ರೆಡ್ಮಿ ನೋಟ್ ಅಲ್ಲ: ರಿಯಲ್ ಮಿಯಿಂದ ಬರುತ್ತಿದೆ ಹೊಸ ರಿಯಲ್ ಮಿ ನೋಟ್ 1 ​ಫೋನ್

|

Updated on: Jan 16, 2024 | 1:01 PM

Realme Note 1 Launch Date: ಕಳೆದ ಕೆಲವು ತಿಂಗಳುಗಳಿಂದ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡದಿರುವ ರಿಯಲ್ ಮಿ ಇದೀಗ ನೋಟ್ ಸರಣಿ ಅಡಿಯಲ್ಲಿ ಹೊಸ ರಿಯಲ್ ಮಿ ನೋಟ್ 1 ಫೋನ್ ಪರಿಚಯಿಸಿ ಧೂಳೆಬ್ಬಿಸಲು ಬರುತ್ತಿದೆ. ಇದೇ ಜನವರಿ 24 ರಂದು ಈ ಫೋನ್ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.

ರೆಡ್ಮಿ ನೋಟ್ ಅಲ್ಲ: ರಿಯಲ್ ಮಿಯಿಂದ ಬರುತ್ತಿದೆ ಹೊಸ ರಿಯಲ್ ಮಿ ನೋಟ್ 1 ​ಫೋನ್
Realme Note 1
Follow us on

ರೆಡ್ಮಿ ಬ್ರ್ಯಾಂಡ್​ನ ನೋಟ್ ಸರಣಿಯ ಸ್ಮಾರ್ಟ್​ಫೋನ್​ಗಳು ಮಾರುಕಟ್ಟೆಯಲ್ಲಿ ಭರ್ಜರಿ ಸದ್ದು ಮಾಡುತ್ತಿರುವ ಮಧ್ಯೆ ಇದೀಗ ಪ್ರಸಿದ್ಧ ರಿಯಲ್ ಮಿ ಕಂಪನಿ ಕೂಡ ತನ್ನ ಹೊಸ ‘ನೋಟ್’ ಸರಣಿಯಲ್ಲಿ ಫೋನ್ ಒಂದನ್ನು ಅನಾವರಣ ಮಾಡಲು ಸಜ್ಜಾಗಿದೆ. ಇದರ ಹೆಸರು ರಿಯಲ್ ಮಿ ನೋಟ್ 1 (Realme Note 1) ಫೋನ್ ಆಗಿದೆ. ಇದು ರಿಯಲ್ ಮಿ ಕಂಪನಿ ನೋಟ್ ಸರಣಿಯಲ್ಲಿ ಬಿಡುಗಡೆ ಮಾಡುತ್ತಿರುವ ಚೊಚ್ಚಲ ಸ್ಮಾರ್ಟ್​ಫೋನ್ ಆಗಿದೆ. ರಿಯಲ್ ಮಿ ನೋಟ್ 1 ಇದೇ ಜನವರಿ 24 ರಂದು ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಈ ಫೋನಿನ ಕೆಲವು ಮಾಹಿತಿ ಕೂಡ ಆನ್​ಲೈನ್​ನಲ್ಲಿ ಸೋರಿಕೆ ಆಗಿದೆ.

ರಿಯಲ್ ಮಿ ನೋಟ್ 1 ಕುರಿತ ವಿವರಗಳು X ನಲ್ಲಿ ಸೋರಿಕೆಯಾಗಿದ್ದು, ಈ ಫೋನ್‌ ಇನ್ಫಿನಿಕ್ಸ್ ನೋಟ್ 30 ಮತ್ತು ರೆಡ್ಮಿ ನೋಟ್ 13 ಗೆ ಕಠಿಣ ಪೈಪೋಟಿ ನೀಡುವಂತಿದೆ. ಕಳೆದ ಕೆಲವು ತಿಂಗಳುಗಳಿಂದ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡದಿರುವ ರಿಯಲ್ ಮಿ ಇದೀಗ ನೋಟ್ ಸರಣಿ ಅಡಿಯಲ್ಲಿ ಹೊಸ ಫೋನ್ ಪರಿಚಯಿಸಿ ಧೂಳೆಬ್ಬಿಸಲು ಬರುತ್ತಿದೆ. ಈ ಫೋನಿನ ಬಗ್ಗೆ ಸೋರಿಕೆಯಾದ ಫೀಚರ್ಸ್ ಇಲ್ಲಿದೆ ನೋಡಿ.

ಇದನ್ನೂ ಓದಿ
ಸೈಬರ್ ಕ್ರೈಮ್ ತಡೆಗಟ್ಟಲು ಮಾಸ್ಟರ್ ಪ್ಲಾನ್ ರೂಪಿಸಿದ ಮೋದಿ ಸರ್ಕಾರ
ರಿಪಬ್ಲಿಕ್ ಡೇ ಸೇಲ್: ಒನ್‌ಪ್ಲಸ್-ರೆಡ್ಮಿ ಫೋನುಗಳು ಅತಿ ಕಡಿಮೆ ಬೆಲೆಗೆ ಲಭ್ಯ
ರಾತ್ರಿ ಪೂರ್ತಿ ಫೋನ್ ಚಾರ್ಜ್​ಗೆ ಹಾಕಬಹುದು: ಆದರೆ, ಈ ವಿಚಾರ ನೆನಪಿರಲಿ
ಪಾಸ್​ಪೋರ್ಟ್ ಸೈಜ್ ಫೋಟೋ ಬೇಕಿದ್ದರೆ ನಿಮಿಷದಲ್ಲಿ ಪಡೆಯಿರಿ: ಹೇಗೆ ಗೊತ್ತೇ?

Smartphone Display: ಸ್ಮಾರ್ಟ್​ಫೋನ್ ಡಿಸ್​ಪ್ಲೇ ಬಗ್ಗೆ ಇವೆಲ್ಲಾ ನೀವು ತಿಳಿದಿರಬೇಕು!

ರಿಯಲ್ ಮಿ ನೋಟ್ 1 120Hz ರಿಫ್ರೆಶ್ ದರದೊಂದಿಗೆ 6.67-ಇಂಚಿನ FHD OLED ಡಿಸ್​ಪ್ಲೇಯನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7050 ಪ್ರೊಸೆಸರ್‌ನಿಂದ ಚಾಲಿತವಾಗಲಿದೆ. ಈ ಸ್ಮಾರ್ಟ್​ಫೋನ್ 67W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಸಹ ಪ್ಯಾಕ್ ಮಾಡುತ್ತದೆ.

 

ಕ್ಯಾಮೆರಾ ವಿಚಾರಕ್ಕೆ ಬಂದರೆ ಈ ಫೋನ್​ನಲ್ಲಿ ಪ್ರಮುಖ ಕ್ಯಾಮೆರಾ 108 ಮೆಗಾ ಪಿಕ್ಸೆಲ್ ಸಾಮರ್ಥ್ಯದಿಂದ ಕೂಡಿರಲಿದೆ. ಜೊತೆಗೆ 8 ಮೆಗಾ ಪಿಕ್ಸೆಲ್ ಮತ್ತು 2 ಮೆಗಾ ಪಿಕ್ಸೆಲ್​ನಿಂದ ಕೂಡದ ಟ್ರಿಪಲ್ ಕ್ಯಾಮೆರಾ ಸೆಟಪ್ ಇರಲಿದೆ. ಮುಂಭಾಗದಲ್ಲಿ 16MP ಕ್ಯಾಮೆರಾವನ್ನು ಹೊಂದಿರುತ್ತದೆ. ಇದು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ ಮತ್ತು ಡ್ಯುಯಲ್ ಸ್ಪೀಕರ್‌ಗಳೊಂದಿಗೆ ಬರುತ್ತದೆ.

ರಿಯಲ್ ಮಿ ನೋಟ್ 1 ಗೆ ನೇರ ಸ್ಪರ್ಧಿಯಾಗಿರುವ ಇನ್ಫಿನಿಕ್ಸ್ ನೋಟ್ 30 ಮತ್ತು ರೆಡ್ಮಿ ನೋಟ್ 13 ಬೆಲೆ ಕ್ರಮವಾಗಿ ರೂ. 14,999 ಮತ್ತು ರೂ. 18,999 ಆಗಿದೆ. ಈ ಹೊಸ ಫೋನ್ ಬೆಲೆ ಕೂಡ 20,000 ರೂ. ಒಳಗೆ ಇರಬಹುದು ಎಂದು ಹೇಳಲಾಗಿದೆ.

ಇದರ ಜೊತೆಗೆ ರಿಯಲ್ ಮಿ ನೋಟ್ 50 ಎಂದು ಕರೆಯಲ್ಪಡುವ ಮತ್ತೊಂದು ರಿಯಲ್ ಮಿ ಫೋನ್ ಬಗ್ಗೆ ಸೋರಿಕೆಯಾಗಿದೆ. ಇದು ಆಕ್ಟಾ-ಕೋರ್ ಯುನಿಸಾಕ್ T612 ಚಿಪ್‌ಸೆಟ್, 4,890mAh ಬ್ಯಾಟರಿ ಮತ್ತು 10W ಚಾರ್ಜಿಂಗ್ ಬೆಂಬಲದೊಂದಿಗೆ ಬರುವ ಬಜೆಟ್ ಸಾಧನವಾಗಿದೆ. ರಿಯಲ್ ಮಿ ನೋಟ್ 50 ಸಹ 6.67-ಇಂಚಿನ HD+ LCD ಡಿಸ್ಪ್ಲೇ, 13MP ಪ್ರಾಥಮಿಕ ಕ್ಯಾಮೆರಾ ಮತ್ತು ಹಿಂಭಾಗದಲ್ಲಿ 0.8MP ಸೆಕೆಂಡರಿ ಕ್ಯಾಮೆರಾ ಮತ್ತು 5MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ರಿಯಲ್ ಶೀಘ್ರದಲ್ಲೇ ತನ್ನ ಹೊಸ ನೋಟ್ ಸರಣಿಯ ಕುರಿತು ಹೆಚ್ಚಿನ ವಿವರಗಳನ್ನು ಅಧಿಕೃತವಾಗಿ ಬಹಿರಂಗಪಡಿಸುವ ನಿರೀಕ್ಷೆಯಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:01 pm, Tue, 16 January 24