Twitter: ಟ್ವಿಟರ್ನಲ್ಲಿ ಬಂದಿದೆ ಹೊಸ ಆಯ್ಕೆ: ಈಗ ಜಿಫ್, ಫೋಟೋ, ವಿಡಿಯೋವನ್ನು ಒಂದೇ ಟ್ವೀಟ್‌ನಲ್ಲಿ ಬಳಸಿ
ಆಕರ್ಷಕವಾದ ವಿನೂತನ ಫೀಚರ್ಗಳನ್ನು ಪರಿಚಯಿಸುತ್ತಿರುವ ಟ್ವಿಟರ್ ಇದೀಗ ತನ್ನ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಒಂದೇ ಟ್ವೀಟ್‌ನಲ್ಲಿ ಜಿಫ್, ಫೋಟೋಗಳು, ವೀಡಿಯೊಗಳು ಮತ್ತು ಮೀಮ್‌ಗಳನ್ನು ಒಟ್ಟಾಗಿ ಹಂಚಿಕೊಳ್ಳುವ ಆಯ್ಕೆಯನ್ನು ನೀಡಿದೆ.
ಕಳೆದ ಕೆಲವು ತಿಂಗಳುಗಳಿಂದ ಪ್ರಸಿದ್ಧ ಸಾಮಾಜಿಕ ತಾಣ ಟ್ವಿಟರ್ನಲ್ಲಿ (Twitter) ಮಹತ್ವದ ಬದಲಾವಣೆಗಳು ಆಗುತ್ತಿದೆ. ಆಕರ್ಷಕವಾದ ವಿನೂತನ ಫೀಚರ್ಗಳನ್ನು ಪರಿಚಯಿಸುತ್ತಿರುವ ಟ್ವಿಟರ್ ಇದೀಗ ತನ್ನ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಒಂದೇ ಟ್ವೀಟ್‌ನಲ್ಲಿ ಜಿಫ್, ಫೋಟೋಗಳು, ವೀಡಿಯೊಗಳು (Videos) ಮತ್ತು ಮೀಮ್‌ಗಳನ್ನು ಒಟ್ಟಾಗಿ ಹಂಚಿಕೊಳ್ಳುವ ಆಯ್ಕೆಯನ್ನು ನೀಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಟ್ವಿಟರ್, ಈ ವೈಶಿಷ್ಟ್ಯವು ಜಾಗತಿಕವಾಗಿ iOS ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿದೆ. ಇದರ ಮೂಲಕ ಎಲ್ಲ ಮಾದಿರಯ ಟ್ವೀಟ್‌ಗಳನ್ನು ನೀವು ಒಂದೇ ಪೋಸ್ಟ್ನಲ್ಲಿ ಕಾಣಬಹುದು ಎಂದು ಹೇಳಿದೆ. ಜೊತೆಗೆ ಬಳಕೆದಾರರು ಪ್ರತಿ ಟ್ವೀಟ್‌ಗೆ ನಾಲ್ಕು ವಿಡಿಯೋಗಳು, ಫೋಟೋಗಳು ಮತ್ತು ಜಿಫ್ಗಳನ್ನು (GIFs) ಹಾಕಬಹುದಾಗಿದೆ.
ಇನ್ನು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿರುವ ರೀಲ್ಸ್ ಆಯ್ಕೆ ಸದ್ಯದಲ್ಲೇ ಟ್ವಿಟರ್ನಲ್ಲೂ ಕಾಣಿಸಿಕೊಳ್ಳಲಿದೆ. ಟ್ವಿಟರ್ ವಾಲ್‌ನಲ್ಲಿ ನಿಮಗೆ ಕಾಣಸಿಗುವ ವಿಡಿಯೋವನ್ನು ಒಮ್ಮೆ ಒತ್ತಿದರೆ ಅದು ಫುಲ್ ಸ್ಕ್ರೀನ್ ಆಗುತ್ತದೆ. ಅದನ್ನು ಸ್ಕ್ರಾಲ್ ಮಾಡುತ್ತಾ ಹೋದರೆ ಬೇರೆ ಬೇರೆ ವಿಡಿಯೋಗಳು ರೀಲ್ಸ್ ಮಾದರಿಯಲ್ಲಿ ಮುಂದಿನ ದಿನಗಳಲ್ಲಿ ಕಾಣಸಿಗುತ್ತವೆ. ದಿನನಿತ್ಯದ ವಿದ್ಯಮಾನಗಳ ಕುರಿತಾದ ವಿಡಿಯೋಗಳನ್ನು ನೀವಲ್ಲಿ ವೀಕ್ಷಿಸಬಹುದು ಎಂದು ಟ್ವಿಟರ್ ಹೇಳಿಕೊಂಡಿದೆ. ವಿಡಿಯೋಗಳು ಜನರಿಗೆ ಹೆಚ್ಚು ಆಪ್ತವೆನಿಸುತ್ತಿವೆ. ಅದೇ ಕಾರಣಕ್ಕೆ ಈ ಹೊಸ ಅಪ್‌ಡೇಟ್ ತರಲು ನಿರ್ಧರಿಸಿದ್ದೇವೆ ಎಂದೂ ಸಂಸ್ಥೆ ಹೇಳಿದೆ.
Get ready to mix it up with visuals on Twitter.
You can now add a combination of media to your Tweet on Android and iOS. That means you can include a photo, GIF, and video (or two!) all in the same Tweet. Tap the photo icon in the Tweet composer to start mixing your media. pic.twitter.com/9D1cCzjtmI
— Twitter Support (@TwitterSupport) October 5, 2022
ಟ್ವಿಟರ್ನಲ್ಲಿ ಎಡಿಟ್ ಬಟನ್:
ಟ್ವಿಟರ್ ತನ್ನ ಬಹುನಿರೀಕ್ಷಿತ ಎಡಿಟ್ ಬಟನ್ ಟ್ವೀಟ್ ವೈಶಿಷ್ಟ್ಯವನ್ನು ಪರಿಚಯಿಸಿದೆ. ಈ ವೈಶಿಷ್ಟ್ಯವು ಮೊದಲು ತಿಂಗಳಿಗೆ $4.99 ಪಾವತಿಸಿರುವ ಬ್ಲೂಟಿಕ್ ಚಂದಾದಾರರಿಗೆ ಮಾತ್ರ ಲಭ್ಯವಿರುತ್ತದೆ. ಈ ವೈಶಿಷ್ಟ್ಯವನ್ನು ಬಳಸಿಕೊಂಡು, ಬಳಕೆದಾರರು ಟ್ವೀಟ್ ಮೊಲಕ ಒಮ್ಮೆ ಟ್ವೀಟ್ ಮಾಡಿದ ನಂತರವೂ ಟ್ವೀಟ್ ಮರು-ಸಂಪಾದಿಸಬಹುದು. ಎಡಿಟ್ ಮಾಡಿದ ಟ್ವೀಟ್‌ಗಳ ವೈಶಿಷ್ಟ್ಯವು ಟೈಮ್‌ಸ್ಟ್ಯಾಂಪ್ ಮತ್ತು ಲೇಬಲ್‌ನೊಂದಿಗೆ ಗೋಚರಿಸುತ್ತದೆ.
ಟ್ವೀಟ್ ಪ್ರಕಟಿಸಿದ ನಂತರ ಮೊದಲ 30 ನಿಮಿಷಗಳವರೆಗೆ ಎಡಿಟ್ ಟ್ವೀಟ್ ಆಯ್ಕೆಯು ಬಳಕೆದಾರರಿಗೆ ಗೋಚರಿಸುತ್ತದೆ. ಇದು ಸಾರ್ವಜನಿಕ ಸಂಭಾಷಣೆಗಳ ಸಂದರ್ಭವನ್ನು ಅಗತ್ಯವಾಗಿ ಬದಲಾಯಿಸಬಹುದಾದ ಹಳೆಯ ಟ್ವೀಟ್‌ಗಳನ್ನು ಕುಶಲತೆಯಿಂದ ತಡೆಯಲು ಬಳಕೆದಾರರಿಗೆ ಅವಕಾಶ ನೀಡುತ್ತದೆ. ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಪ್ರಕಾರ, “ಈ ವೈಶಿಷ್ಟ್ಯವು ಜನರು ಓದುವ, ಬರೆಯುವ ಮತ್ತು ಟ್ವೀಟ್‌ಗಳೊಂದಿಗೆ ತೊಡಗಿಸಿಕೊಳ್ಳುವ ವಿಧಾನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಸಹ ನಾವು ನೋಡುತ್ತೇವೆ.” ಎಂದಿದೆ. ಆದರೆ, ಈ ಆಯ್ಕೆ ಇನ್ನೂ ಭಾರತೀಯ ಟ್ವಿಟರ್ ಬಳಕೆದಾರರಿಗೆ ಬಂದಿಲ್ಲ.