್ ಗಳಾಗಿವೆ. ಇಲ್ಲಿ ಹ್ಯಾಕ್ ಮಾಡಲೆಂದೇ ಕೆಲವು ದೋಷಪೂರಿತ ಆ್ಯಪ್‌ಗಳನ್ನು ಸೃಷ್ಟಿಸಿರಲಾಗಿರುತ್ತದೆ.

Tech Tips: ನಿಮ್ಮ ಸ್ಮಾರ್ಟ್​ಫೋನ್ ಹ್ಯಾಕ್ ಆಗಬಹುದು: ಎಚ್ಚರ ವಹಿಸಿ
ಸಾಂದರ್ಭಿಕ ಚಿತ್ರ
TV9 Web
| Updated By: Vinay Bhat|

Updated on: Oct 15, 2022 | 6:03 AM

Share

ನೀವು ಆಂಡ್ರಾಯ್ಡ್‌ (Android) ಅಥವಾ ಐಫೋನ್ (iPhone) ಬಳಸುತ್ತಿದ್ದರೆ ಈಗಿನ ಟೆಕ್ನಾಲಜಿಯಲ್ಲಿ ನಿಮ್ಮನ್ನು ಟ್ರ್ಯಾಕ್ ಮಾಡುವುದು ಮತ್ತು ನೀವು ಆನ್‌ಲೈನ್‌ನಲ್ಲಿ ಏನು ಮಾಡುತ್ತಿದ್ದೀರಿ ಎಂಬುದನ್ನು ತಿಳಿಯುವುದು ತುಂಬಾನೆ ಸುಲಭ. ವಿಶೇಷವಾಗಿ, ನೀವು ಪ್ರಮುಖ ವ್ಯಕ್ತಿಯಾಗಿದ್ದರೆ, ಸರ್ಕಾರಿ ಸಂಸ್ಥೆಗಳು ನಿಮ್ಮ ಇರುವಿಕೆಯನ್ನು ತಿಳಿದುಕೊಳ್ಳಲು ಹೆಚ್ಚಿನ ಆಸಕ್ತಿ ವಹಿಸುತ್ತವೆ. ಗ್ರಾಫೆನ್‌ಒಎಸ್‌ ಸ್ಮಾರ್ಟ್‌ಫೋನ್‌ (Smartphone) ಬಳಸಿ ಐಒಎಸ್ ಮತ್ತು ಆಂಡ್ರಾಯ್ಡ್ ಎರಡು ಕೂಡ ದುರ್ಬಲವಾಗಿದ್ದು, ಪ್ರತಿ ಸ್ಮಾರ್ಟ್‌ಫೋನ್‌ನಲ್ಲಿ ಕಾರ್ಯನಿರ್ವಹಿಸುವ ಐಒಎಸ್ ಮತ್ತು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂಗಳು ಅಸಂಖ್ಯಾತ ಪ್ರೋಗ್ರಾಮಿಂಗ್ ನ್ಯೂನತೆಗಳನ್ನು ಹೊಂದಿವೆ ಎಂದು ಈ ಹಿಂದೆ ವರದಿಯಾಗಿತ್ತು. ಇದರರ್ಥ ಐಮೆಸೇಜ್ ಅಥವಾ ವೆಬ್ ಬ್ರೌಸರ್‌ಗಳಂತಹ ಸಾಮಾನ್ಯ ಆ್ಯಪ್‌ಗಳು ಅಪಾಯಕಾರಿಯಾಗಿದ್ದು, ನಿಮ್ಮನ್ನು ಹ್ಯಾಕ್ ಮಾಡುವುದು ತುಂಬಾನೆ ಸುಲಭವಂತೆ.

ಹೆಚ್ಚಾಗಿ ಹ್ಯಾಕ್‌ಗೆ ಒಳಗಾಗುತ್ತಿರುವುದು ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್​ಗಳು ಎಂಬುದನ್ನು ಗಮನಿಸಬೇಕು. ಇಲ್ಲಿ ಹ್ಯಾಕ್ ಮಾಡಲೆಂದೇ ಕೆಲವು ದೋಷಪೂರಿತ ಆ್ಯಪ್‌ಗಳನ್ನು ಸೃಷ್ಟಿಸಿರಲಾಗಿರುತ್ತದೆ. ಇಲ್ಲವೇ ಕೆಲವು ದೋಷಪೂರಿತ URL ಗಳೂ ಇದ್ದು, ಇವುಗಳ ಮೇಲೆ ಅಪ್ಪಿತಪ್ಪಿ ಒಂದು ಕ್ಲಿಕ್ ಮಾಡಿದರೆ ಸಾಕು, ಮೊಬೈಲ್‌ನಲ್ಲಿನ ಸಂಪೂರ್ಣ ಮಾಹಿತಿ ಹ್ಯಾಕರ್‌ಗಳ ಕಂಪ್ಯೂಟರ್ ಅನ್ನು ಸೇರಿರುತ್ತದೆ ಎಂದೇ ಅರ್ಥ. ಹಾಗಾದರೆ ಹ್ಯಾಕರ್​ಗಳಿಂದ ತಪ್ಪಿಸಿಕೊಳ್ಳಲು ನೀವು ಹೇಗೆ ಎಚ್ಚರವಾಗಿರಬೇಕು?.

ಅಗತ್ಯವಿದ್ದರಷ್ಟೇ ಮೈಕ್ರೊಫೋನ್, ಬ್ಲೂಟೂತ್ ಬಳಸಿ: ಗುಪ್ತ ಆ್ಯಪ್‌ ಮೂಲಕ ನಿಮ್ಮ ಸಂಭಾಷಣೆಗಳನ್ನು ಯಾರಾದರೂ ರಹಸ್ಯವಾಗಿ ಕೇಳುವುದನ್ನು ತಪ್ಪಿಸಲು ಸ್ಮಾರ್ಟ್‌ಫೋನ್‌ಗಳಲ್ಲಿ ಮೈಕ್ರೊಫೋನ್‌ ಬಳಸುವುದನ್ನು ಕಡಿಮೆ ಮಾಡಿ. ಅಷ್ಟೇ ಅಲ್ಲದೇ, ಅಗತ್ಯವಿಲ್ಲದಿದ್ದಾಗ ವೈಫೈ ಮತ್ತು ಬ್ಲೂಟೂತ್ ಆಫ್ ಮಾಡಬೇಕು. ಗೌಪ್ಯತೆಗೆ ಹೆಸರಾಗಿರುವ ಟಾರ್‌ ಬ್ರೌಸರ್ ಬಳಸುವುದು ಉತ್ತಮ.

ಇದನ್ನೂ ಓದಿ
Image
Redmi A1+: ಕೇವಲ 6,999 ರೂ.: ಶವೋಮಿಯಿಂದ ಊಹಿಸಲಾಗದ ಬೆಲೆಗೆ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ: ಫೀಚರ್ಸ್​ ಏನಿದೆ ನೋಡಿ
Image
BSNL: ಎರಡು ಹೊಸ ಧಮಾಕ ಪ್ಲಾನ್ ಪರಿಚಯಿಸಿದ ಬಿಎಸ್​ಎನ್​ಎಲ್: ದಂಗಾದ ಜಿಯೋ-ಏರ್ಟೆಲ್
Image
Google: ಎಚ್ಚರ: ತಪ್ಪಿಯೂ ನೀವು ಗೂಗಲ್​ನಲ್ಲಿ ಈ ರೀತಿ ಸರ್ಚ್ ಮಾಡಬೇಡಿ
Image
Aadhaar card: ಆಧಾರ್ ಕಾರ್ಡ್​ನಲ್ಲಿ ನಿಮ್ಮ ಹೊಸ ಫೋಟೋ ಅಪ್ಡೇಟ್ ಮಾಡುವುದು ಹೇಗೆ?: ಇಲ್ಲಿದೆ ಸಿಂಪಲ್ ಟಿಪ್ಸ್

ಮನೆಯಲ್ಲಿ ವೈ-ಫೈ ಬಳಸಬೇಡಿ: ಗೌಪ್ಯತೆ ಕಾಪಾಡಲು ಈ ಕ್ರಮ ಸ್ವಲ್ಪ ಹೆಚ್ಚು ಅನಿಸಬಹುದು. ಆದರೆ, ವಾಸ್ತವವಾಗಿ ಜನರು ಮನೆಯಲ್ಲಿ ವೈ-ಫೈ ಬಳಸಬಾರದು. ಅಂತರ್ಜಾಲಕ್ಕೆ ಸಂಪರ್ಕ ಸಾಧಿಸಲು ನಿಮ್ಮ ಸ್ಮಾರ್ಟ್‌ಫೋನ್‌ಗೆ ಈಥರ್ನೆಟ್ ಕೇಬಲ್ ಪ್ಲಗ್ ಮಾಡಿ. ಖ್ಯಾತ ಕಂಪ್ಯೂಟರ್ ಗುಪ್ತಚರ ಸಲಹೆಗಾರ ಸ್ನೋಡೆನ್ ಹೇಳುವ ಪ್ರಕಾರ “ನಾನು ಮನೆಯಲ್ಲಿ ವೈಫೈ ಬಳಸುವುದಿಲ್ಲ, ಏಕೆಂದರೆ ಪ್ರತಿ ವೈರ್‌ಲೆಸ್ ಅಕ್ಸೆಸ್‌ ಪಾಯಿಂಟ್‌ಗಳು ಜಾಗತಿಕ ನಕ್ಷೆಯಲ್ಲಿ ಯುನಿಕ್‌ ಐಡಿಗಳಾಗಿರುತ್ತವೆ. ನಾನು ಮನೆಯಲ್ಲಿ ಈಥರ್ನೆಟ್ ಬಳಸುತ್ತೇನೆ. ಫೈರ್‌ವಾಲ್‌ ಆಪ್‌ ಬಳಸಿ ಅಗತ್ಯವಿಲ್ಲದ ಯಾವುದೇ ಆಪ್‌ಗಳಿಗೆ ನೆಟ್‌ವರ್ಕ್ ಅನುಮತಿಗಳನ್ನು ನಿರಾಕರಿಸುತ್ತೇನೆ” ಎಂದು ಈ ಹಿಂದೆ ಹೇಳಿದ್ದರು.

ಆ್ಯಡ್‌ ಬ್ಲಾಕರ್‌, ಪಾಸವರ್ಡ್‌ ಮ್ಯಾನೇಜರ್‌ ಬಳಸಿ: ಗೌಪ್ಯತೆ ಕಾಪಾಡಲು ಪ್ರತಿಯೊಬ್ಬರೂ ಆ್ಯಡ್‌ ಬ್ಲಾಕರ್ ಮತ್ತು ಪಾಸ್‌ವರ್ಡ್ ಮ್ಯಾನೇಜರ್‌ ಬಳಸುವುದು ಅಗತ್ಯ. ಬ್ರೌಸರ್‌ನಲ್ಲಿ ಥರ್ಡ್‌ ಪಾರ್ಟಿ ಕುಕೀಗಳನ್ನು ನಿರ್ಬಂಧಿಸಬೇಕು. ಈ ಮೂರು ಹಂತಗಳನ್ನು ಪ್ರತಿಯೊಬ್ಬರೂ ಪರಿಗಣಿಸಬೇಕಾಗಿದೆ. ಏಕೆಂದರೆ ಇವು ಸರಳ, ವೆಚ್ಚರಹಿತವಾಗಿದ್ದು, ನಿಮ್ಮ ಫೋನ್‌ನ್ನು ವೇಗಗೊಳಿಸುವಾಗ ನಿಮ್ಮನ್ನು ರಕ್ಷಿಸುತ್ತವೆ.

ಲ್ಯಾಪ್‌ಟಾಪ್‌ನಲ್ಲಿ ಇಂಟರ್‌ನೆಟ್ ಬ್ರೌಸ್ ಮಾಡಿ: ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್‌ನೆಟ್‌ ಬ್ರೌಸ್ ಮಾಡದಿರುವುದು ಗೌಪ್ಯತೆ ಹೆಚ್ಚಿಸುವ ಮತ್ತು ಕಣ್ಗಾವಲು ತಪ್ಪಿಸುವುಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಇದರ ಬಗ್ಗೆಯೂ ಸ್ನೋಡೆನ್ ವಿವರಿಸಿದ್ದು, ನಾನು ಬ್ರೌಸರ್‌ನಲ್ಲಿ ಜಾವಾಸ್ಕ್ರಿಪ್ಟ್, ಟ್ರ್ಯಾಕಿಂಗ್ ಮತ್ತು ಫಿಂಗರ್‌ಪ್ರಿಂಟಿಂಗ್ ನಿಷ್ಕ್ರಿಯಗೊಳಿಸುತ್ತೇನೆ. ಲ್ಯಾಪ್‌ಟಾಪ್‌ನಲ್ಲಿ ಇಂಟರ್‌ನೆಟ್‌ ಬ್ರೌಸ್ ಮಾಡಲು ಕ್ಯೂಬ್ಸ್ ಓಎಸ್ ಬಳಸಿ ಎಂದು ಸಲಹೆ ನೀಡುತ್ತಾರೆ. ಇದು ಜಿಪಿಎಸ್ ಮತ್ತು ವೈಫೈ ಹೊಂದಿಲ್ಲ ಹಾಗೂ ವೊನಿಕ್ಸ್‌ನಿಂದ ಅಂತರ್‌ನಿರ್ಮಿತ ಹೊಂದಿದೆ ಎಂದು ಹೇಳಿದ್ದಾರೆ.

ಡೇಟಾ ಉಪಯೋಗ ಇದ್ದಕ್ಕಿದ್ದಂತೆ ಜಾಸ್ತಿಯಾದರೆ: ನೀವು ಅನ್ ಲಿಮಿಟೆಡ್ ಮೊಬೈಲ್ ಡೇಟಾವನ್ನು ಹೊಂದಿದ್ದರೂ ಕೆಲ ದಿನಗಳಿಂದ ಹೆಚ್ಚಿನ ಡೇಟಾ ಬಳಕೆಯಾಗಿ, ಡೇಟಾ ನಿಧಾನವಾಗುತ್ತಿದೆ ಎಂದನ್ನಿಸಿದರೆ ನಿಮ್ಮ ಫೋನ್‌ಗೆ ಯಾವುದೋ ವೈರಸ್ ದಾಳಿ ಮಾಡಿದೆ ಎಂದೇ ಅರ್ಥ. ಜೊತೆಗೆ ಆಗಾಗ ನೀವು ಬಳಸುತ್ತಿರುವ ಆ್ಯಪ್‌ಕ್ರ್ಯಾಶ್ ಆಗುವುದು ಇಲ್ಲವೇ ಒಂದು ನಿರ್ದಿಷ್ಠ ಆ್ಯಪ್ ಏನೇ ಪ್ರಯತ್ನಪಟ್ಟರೂ ಅಪ್ಡೇಟ್ ಆಗದೇ ಇರುವುದು ಸಹ ಮಾಲ್ವೇರ್ ಅಟ್ಯಾಕ್ ಆಗಿರುವ ಲಕ್ಷಣವನ್ನು ತೋರಿಸುತ್ತದೆ.

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ