Pixel 7 Series: ಭಾರತದಲ್ಲಿ ಬಹುನಿರೀಕ್ಷಿತ ಗೂಗಲ್‌ ಪಿಕ್ಸೆಲ್‌ 7 ಸರಣಿ ಬಿಡುಗಡೆ: ಹೇಗಿದೆ ಸ್ಮಾರ್ಟ್​​ಫೋನ್?, ಬೆಲೆ ಎಷ್ಟು?

Google October event 2022: ಗೂಗಲ್‌ ಬಹುನಿರೀಕ್ಷಿತ ಗೂಗಲ್‌ ಪಿಕ್ಸೆಲ್‌ 7 ಸರಣಿಯ (Pixel 7 Series) ಎರಡು ಮೊಬೈಲ್​ಗಳು ದೇಶದಲ್ಲಿ ಬಿಡುಗಡೆ ಆಗಿದೆ. ಇದರಲ್ಲಿ ಗೂಗಲ್ ಪಿಕ್ಸೆಲ್ 7 ಮತ್ತು ಪಿಕ್ಸೆಲ್ 7 ಪ್ರೊ ((Pixel 7 Pro) ಸ್ಮಾರ್ಟ್‌ಫೋನ್‌ ಇದೆ.

Pixel 7 Series: ಭಾರತದಲ್ಲಿ ಬಹುನಿರೀಕ್ಷಿತ ಗೂಗಲ್‌ ಪಿಕ್ಸೆಲ್‌ 7 ಸರಣಿ ಬಿಡುಗಡೆ: ಹೇಗಿದೆ ಸ್ಮಾರ್ಟ್​​ಫೋನ್?, ಬೆಲೆ ಎಷ್ಟು?
Pixel 7, Pixel 7 pro
Follow us
TV9 Web
| Updated By: Vinay Bhat

Updated on: Oct 08, 2022 | 12:29 PM

ಗೂಗಲ್ (Google) ಕಂಪನಿ ತನ್ನ ಪಿಕ್ಸೆಲ್ ಸರಣಿಗಳಡಿಯಲ್ಲಿ ವರ್ಷಕ್ಕೆ ಒಂದರಂತೆ ಫೋನ್​ಗಳನ್ನು ಬಿಡುಗಡೆ ಮಾಡುತ್ತವೆ. ಈ ಗೂಗಲ್ ಫೋನ್ ತನ್ನದೇ ಆದ ವಿಶೇಷ ಬಳಕೆದಾರರನ್ನು ಹೊಂದಿದೆ. ಇದೀಗ ಗೂಗಲ್ ತನ್ನ ಹೊಸ ಸರಣಿಯ ಫೋನನ್ನು ಭಾರತದಲ್ಲಿ ಅನಾವರಣ ಮಾಡಿದೆ. ತನ್ನ ಬಹುನಿರೀಕ್ಷಿತ ಗೂಗಲ್‌ ಪಿಕ್ಸೆಲ್‌ 7 ಸರಣಿಯ (Pixel 7 Series) ಎರಡು ಮೊಬೈಲ್​ಗಳು ದೇಶದಲ್ಲಿ ಬಿಡುಗಡೆ ಆಗಿದೆ. ಇದರಲ್ಲಿ ಗೂಗಲ್ ಪಿಕ್ಸೆಲ್ 7 ಮತ್ತು ಪಿಕ್ಸೆಲ್ 7 ಪ್ರೊ ((Pixel 7 Pro) ಸ್ಮಾರ್ಟ್‌ಫೋನ್‌ ಇದೆ. ತನ್ನ ಕ್ಯಾಮೆರಾದಿಂದಲೇ ಟೆಕ್ ಪ್ರಿಯರ ನಿದ್ದೆ ಕದ್ದಿರುವ ಈ ಫೋನ್ ಟೆನ್ಸಾರ್‌ G2 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿವೆ. ಇದರ ಬೆಲೆ ಕೂಡ ದುಬಾರಿಯಾಗೇ ಇದೆ. ಹಾಗಾದರೆ ಈ ಫೋನಿನ ದರ ಎಷ್ಟು?, ಏನೆಲ್ಲ ವಿಶೇಷತೆಗಳಿವೆ ಎಂಬುದನ್ನು ನೋಡೋಣ.

ಗೂಗಲ್‌ ಪಿಕ್ಸೆಲ್‌ 7:

ಗೂಗಲ್‌ ಪಿಕ್ಸೆಲ್‌ 7 ಸ್ಮಾರ್ಟ್‌ಫೋನ್‌ 6.32 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಕ್ಟಾ-ಕೋರ್ ಟೆನ್ಸರ್ G2 SoC ಪ್ರೊಸೆಸರ್​ನಲ್ಲಿ ಕಾರ್ಯನಿವರ್ಹಿಸುತ್ತಿದ್ದು, ಹೊಚ್ಚ ಹೊಸ ಆಂಡ್ರಾಯ್ಡ್ 13 ಬೆಂಬಲ ಪಡೆದುಕೊಂಡಿದೆ. ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌, 10.8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಜೊತೆಗೆ ಕ್ಯಾಮೆರಾ ಮೂಲಕ ವಿಡಿಯೊ ರೆಕಾರ್ಡ್‌ ಮಾಡುವಾಗ ಬ್ಲರ್‌ ಎಫೆಕ್ಟ್‌ ನೀಡುವ ‘ಸಿನಿಮ್ಯಾಟಿಕ್ ಬ್ಲರ್’ ಫೀಚರ್ಸ್‌ ಪಡೆದುಕೊಂಡಿರುವುದು ವಿಶೇಷ.

ಇದನ್ನೂ ಓದಿ
Image
5G Service: ಎಚ್ಚರ: 4G ಸಿಮ್​ ಅನ್ನು 5Gಗೆ ಅಪ್ಡೇಟ್ ಮಾಡುತ್ತೇವೆ ಎಂಬ ಕರೆ ಬರಬಹುದು: ತಪ್ಪಿಯೂ ಹೀಗೆ ಮಾಡಬೇಡಿ
Image
WhatsApp Hack: ನಿಮ್ಮ ವಾಟ್ಸ್​ಆ್ಯಪ್ ಮೆಸೇಜ್ ನಿಮಗೆ ತಿಳಿಯದಂತೆ ಬೇರೆಯವರು ಓದುತ್ತಿರಬಹುದು: ಪತ್ತೆಹಚ್ಚಲು ಇಲ್ಲಿದೆ ಟ್ರಿಕ್
Image
Oppo A77s: 33W ಫಾಸ್ಟ್ ಚಾರ್ಜರ್, 50MP ಕ್ಯಾಮೆರಾ: ಒಪ್ಪೋದಿಂದ ಬಜೆಟ್ ಬೆಲೆಗೆ ಬಂಪರ್ ಸ್ಮಾರ್ಟ್​ಫೋನ್ ಬಿಡುಗಡೆ
Image
Twitter: ಟ್ವಿಟರ್​ನಲ್ಲಿ ಬಂದಿದೆ ಹೊಸ ಆಯ್ಕೆ: ಈಗ ಜಿಫ್, ಫೋಟೋ, ವಿಡಿಯೋವನ್ನು ಒಂದೇ ಟ್ವೀಟ್​ನಲ್ಲಿ ಬಳಸಿ

ಈ ಬಾರಿ 4,335mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದೆ. ಇದಕ್ಕೆ ತಕ್ಕಂತೆ 30W ವೇಗದ ಚಾರ್ಜಿಂಗ್ ಮತ್ತು ವೈಯರ್​​ಲೆಸ್ ಚಾರ್ಜಿಂಗ್‌ಗೆ ಬೆಂಬಲಿಸಲಿದೆ. ಇದರ ಜೊತೆಗೆ ಟ್ರೀಮ್ ಬ್ಯಾಟರಿ ಸೇವರ್ ಮೋಡ್ ಎಂಬ ವಿಶೇಷ ಆಯ್ಕೆಯನ್ನು ಅಳವಡಿಸಲಾಗಿದ್ದು ಇದನ್ನು ಆಕ್ಟಿವ್‌ ಮಾಡುವ ಮೂಲಕ 72 ಗಂಟೆಗಳ ಬ್ಯಾಟರಿ ಅವಧಿಯನ್ನು ಹೆಚ್ಚಿಸಬಹುದು. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6E, ಬ್ಲೂಟೂತ್ 5.2, GPS, NFC, ಮತ್ತು USB ಟೈಪ್-C ಪೋರ್ಟ್ ಹೊಂದಿದೆ. ಭಾರತದಲ್ಲಿ ಗೂಗಲ್ ಪಿಕ್ಸೆಲ್ 7 ಸ್ಮಾರ್ಟ್‌ಫೋನ್‌ ಆರಂಭಿಕ ಬೆಲೆ 59,999 ರೂ. ಇದು 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಗೂಗಲ್ ಪಿಕ್ಸೆಲ್ 7 ಪ್ರೊ:

ಈ ಸ್ಮಾರ್ಟ್‌ಫೋನ್‌ 6.7 ಇಂಚಿನ ಕ್ವಾಡ್ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಆಕ್ಟಾ-ಕೋರ್ ಟೆನ್ಸರ್ G2 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್ 13 ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಪಿಕ್ಸೆಲ್ 7 ಪ್ರೊ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. 10.8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಈ ಸ್ಮಾರ್ಟ್‌ಫೋನ್​ನಲ್ಲಿ ವಿಶೇಷವಾದ ‘ಮ್ಯಾಕ್ರೋ ಫೋಕಸ್’ ಫೀಚರ್ಸ್‌ ಒಳಗೊಂಡಿದೆ ಎಂದು ಗೂಗಲ್‌ ಹೇಳಿದೆ. ಇದು ಕ್ಲೋಸ್-ಅಪ್ ಫೋಟೋಗಳನ್ನು ಅದ್ಭುತವಾಗಿ ಸೆರೆಹಿಡಿಯುತ್ತದೆ.

ಪಿಕ್ಸೆಲ್‌ 7ಗೆ ಹೋಲಿಸಿದರೆ 7 ಪ್ರೊ ಸ್ಮಾರ್ಟ್‌ಫೋನ್​ನಲ್ಲಿ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದೆ. ಇದು 30W ವೇಗದ ಚಾರ್ಜಿಂಗ್ ಮತ್ತು ವಾಯರ್‌ಲೆಸ್ ಚಾರ್ಜಿಂಗ್ ಬೆಂಬಲವನ್ನು ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6E, ಬ್ಲೂಟೂತ್ 5.2, GPS, NFC, ಮತ್ತು USB ಟೈಪ್-C ಪೋರ್ಟ್ ಒಳಗೊಂಡಿದೆ. ಇದರ ಬೆಲೆ 84,999 ರೂ. ಆಗಿದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳು ಇದೇ ಅಕ್ಟೋಬರ್ 13 ರಂದು ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ಮೂಲಕ ಮೊದಲ ಸೇಲ್ ಕಾಣಲಿದೆ.

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್