WhatsApp Tricks: ವಾಟ್ಸ್​ಆ್ಯಪ್​ನಲ್ಲಿ ಪರ್ಸನಲ್ ಚಾಟ್ ಡಿಲೀಟ್ ಮಾಡದೆ ಹೈಡ್ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್

Tech Tips: ವಾಟ್ಸ್​ಆ್ಯಪ್​ನಲ್ಲಿ ವೈಯಕ್ತಿಕವಾದ ವಿಷಯಗಳನ್ನು ಯಾರಿಗೂ ಕಾಣದಂರೆ ಹೈಡ್ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಹಾಗಂತ ಇದಕ್ಕಾಗಿ ಥರ್ಡ್ ಪಾರ್ಟಿ ಆ್ಯಪ್​ಗಳ ಅಗತ್ಯವಿಲ್ಲ. ನಿಮ್ಮ ವಾಟ್ಸ್​​ಆಪ್​​ನಲ್ಲಿಯೇ ಚಾಟ್ ಮರೆ ಮಾಡುವ ಫೀಚರ್ ಇದೆ. ಇಲ್ಲಿದೆ ನೋಡಿ ಟ್ರಿಕ್ಸ್.

WhatsApp Tricks: ವಾಟ್ಸ್​ಆ್ಯಪ್​ನಲ್ಲಿ ಪರ್ಸನಲ್ ಚಾಟ್ ಡಿಲೀಟ್ ಮಾಡದೆ ಹೈಡ್ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್
WhatsApp
Follow us
| Updated By: Vinay Bhat

Updated on: Oct 15, 2022 | 2:22 PM

ಇಂದು ವಿಶ್ವದ ಮೂಲೆಮೂಲೆಯಲ್ಲಿ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ ಅನ್ನು ಬಳಸುತ್ತಿದ್ದು ಕೋಟಿ ಗಟ್ಟಲೆ ಬಳಕೆದಾರರನ್ನು ಹೊಂದಿದೆ. ಇದಕ್ಕೆ ಮುಖ್ಯ ಕಾರಣ ಜನರಿಗೆ ಅನುಕೂಲ ಆಗುವಂತಹ ಫೀಚರ್​ಗಳನ್ನು ಮೆಟಾ (Meta) ಒಡೆತನದ ಈ ಪ್ರಸಿದ್ಧ ಆ್ಯಪ್ ನೀಡುತ್ತಿರುವುದು. ಇದೀಗ ವಾಟ್ಸ್​ಆ್ಯಪ್​ನಲ್ಲಿ ಹಣವನ್ನು ಕೂಡ ಕಳುಹಿಸಬಹುದಾಗಿದೆ. ಅದರಂತೆ ಬಳಕೆದಾರರ ಖಾಸಗಿ ಮಾಹಿತಿ ಸುರಕ್ಷತೆಗೂ ಕೆಲವೊಂದು ಆಯ್ಕೆಗಳನ್ನು ನೀಡಿದೆ. ಆದರೆ, ಕೆಲವೊಂದು ತೀರಾ ವೈಯಕ್ತಿಕವಾದ ವಿಷಯಗಳನ್ನು ಯಾರಿಗೂ ಕಾಣದಂರೆ ಹೈಡ್ (Hide) ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಈ ಆಯ್ಕೆಯನ್ನ ವಾಟ್ಸ್​ಆ್ಯಪ್ (WhatsApp) ತನ್ನ ಬಳಕೆದಾರರಿಗೆ ನೇರವಾಗಿ ನೀಡಲ್ಲ. ಹಾಗಂತ ಇದಕ್ಕಾಗಿ ಥರ್ಡ್ ಪಾರ್ಟಿ ಆ್ಯಪ್​ಗಳ ಅಗತ್ಯವಿಲ್ಲ. ನಿಮ್ಮ ವಾಟ್ಸ್​​ಆಪ್​​ನಲ್ಲಿಯೇ ಚಾಟ್ ಮರೆ ಮಾಡುವ ಫೀಚರ್ ಇದೆ. ಇಲ್ಲಿದೆ ನೋಡಿ ಟ್ರಿಕ್ಸ್.

ವಾಟ್ಸ್​ಆ್ಯಪ್​ನಲ್ಲಿ ಆರ್ಕೈವ್ಡ್ ಎಂಬ ಆಯ್ಕೆ ಇದೆ. ಈ ರೀತಿ ಆರ್ಕೈವ್ ಮಾಡಿದ ಚಾಟ್​​ಗಳು ಡಿಲೀಟ್ ಆಗುವುದಿಲ್ಲ. ಅವುಗಳು ನಿಮ್ಮ ಫೋನ್​ನಲ್ಲಿಯೇ ಇರುತ್ತವೆ. ಆದರೆ ಚಾಟ್ ಲಿಸ್ಟ್​​ನಲ್ಲಿ ಇವು ಕಾಣಿಸುವುದಿಲ್ಲ. ಈ ಆಯ್ಕೆಯ ನೆರವಿನಿಂದ ಬಳಕೆದಾರರು ಅನಗತ್ಯ ಚಾಟ್‌ಗಳನ್ನು ಹಾಗೂ ಸಂಭಾಷಣೆಗಳನ್ನು ಶಾಶ್ವತವಾಗಿ ಕೂಡ ಮರೆಮಾಡಬಹುದು.

ಆರ್ಕೈವ್ಡ್ ಫೀಚರ್ ಮುಖಾಂತರ ನೀವು ನಿಮ್ಮ ಚಾಟ್ ಸ್ಕ್ರೀನ್ ಅನ್ನು ಹೈಡ್ ಮಾಡಬಹುದು ಮತ್ತು ಕೆಲವು ಸಮಯದ ನಂತರ ನಿಮಗೆ ಅಗತ್ಯವಿದ್ದಾಗ ಆ ಚಾಟಿನ ಮಾತುಕತೆಗಳನ್ನು ಅನ್​ಹೈಡ್ ಮಾಡಿ ನೋಡುವುದಕ್ಕೂ ಅವಕಾಶವಿರುತ್ತದೆ. ಕೇವಲ ನಿಮ್ಮ ವೈಯಕ್ತಿಕ ಚಾಟ್ ಮಾತ್ರವಲ್ಲದೆ ಗ್ರೂಪ್ ಚಾಟ್ ಎರಡನ್ನೂ ಕೂಡ ಆರ್ಕೈವ್ ಮಾಡುವುದಕ್ಕೆ ಈ ಫೀಚರ್ ನಲ್ಲಿ ಅವಕಾಶವಿರುತ್ತದೆ.

ಇದನ್ನೂ ಓದಿ
Image
Fake WhatsApp: ಬಳಕೆದಾರರ ಡೇಟಾ ಕದಿಯುವ ಫೇಕ್ ವಾಟ್ಸ್​ಆ್ಯಪ್ ಪತ್ತೆ: ಎಚ್ಚರದಿಂದ ಇರಲು ಸೂಚನೆ
Image
Tech Tips: ನಿಮ್ಮ ಸ್ಮಾರ್ಟ್​ಫೋನ್ ಹ್ಯಾಕ್ ಆಗಬಹುದು: ಎಚ್ಚರ ವಹಿಸಿ
Image
Redmi A1+: ಕೇವಲ 6,999 ರೂ.: ಶವೋಮಿಯಿಂದ ಊಹಿಸಲಾಗದ ಬೆಲೆಗೆ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ: ಫೀಚರ್ಸ್​ ಏನಿದೆ ನೋಡಿ
Image
BSNL: ಎರಡು ಹೊಸ ಧಮಾಕ ಪ್ಲಾನ್ ಪರಿಚಯಿಸಿದ ಬಿಎಸ್​ಎನ್​ಎಲ್: ದಂಗಾದ ಜಿಯೋ-ಏರ್ಟೆಲ್

ವಾಟ್ಸ್​ಆ್ಯಪ್​​ನಲ್ಲಿ ಶಾಶ್ವತವಾಗಿ ಚಾಟ್‌ ಹೈಡ್‌ ಮಾಡುವುದು ಹೇಗೆ?:

  • ವಾಟ್ಸ್​ಆ್ಯಪ್​​ ತೆರೆಯಿರಿ, ನೀವು ಆರ್ಕೈವ್ ಮಾಡಲು ಬಯಸುವ ಚಾಟ್ ಅನ್ನು ಆಯ್ಕೆಮಾಡಿ.
  • ಮೇಲಿನ ಮೂರು ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. ಪಿನ್ ಮಾಡಿ, ಮ್ಯೂಟ್ ಮಾಡಿ ಮತ್ತು ಆರ್ಕೈವ್ ಮಾಡಿ.
  • ಆರ್ಕೈವ್ ಬಟನ್ ಮೇಲೆ ಕ್ಲಿಕ್ ಮಾಡಿ.
  • ಈ ಆರ್ಕೈವ್ ವಿಭಾಗವು ನಿಮ್ಮ ಚಾಟ್ ಫೀಡ್‌ನ ಮೇಲ್ಭಾಗದಲ್ಲಿ ಕಾಣಿಸುತ್ತದೆ. ನೀವು ವಿಭಾಗಕ್ಕೆ ಹೋಗಬಹುದು ಮತ್ತು ನಿಮ್ಮ ಖಾಸಗಿ ಚಾಟ್‌ಗಳನ್ನು ಯಾವುದೇ ಸಮಯದಲ್ಲಿ ವೀಕ್ಷಿಸಬಹುದು.
  • ಅನ್ ಆರ್ಕೈವ್ ಆಯ್ಕೆಯ ಮೇಲೆ ಕ್ಲಿಕ್ ಮಾಡುವ ಮೂಲಕ ಬಳಕೆದಾರರು ಆ ಚಾಟ್ ಅನ್ನು ಅನ್ ಆರ್ಕೈವ್ ಮಾಡಬಹುದು.
  • ನೀವು ಎಲ್ಲಾ ಚಾಟ್‌ಗಳನ್ನು ಆರ್ಕೈವ್ ಮಾಡಲು ಬಯಸಿದರೆ, ಚಾಟ್ಸ್ ಟ್ಯಾಬ್‌ಗೆ ಹೋಗಿ.
  • ಇನ್ನಷ್ಟು ಮೇಲೆ ಟ್ಯಾಪ್ ಮಾಡಿ ಮತ್ತು ನಂತರ ಸೆಟ್ಟಿಂಗ್‌ಗಳಿಗೆ ಹೋಗಿ. ಅಲ್ಲಿ ಚಾಟ್ಸ್ ಮೇಲೆ ಟ್ಯಾಪ್ ಮಾಡಿ.
  • ಈಗ ಚಾಟ್ ಹಿಸ್ಟರಿಗೆ ಹೋಗಿ ಮತ್ತು ಎಲ್ಲಾ ಚಾಟ್‌ಗಳನ್ನು ಆರ್ಕೈವ್ ಮಾಡಿ.

ಗಮನಿಸಿ: ಆರ್ಕೈವ್ ಮಾಡಿದ ವೈಯಕ್ತಿಕ ಅಥವಾ ಗುಂಪು ಚಾಟ್‌ಗಳು ಆ ವ್ಯಕ್ತಿ ಅಥವಾ ಗುಂಪು ಚಾಟ್‌ನಿಂದ ಹೊಸ ಸಂದೇಶವನ್ನು ಸ್ವೀಕರಿಸಿದಾಗ ಆರ್ಕೈವ್ ಆಗಿರುತ್ತವೆ. ಆರ್ಕೈವ್ ಮಾಡಿದ ಚಾಟ್‌ಗಳಲ್ಲಿ ಮೆನ್ಶನ್ ಮಾಡಿದರೆ ಅಥವಾ ಉತ್ತರಿಸಿದರೆ ಮಾತ್ರ ನೋಟಿಫಿಕೇಶನ್ ಬರುತ್ತದೆ. ಇಲ್ಲದಿದ್ದರೆ ಬರುವುದಿಲ್ಲ.

ತಾತ್ಕಾಲಿಕವಾಗಿ ಚಾಟ್ ಮರೆ ಮಾಡುವುದು ಹೇಗೆ?:

ನಿಮ್ಮ ವಾಟ್ಸ್​ಆ್ಯಪ್ ತೆರೆಯಿರಿ. ಯಾವ ವ್ಯಕ್ತಿಯ ಚಾಟ್​ನ್ನು ನೀವು ಮರೆ ಮಾಡಬೇಕೆಂದಿದ್ದೀರೋ ಆ ಚಾಟ್ ಮೇಲೆ ಒತ್ತಿ ಹಿಡಿಯಿರಿ. ಚಾಟ್ ಸೆಲೆಕ್ಟ್ ಆದ ಕೂಡಲೇ ಮೇಲ್ಭಾಗದಲ್ಲಿ ಆರ್ಕೈವ್ ಬಾಕ್ಸ್ (ಚಿಕ್ಕ ಬಾಣದ ಗುರುತು ಕೆಳಮುಖ ಮಾಡಿರುವ ಪುಟ್ಟ ಬಾಕ್ಸ್ ) ಕಾಣಿಸುತ್ತದೆ. ಅದನ್ನು ಕ್ಲಿಕ್ಕಿಸಿ. ಈಗ ನಿಮ್ಮ ಚಾಟ್ ಲಿಸ್ಟ್ ನಿಂದ ಆ ವ್ಯಕ್ತಿಯ ಚಾಟ್ ಮರೆಯಾಗುತ್ತದೆ. ವೈಯಕ್ತಿಕ ಖಾತೆ ಮಾತ್ರ ಅಲ್ಲ ಗ್ರೂಪ್ ಚಾಟ್ ಕೂಡಾ ಇದೇ ರೀತಿ ಯಾರಿಗೂ ಕಾಣದಂತೆ ಹೈಡ್ ಮಾಡಬಹುದಾಗಿದೆ.

ತಾಜಾ ಸುದ್ದಿ
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಸಾಕ್ಷಿ: ವಿಡಿಯೋ ನೋಡಿ
ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಸಾಕ್ಷಿ: ವಿಡಿಯೋ ನೋಡಿ
ಎದುರಗಡೆ ಆನೆ​, ಪಕ್ಕದಲ್ಲಿ ಎರಡೆರಡು ಹುಲಿ: ಸಫಾರಿಗರ ಪಾಡು ಏನಾಯ್ತು ನೋಡಿ
ಎದುರಗಡೆ ಆನೆ​, ಪಕ್ಕದಲ್ಲಿ ಎರಡೆರಡು ಹುಲಿ: ಸಫಾರಿಗರ ಪಾಡು ಏನಾಯ್ತು ನೋಡಿ
ವಾರ ಭವಿಷ್ಯ, ಜುಲೈ 08ರಿಂದ 14ರ ತನಕದ ರಾಶಿ ಭವಿಷ್ಯ ಹೀಗಿದೆ
ವಾರ ಭವಿಷ್ಯ, ಜುಲೈ 08ರಿಂದ 14ರ ತನಕದ ರಾಶಿ ಭವಿಷ್ಯ ಹೀಗಿದೆ
ಬಂಧುಗಳ ಮನೆಗೆ ಬರಿಗೈಯಲ್ಲಿ ಏಕೆ ಹೋಗಬಾರದು ಈ ವಿಡಿಯೋ ನೋಡಿ
ಬಂಧುಗಳ ಮನೆಗೆ ಬರಿಗೈಯಲ್ಲಿ ಏಕೆ ಹೋಗಬಾರದು ಈ ವಿಡಿಯೋ ನೋಡಿ
ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿದುಕೊಳ್ಳಲು ಈ ವಿಡಿಯೋ ನೋಡಿ
ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿದುಕೊಳ್ಳಲು ಈ ವಿಡಿಯೋ ನೋಡಿ
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ