- Kannada News Photo gallery fake WhatsApp look-alike app named YoWhatsApp has popped up on the internet
Fake WhatsApp: ಬಳಕೆದಾರರ ಡೇಟಾ ಕದಿಯುವ ಫೇಕ್ ವಾಟ್ಸ್ಆ್ಯಪ್ ಪತ್ತೆ: ಎಚ್ಚರದಿಂದ ಇರಲು ಸೂಚನೆ
ನಕಲಿ ವಾಟ್ಸ್ಆ್ಯಪ್ ಒಂದು ಹುಟ್ಟುಕೊಂಡಿದ್ದು ಸೈಬರ್ ಸೆಕ್ಯುರಿಟಿ ಕ್ಯಾಸ್ಪರ್‌ಸ್ಕಿ ಗುರುತಿಸಿದೆ. ಇದರ ಹೆಸರು ಯೋವಾಟ್ಸ್ಆ್ಯಪ್ (YoWhatsApp) ಎಂದಾಗಿದ್ದು 2.22.11.75 ಆವೃತ್ತಿಯಲ್ಲಿದೆ. ಇದರಲ್ಲಿ Trojan.AndroidOS.Triada.eq ಎಂದು ಹೆಸರಿಸಲಾದ ದುರುದ್ದೇಶಪೂರಿತ ಮಾಡ್ಯೂಲ್ ಇರವುದು ಕಂಡುಬಂದಿದೆ.
Updated on:Oct 15, 2022 | 11:44 AM

ಮೆಟಾ ಮಾಲೀಕತ್ವದ ವಿಶ್ವದ ಜನಪ್ರಿಯ ಅಪ್ಲಿಕೇಶನ್ ವಾಟ್ಸ್ಆ್ಯಪ್ನ (WhatsApp) ನಕಲಿ ಆ್ಯಪ್ಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಅನೇಕ ಬಾರಿ ಎಚ್ಚರಿಕೆ ಸಂದೇಶ ಬಂದರೂ ಜನ ನಿರ್ಲಕ್ಷಿಸುತ್ತಿದ್ದಾರೆ. ಈಗಾಗಲೇ ಹಲವು ರೀತಿಯ ಫೇಕ್ ವಾಟ್ಸ್ಆ್ಯಪ್ ಅಪ್ಲಿಕೇಶನ್ ಇದ್ದು, ಇಂತಹ ಆ್ಯಪ್ಗಳ ಬಳಕೆದಾರರನ್ನು ಹ್ಯಾಕರ್ಗಳು ಗುರಿಯಾಗಿಸುತ್ತಿದ್ದಾರೆ.

ಇದೀಗ ಅಂತಹದೆ ನಕಲಿ ವಾಟ್ಸ್ಆ್ಯಪ್ ಒಂದು ಹುಟ್ಟುಕೊಂಡಿದ್ದು ಸೈಬರ್ ಸೆಕ್ಯುರಿಟಿ ಕ್ಯಾಸ್ಪರ್‌ಸ್ಕಿ ಗುರುತಿಸಿದೆ. ಇದರ ಹೆಸರು ಯೋವಾಟ್ಸ್ಆ್ಯಪ್ (YoWhatsApp) ಎಂದಾಗಿದ್ದು 2.22.11.75 ಆವೃತ್ತಿಯಲ್ಲಿದೆ. ಇದರಲ್ಲಿ Trojan.AndroidOS.Triada.eq ಎಂದು ಹೆಸರಿಸಲಾದ ದುರುದ್ದೇಶಪೂರಿತ ಮಾಡ್ಯೂಲ್ ಇರವುದು ಕಂಡುಬಂದಿದೆ.

ಬಳಕೆದಾರರು ನಕಲಿ ಅಥವಾ ಮೋಡಿಫೈ ವಾಟ್ಸ್ಆ್ಯಪ್ಗಳನ್ನು ಡೌನ್‌ಲೋಡ್ ಮಾಡುವುದು ಒಳ್ಳೆಯದಲ್ಲ. ಈ ಆ್ಯಪ್ಗಳು ನಿಮ್ಮ ಗೌಪ್ಯತೆ ಮತ್ತು ಭದ್ರತೆಗೆ ಮಾರಕ ಎಂಬುದರ ಬಗ್ಗೆ ಎಚ್ಚರವಿರಲಿ. ವಂಚಕರು ಇಂತಹ ಆ್ಯಪ್ಗಳ ಮೂಲಕ ನಿಮ್ಮ ಡೇಟಾ ಮೇಲೆ ಕಣ್ಣಿಟ್ಟಿರುತ್ತಾರೆ ಎಂದು ಎಚ್ಚರಿಸಿದ್ದಾರೆ.

ಯೋವಾಟ್ಸ್ಆ್ಯಪ್ನಲ್ಲಿ ಮಾಲ್ವೇರ್ ಕಂಡು ಬಂದಿದ್ದು, ಇದರ ಬಳಕೆದಾರರ ಡೇಟಾ ಮೇಲೆ ಹ್ಯಾಕರುಗಳು ಕಣ್ಣಿಟ್ಟಿರುವುದು ಕೂಡ ಖಚಿತವಾಗಿದೆ. ಇದರಲ್ಲಿ ವಾಟ್ಸ್ಆ್ಯಪ್ನಲ್ಲಿರುವ ಅನೇಕ ಕೀಗಳು ಇವೆ ಎಂದು ಹೇಳಲಾಗಿದೆ. ಇದರಿಂದ ಹ್ಯಾಕರ್ ಗಳು ಬಳಕೆದಾರರ ಖಾಸಗಿ ಚಾಟ್ ಅನ್ನು ನೋಡಬಹುದು ಎಂದು ಎಚ್ಚರಿಕೆ ನೀಡಲಾಗಿದೆ.

ಇತ್ತೀಚೆಗಷ್ಟೆ ಜಿಬಿ ವಾಟ್ಸ್ಆ್ಯಪ್ (GB WhatsApp) ಎಂಬ ವಾಟ್ಸ್ಆ್ಯಪ್ ಕ್ಲೋನ್ ಆ್ಯಪ್ ಭಾರತದಲ್ಲಿನ ಬಳಕೆದಾರರ ಮೇಲೆ ಬೇಹುಗಾರಿಕೆ ನಡೆಸುತ್ತಿದೆ ಎಂದು ಇಎಸ್ಇಟಿ ಎಚ್ಚರಿಕೆ ನೀಡಿದೆ.

ಕ್ಲೋನ್ ವಾಟ್ಸ್ಆ್ಯಪ್ ಪ್ರಕರಣಗಳು ಹೆಚ್ಚಾಗಿ ಭಾರತ, ಈಜಿಪ್ಟ್, ಬ್ರೆಜಿಲ್ ಮತ್ತು ಪೆರುಗಳಲ್ಲಿ ಕಂಡುಬರುತ್ತವೆ. ಇಂತಹ ನಕಲಿ ವಾಟ್ಸ್ಆ್ಯಪ್ ಆ್ಯಪ್ಗಳಿಗೆ ಬಲಿಯಾಗದಂತೆ ಸ್ಮಾರ್ಟ್ ಫೋನ್ ಬಳಕೆದಾರರು ಹಲವಾರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಗೂಗಲ್ ಪ್ಲೇ ಸ್ಟೋರ್‌ನಿಂದ ವಾಟ್ಸ್ಆ್ಯಪ್ ಅಪ್ಲಿಕೇಶನ್ ಮತ್ತು ನವೀಕರಣಗಳನ್ನು ಡೌನ್‌ಲೋಡ್ ಮಾಡಲು ಮತ್ತು ಅಪರಿಚಿತ ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳಿಗೆ ಹೋಗದಂತೆ ಸೂಚಿಸಲಾಗಿದೆ.
Published On - 11:44 am, Sat, 15 October 22



















