ಮತ್ತೆ ಕ್ಲೌಡ್‌ಫ್ಲೇರ್ ಡೌನ್; ಆನ್‌ಲೈನ್ ಸೇವೆಗಳು ಸ್ಥಗಿತ, ಅಪ್ಡೇಟ್ ನೀಡುವುದಾಗಿ ತಿಳಿಸಿದ ಕಂಪನಿ

ಮತ್ತೆ ಕ್ಲೌಡ್‌ಫ್ಲೇರ್ ಡೌನ್ ಆಗಿದೆ. ಪ್ರಪಂಚದಾದ್ಯಂತ ಜನರು ಕ್ಲೌಡ್‌ಫ್ಲೇರ್‌ನ ಸೇವೆಗಳಲ್ಲಿನ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. ಆದರೆ ಕಂಪನಿಯೂ ಯೋಜಿತ ನಿರ್ವಹಣೆಯಿಂದಾಗಿ ಕ್ಲೌಡ್‌ಫ್ಲೇರ್ ನೆಟ್‌ವರ್ಕ್ ಅಡಚಣೆ ಉಂಟಾಗಿರುವುದಾಗಿ ಘೋಷಿಸಿದೆ. ಅಗತ್ಯವಿರುವಂತೆ ಅಪ್ಡೇಟ್ ಗಳನ್ನು ಒದಗಿಸಲಾಗುವುದು ಎಂದು ತಿಳಿಸಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಮತ್ತೆ ಕ್ಲೌಡ್‌ಫ್ಲೇರ್ ಡೌನ್; ಆನ್‌ಲೈನ್ ಸೇವೆಗಳು ಸ್ಥಗಿತ, ಅಪ್ಡೇಟ್ ನೀಡುವುದಾಗಿ ತಿಳಿಸಿದ ಕಂಪನಿ
ಕ್ಲೌಡ್‌ಫ್ಲೇರ್
Image Credit source: Social Media

Updated on: Dec 05, 2025 | 3:55 PM

ಇಂದು ಕ್ಲೌಡ್‌ಫ್ಲೇರ್ (Cloudflare) ಎಂಬ ಇಂಟರ್ನೆಟ್ ಕಂಪನಿಯ ತಾಂತ್ರಿಕ ತೊಂದರೆಯಿಂದಾಗಿ ಅನೇಕ ಆನ್‌ಲೈನ್ ಸೇವೆಗಳು ಸ್ಥಗಿತಗೊಂಡಿವೆ. ಹೀಗಾಗಿ ಇಂಟರ್ನೆಟ್ ಬಳಕೆದಾರರು ಕ್ಯಾನ್ವಾ (Canva), ಬ್ಲಿಂಕಿಟ್ ಸೇರಿದಂತೆ ಹಲವು ಆ್ಯಪ್‌ಗಳನ್ನು ಬಳಸಲು ತೊಂದರೆಯಾಗಿದೆ. ಆದರೆ ಕಂಪನಿಯು ತನ್ನ ಯೋಜಿತ ನಿರ್ವಹಣಾ ಕಾರ್ಯವನ್ನು ನಿರ್ವಹಿಸುತ್ತಿರುವುದರಿಂದ ತನ್ನ ನೆಟ್‌ವರ್ಕ್‌ನ ಕೆಲವು ಭಾಗಗಳಲ್ಲಿ ಅಡಚಣೆಗಳು ಉಂಟಾಗುತ್ತಿವೆ ಎಂದು ಶುಕ್ರವಾರ ದೃಢಪಡಿಸಿದೆ.

ಅಧಿಕೃತ ಕ್ಲೌಡ್‌ಫ್ಲೇರ್ ಸಿಸ್ಟಮ್ ಸ್ಟೇಟಸ್ ಪೇಜ್ ಪ್ರಕಾರ, ಡಿಸೆಂಬರ್ 5 ರಂದು 09:00 ಯಟಿಸಿ ಚಟುವಟಿಕೆ ಪ್ರಾರಂಭವಾಯಿತು, ನಿಗದಿತ ನಿರ್ವಹಣೆ ಪ್ರಗತಿಯಲ್ಲಿದೆ, ಈಗಾಗಲೇ ಅಗತ್ಯವಿರುವ ಅಪ್ಡೇಟ್‌ಗಳ ಬಗ್ಗೆ ಗಮನ ಹರಿಸುತ್ತಿದ್ದೇವೆ ಎಂದು ತಿಳಿಸಿದೆ.

ಇದನ್ನೂ ಓದಿ:ನಿಮ್ಮ ಫೋನ್ ಕಳೆದುಹೋದರೆ, ಸೆಕೆಂಡುಗಳಲ್ಲಿ ಬ್ಲಾಕ್ ಆಗುತ್ತೆ: ಜಸ್ಟ್ ಹೀಗೆ ಮಾಡಿ

ಕೆಲಸ ಮುಂದುವರೆಯುತ್ತಿದ್ದಂತೆ ಅಪ್ಡೇಟ್ ಗಳನ್ನು ನೀಡುವುದಾಗಿ ತಿಳಿಸಿದೆ. ವೆಬ್‌ಸೈಟ್ ಭದ್ರತೆ ಮತ್ತು ವಿಷಯ ವಿತರಣೆಗಾಗಿ ಕ್ಲೌಡ್‌ಫ್ಲೇರ್ ಸೇವೆಗಳನ್ನು ಅವಲಂಬಿಸಿರುವ ಬಳಕೆದಾರರು ಇತ್ತೀಚಿನ ಅಪ್ಡೇಟ್ ಗಾಗಿ ಸ್ಟೇಟಸ್ ಪೇಜ್ ನಲ್ಲಿ ಮೇಲ್ವಿಚಾರಣೆ ಮಾಡಲು ಸೂಚಿಸಲಾಗಿದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:54 pm, Fri, 5 December 25