ಭಾರತದಲ್ಲಿ ಬಜೆಟ್ ಬೆಲೆಯ ಸ್ಮಾರ್ಟ್ಫೋನ್ಗಳು ಹೆಚ್ಚು ಯಶಸ್ಸು ಗಳಿಸುತ್ತದೆ. ಕೈಗೆಟುಕುವ ಬೆಲೆ ಮತ್ತು ಅಗತ್ಯವಾದ ಅಧ್ಬುತ ಫೀಚರ್ ಗಳು ಇದಕ್ಕೆ ಪ್ರಮುಖ ಕಾರಣ. ಚೀನಾದ ಸ್ಮಾರ್ಟ್ ಫೋನ್ ಬ್ರ್ಯಾಂಡ್ ಗಳಾಗಿರುವ ಶವೋಮಿ, ರಿಯಲ್ ಮಿ ಒಂದುಕಡೆಯಾದರೆ ಸ್ಯಾಮ್ಸಂಗ್ ಕೂಡ ಈ ನಿಟ್ಟಿನಲ್ಲಿ ಸೈ ಎನಿಸಿಕೊಳ್ಳುತ್ತಿದೆ.
ಹಾಗಾದ್ರೆ ಆಗಸ್ಟ್ ತಿಂಗಳಲ್ಲಿ ನೀವು ಹೊಸ ಸ್ಮಾರ್ಟ್ಫೋನ್ ಕೊಂಡುಕೊಳ್ಳುವ ಪ್ಲಾನ್ನಲ್ಲಿದ್ದರೆ, ಅದು ಬಜೆಟ್ ಬೆಲೆಯದ್ದಾಗಿದ್ದಲ್ಲಿ ಇಲ್ಲಿವೆ ಆ ಅತ್ಯುತ್ತಮ 5 ಸ್ಮಾರ್ಟ್ಫೋನ್ಗಳು…
ರೆಡ್ಮಿ ನೋಟ್ 10 ಪ್ರೊ ಮ್ಯಾಕ್ಸ್: ಈ ಫೋನಿನ ಬೆಲೆ 19,999 ರೂ. 6.67 ಇಂಚಿನ ಫುಲ್ ಹೆಚ್ಡಿ ಡಿಸ್ ಪ್ಲೇ ಹೊಂದಿದ್ದು, 108 ಮೆಗಾಫಿಕ್ಸೆಲ್ನ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅಳವಡಿಸಲಾಗಿದೆ. 5020mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ಜೊತೆಗೆ 33W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ. 16MP ಸೆಲ್ಫೀ ಕ್ಯಾಮೆರಾ ಇದೆ.
ರಿಯಲ್ ಮಿ X7 5G: ಇದರ ಬೆಲೆ 19,999 ರೂ. ಇದು ಅತಿ ಕಡಿಮೆ ಬೆಲೆಗೆ ಲಭ್ಯವಿರುವ ಕೆಲವೇ ಕೆಲವು 5G ಸ್ಮಾರ್ಟ್ಫೋನ್ಗಳಲ್ಲಿ ಇದಕೂಡ ಒಂದಾಗಿದೆ. ಈ ಸ್ಮಾರ್ಟ್ಫೋನ್ 6.4 ಇಂಚಿನ ಡಿಸ್ ಪ್ಲೇ ಹೊಂದಿದೆ. 4,310mAh ಸಾಮರ್ಥ್ಯದ ಬ್ಯಾಟರಿ ಜೊತೆಗೆ ಬರೋಬ್ಬರಿ 65W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ನೀಡಲಾಗಿದೆ. 64MP ಟ್ರಿಪಲ್ ಕ್ಯಾಮೆರಾ ಸೆಟಪ್, 16 ಮೆಗಾಫಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ.
ರೆಡ್ಮಿ ನೋಟ್ 10S: ಈ ಸ್ಮಾರ್ಟ್ಫೋನ್ನ ಬೆಲೆ 14,999 ರೂ. ಇದು 6.43 ಇಂಚಿನ ಡಿಸ್ ಪ್ಲೇ ಹೊಂದಿದ್ದು, 6GB RAM ಆಯ್ಕೆಯಿಂದ ಕೂಡಿದೆ. 64 ಮೆಗಾಫಿಕ್ಸೆಲ್ ಕ್ವಾಡ್ ಕ್ಯಾಮೆರಾ, 13 ಮೆಗಾಫಿಕ್ಸೆಲ್ನ ಸೆಲ್ಫೀ ಕ್ಯಾಮೆರಾ ನೀಡಲಾಗಿದೆ. ಕಡಿಮೆ ಬೆಲೆಗೆ ಆಕರ್ಷಕ ಫೋನ್ ಕೊಂಡುಕೊಳ್ಳುವವರ ಮೊದಲ ಆಯ್ಕೆ ರೆಡ್ಮಿ ನೋಟ್ 10 ಎಸ್ ಆಗಿದೆ.
ಪೋಕೋ X3 ಪ್ರೊ: ಇದರ ಬೆಲೆ 18,999 ರೂ. ಆಗಿದೆ. ಈ ಸ್ಮಾರ್ಟ್ಫೋನ್ 6.67 ಇಂಚಿನ ಫುಲ್ ಹೆಚ್ಡಿ ಡಿಸ್ ಪ್ಲೇ ಹೊಂದಿದೆ. 48 ಮೆಗಾಫಿಕ್ಸೆಲ್ನ ಮುಖ್ಯ ಕ್ಯಾಮೆರಾ ಇದರಲ್ಲಿದ್ದು, ಸೆಲ್ಫೀಗಾಗಿ 20 ಮೆಗಾಫಿಕ್ಸೆಲ್ ನೀಡಲಾಗಿದೆ. ಸ್ನಾಪ್ಡ್ರಾಗನ್ 860 ಪ್ರೊಸೆಸರ್ನಿಂದ ಆವೃತ್ತವಾಗಿದೆ. 5160mAh ಸಾಮರ್ಥ್ಯದ ಬ್ಯಾಟರಿ ಪವರ್ಗೆ 33W ಫಾಸ್ಟ್ ಚಾರ್ಜಿಂಗ್ ಸೌಲಭ್ಯವಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ M31s: ಈ ಸ್ಮಾರ್ಟ್ಫೋನ್ನ ಬೆಲೆ 16,999 ರೂ. ಆಗಿದೆ. 6.5 ಇಂಚಿನ ಡಿಸ್ ಪ್ಲೇ ಇದರಲ್ಲಿದ್ದು, ಬರೋಬ್ಬರಿ 6000mAh ಸಾಮರ್ಥ್ಯದ ಬ್ಯಾಟರಿ ಇದೆ. ಇದಕ್ಕೆ ಪೂರಕವಾಗಿ 25Wನ ಫಾಸ್ಟ್ ಚಾರ್ಜಿಂಗ್ ಬೆಂಬಲ ನೀಡಲಾಗಿದೆ. 64 ಮೆಗಾಫಿಕ್ಸೆಲ್ನ ಪ್ರೈಮರಿ ಕ್ಯಾಮೆರಾ ಕೂಡ ಅಳವಡಿಸಲಾಗಿದೆ.