AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Google Contact: ಸ್ಮಾರ್ಟ್​ಫೋನ್​ನಲ್ಲಿ ಗೂಗಲ್ ಅಕೌಂಟ್​ನಿಂದ ಕಾಂಟಾಕ್ಟ್​ಗಳನ್ನು ಬ್ಯಾಕಪ್ ಮತ್ತು ಮರಳಿ ಪಡೆಯುವುದು ಹೇಗೆ?

Tech Tips: ಫೋನ್ ಕಳೆದುಹೋದಾಗ, ಹಾನಿಗೊಳಗಾದಾಗ ಅಥವಾ ಹೊಸ ಮೊಬೈಲ್ ಅನ್ನು ಖರೀದಿಸಿದಾಗ ಕಾಂಟೆಕ್ಟ್ ಅನ್ನು ಪುನಃ ಹುಡುಕುವುದು ದೊಡ್ಡ ಸವಾಲಾಗಿರುತ್ತದೆ.

Google Contact:  ಸ್ಮಾರ್ಟ್​ಫೋನ್​ನಲ್ಲಿ ಗೂಗಲ್ ಅಕೌಂಟ್​ನಿಂದ ಕಾಂಟಾಕ್ಟ್​ಗಳನ್ನು ಬ್ಯಾಕಪ್ ಮತ್ತು ಮರಳಿ ಪಡೆಯುವುದು ಹೇಗೆ?
Google Contacts
TV9 Web
| Updated By: Vinay Bhat|

Updated on:Oct 06, 2022 | 11:58 AM

Share

ಸ್ಮಾರ್ಟ್​ಫೋನ್​ನಲ್ಲಿ (Smartphone) ಕಾಂಟಾಕ್ಟ್ ಎನ್ನುವುದು ಅತ್ಯಂತ ಹೆಚ್ಚು ಪ್ರಮುಖವಾದದ್ದು. ನಮ್ಮ ಕುಟುಂಬದವರು, ಸ್ನೇಹಿತರಿಂದ ಹಿಡಿದು ಅಗತ್ಯ ವ್ಯಕ್ತಿಗಳ ನಂಬರ್ ಸೇವ್ ಮಾಡಿ ಇಟ್ಟಿರುತ್ತವೆ. ಆದರೆ, ಫೋನ್ ಕಳೆದುಹೋದಾಗ, ಹಾನಿಗೊಳಗಾದಾಗ ಅಥವಾ ಹೊಸ ಮೊಬೈಲ್ ಅನ್ನು ಖರೀದಿಸಿದಾಗ ಕಾಂಟೆಕ್ಟ್ ಅನ್ನು ಪುನಃ ಹುಡುಕುವುದು ದೊಡ್ಡ ಸವಾಲಾಗಿರುತ್ತದೆ. ಯಾಕೆಂದರೆ ಕಾಂಟಾಕ್ಟ್ (Contact) ಲಿಸ್ಟ್ ನಲ್ಲಿರುವ ಅಷ್ಟೂ ನಂಬರ್​ಗಳನ್ನು ಮತ್ತೆ ಪಡೆಯುವುದು ಬಹಳ ಕಷ್ಟದ ಕೆಲಸ. ಆದರೆ ಈಗ ಈ ಸಮಸ್ಯೆಗೂ ಪರಿಹಾರ ಇದೆ. ಕೇವಲ ನಿಮ್ಮ ಇ ಮೇಲ್ ಐಡಿ ಹಾಕಿ ಲಾಗಿನ್ ಆದರೆ, ಎಲ್ಲವೂ ಅಲ್ಲಿ ನಿಮಗೆ ಸಿಗುತ್ತದೆ. ಮತ್ತು ಡಿಫಾಲ್ಟ್ ಸ್ಟೋರೇಜ್ ಇ ಮೇಲ್ ಇದ್ದರೆ, ಪ್ರತಿ ಕಾಂಟಾಕ್ಟ್ ಸೇರಿಸುತ್ತಾ ಹೋದಾಗಲೂ, ಅದು ಫೋನ್‌ನಲ್ಲಿ ಇ ಮೇಲ್‌ಗೆ (E- mail) ಸಿಂಕ್ ಆಗಿ ಅಪ್‌ಡೇಟ್ ಆಗುತ್ತದೆ. ಇದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟೇ.

ಗೂಗಲ್ ಅಕೌಂಟ್ ಮೂಲಕ ನಿಮ್ಮ ಬಳಿ ಡಿಲೀಟ್ ಆದ ಕಾಂಟಾಕ್ಟ್ ಅನ್ನು ತಕ್ಷಣವೇ ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಹೊಸ ಫೋನ್ ಖರೀದಿಸಿದರೆ ಗೂಗಲ್ ಅಕೌಂಟ್ ಮೂಲಕ ಲಾಗಿನ್ ಆದರೆ ಅಲ್ಲೂ ಸಿಗುತ್ತದೆ. ಇದರ ಮೂಲಕ ನಿಮ್ಮ ಕಾಂಟಾಕ್ಟ್ ಅನ್ನು ಇತರರೊಂದುಗೆ ಶೇರ್ ಕೂಡ ಮಾಡಬಹುದು.

  • ಮೊದಲು ನೀವು ಆಂಡ್ರಾಯ್ಡ್ ಸ್ಮಾರ್ಟ್​ಫೋನ್​ನಲ್ಲಿ ಗೂಗಲ್ ಕಾಂಟಾಕ್ಟ್ ಆ್ಯಪ್ ತೆರೆಯಿರಿ.
  • ಅಲ್ಲಿ ಕಾಣಿಸುವ ಫಿಕ್ಸ್ ಮತ್ತು ಮ್ಯಾನೇಜ್ ಬಟಲ್ ಮೇಲೆ ಕ್ಲಿಕ್ ಮಾಡಿ.
  • ನಂತರ ಎಕ್ಸ್​ಪೋರ್ಟ್ ಟು ಫೈಲ್ ಬಟನ್ ಒತ್ತಿರಿ.
  • ನೀವು ಕಾಂಟಾಕ್ಟ್​​ಗಳನ್ನು ಎಕ್ಸ್​ಪೋರ್ಟ್ ಮಾಡಬಯಸುವ ಅಕೌಂಟ್ ಆಯ್ಕೆ ಮಾಡಿ.
  • ಕೊನೆಯದಾಗಿ Export to .VCF file ಒತ್ತಿದರೆ ಆಯಿತು.

ಅಟೊಮೆಟಿಕ್ ಬ್ಯಾಕಪ್ ಮಾಡುವುದು ಹೇಗೆ?:

ಇದನ್ನೂ ಓದಿ
Image
Cryogenic Engine: ಎಚ್​ಎಎಲ್​ನಲ್ಲಿ ಕ್ರಯೊಜೆನಿಕ್ ಎಂಜಿನ್ ಉತ್ಪಾದನಾ ಘಟಕ ಆರಂಭ: ಹಲವು ವೈಶಿಷ್ಟ್ಯ
Image
Robot: ಮೆಕ್ಯಾನಿಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯುಧ ಪೂಜೆ ನೆರವೇರಿಸಲು ರೋಬೋಟ್‌, ಇಲ್ಲಿದೆ ವಿಡಿಯೋ
Image
SOVA Trojan; ಆಂಡ್ರಾಯ್ಡ್ ಬಳಕೆದಾರರಿಗೆ ಎಚ್ಚರಿಕೆ ನೀಡಿದ ಬ್ಯಾಂಕ್​ಗಳು, SOVA ಟ್ರೋಜನ್​ ವಂಚಕರಿಂದ ನಿಮ್ಮ ಹಣವನ್ನು ಉಳಿಸಿಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ
Image
Tech Tips: ನಿಮ್ಮ ಮೊಬೈಲ್ ಬ್ಯಾಟರಿ ಸದಾ ಫುಲ್ ಇರಬೇಕೇ?: ಹಾಗಿದ್ದರೆ ಈ ಆ್ಯಪ್ ಇನ್​ಸ್ಟಾಲ್ ಮಾಡಿ
  • ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸೆಟ್ಟಿಂಗ್‌ಗಳ ಅಪ್ಲಿಕೇಶನ್ ತೆರೆಯಿರಿ.
  • ಸಿಸ್ಟಮ್ ಸೆಟ್ಟಿಂಗ್‌ಗಳ ಮೇಲೆ ಟ್ಯಾಪ್ ಮಾಡಿ.
  • ಬ್ಯಾಕಪ್ ಬಟನ್ ಒತ್ತಿರಿ.
  • Google ಡ್ರೈವ್‌ಗೆ ಬ್ಯಾಕಪ್ ಮಾಡಲು ಟಾಗಲ್ ಅನ್ನು ಆನ್ ಅಥವಾ ಆಫ್ ಮಾಡಿದರೆ ಆಯಿತು.

ಡುಪ್ಲಿಕೇಟ್ ಕಾಂಟಾಕ್ಟ್​ ಡಿಲೀಟ್ ಮಾಡುವುದು ಹೇಗೆ?:

ಸ್ಮಾರ್ಟ್​ಫೋನ್​ ಮೂಲೆಯಲ್ಲಿ ಅಡಗಿರುವ ನಕಲಿ ಕಾಂಟಾಕ್ಟ್​​ಗಳನ್ನ ನಿಮಿಷಾರ್ಧದಲ್ಲಿ ಡಿಲೀಟ್​​ ಮಾಡಬಹುದಾಗಿದೆ. ಅದಕ್ಕಾಗಿ ನಾನಾ ಥರ್ಡ್​ ಪಾರ್ಟಿ ಆ್ಯಪ್​ಗಳು ಪ್ಲೇ ಸ್ಟೋರ್​ ನಲ್ಲಿವೆ. ಹಾಗಾಗಿ ಅದನ್ನು ಬಳಸಿ ಸರಿಯಾದ ಕಾಂಟಾಕ್ಟ್ ಯಾವುದು? ಡುಪ್ಲಿಕೇಟ್ ಕಾಂಟಾಕ್ಟ್ ಯಾವುದು ಎಂದು ತಿಳಿಯುವ ಮೂಲಕ ಬೇಡವಾದ ನಂಬರ್ ಅನ್ನು ಡಿಲೀಟ್​ ಮಾಡಬಹುದು.

ಈ ಸಮಸ್ಯೆಗೆ ಪರಿಹಾರವನ್ನು ನೀಡುವ ಸಲುವಾಗಿ ಡುಪ್ಲೀಕೆಟ್ ಕಾಂಟಾಕ್ಟ್‌ಗಳನ್ನು ಡಿಲೀಟ್ ಮಾಡುವ ಮತ್ತು ಮರ್ಜ್ ಮಾಡಲು ಅನೇಕ ಆ್ಯಪ್‌ಗಳು ಮತ್ತು ಸೇವೆಗಳು ಲಭ್ಯವಿದ್ದು, ಇವುಗಳ ಬಳಕೆಯಿಂದಾಗಿ ಆಂಡ್ರಾಯ್ಡ್ ಫೋನಿನಲ್ಲಿ ಡುಪ್ಲಿಕೇಟ್ ಕಾಂಟಾಕ್ಟ್ ಗಳನ್ನು ಮ್ಯಾನೆಜ್ ಮಾಡುವುದು ಇನ್ನು ಮುಂದೆ ನಿಮಗೆ ಸುಲಭವಾಗಲಿದೆ.

ನಿಮ್ಮ ಕಾಂಟಾಕ್ಟ್‌ಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವ ಸಲುವಾಗಿ ಸಿಂಪಲ್ ಮರ್ಜ್ ಡುಪ್ಲಿಕೆಟ್ಸ್ (Simpler Merge Duplicates) ಎನ್ನುವ ಆ್ಯಪ್ ಒಂದನ್ನು ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ. ಡೌನ್‌ಲೋಡ್ ಮಾಡಿದ ನಂತರದಲ್ಲಿ ಈ ಆ್ಯಪ್ ಅನ್ನು ಸ್ಮಾರ್ಟ್‌ಫೋನಿನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಿ. ಇದಾದ ಮೇಲೆ ಆ್ಯಪ್ ನಿಮ್ಮ ಸ್ಮಾರ್ಟ್‌ಫೋನಿನಲ್ಲಿರುವ ಕಾಂಟಾಕ್ಟ್ ಗಳನ್ನು ಸ್ಕ್ಯಾನ್ ಮಾಡಿಕೊಳ್ಳುತ್ತದೆ.

Published On - 11:58 am, Thu, 6 October 22

ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ