AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

iPhone 12: ಐಫೋನನ್ನು ಕೇವಲ 25,000 ರೂ. ಒಳಗೆ ಖರೀದಿಸಿ: ಅಮೆಜಾನ್​ನಿಂದ ಹೀಗೊಂದು ಬಂಪರ್ ಆಫರ್

Amazon Extra Happiness Days Sale: ಅಮೆಜಾನ್​ನಲ್ಲಿ ಎಕ್ಸ್ಟ್ರಾ ಹ್ಯಾಪಿನೆಸ್ ಡೇಸ್ ನಡೆಯುತ್ತಿದ್ದು ಕೆಲ ಪ್ರಾಡಕ್ಟ್​ಗಳಿಗೆ ಆಕರ್ಷಕ ಡಿಸ್ಕೌಂಟ್ ನೀಡಲಾಗಿದೆ. ಮುಖ್ಯವಾಗಿ ಐಫೋನ್ 12 (iPhone 12) ಅತ್ಯುತ್ತಮ ಆಫರ್ ಪಡೆದುಕೊಂಡಿದೆ.

iPhone 12: ಐಫೋನನ್ನು ಕೇವಲ 25,000 ರೂ. ಒಳಗೆ ಖರೀದಿಸಿ: ಅಮೆಜಾನ್​ನಿಂದ ಹೀಗೊಂದು ಬಂಪರ್ ಆಫರ್
ಆ್ಯಪಲ್ ಐಫೋನ್ (ಸಾಂದರ್ಭಿಕ ಚಿತ್ರ)
TV9 Web
| Updated By: Vinay Bhat|

Updated on:Oct 08, 2022 | 2:14 PM

Share

ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್​ನಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2022 (Amazon Great Indian Festival Sale) ಎರಡನೇ ವಾರಕ್ಕೆ ಕಾಲಿಟ್ಟಿದೆ. ಈ ಸೇಲ್ ಅಡಿಯಲ್ಲಿ ಎಕ್ಸ್ಟ್ರಾ ಹ್ಯಾಪಿನೆಸ್ ಡೇಸ್ (Amazon Extra Happiness Days Sale) ನಡೆಯುತ್ತಿದ್ದು ಕೆಲ ಪ್ರಾಡಕ್ಟ್​ಗಳಿಗೆ ಆಕರ್ಷಕ ಡಿಸ್ಕೌಂಟ್ ನೀಡಲಾಗಿದೆ. ಆರ್​​ಬಿಎಲ್ ಬ್ಯಾಂಕ್, ಸಿಟಿ ಬ್ಯಾಂಕ್, ಒನ್​ಕಾರ್ಡ್ ಬ್ಯಾಂಕ್ ಮತ್ತು ರೂಪೆ ಬಳಕೆದಾರರಿಗೆ ಈ ಸೇಲ್​ನಲ್ಲಿ ಶೇ. 10 ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಇದರಲ್ಲಿ ಜನಪ್ರಿಯ ಬ್ರ್ಯಾಂಡ್‌ಗಳಾದ ಟೆಕ್ನೋ, ಆ್ಯಪಲ್, ಐಕ್ಯೂ ಮತ್ತು ಶವೋಮಿ ಕಂಪನಿಯ ಸ್ಮಾರ್ಟ್‌ಫೋನ್‌ಗಳು ಕೂಡ ಡಿಸ್ಕೌಂಟ್‌ ಪಡೆದುಕೊಂಡಿವೆ. ಜೊತೆಗೆ ಲ್ಯಾಪ್‌ಟಾಪ್‌ಗಳು, ಟಿವಿಗಳು ಸೇರಿದಂತೆ ಅನೇಕ ಗ್ಯಾಜೆಟ್ಸ್‌ಗಳನ್ನು ಕಡಿಮೆ ಬೆಲೆಗೆ ಖರೀದಿಸಬಹುದು. ಮುಖ್ಯವಾಗಿ ಐಫೋನ್ 12 (iPhone 12) ಅತ್ಯುತ್ತಮ ಆಫರ್ ಪಡೆದುಕೊಂಡಿದೆ.

ಐಫೋನ್ 14 ಸರಣಿ ಬಿಡುಗಡೆಗೊಂಡ ಮೇಲೆ ಹಿಂದಿನ ಐಫೋನ್ ಸರಣಿಗಳು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಆಗುತ್ತಿದೆ. ಇದೀಗ ಅಮೆಜಾನ್ ಹ್ಯಾಪಿನೆಸ್ ಅಪ್​ಗ್ರೇಡ್ ಡೇಸ್​ನಲ್ಲಿ ಐಫೋನ್ 12 ಅನ್ನು 25 ಸಾವಿರ ರೂ. ಒಳಗಡೆ ನಿಮ್ಮದಾಗಿಸಬಹುದು. ಇದರ 64GB ಸ್ಟೋರೇಜ್ ಸಾಮರ್ಥ್ಯದ ಮೂಲಬೆಲೆ 65,900 ರೂ. ಆಗಿದೆ. ಆದರೀಗ ಆಫರ್​ನಲ್ಲಿ ಶೇ. 27 ರಷ್ಟು ಡಿಸ್ಕೌಂಟ್ ಪಡೆದು ಕೇವಲ 47,999 ರೂ. ಗೆ ನಿಮ್ಮದಾಗಿಸಬಹುದು. 128GB ಸ್ಟೋರೇಜ್ ಸಾಮರ್ಥ್ಯದ ಐಫೋನ್ 12 ಈಗ 54,490 ರೂ. ಗೆ ಮಾರಾಟ ಆಗುತ್ತಿದೆ. ಇದರ ಜೊತೆಗೆ 25,000 ರೂ. ವರೆಗೆ ಎಕ್ಸ್​ಚೇಂಜ್ ಆಫರ್ ಕೂಡ ನೀಡಲಾಗಿದೆ. ಹೀಗಾಗಿ ಐಫೋನ್ 12 ಅನ್ನು ನೀವು 25,000 ರೂ. ಒಳಗೆ ಖರೀದಿಸಬಹುದು.

ಸ್ಯಾಮ್​ಸಂಗ್ ಗ್ಯಾಲಕ್ಸಿ M33 5G ಸ್ಮಾರ್ಟ್​ಫೋನ್ ಕೇವಲ 16,999 ರೂ. ಗೆ ಲಭ್ಯವಿದೆ. ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಳ್ಳುವುದರಿಂದ ಗ್ರಾಹಕರು 12,400 ರೂ. ವರೆಗೆ ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು. ಇದು 6.6-ಇಂಚಿನ ಪೂರ್ಣ HD+ ಇನ್ಫಿನಿಟಿ V ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ದರವನ್ನು ಹೊಂದಿದೆ. ಆಕ್ಟಾ-ಕೋರ್ Exynos 1280 SoC ಪ್ರೊಸೆಸರ್ ನೀಡಲಾಗಿದೆ.

ಇದನ್ನೂ ಓದಿ
Image
Google Chrome: ಗೂಗಲ್ ಕ್ರೋಮ್ ಅತ್ಯಂತ ದುರ್ಬಲ ಬ್ರೌಸರ್: ಶಾಕಿಂಗ್ ವಿಚಾರ ಬಹಿರಂಗ
Image
Pixel 7 Series: ಭಾರತದಲ್ಲಿ ಬಹುನಿರೀಕ್ಷಿತ ಗೂಗಲ್‌ ಪಿಕ್ಸೆಲ್‌ 7 ಸರಣಿ ಬಿಡುಗಡೆ: ಹೇಗಿದೆ ಸ್ಮಾರ್ಟ್​​ಫೋನ್?, ಬೆಲೆ ಎಷ್ಟು?
Image
5G Service: ಎಚ್ಚರ: 4G ಸಿಮ್​ ಅನ್ನು 5Gಗೆ ಅಪ್ಡೇಟ್ ಮಾಡುತ್ತೇವೆ ಎಂಬ ಕರೆ ಬರಬಹುದು: ತಪ್ಪಿಯೂ ಹೀಗೆ ಮಾಡಬೇಡಿ
Image
WhatsApp Hack: ನಿಮ್ಮ ವಾಟ್ಸ್​ಆ್ಯಪ್ ಮೆಸೇಜ್ ನಿಮಗೆ ತಿಳಿಯದಂತೆ ಬೇರೆಯವರು ಓದುತ್ತಿರಬಹುದು: ಪತ್ತೆಹಚ್ಚಲು ಇಲ್ಲಿದೆ ಟ್ರಿಕ್

ಇನ್ನು ಲ್ಯಾಪ್​ಟಾಪ್ ವಿಚಾರಕ್ಕೆ ಬರುವುದಾದರೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬುಕ್‌2 ಮೂಲದರ 83,990 ರೂ. ಗಳಾಗಿದ್ದು, ಅಮೆಜಾನ್‌ನ ಈ ಸೇಲ್‌ನಲ್ಲಿ 59,990 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಇದು 15.6 ಇಂಚಿನ FHD LED ಡಿಸ್‌ಪ್ಲೇ ಹೊಂದಿದ್ದು, 12 ನೇ ತಲೆಮಾರಿನ ಇಂಟೆಲ್‌ ಕೋರ್‌ i5 ಪ್ರೊಸೆಸರ್ ಮತ್ತು ಇಂಟೆಲ್‌ ಐರಿಸ್ Xe ಗ್ರಾಫಿಕ್ಸ್‌ನೊಂದಿಗೆ ಸಿದ್ಧವಾಗಿದೆ. ಇನ್ನುಳಿದಂತೆ 8GBRAM ಹಾಗೂ 512GB ಇಂಟರ್ನಲ್‌ ಸ್ಟೋರೇಜ್ ಸಾಮರ್ಥ್ಯ ಇದರಲ್ಲಿದೆ. ಅಂತೆಯೆ 1,06,290 ರೂ. ಗಳ ಲೆನೊವೊ ಯೋಗ ಸ್ಲಿಮ್ 7 ಪ್ರೊ ಲ್ಯಾಪ್‌ಟಾಪ್‌ ಸೇಲ್‌ನಲ್ಲಿ 72,990 ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ.

ಅಮೆಜಾನ್ ಹ್ಯಾಪಿನೆಸ್ ಅಪ್​ಗ್ರೇಡ್ ಡೇಸ್​ನಲ್ಲಿ ಗ್ರಾಹಕರು ಕ್ರೆಡಿಟ್ ಕಾರ್ಡ್‌ಗಳು, ಡೆಬಿಟ್ ಕಾರ್ಡ್‌ಗಳು, ಬಜಾಜ್ ಫಿನ್‌ಸರ್ವ್ ಮತ್ತು ಅಮೆಜಾನ್ ಪೇ ಲೇಟರ್‌ನಲ್ಲಿ ನೋ ಕಾಸ್ಟ್‌ ಇಎಂಐ ಆಯ್ಕೆಯನ್ನು ಕೂಡ ಪಡೆಯಬಹುದಾಗಿದೆ. ಅಮೆಜಾನ್‌ ಪೇ UPI ಮೂಲಕ ಪಾವತಿ ಮಾಡುವ ಗ್ರಾಹಕರು 600 ರೂ. ವರೆಗೆ ವೆಲ್ಕಮ್‌ ರಿವಾರ್ಡ್‌ಗಳನ್ನು ಪಡೆಯಲು ಸಾದ್ಯವಾಗಲಿದೆ. ಸೀಮಿತ ಅವಧಿಯಲ್ಲಿ ‘ಡೈಮಂಡ್ಸ್ ಧಮಾಕಾ’ವನ್ನು ಕೂಡ ಗ್ರಾಹಕರು ಪಡೆಯಲು ಅವಕಾಶ ಸಿಗಲಿದೆ. 1,500 ರೂ. ಮತ್ತು ಅದಕ್ಕಿಂತ ಹೆಚ್ಚಿನ ಬಿಲ್‌ನಲ್ಲಿ 150 ರೂ. ವರೆಗಿನ ಕ್ಯಾಶ್‌ಬ್ಯಾಕ್ ಕೂಡ ಪಡೆಯಬಹುದು.

Published On - 2:14 pm, Sat, 8 October 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ