Realme GT Neo 3T
ವೇಗವಾಗಿ ಓಡುತ್ತಿರುವ ಈ ಜಗತ್ತಿನಲ್ಲಿ ಈಗ ಅತ್ಯಂತ ವೇಗವಾಗಿ ಚಾರ್ಜ್ ಆಗುವ ಸ್ಮಾರ್ಟ್ಫೋನ್ಗಳಿಗೆ (Smatphone) ಬೇಡಿಕೆ ಹೆಚ್ಚಾಗುತ್ತಿದೆ. ನಿಧಾನವಾಗಿ ಚಾರ್ಜ್ ಆಗಿ ಬ್ಯಾಟರಿ ಫುಲ್ ಮಾಡಿಕೊಳ್ಳುವಷ್ಟು ತಾಳ್ಮೆ ಈಗಿನ ಹೆಚ್ಚಿನ ಜನರಿಗಿಲ್ಲ. ಇದನ್ನೇ ಗಮನದಲ್ಲಿಟ್ಟುಕೊಂಡು ಮೊಬೈಲ್ ಕಂಪನಿ ಕೂಡ ಫಾಸ್ಟ್ ಚಾರ್ಜಿಂಗ್ ಸ್ಮಾರ್ಟ್ಫೋನ್ನತ್ತ ಗಮನ ಹರಿಸುತ್ತಿದೆ. ಇತ್ತೀಚೆಗಷ್ಟೆ ಶವೋಮಿ (Xiaomi) ಕಂಪನಿ ತನ್ನ 120W ಫಾಸ್ಟ್ ಚಾರ್ಜಿಂಗ್ ಫೋನನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಶವೋಮಿಗೆ ಟಕ್ಕರ್ ಕೊಡಲು ರಿಯಲ್ ಮಿ ಕಂಪನಿ ಭಾರತದಲ್ಲಿ ಇದೇ ಮೊದಲ ಬಾರಿಗೆ 150W ಫಾಸ್ಟ್ ಚಾರ್ಜರ್ನ ರಿಯಲ್ ಮಿ ಜಿಟಿ ನಿಯೋ 3 (Realme GT Neo 3) ಫೋನ್ ಅನ್ನು ಬಿಡುಗಡೆ ಮಾಡಿತ್ತು. ಕಳೆದ ವಾರವಷ್ಟೆ ಅನಾವರಣಗೊಂಡ ಈ ಸ್ಮಾರ್ಟ್‌ಫೋನ್ ಇದೀಗ ಖರೀದಿಗೆ ಸಿಗುತ್ತಿದೆ. ಹಾಗಾದ್ರೆ ಈ ಫೋನ್ ಹೇಗಿದೆ?, ಖರೀದಿಗೆ ಸೂಕ್ತವೇ?, ಬೆಲೆ ಎಷ್ಟು? ಎಂಬುದನ್ನು ನೋಡೋಣ.
- ರಿಯಲ್ ಮಿ GT ನಿಯೋ 3 ಭಾರತದಲ್ಲಿ ಒಟ್ಟು ಮೂರು ಸ್ಟೋರೆಜ್ ಆಯ್ಕೆಯಲ್ಲಿ ಬಿಡುಗಡೆ ಆಗಿತ್ತು. ಇದರ 8GB RAM + 128GB ಸ್ಟೋರೇಜ್ ಮಾದರಿಗೆ 36,999 ರೂ., 8GB + 256GB ರೂಪಾಂತರದ ಬೆಲೆ 38,999 ರೂ. ಮತ್ತು 150W ರೂಪಾಂತರದ 12GB + 256GB ಮಾದರಿಗೆ 42,999 ರೂ. ನಿಗದಿ ಮಾಡಲಾಗಿದೆ.
- ಈ ಸ್ಮಾರ್ಟ್‌ಫೋನ್ ಆಸ್ಫಾಲ್ಟ್ ಬ್ಲ್ಯಾಕ್, ನೈಟ್ರೋ ಬ್ಲೂ ಮತ್ತು ಸ್ಪ್ರಿಂಟ್ ವೈಟ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್, ರಿಯಲ್ ಮಿಯ ಆನ್ಲೈನ್ ಮತ್ತು ಆಫ್ಲೈನ್ ತಾಣದಲ್ಲಿ ಖರೀದಿಗೆ ಸಿಗುತ್ತಿದೆ.
- ಈ ಸ್ಮಾರ್ಟ್‌ಫೋನ್ 1,080×2,412 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.7 ಇಂಚಿನ ಫುಲ್ HD+ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಮತ್ತು 1,000Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಒಳಗೊಂಡಿದೆ. ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 8100 5G SoC ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್ 12 ನಲ್ಲಿ ರಿಯಲ್‌ಮಿ UI 3.0 ಜೊತೆಗೆ ರನ್ ಆಗುತ್ತದೆ.
- ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX766 ಸೆನ್ಸಾರ್ ಹೊಂದಿದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಮತ್ತು ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ (EIS) ಸನ್ಸಾರ್ ಬೆಂಬಲಿಸಲಿದೆ.
- ಈ ಫೋನಿನಲ್ಲಿರುವ ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಜೊತೆಗೆ 119-ಡಿಗ್ರಿ ಫೀಲ್ಡ್ ಆಫ್ ವ್ಯೂ ಹೊಂದಿದೆ. ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ S5K3P9 ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.
- ರಿಯಲ್‌ಮಿ GT ನಿಯೋ 3 ಸ್ಮಾರ್ಟ್‌ಫೋನ್ ಎರಡು ಬ್ಯಾಟರಿ ಮತ್ತು ಚಾರ್ಜಿಂಗ್ ರೂಪಾಂತರಗಳಲ್ಲಿ ಲಭ್ಯವಿದೆ. ಇದರಲ್ಲಿ 4,500mAh ಸಾಮರ್ಥ್ಯದ ಬ್ಯಾಟರಿ 150W ಅಲ್ಟ್ರಾಡಾರ್ಟ್ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. ಹಾಗೆಯೇ 5,000mAh ಸಾಮರ್ಥ್ಯದ ಬ್ಯಾಟರಿಯ 80W ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ.
- ಇದರಲ್ಲಿರುವ 150W ಫಾಸ್ಟ್ ಚಾರ್ಜರ್ನಲ್ಲಿ ಶೇ. 50 ರಷ್ಟು ಚಾರ್ಜ್ ಆಗಲು ಕೇವಲ ಐದು ನಿಮಿಷ ಸಾಕೆಂದು ಕಂಪನಿ ಹೇಳಿದೆ. ಹಾಗೆಯೆ 80W ಚಾರ್ಜರ್ನಲ್ಲಿ ಶೇ. 100 ರಷ್ಟು ಚಾರ್ಜ್ 32 ನಿಮಿಷಗಳ ಒಳಗೆ ಆಗುತ್ತಂತೆ.
- ನೀವು ಹೆಚ್ಚಿನ ಸಮಯವನ್ನು ಮೊಬೈಲ್ನಲ್ಲೇ ಕಳೆಯುತ್ತೀರಿ ಎಂದಾದರೆ ರಿಯಲ್‌ಮಿ GT ನಿಯೋ 3 ಸ್ಮಾರ್ಟ್‌ಫೋನ್ ಸಹಕಾರಿ ಆಗಲಿದೆ. ಯಾಕೆಂದರೆ ಪವರ್ಫುಲ್ ಚಾರ್ಜರ್ನ ಈ ಫೋನ್ ಚಾರ್ಜ್ ಖಾಲಿಯಾದಂತೆ ಬೇಗನೆ ಬ್ಯಾಟರಿ ಫುಲ್ ಮಾಡುತ್ತದೆ. ಅಲ್ಲದೆ ಇದು ಗೇಮಿಂಗ್ಗೆ ಕೂಡ ಹೇಳಿಮಾಡಿಸಿದಂತಿದೆ. ಕ್ಯಾಮೆರಾ ಕೂಡ ಕಳಪೆ ಅನ್ನುವಹಾಗಿಲ್ಲ ಆದರೆ, ಕ್ಯಾಮೆರಾ ಪ್ರಿಯರಿಗೆ ಇದು ಇಷ್ಟ ಆಗುವುದು ಕಷ್ಟ.
ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ