WhatsApp: ವಾಟ್ಸ್ಆ್ಯಪ್ನಲ್ಲಿ ಬಂದಿದೆ ಅಚ್ಚರಿ ಫೀಚರ್: ನೀವು ಆನ್‌ಲೈನ್‌ನಲ್ಲಿದ್ದರೂ ಕಾಣದಂತೆ ಮರೆ ಮಾಡಬಹುದು
ಆಂಡ್ರಾಯ್ಡ್ ಬಳಕೆದಾರರಿಗೆ ವಾಟ್ಸ್ಆ್ಯಪ್ ಮತ್ತೊಂದು ಅನುಕೂಲವಾಗುವ ಪ್ರೈವೆಸಿ ಫೀಚರ್ಸ್ ಅನ್ನು ಪರಿಚಯಿಸಿದೆ. ಈ ಫೀಚರ್ಸ್ ಮೂಲಕ ವಾಟ್ಸ್ಆ್ಯಪ್ ಚಾಟ್‌ಗಳಲ್ಲಿ ನೀವು ನಿಮ್ಮ ಆನ್‌ಲೈನ್ ಸ್ಟೇಟಸ್ ಅನ್ನು ಹೈಡ್ ಮಾಡಬಹುದು.
ವಾಟ್ಸ್ಆ್ಯಪ್ (WhatsApp) ಅನ್ನು ಇಂದು ಕೋಟ್ಯಾಂತರ ಮಂದಿ ಬಳಕೆ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಸಾಕಷ್ಟು ಅಭಿವೃದ್ದಿಹೊಂದಿ ಬಳಕೆದಾರರಿಂದ ಮನ್ನಣೆಗೆ ಪಾತ್ರವಾಗಿರುವ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ಆಗಿದೆ. ಈ ವರ್ಷ ಮೆಸೇಜ್ಗೆ ಎಮೋಜಿ ರಿಯಾಕ್ಷನ್ನಿಂದ ಹಿಡಿದು ಮೆಸೇಜ್ ಡಿಲೀಟ್ ಮಾಡುವ ಸಮಯವನ್ನು ಹೆಚ್ಚಿಸಿ ಇನ್ನು ಕೆಲವೇ ದಿನಗಳಲ್ಲಿ ಲಾಗೌಟ್ ಆಯ್ಕೆ, ಗ್ರೂಪ್ ಅಡ್ಮಿನ್ಗೆ (Admin) ಮೆಸೇಜ್ ಡಿಲೀಟ್ ಮಾಡುವ ಆಯ್ಕೆ, ಕಳುಹಿಸಿದ ಮೆಸೇಜ್ ಎಡಿಟ್ ಮಾಡುವ ಆಯ್ಕೆ ಹೀಗೆ ಅನೇಕ ಫೀಚರ್ಗಳನ್ನು ಪರಿಚಯಿಸಲು ಮುಂದಾಗಿದೆ. ಇದರ ನಡುವೆ ಆಂಡ್ರಾಯ್ಡ್ ಬಳಕೆದಾರರಿಗೆ ವಾಟ್ಸ್ಆ್ಯಪ್ ಮತ್ತೊಂದು ಅನುಕೂಲವಾಗುವ ಪ್ರೈವೆಸಿ ಫೀಚರ್ಸ್ ಅನ್ನು ಪರಿಚಯಿಸಿದೆ. ಈ ಫೀಚರ್ಸ್ ಮೂಲಕ ವಾಟ್ಸ್ಆ್ಯಪ್ ಚಾಟ್‌ಗಳಲ್ಲಿ ನೀವು ನಿಮ್ಮ ಆನ್‌ಲೈನ್ ಸ್ಟೇಟಸ್ (Online Status) ಅನ್ನು ಹೈಡ್ ಮಾಡಬಹುದು.
ವಾಟ್ಸ್ಆ್ಯಪ್ ಪರಿಚಯಿಸಿರುವ ಈ ನೂತನ ಆಯ್ಕೆ ಅನೇಕರಿಗೆ ಸಹಕಾರಿ ಆಗಲಿದ್ದು, ಇದರಿಂದ ನೀವು ಆನ್‌ಲೈನ್‌ನಲ್ಲಿದ್ದರೂ ಕೂಡ ಆನ್‌ಲೈನ್ ಸ್ಟೇಟಸ್ ಯಾರಿಗೂ ಕಾಣದಂತೆ ಹೈಡ್ ಮಾಡಬಹುದಾಗಿದೆ. ಅಂದರೆ ನಿಮ್ಮ ಸ್ನೇಹಿತರಿಗೆ ನೀವು ಆನ್‌ಲೈನ್ ಸ್ಟೇಟಸ್ ಕಾಣದಂತೆ ಮರೆ ಮಾಡಬಹುದು. ಈ ಫೀಚರ್ ಸದ್ಯಕ್ಕೆ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ.
ಈ ಆಯ್ಕೆಯನ್ನು ನೀವು ಆ್ಯಕ್ಟಿವ್ ಮಾಡಲು ಮೊದಲಿಗೆ ವಾಟ್ಸ್ಆ್ಯಪ್ ಅಪ್ಲಿಕೇಶನ್ ತೆರೆಯಿರಿ. ಮೇಲಿನ ಬಲ ಮೂಲೆಯಲ್ಲಿರುವ ಮೂರು-ಚುಕ್ಕೆಗಳ ಐಕಾನ್ ಮೇಲೆ ಟ್ಯಾಪ್ ಮಾಡಿರಿ. ನಂತರ ಸೆಟ್ಟಿಂಗ್ಸ್ >ಅಕೌಂಟ್> ಪ್ರೈವೆಸಿ ಆಯ್ಕೆಯನ್ನು ಟ್ಯಾಪ್ ಮಾಡಿರಿ. ಇದರಲ್ಲಿ ನಿಮಗೆ ಲಾಸ್ಟ್ ಸೀನ್ ಆಂಡ್ ಆನ್‌ಲೈನ್ ಫೀಚರ್ಸ್ ಕಾಣಲಿದೆ. ಇದರ ಮೇಲೆ ಟ್ಯಾಪ್ ಮಾಡಿ ನಂತರ Nobody ಮತ್ತು “Same as last seen” ಆಯ್ಕೆಯನ್ನು ಆರಿಸಿ. ಇದರಲ್ಲಿ ನೀವು “ಯಾರೂ ಇಲ್ಲ” ಅನ್ನು ಟ್ಯಾಪ್ ಮಾಡಿದಾಗ, ನೀವು ಪ್ರತಿಯೊಬ್ಬರಿಂದ ಆನ್‌ಲೈನ್ ಸ್ಟೇಟಸ್ ಅನ್ನು ಹೈಡ್ ಮಾಡಲು ಸಾಧ್ಯವಾಗಲಿದೆ. “My Contacts” ಆಯ್ಕೆಯನ್ನು ಸಹ ಆಯ್ಕೆ ಮಾಡಬಹುದು. ಇದರಿಂದ ನಂತರ ನಿಮ್ಮ ಆನ್‌ಲೈನ್ ಸ್ಟೇಟಸ್ ನಿಮ್ಮ ಕಾಂಟ್ಯಾಕ್ಟ್‌ಗಳಿಗೆ ಮಾತ್ರ ಕಾಣಿಸುತ್ತದೆ.
ಇನ್ನು ಮತ್ತೊಂದು ಅಚ್ಚರಿಯ ಅಪ್ಡೇಟ್ ತರಲು ವಾಟ್ಸ್ಆ್ಯಪ್ ಕೆಲಸ ಮಾಡುತ್ತಿದೆ. ಅದುವೆ ಎಡಿಟ್ ಆಯ್ಕೆ. ಅಂದರೆ ನೀವು ವಾಟ್ಸ್ಆ್ಯಪ್ನಲ್ಲಿ ಕಳುಹಿಸಿದ ಮೆಸೇಜ್ ಅನ್ನು ಎಡಿಟ್ ಮಾಡಬಹುದಾಗಿದೆ. ಈ ಬಗ್ಗೆ ವಾಬೇಟಾಇನ್ಫೊ ವರದಿ ಮಾಡಿದ್ದು, ವಾಟ್ಸ್ಆ್ಯಪ್ ಸದ್ಯದಲ್ಲೇ ಎಡಿಟ್ ಮೆಸೇಜ್ ಆಯ್ಕೆಯನ್ನು ನೀಡಲಿದೆ ಎಂದು ಹೇಳಿದೆ.
ಈ ಆಯ್ಕೆಯನ್ನು ಬಳಸಿಕೊಂಡು ಬಳಕೆದಾರರು ಇತರರಿಗೆ ಮೆಸೇಜ್ ಮಾಡುವ ಸಂದರ್ಭ ಅಕ್ಷರ ತಪ್ಪಿ ಸೆಂಡ್ ಮಾಡಿದ್ದರೆ ಪುನಃ ಅದನ್ನು ಸರಿಗೊಳಿಸಬಹುದು. ಸದ್ಯಕ್ಕೆ ಈ ಇದು ಆಂಡ್ರಾಯ್ಡ್ ಬೇಟಾ ವರ್ಷನ್ನಲ್ಲಿ ಲಭ್ಯವಿದೆ. ಈಗಾಗಲೇ ಇರುವ ಡಿಲೀಟ್ ಫಾರ್ ಎವರಿವನ್ ಆಯ್ಕೆ ಸಂಪೂರ್ಣ ಮೆಸೇಜ್ ಅನ್ನು ಡಿಲೀಟ್ ಮಾಡುತ್ತದೆ. ಆದರೆ, ಈ ಎಡಿಟ್ ಆಯ್ಕೆಯಲ್ಲಿ ಮೆಸೇಜ್ ಅನ್ನು ಡಿಲೀಟ್ ಮಾಡುವ ಬದಲು ಅಕ್ಷರವನ್ನು ಸರಿಪಡಿಸುವುದಾಗಿದೆ.