5G Service: ಎಚ್ಚರ: 4G ಸಿಮ್​ ಅನ್ನು 5Gಗೆ ಅಪ್ಡೇಟ್ ಮಾಡುತ್ತೇವೆ ಎಂಬ ಕರೆ ಬರಬಹುದು: ತಪ್ಪಿಯೂ ಹೀಗೆ ಮಾಡಬೇಡಿ

Fake Call: ಇದೀಗ 5G ವಿಚಾರವನ್ನೇ ಮುಂದಿಟ್ಟುಕೊಂಡು ವಂಚಕರು ಸಾರ್ವಜನಿಕರಿಂದ ಹಣ ದೋಚುವ ಕೆಲಸ ಶುರು ಮಾಡಿದ್ದಾರೆ. ಈ ಬಗ್ಗೆ ಪೊಲೀಸರು ಎಚ್ಚರಿಕೆ ಕೂಡ ನೀಡಿದ್ದಾರೆ. ಬಾಗಲಕೋಟೆ ಜಿಲ್ಲಾ ಪೊಲೀಸರು 5ಜಿ ಸೇವೆಯ ಸುಳ್ಳು ಸುದ್ದಿ ಬಗ್ಗೆ ಪ್ರಕಟನೆ ಹೊರಡಿಸಿದ್ದಾರೆ.

5G Service: ಎಚ್ಚರ: 4G ಸಿಮ್​ ಅನ್ನು 5Gಗೆ ಅಪ್ಡೇಟ್ ಮಾಡುತ್ತೇವೆ ಎಂಬ ಕರೆ ಬರಬಹುದು: ತಪ್ಪಿಯೂ ಹೀಗೆ ಮಾಡಬೇಡಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Vinay Bhat

Updated on:Oct 08, 2022 | 11:26 AM

ದೇಶದಲ್ಲಿ 5ಜಿ ಯುಗ ಆರಂಭವಾಗಿದೆ. ಕಳೆದ ವಾರ ನಡೆದ 6ನೇ ಇಂಡಿಯನ್ ಮೊಬೈಲ್​ ಕಾಂಗ್ರೆಸ್​ನಲ್ಲಿ 5G ಸೇವೆಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಚಾಲನೆ ನೀಡಿದ್ದಾರೆ. ಈಗಾಗಲೇ ಭಾರತದಲ್ಲಿ ಭಾರ್ತಿ ಏರ್ಟೆಲ್ ಮೊಟ್ಟಮೊದಲ 5ಜಿ ಸೇವೆಯನ್ನು ಶುರುಮಾಡಿದೆ. ದೆಹಲಿ, ಮುಂಬೈ, ವಾರಾಣಸಿ, ಬೆಂಗಳೂರು (Bengaluru) ಮತ್ತು ಇತರ ನಗರಗಳಲ್ಲಿ ಏರ್ಟೆಲ್​ನ 5G (Airtel 5G) ಸೇವೆಯು ಲಭ್ಯವಿರುತ್ತದೆ. ಇತ್ತ ಭಾರತದ ನಂ.1 ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ ಕೂಡ ದೇಶದಲ್ಲಿ ತನ್ನ ಜಿಯೋ 5ಜಿ ಸೇವೆಯನ್ನು ಪ್ರಾಯೋಗಿಕವಾಗಿ ಆರಂಭಿಸಿದೆ. ಜಿಯೋ 5ಜಿ ಸೇವೆ ಮುಂಬೈ, ದೆಹಲಿ, ಕೋಲ್ಕತ್ತಾ ಮತ್ತು ವಾರಣಾಸಿ ನಾಲ್ಕು ನಗರಗಳಲ್ಲಿ ಪ್ರಾಯೋಗಿಕವಾಗಿ ಲಭ್ಯವಾಗಲಿದೆ. ಇದೀಗ 5G ವಿಚಾರವನ್ನೇ ಮುಂದಿಟ್ಟುಕೊಂಡು ವಂಚಕರು ಸಾರ್ವಜನಿಕರಿಂದ ಹಣ ದೋಚುವ ಕೆಲಸ ಶುರು ಮಾಡಿದ್ದಾರೆ. ಈ ಬಗ್ಗೆ ಪೊಲೀಸರು ಎಚ್ಚರಿಕೆ ಕೂಡ ನೀಡಿದ್ದಾರೆ.

ಬಾಗಲಕೋಟೆ ಜಿಲ್ಲಾ ಪೊಲೀಸರು 5ಜಿ ಸೇವೆಯ ಸುಳ್ಳು ಸುದ್ದಿ ಬಗ್ಗೆ ಪ್ರಕಟನೆ ಹೊರಡಿಸಿದ್ದಾರೆ. ”ಜಿಲ್ಲೆಯ ಎಲ್ಲ ನಾಗರಿಕರಿಗೆ ಈ ಮೂಲಕ ತಿಳಿಯಪಡಿಸುವ ವಿಷಯ ಏನೆಂದರೆ Mobile SIM Card ನ 5G ಸರ್ವಿಸ್ ಪ್ರಾರಂಭವಾಗಿರುವುದು ನಿಮಗೆ ಗೊತ್ತಿರುವ ವಿಷಯವಾಗಿದೆ ಇದನ್ನೆ ನೆಪವಾಗಿಟ್ಟುಕೊಂಡು ಸೈಬರ್ ಕ್ರೈಮ್‌ನ ಕೆಲವು ಕಿಡಿಗೇಡಿಗಳು ನಿಮ್ಮ ಮೊಬೈಲ್ ಗೆ ಕಾಲ್ ಮಾಡಿ ನಿಮ್ಮ Mobile SIM Card ನ್ನು 4G ದಿಂದ 5G ಗೆ Update ಮಾಡುತ್ತೇವೆ, ನಿಮಗೆ ಒಂದು OTP ಬರುತ್ತದೆ ಹೇಳಿ ಅಂತ ಕಾಲ್ ಬಂದರೆ, ಖಂಡಿತವಾಗಿ ಯಾರು ನಿಮಗೆ ಬಂದ OTP ಯನ್ನು ತಿಳಿಸಬಾರದು ನೀವು ಒಂದು ವೇಳೆ ಅವರು ಕಳುಹಿಸಿದ OTP ಸಂಖ್ಯೆಯನ್ನು ಅವರಿಗೆ ಹೇಳಿದರೆ ನಿಮ್ಮ Bank Account ನಲ್ಲಿರುವ ಎಲ್ಲಾ ಹಣವನ್ನು ಅವರು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಳ್ಳುತ್ತಾರೆ ಆದರಿಂದ ದಯವಿಟ್ಟು ಜಿಲ್ಲೆಯ ನಾಗರಿಕರು ಯಾರಾದರು ಅಪರಿಚಿತರು OTP ಕೇಳಿದರೆ ಹೇಳದೇ Cyber crimes ದಿಂದ ಸುರಕ್ಷತಿವಾಗಿರಿ”, ಎಂದು ಹೇಳಿದೆ.

4ಜಿಯಿಂದ 5ಜಿಗೆ ನೆಟ್‌ವರ್ಕ್ ಅಥವಾ ಸಿಮ್‌ ಕಾರ್ಡ್‌ ಅಪ್‌ಡೇಟ್‌ ಮಾಡುವ ನೆಪದಲ್ಲಿ ಸೈಬರ್‌ ಖದೀಮರು ವಂಚನೆ ಮಾಡುವ ಅವಕಾಶಗಳಿವೆ. 5ಜಿ ಅಪ್‌ಡೇಟ್‌ ಕುರಿತಾಗಿ ಮೊಬೈಲ್‌ಗೆ ಬರುವ ಟೆಕ್ಸ್ಟ್‌ ಮೆಸೇಜ್‌ಗಳ ಬಗ್ಗೆ ಗ್ರಾಹಕರು ಎಚ್ಚರ ವಹಿಸಬೇಕು. ಅಲ್ಲದೇ, ಈ ಮಾದರಿಯ ದೂರವಾಣಿ ಕರೆಗಳ ಬಗೆಗೂ ಜಾಗೃತಿ ಅಗತ್ಯ. ಅಮಾಯಕರನ್ನೇ ಗುರಿಯಾಗಿಸಿಕೊಳ್ಳುವ ಖದೀಮರು, ನಿಮ್ಮ 4ಜಿ ಸಿಮ್‌ ಕಾರ್ಡನ್ನು 5ಜಿಯಾಗಿ ಅಪ್‌ಡೇಟ್‌ ಮಾಡುತ್ತೇವೆ. ನಿಮಗೆ ಬಂದಿರುವ ಒಟಿಪಿ ನೀಡಿ ಎಂದು ಕರೆ ಮಾಡಬಹುದು. ಇಲ್ಲವೇ, ಲಿಂಕ್‌ಗಳನ್ನು ಕಳಿಸಿ ಅವುಗಳನ್ನು ಕ್ಲಿಕ್‌ ಮಾಡುವಂತೆ ಸೂಚಿಸಬಹುದು. ಸೈಬರ್‌ ವಂಚಕರು ಸಾರ್ವಜನಿಕ ಗ್ರಾಹಕರನ್ನು ಸಂಪರ್ಕಿಸಿ ಹಲವು ವಂಚನಾ ಮಾರ್ಗಗಳ ಮೂಲಕ ಸಾರ್ವಜನಿಕ ಗ್ರಾಹಕರ ಮೊಬೈಲಿಗೆ ಒಟಿಪಿ ಬರುವಂತೆ ಮಾಡುತ್ತಾರೆ. ಕೆಲವೊಮ್ಮೆ ಅಪ್‌ಡೇಟ್‌/ಅಪ್ ಗ್ರೇಡ್ ನೆಪದಲ್ಲಿ ಗ್ರಾಹಕರ ಹಳೆಯ ಸಿಮ್‌ಕಾರ್ಡ್‌ ಅನ್ನು ವಂಚಕರೇ ಬಳಸಿಕೊಳ್ಳುವ ಅಪಾಯವೂ ಇರುತ್ತದೆ. ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಸೈಬರ್‌ ತಜ್ಞರು ಎಚ್ಚರಿಸಿದ್ದಾರೆ.

ಇದನ್ನೂ ಓದಿ
Image
WhatsApp Hack: ನಿಮ್ಮ ವಾಟ್ಸ್​ಆ್ಯಪ್ ಮೆಸೇಜ್ ನಿಮಗೆ ತಿಳಿಯದಂತೆ ಬೇರೆಯವರು ಓದುತ್ತಿರಬಹುದು: ಪತ್ತೆಹಚ್ಚಲು ಇಲ್ಲಿದೆ ಟ್ರಿಕ್
Image
Oppo A77s: 33W ಫಾಸ್ಟ್ ಚಾರ್ಜರ್, 50MP ಕ್ಯಾಮೆರಾ: ಒಪ್ಪೋದಿಂದ ಬಜೆಟ್ ಬೆಲೆಗೆ ಬಂಪರ್ ಸ್ಮಾರ್ಟ್​ಫೋನ್ ಬಿಡುಗಡೆ
Image
Twitter: ಟ್ವಿಟರ್​ನಲ್ಲಿ ಬಂದಿದೆ ಹೊಸ ಆಯ್ಕೆ: ಈಗ ಜಿಫ್, ಫೋಟೋ, ವಿಡಿಯೋವನ್ನು ಒಂದೇ ಟ್ವೀಟ್​ನಲ್ಲಿ ಬಳಸಿ
Image
Amazon Happiness Upgrade Days Sale: ಅಮೆಜಾನ್​ನಲ್ಲಿ ಹ್ಯಾಪಿನೆಸ್ ಅಪ್​ಗ್ರೇಡ್ ಸೇಲ್: 20,000 ರೂ. ಒಳಗೆ ಸಿಗುತ್ತಿದೆ ಈ 5G ಸ್ಮಾರ್ಟ್​ಫೋನ್​ಗಳು

ಟೆಲಿಕಾಂ ಕಂಪನಿಗಳು ಕೂಡ ನಿಮ್ಮಲ್ಲಿ ಹಳೆಯ ಸ್ಮಾರ್ಟ್​ಫೋನ್​ಗಳಿದ್ದರೆ ಹೊಸ 5ಜಿ ಫೋನನ್ನು ಖರೀದಿಸುವಂತೆ ಬಳಕೆದಾರರ ಬಳಿ ಮನವಿ ಮಾಡಿದೆ. ಮುಖ್ಯವಾದ ಅಂಶ ಎಂದರೆ ನಿಮ್ಮ ಮೊಬೈಲ್​ನಲ್ಲಿ ಈಗಿರುವ ಸಿಮ್ ಮೂಲಕವೇ 5ಜಿ ಕಾರ್ಯನಿರ್ವಹಿಸಲಿದೆ. ಅಂದರೆ 5ಜಿ ಸೇವೆ ಪಡೆಯಲು ಯಾವುದೇ ಹೊಸ ಸಿಮ್​ನ ಅಗತ್ಯವಿಲ್ಲ. ನಿಮ್ಮ ಪ್ರದೇಶದಲ್ಲಿ 5ಜಿ ಲಭ್ಯವಾಗುತ್ತಿದೆ ಎಂದಾದರೆ ಸ್ಮಾರ್ಟ್​ಫೋನ್​ನಲ್ಲಿ ನೆಟ್​ವರ್ಕ್​ ಸೆಟ್ಟಿಂಗ್​ಗೆ ಹೋಗಿ 5ಜಿ ಅನ್ನು ಚಾಲ್ತಿ ಮಾಡಿದರೆ ಸಾಕು ಎಂದು ಹೇಳಿದೆ.

Published On - 11:26 am, Sat, 8 October 22

‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ