Moto E32: 50MP ಕ್ಯಾಮೆರಾ, 5,000mAh ಬ್ಯಾಟರಿ: ಮೋಟೋ E32 ಸ್ಮಾರ್ಟ್‌ಫೋನ್ ಬಿಡುಗಡೆ: ಇದರ ಬೆಲೆ ಕೇವಲ 10,499 ರೂ.
ಮೋಟೋರೊಲಾ ಇದೀಗ ತನ್ನ ಮೊಟೊ E ಸರಣಿಯಲ್ಲಿ ಮೋಟೋ ಇ32 (Moto E32) ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಿದೆ. ಇದೊಂದು ಬಜೆಟ್ ಬೆಲೆಯ ಅತ್ಯತ್ತುಮ ಫೋನ್.
ಮೋಟೋರೊಲಾ (Motorola) ಕಂಪನಿಯ ಫೋನ್ಗಳಿಗೆ ಭಾರತದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಬಜೆಟ್ ಬೆಲೆಯಿಂದ ಹಿಡಿದು ಹೈ ರೇಂಜ್ ಮಾದರಿಯ ಫೋನ್ಗಳನ್ನು ತಯಾರು ಮಾಡುತ್ತಿರುವ ಮೋಟೋ ಒಂದರ ಹಿಂದೆ ಒಂದರಂತೆ ಸ್ಮಾರ್ಟ್ಫೋನ್ಗಳನ್ನು (Smartphone) ಬಿಡುಗಡೆ ಮಾಡುತ್ತಿದೆ. ಇತ್ತೀಚೆಗಷ್ಟೆ ಬರೋಬ್ಬರಿ 200 ಮೆಗಾಫಿಕ್ಸೆಲ್ ಕ್ಯಾಮೆರಾದ ಮೊಟ್ಟ ಮೊದಲ ಫೋನನ್ನು ಅನಾವರಣ ಮಾಡಿ ಭರ್ಜರಿ ಸದ್ದು ಮಾಡಿದ್ದ ಮೋಟೋರೊಲಾ ಇದೀಗ ತನ್ನ ಮೊಟೊ E ಸರಣಿಯಲ್ಲಿ ಮೋಟೋ ಇ32 (Moto E32) ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಿದೆ. ಇದೊಂದು ಬಜೆಟ್ ಬೆಲೆಯ ಅತ್ಯತ್ತುಮ ಫೋನ್ ಆಗಿದ್ದು, ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್ಅಪ್, 5,000mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ. ಇದರ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ವಿವರ ಇಲ್ಲಿದೆ ನೋಡಿ.
- ಮೋಟೋ E32 ಸ್ಮಾರ್ಟ್‌ಫೋನ್ ಭಾರತದಲ್ಲಿ ಸದ್ಯಕ್ಕೆ ಕೇವಲ ಒಂದು ಆಯ್ಕೆಯಲ್ಲಷ್ಟೆ ಬಿಡುಗಡೆ ಆಗಿದೆ. ಇದರ 4GB RAM ಮತ್ತು 64GB ಇಂಟರ್ ಸ್ಟೋರೇಜ್ ಆಯ್ಕೆಯ ಬೆಲೆ ಕೇವಲ 10,499 ರೂ. ಈ ಫೋನ್ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ಮೂಲಕ ಖರೀದಿಗೆ ಸಿಗುತ್ತಿದೆ.
- ಈ ಸ್ಮಾರ್ಟ್‌ಫೋನ್ 720 x 1,600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.5-ಇಂಚಿನ ಹೆಚ್‌ಡಿ ಪ್ಲಸ್ IPS LCD ಡಿಸ್‌ಪ್ಲೇ ಹೊಂದಿದೆ. ಇದು 90Hz ರಿಫ್ರೆಶ್ ರೇಟ್ನಿಂದ ಕೂಡಿದೆ.
- ಮೀಡಿಯಾ ಟೆಕ್ ಹೆಲಿಯೊ G37 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್ 12 OS ಜೊತೆಗೆ ಮೊಟೊರೊಲಾ ಕಂಪೆನಿಯ My UXನಲ್ಲಿ ರನ್ ಆಗಲಿದೆ. ಎರಡು ವರ್ಷಗಳ ಸೆಕ್ಯುರಿಟಿ ಅಪ್ಡೇಟ್‌ಗಳನ್ನು ನೀಡಲಾಗಿದೆ.
- ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಮೋಟೋ E32 ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಒಳಗೊಂಡಿದೆ.
- ಇವುಗಳ ಜೊತೆಗೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಈ ಕ್ಯಾಮೆರಾಗಳ ಮೂಲಕ 30fps ಫುಲ್ HD ವಿಡಿಯೋವನ್ನು ರೆಕಾರ್ಡಿಂಗ್ ಮಾಡಬಹುದು.
- 5,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು, ಇದು 10W ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಬೆಂಬಲ ಪಡೆದುಕೊಂಡಿಲ್ಲ.
- 4G VoLTE, Wi-Fi 802.11ac, ಬ್ಲೂಟೂತ್ 5.0, GPS, ಮೆಮೊರಿ ಕಾರ್ಡ್ ಸ್ಲಾಟ್, USB-C ಪೋರ್ಟ್ ಸೇರಿಸಲಾಗಿದೆ.
ಇದನ್ನೂ ಓದಿ