AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp Hack: ನಿಮ್ಮ ವಾಟ್ಸ್​ಆ್ಯಪ್ ಮೆಸೇಜ್ ನಿಮಗೆ ತಿಳಿಯದಂತೆ ಬೇರೆಯವರು ಓದುತ್ತಿರಬಹುದು: ಪತ್ತೆಹಚ್ಚಲು ಇಲ್ಲಿದೆ ಟ್ರಿಕ್

Tech Tips: ಕೆಲವೊಮ್ಮೆ ಬಳಕೆದಾರರ ತಪ್ಪಿನಿಂದಲೇ ಬೇರೆಯವರು ಅವರ ವಾಟ್ಸ್​ಆ್ಯಪ್​​ ಚಾಟ್‌/ ಮೀಡಿಯಾ ಫೈಲ್ಸ್‌ ವೀಕ್ಷಿಸುತ್ತಾರೆ. ಹಾಗಾದ್ರೆ ನಿಮ್ಮ ವಾಟ್ಸ್​ಆ್ಯಪ್​​ ಬೇರೆಯವರು ವೀಕ್ಷಿಸುತ್ತಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ?.

WhatsApp Hack: ನಿಮ್ಮ ವಾಟ್ಸ್​ಆ್ಯಪ್ ಮೆಸೇಜ್ ನಿಮಗೆ ತಿಳಿಯದಂತೆ ಬೇರೆಯವರು ಓದುತ್ತಿರಬಹುದು: ಪತ್ತೆಹಚ್ಚಲು ಇಲ್ಲಿದೆ ಟ್ರಿಕ್
Whatsapp
TV9 Web
| Updated By: Vinay Bhat|

Updated on:Oct 08, 2022 | 10:06 AM

Share

ವಿಶ್ವದಲ್ಲಿ ಇಂದು ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಮೆಟಾ (Meta) ಒಡೆತನದ ವಾಟ್ಸ್​ಆ್ಯಪ್​​ (WhatsApp) ಅಪ್ಲಿಕೇಶನ್ ಈ ವರ್ಷ ಹಲವು ಫೀಚರ್​ಗಳನ್ನು ಪರಿಚಯಿಸಿ ಮತ್ತಷ್ಟು ಪ್ರಸಿದ್ಧಿ ಪಡೆದುಕೊಂಡಿದೆ. ಇನ್ನೂ ಸಾಲು ಸಾಲು ಅಪ್ಡೇಟ್​ಗಳು ಬರಲು ತಯಾರಾಗಿದೆ. ವಾಟ್ಸ್​ಆ್ಯಪ್​​ನಲ್ಲಿ ಮಲ್ಟಿ ಡಿವೈಸ್‌ ಸಪೋರ್ಟ್‌ ಅವಕಾಶ ನೀಡಿರುವುದು ಗೊತ್ತೇ ಇದೆ. ಇದರಿಂದ ಏಕಕಾಲಕ್ಕೆ ಎರಡು ಮೂರು ಡಿವೈಸ್‌ಗಳಲ್ಲಿ ವಾಟ್ಸ್​ಆ್ಯಪ್​​ ಖಾತೆ ಬಳಕೆ ಮಾಡಬಹುದು. ಅದಾಗ್ಯೂ, ಕೆಲವು ಸಂದರ್ಭಗಳಲ್ಲಿ ಮಲ್ಟಿ ಡಿವೈಸ್ ಸಪೋರ್ಟ್‌ ಆಯ್ಕೆಯಿಂದ ವಾಟ್ಸ್​ಆ್ಯಪ್ ಖಾತೆ ದುರುಪಯೋಗ ಆಗುವ ಅಥವಾ ಇತರರು ಕದ್ದು ನಿಮ್ಮ ಮೆಸೇಜ್ ಓದಲು ದಾರಿ ಮಾಡಿಕೊಡುವ ಸಾಧ್ಯತೆಗಳು ಹೆಚ್ಚಿವೆ. ಕಂಪ್ಯೂಟರ್​ಗಳಲ್ಲಿಯೂ (Computer) ಈಗ ವಾಟ್ಸ್​ಆ್ಯಪ್ ಹೆಚ್ಚು​​ ಬಳಸುತ್ತಿರುವುದರಿಂದ ನಿಮ್ಮ ಖಾತೆ ಎಲ್ಲಿ ಲಾಗಿನ್ ಆಗಿರುತ್ತದೆ ಎಂಬುದು ಅರಿವಿಗೆ ಬರುವುದಿಲ್ಲ. ಹಾಗಾದ್ರೆ ನಿಮ್ಮ ವಾಟ್ಸ್​ಆ್ಯಪ್​​ ಬೇರೆಯವರು ವೀಕ್ಷಿಸುತ್ತಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ?.

ಕೆಲವೊಮ್ಮೆ ಬಳಕೆದಾರರ ತಪ್ಪಿನಿಂದಲೇ ಬೇರೆಯವರು ಅವರ ವಾಟ್ಸ್​ಆ್ಯಪ್​​ ಚಾಟ್‌/ ಮೀಡಿಯಾ ಫೈಲ್ಸ್‌ ವೀಕ್ಷಿಸುತ್ತಾರೆ. ಅಂದರೆ ಬಳಕೆದಾರರ ತಪ್ಪಿನಿಂದಲೇ ಅವರ ವಾಟ್ಸ್​ಆ್ಯಪ್​​ ಹ್ಯಾಕ್ ಆಗುವ ಚಾನ್ಸ್‌ ಇರುತ್ತವೆ. ಹೀಗೆ ಹ್ಯಾಕ್ ಆದ ವಾಟ್ಸ್​ಆ್ಯಪ್​​ ಕೆಲವೊಮ್ಮೆ ದುರುಪಯೋಗ ಕೂಡಾ ಆಗಬಹುದು. ಹೀಗಾಗಿ ಬಳಕೆದಾರರ ವಾಟ್ಸ್​ಆ್ಯಪ್​​ ಚಾಟ್ ಅನ್ನು ಯಾರಾದರೂ ರಹಸ್ಯವಾಗಿ ಓದುತ್ತಿದ್ದಾರೆಯೇ/ ವೀಕ್ಷಿಸುತ್ತಿದ್ದಾರೆಯೇ ಎನ್ನುವುದನ್ನು ತಿಳಿಯುವುದು ಮುಖ್ಯ.

ಬಳಕೆದಾರರ ವಾಟ್ಸ್​ಆ್ಯಪ್​​ ಚಾಟ್ ಅನ್ನು ಯಾರಾದರೂ ರಹಸ್ಯವಾಗಿ ಓದುತ್ತಿದ್ದಾರೆಯೇ/ ವೀಕ್ಷಿಸುತ್ತಿದ್ದಾರೆಯೇ ಎನ್ನುವುದನ್ನು ತಿಳಿಯಲು ಯಾವುದೇ ಥರ್ಡ್‌ಪಾರ್ಟಿ ಆಪ್‌ ಅಗತ್ಯ ಇಲ್ಲ. ಬದಲಿಗೆ ಬಳಕೆದಾರರು ಅವರ ವಾಟ್ಸ್​ಆ್ಯಪ್​​ನಲ್ಲಿಯೇ ಈ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಇದಕ್ಕೆ ಇಲ್ಲಿದೆ ನೋಡಿ ಟ್ರಿಕ್.

ಇದನ್ನೂ ಓದಿ
Image
Oppo A77s: 33W ಫಾಸ್ಟ್ ಚಾರ್ಜರ್, 50MP ಕ್ಯಾಮೆರಾ: ಒಪ್ಪೋದಿಂದ ಬಜೆಟ್ ಬೆಲೆಗೆ ಬಂಪರ್ ಸ್ಮಾರ್ಟ್​ಫೋನ್ ಬಿಡುಗಡೆ
Image
Twitter: ಟ್ವಿಟರ್​ನಲ್ಲಿ ಬಂದಿದೆ ಹೊಸ ಆಯ್ಕೆ: ಈಗ ಜಿಫ್, ಫೋಟೋ, ವಿಡಿಯೋವನ್ನು ಒಂದೇ ಟ್ವೀಟ್​ನಲ್ಲಿ ಬಳಸಿ
Image
Amazon Happiness Upgrade Days Sale: ಅಮೆಜಾನ್​ನಲ್ಲಿ ಹ್ಯಾಪಿನೆಸ್ ಅಪ್​ಗ್ರೇಡ್ ಸೇಲ್: 20,000 ರೂ. ಒಳಗೆ ಸಿಗುತ್ತಿದೆ ಈ 5G ಸ್ಮಾರ್ಟ್​ಫೋನ್​ಗಳು
Image
Xiaomi 12T Pro: ಮಾರುಕಟ್ಟೆಗೆ ಬಂತು 200MP ಕ್ಯಾಮೆರಾದ ಎರಡನೇ ಸ್ಮಾರ್ಟ್​ಫೋನ್: ಶವೋಮಿಯಿಂದ ವಿನೂತನ ಪ್ರಯತ್ನ
  • ನಿಮ್ಮ ಫೋನಿನಲ್ಲಿ ವಾಟ್ಸ್​ಆ್ಯಪ್​​ ಅಪ್ಲಿಕೇಶನ್ ಅನ್ನು ತೆರೆಯಿರಿ.
  • ಈಗ ಬಲ ಭಾಗದ ಮೇಲ್ಭಾಗದಲ್ಲಿ ಕಾಣಿಸುವ ಮೂರು ಡಾಟ್‌ ಕ್ಲಿಕ್ ಮಾಡಿ.
  • ಅಲ್ಲಿ ಕಾಣುಸಿವ ವಾಟ್ಸ್​ಆ್ಯಪ್​​ ವೆಬ್ / ಲಿಂಕ್‌ ಡಿವೈಸ್‌ ಆಯ್ಕೆಯ ಮೇಲೆ ಕ್ಲಿಕ್ ಮಾಡಿರಿ.
  • ನೀವು ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್‌ನಲ್ಲಿ ನಿಮ್ಮ ವಾಟ್ಸ್​ಆ್ಯಪ್​​ ಖಾತೆ ತೆರೆಯದಿದ್ದರೂ ಲಿಂಕ್ ಆಗಿರುವ ಬಗ್ಗೆ ಅಲ್ಲಿ ತೋರಿಸುತ್ತಿದ್ದರೆ ನಿಮ್ಮ ವಾಟ್ಸ್​ಆ್ಯಪ್​​ ಅನ್ನು ಬೇರೆಯವರು ಓದುತ್ತಿದ್ದಾರೆ ಎಂದರ್ಥ.
  • ನಿಮಗೆ ತಿಳಿಯದೆ ಲಿಂಕ್ ಆಗಿದ್ದರೆ ಅದರ ಮೇಲೆ ಕ್ಲಿಕ್ ಮಾಡಿ ತಕ್ಷಣವೇ ಲಾಗೌಟ್ ಆಯ್ಕೆ ಒತ್ತಿರಿ.

ಬಾರ್‌ಕೋಡ್‌ ಸ್ಕ್ಯಾನ್‌

ಕೆಲವರಿಗೆ ಬೇರೆಯವರ ವಾಟ್ಸ್​ಆ್ಯಪ್​​ ಇಣುಕಿ ನೋಡುವ ಕುತೂಹಲ ಇರುತ್ತದೆ. ಅಂತಹವರು ಇತರರ ವಾಟ್ಸ್​ಆ್ಯಪ್​​ ಮೆಸೆಜ್ ಓದಲು ಕಳ್ಳ ಮಾರ್ಗ ಹುಡುಕುತ್ತಾರೆ. ಬಾರ್‌ಕೋಡ್‌ ಸ್ಕ್ಯಾನ್‌ ಮೂಲಕ ವಾಟ್ಸ್​ಆ್ಯಪ್​​ ಲ್ಯಾಪ್‌ಟಾಪ್‌ಗೆ ಅಥವಾ ಇತರೆ ಡಿವೈಸ್‌ನಲ್ಲಿ ನಕಲು ಮಾಡುವ ಸಾಧ್ಯತೆಗಳಿರುತ್ತವೆ. ಕೆಲವು ಬಳಕೆದಾರರು ತಮ್ಮ ಫೋನಿಗೆ ಯಾವುದೇ ಲಾಕ್‌ ಇಟ್ಟಿರುವುದಿಲ್ಲ. ಹಾಗೆಯೇ ವಾಟ್ಸ್​ಆ್ಯಪ್​​ ಆ್ಯಪ್ ತೆರೆಯಲು ಸಹ ಯಾವುದೇ ಪಾಸ್‌ವರ್ಡ್‌ ಇಟ್ಟಿರುವುದಿಲ್ಲ. ಇಂತಹ ಖಾತೆಗಳಿಗೆ ಸುಲಭವಾಗಿ ಇತರರು ಹ್ಯಾಕ್ ಮಾಡಬಹುದಾಗಿದೆ. ಅವರ ವಾಟ್ಸ್​ಆ್ಯಪ್​​ ಖಾತೆ ತೆರೆದು ವಾಟ್ಸ್​ಆ್ಯಪ್​​ ವೆಬ್ / ಲಿಂಕ್‌ ಡಿವೈಸ್‌ ಬಾರ್‌ಕೋಡ್ ಸ್ಕ್ಯಾನ್ ಮೂಲಕ ಇನ್ನೊಂದು ಡಿವೈಸ್‌ನಲ್ಲಿ ನಕಲು ವಾಟ್ಸ್​ಆ್ಯಪ್​​ ತೆರೆದುಕೊಳ್ಳುವ ಅವಕಾಶ ಇರುತ್ತವೆ.

ಹ್ಯಾಕ್ ತಡೆಯಲು ಏನು ಮಾಡಬೇಕು?

ವಾಟ್ಸ್​ಆ್ಯಪ್​​ ಹ್ಯಾಕ್ ಆಗುವುದನ್ನು ತಡೆಯಲು ಇತರೆ ಡಿವೈಸ್‌ಗಳಲ್ಲಿ ನೀವು ತೆರೆದಿರುವ ಎಲ್ಲಾ ಸೆಷನ್‌ಗಳಿಂದ ಲಾಗ್ ಔಟ್ ಮಾಡಬಹುದು. ಹೀಗೆ ಮಾಡಿದರೇ ಮೂರನೇ ವ್ಯಕ್ತಿಯು ನಿಮ್ಮ ಖಾತೆಗೆ ಪ್ರವೇಶವನ್ನು ತಕ್ಷಣ ಕಳೆದುಕೊಳ್ಳುತ್ತಾನೆ. ಈ ಸಂಗತಿಗಳು ಮತ್ತೆ ಸಂಭವಿಸುವುದನ್ನು ತಪ್ಪಿಸಲು, ಅಪ್ಲಿಕೇಶನ್ ಲಾಕ್‌ನೊಂದಿಗೆ ವಾಟ್ಸ್​ಆ್ಯಪ್​​ ಅನ್ನು ಕಾನ್ಫಿಗರ್ ಮಾಡುವುದು ಅತ್ಯಂತ ಪರಿಣಾಮಕಾರಿ ಪರಿಹಾರವಾಗಿದೆ. ಈ ರೀತಿಯಾಗಿ, ಯಾರಾದರೂ ನಿಮ್ಮ ಫೋನ್ ಪಡೆದರೂ ಸಹ, ಅವರು ವಾಟ್ಸ್​ಆ್ಯಪ್​​ ಅಪ್ಲಿಕೇಶನ್ ಅನ್ನು ಪ್ರವೇಶಿಸಲು ಸಾಧ್ಯವಿಲ್ಲ ಮತ್ತು ಅದನ್ನು ವಾಟ್ಸ್​ಆ್ಯಪ್​​ ವೆಬ್ ಮೂಲಕ ಪಿಸಿ ಅಥವಾ ಇತರ ಅಪ್ಲಿಕೇಶನ್‌ಗೆ ಸಂಪರ್ಕಿಸಲು ಸಾಧ್ಯವಾಗುವುದಿಲ್ಲ.

Published On - 10:06 am, Sat, 8 October 22

ಊರಿಗೆ ರಸ್ತೆಗಿಂತ ಬಡವನ ಹೊಟ್ಟೆಗೆ ಅನ್ನ ಮತ್ತು ಮೈಗೆ ಬಟ್ಟೆ ಮುಖ್ಯ: ಸವದಿ
ಊರಿಗೆ ರಸ್ತೆಗಿಂತ ಬಡವನ ಹೊಟ್ಟೆಗೆ ಅನ್ನ ಮತ್ತು ಮೈಗೆ ಬಟ್ಟೆ ಮುಖ್ಯ: ಸವದಿ
ಇವತ್ತು ಸಿದ್ದೇಶ್ವರ ಹುಟ್ಟುಹಬ್ಬ, ವಿಶ್ ಮಾಡಲು ಬಂದಿದ್ದೇವೆ: ಹರೀಶ್
ಇವತ್ತು ಸಿದ್ದೇಶ್ವರ ಹುಟ್ಟುಹಬ್ಬ, ವಿಶ್ ಮಾಡಲು ಬಂದಿದ್ದೇವೆ: ಹರೀಶ್
ರೆಬೆಲ್ ನಾಯಕರಲ್ಲಿ ಕುಮಾರ ಬಂಗಾರಪ್ಪ ಉಳಿದವರಿಗಿಂತ ಜಾಸ್ತಿ ಜನಪ್ರಿಯ
ರೆಬೆಲ್ ನಾಯಕರಲ್ಲಿ ಕುಮಾರ ಬಂಗಾರಪ್ಪ ಉಳಿದವರಿಗಿಂತ ಜಾಸ್ತಿ ಜನಪ್ರಿಯ
ಅಘೋಷಿತ ಬಂದ್ ಸ್ಥಿತಿಯಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳು
ಅಘೋಷಿತ ಬಂದ್ ಸ್ಥಿತಿಯಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳು
ಮಂತ್ರಿ ಸ್ಥಾನ ಬೇಕಿಲ್ಲ, ಶಿವಕುಮಾರ್ ಮುಖ್ಯಮಂತ್ರಿಯಾದರೆ ಸಾಕು: ಯೋಗೇಶ್ವರ್
ಮಂತ್ರಿ ಸ್ಥಾನ ಬೇಕಿಲ್ಲ, ಶಿವಕುಮಾರ್ ಮುಖ್ಯಮಂತ್ರಿಯಾದರೆ ಸಾಕು: ಯೋಗೇಶ್ವರ್
ಅಮ್ಮನಿಗೆ ಕಾರು ಗಿಫ್ಟ್ ಕೊಟ್ಟ ಪ್ರತಾಪ್, ಬಿಕ್ಕಿ ಬಿಕ್ಕಿ ಅತ್ತ ತಾಯಿ
ಅಮ್ಮನಿಗೆ ಕಾರು ಗಿಫ್ಟ್ ಕೊಟ್ಟ ಪ್ರತಾಪ್, ಬಿಕ್ಕಿ ಬಿಕ್ಕಿ ಅತ್ತ ತಾಯಿ
Video: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ರಕ್ಷಿಸಿದ ಕಾಡಾನೆ ಹಿಂಡು
Video: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ರಕ್ಷಿಸಿದ ಕಾಡಾನೆ ಹಿಂಡು
ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ
ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ
ಸುಬ್ರಹ್ಮಣ್ಯನ ಲಹರಿಗಳಿರುವ ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸುಬ್ರಹ್ಮಣ್ಯನ ಲಹರಿಗಳಿರುವ ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!