ತಂತ್ರಜ್ಞಾನದಲ್ಲಿ ಚೀನಾದ ನಾಗಾಲೋಟ ನಡೆಸುತ್ತಿದೆ. ವಿನೂತನ ಎನಿಸುವ, ಪಾತ್ ಬ್ರೇಕಿಂಗ್ ಎನಿಸುವ ಆವಿಷ್ಕಾರಗಳನ್ನು ಚೀನೀಯರು ಮತ್ತು ಚೀನೀ ಸಂಸ್ಥೆಗಳು ಆಗಾಗ್ಗೆ ಮಾಡುತ್ತಿರುತ್ತಾರೆ. ಇದೀಗ ಚೀನಾದ ಸ್ಟಾರ್ಟಪ್ವೊಂದು ನ್ಯೂಕ್ಲಿಯಾರ್ ಬ್ಯಾಟರಿಯನ್ನು (nuclear battery) ಸೃಷ್ಟಿಸಿದೆ. ಅಣುಶಕ್ತಿಯಿಂದ ವಿದ್ಯುತ್ ಪಡೆಯುವುದು ದೊಡ್ಡ ವಿಷಯವಲ್ಲ. ಅಂಥ ಹಲವು ಅಣು ಸ್ಥಾವರಗಳಿವೆ. ಆದರೆ, ಚೀನಾದ ಬೀಟಾವೋಲ್ಟ್ ಸಂಸ್ಥೆ ಒಂದು ನಾಣ್ಯಗಾತ್ರದ ಪರಮಾಣು ಬ್ಯಾಟರಿಯನ್ನು ಅಭಿವೃದ್ಧಿಪಡಿಸಿದೆ. ಈ ಬ್ಯಾಟರಿ ಯಾವುದೇ ಚಾರ್ಜಿಂಗ್ ಅವಶ್ಯಕತೆ ಇಲ್ಲದೇ 50 ವರ್ಷ ಚಾಲೂ ಇರುತ್ತದೆ.
ಬೀಟಾವೋಲ್ಟ್ ಸಂಸ್ಥೆ ತನ್ನ ಅಣು ಬ್ಯಾಟರಿಯನ್ನು ಕಮರ್ಷಿಯಲ್ ಆಗಿ ತಯಾರಿಸಲು ಅಣಿಯಾಗಿದೆ. ಅದಕ್ಕೆ ಮುನ್ನ ಇದರ ಪರೀಕ್ಷೆಗಳನ್ನು ಪೂರ್ಣವಾಗಿ ನಡೆಸಲಾಗುತ್ತದೆ. ಒಂದು ವೇಳೆ ಪರೀಕ್ಷೆಗಳು ಯಶಸ್ವಿಯಾದಲ್ಲಿ ವಿಶ್ವ ಬ್ಯಾಟರಿ ಕ್ಷೇತ್ರದಲ್ಲಿ ಚೀನಾ ಏಕಸ್ವಾಮ್ಯ ಸಾಧಿಸುವ ಸಾಧ್ಯತೆ ಇದೆ.
ನಶಿಸುವ ಸಮಸ್ಥಾನಿ ಪರಮಾಣುಗಳಿಂದ ಬರುವ ಶಕ್ತಿಯನ್ನು ವಿದ್ಯುತ್ ಆಗಿ ಪರಿವರ್ತಿಸುತ್ತದೆ ಈ ಬ್ಯಾಟರಿ. ನಶಿಸುವ ಐಸೊಟೋಪ್ಗಳಿಂದ ಶಕ್ತಿಯನ್ನು ಬಳಕೆ ಮಾಡುವ ಸಂಗತಿಯನ್ನು 19ನೇ ಶತಮಾನದಲ್ಲೇ ಕಂಡುಕೊಳ್ಳಲಾಗಿತ್ತು. ಚೀನೀ ವಿಜ್ಞಾನಿಗಳು ಈ ಕಾನ್ಸೆಪ್ಟ್ ಆಧಾರದ ಮೇಲೆ ಐಸೊಟೋಪ್ ಶಕ್ತಿಯನ್ನು ವಿದ್ಯುತ್ ಆಗಿ ಪರಿವರ್ತಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದಾರೆ.
ಇದನ್ನೂ ಓದಿ: TCS: ಭವಿಷ್ಯದ ಅವಕಾಶಗಳಿಗೆ ಟಾಟಾ ತಯಾರಿ; ಟಿಸಿಎಸ್ನಲ್ಲಿ ಪ್ರತಿಯೊಬ್ಬ ಉದ್ಯೋಗಿಗೂ ಎಐ ಟ್ರೈನಿಂಗ್
ಆದರೆ, ದೊಡ್ಡ ಸವಾಲಿದ್ದದ್ದು ಬ್ಯಾಟರಿ ಗಾತ್ರದಲ್ಲಿ. ದೊಡ್ಡ ಗಾತ್ರದ ಬ್ಯಾಟರಿಯಾದರೆ ಹೆಚ್ಚಿನ ಅಪ್ಲಿಕೇಶನ್ಗಳಿಗೆ ಅದನ್ನು ಉಪಯೋಗಿಸಲು ಕಷ್ಟವಾಗುತ್ತದೆ. ಅದಕ್ಕೆ ಬೀಟಾವೋಲ್ಟ್ನ ವಿಜ್ಞಾನಿಗಳು 63 ಸಮಸ್ಥಾನಿಗಳನ್ನು (ಐಸೊಟೋಪ್) ಒಂದು ನಾಣ್ಯದ ಗಾತ್ರದ ಮಾಡ್ಯೂಲ್ಗೆ ಸೇರಿಸಲು ಯಶಸ್ವಿಯಾಗಿದ್ದಾರೆ.
ಈ ಮಾಡ್ಯೂಲ್ 15 x 15 x 15 ಮಿಲಿಮೀಟರ್ ಗಾತ್ರದ್ದಾಗಿದ್ದು, ಪರಮಾಣು ಐಸೊಟೋಪ್ ಮತ್ತು ಡೈಮಂಡ್ ಸೆಮಿಕಂಡಕ್ಟರ್ಗಳ ಬಹಳ ತೆಳು ಪದರಗಳಿಂದ ಮಾಡಲಾಗಿದೆ.
ಈ ಪರಮಾಣು ಮಿನಿ ಬ್ಯಾಟರಿ 3 ವೋಲ್ಟ್ನಲ್ಲಿ 100 ಮೈಕ್ರೋವ್ಯಾಟ್ ವಿದ್ಯುತ್ ತಯಾರಿಸುತ್ತದೆ. ಈ ವಿದ್ಯುತ್ ಶಕ್ತಿಯನ್ನು ಒಂದು ವ್ಯಾಟ್ಗೆ ಹೆಚ್ಚಿಸುವ ಪ್ರಯತ್ನ ಆಗುತ್ತಿದೆ.
ಇದನ್ನೂ ಓದಿ: Tech Tips: ರಾತ್ರಿ ಪೂರ್ತಿ ಸ್ಮಾರ್ಟ್ಫೋನ್ ಚಾರ್ಜ್ಗೆ ಹಾಕಬಹುದು: ಆದರೆ, ಈ ವಿಚಾರ ನೆನಪಿರಲಿ
ಈಗಿರುವ ಬ್ಯಾಟರಿಗಳ ಬಳಕೆ ಆಗುವ ಎಲ್ಲಾ ಅಪ್ಲಿಕೇಶನ್ಗಳಿಗೂ ಪರಮಾಣು ಬ್ಯಾಟರಿಯನ್ನು ಬಳಸಬಹುದು. ಫೋನ್, ಡ್ರೋನ್, ಮೈಕ್ರೋಪ್ರೋಸಸರ್, ಮೆಡಿಕಲ್ ಉಪಕರಣ ಮೊದಲಾದವುಗಳಿಗೆ ಇದು ಉಪಯೋಗವಾಗಬಹುದು.
ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ