Fake App: ಈ ಆ್ಯಪ್ ನಿಮ್ಮ ಸ್ಮಾರ್ಟ್​ಫೋನ್​ನಲ್ಲಿದ್ದರೆ ತಕ್ಷಣವೇ ಡಿಲೀಟ್ ಮಾಡಿ: ಗೂಗಲ್​ನಿಂದ ಎಚ್ಚರಿಕೆ ಸಂದೇಶ

| Updated By: Vinay Bhat

Updated on: Oct 28, 2022 | 2:48 PM

ಪ್ರಸಿದ್ಧ ಸೆಕ್ಯುರಿಟಿ ಸಂಸ್ಥೆ McAfee ಈ ಬಗ್ಗೆ ಮಾಹಿತಿ ನೀಡಿದೆ. ಗೂಗಲ್ ಪ್ಲೇ ಸ್ಟೋರ್​ನಲ್ಲಿರುವ ನಕಲಿ ಆ್ಯಪ್​ಗಳು ಕೇವಲ ಜಾಹೀರಾತುಗಳನ್ನು ಮಾತ್ರ ನೀಡುತ್ತಿದೆ. ಬಳಕೆದಾರರಿಗೆ ಅನಗತ್ಯ ನೋಟಿಫಿಕೇಶನ್ ಕಳುಹಿಸುತ್ತದೆ. ಇದು ಅಪಾಯಕಾರಿಯಾದ ಆ್ಯಪ್ ಎಂದು ಹೇಳಿದೆ

Fake App: ಈ ಆ್ಯಪ್ ನಿಮ್ಮ ಸ್ಮಾರ್ಟ್​ಫೋನ್​ನಲ್ಲಿದ್ದರೆ ತಕ್ಷಣವೇ ಡಿಲೀಟ್ ಮಾಡಿ: ಗೂಗಲ್​ನಿಂದ ಎಚ್ಚರಿಕೆ ಸಂದೇಶ
ಸಾಂದರ್ಭಿಕ ಚಿತ್ರ
Follow us on

ಆಂಡ್ರಾಯ್ಡ್ (Android) ಸ್ಮಾರ್ಟ್​ಫೋನ್ ಬಳಕೆದಾರರು ಉಪಯೋಗಿಸುವ ಗೂಗಲ್ ಪ್ಲೇ ಸ್ಟೋರ್​ನಲ್ಲಿ ನಕಲಿ ಆ್ಯಪ್​ಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈಗಾಗಲೇ ಅನೇಕ ಬಾರಿ ಗೂಗಲ್ ತನ್ನ ಪ್ಲೇ ಸ್ಟೋರ್​ನಿಂದ (Google Play Store) ಅಪಾಯಕಾರಿ ಆ್ಯಪ್​​ಗಳನ್ನು ತೆಗೆದು ಹಾಕಿದೆ. ಆದರೂ ಇದರಲ್ಲಿ ಪುನಃ ನಕಲಿ, ವೈಯಕ್ತಿಕ ಮಾಹಿತಿ ಕದಿಯುವ ಅಪಾಯಕಾರಿ ಆ್ಯಪ್​ಗಳು ಹುಟ್ಟುತ್ತಲೇ ಇದೆ. ಇದೀಗ ಅನಧಿಕೃತ ಮತ್ತು ನಕಲಿ ಎಂದು ಕಂಡುಬಂದಂತಹ 16 ಡೇಂಜರಸ್ ಆ್ಯಪ್​​ಗಳನ್ನು (Fake App) ಗೂಗಲ್ ತೆಗೆದುಹಾಕಿದೆ. ನೀವು ಈ ಆ್ಯಪ್ ಗಳನ್ನು ಇನ್ ಸ್ಟಾಲ್ ಮಾಡಿದ್ದರೆ ತಕ್ಷಣ ಡಿಲೀಟ್ ಮಾಡುವಂತೆ ಗೂಗಲ್ ಸೂಚನೆ ನೀಡಿದೆ.

ಪ್ರಸಿದ್ಧ ಸೆಕ್ಯುರಿಟಿ ಸಂಸ್ಥೆ McAfee ಈ ಬಗ್ಗೆ ಮಾಹಿತಿ ನೀಡಿದೆ. ಗೂಗಲ್ ಪ್ಲೇ ಸ್ಟೋರ್​ನಲ್ಲಿರುವ ನಕಲಿ ಆ್ಯಪ್​ಗಳು ಕೇವಲ ಜಾಹೀರಾತುಗಳನ್ನು ಮಾತ್ರ ನೀಡುತ್ತಿದೆ. ಬಳಕೆದಾರರಿಗೆ ಅನಗತ್ಯ ನೋಟಿಫಿಕೇಶನ್ ಕಳುಹಿಸುತ್ತದೆ ಹಾಗೂ ವೆಬ್​ಸೈಡ್ ಓಪನ್ ಮಾಡಿದ ತಕ್ಷಣ ಕೇವಲ ಲೋಡಿಂಗ್​ನಲ್ಲಿ ಮಾತ್ರ ಇರುತ್ತದೆ. ಇದು ಅಪಾಯಕಾರಿಯಾದ ಆ್ಯಪ್ ಎಂದು ಹೇಳಿದೆ. ಅಲ್ಲದೆ ಇವುಗಳಲ್ಲಿ ಕೆಲವು ಬಳಕೆದಾರರ ಫೇಸ್​ಬುಕ್ ಬಗೆಗಿನ ಮಾಹಿತಿ, ಎಸ್​ಎಮ್​ಎಸ್ ಮಾಹಿತಿ, ಕಾಂಟೆಕ್ಟ್​ ಲಿಸ್ಟ್, ಮೊಬೈಲ್ ಬಗೆಗಿನ ಮಾಹಿತಿ ಸೇರಿದಂತೆ ಅನೇಕ ವಿಚಾರವನ್ನು ಕದಿಯುತ್ತದೆ ಎಂದು ಹೇಳಿದೆ.

ಇದೀಗ ಈ 13 ಆ್ಯಪ್​ಗಳ ಬಗ್ಗೆ ಎಚ್ಚೆತ್ತುಕೊಂಡಿರುವ ಗೂಗಲ್ ಪ್ಲೇ ಸ್ಟೋರ್ ಅವುಗಳನ್ನು ಡಿಲೀಟ್ ಮಾಡಿವೆ. ಇನ್ನು ಈಗಾಗಲೇ ಅದನ್ನು ಡೌನ್​ಲೋಡ್ ಮಾಡಿರುವ ಬಳಕೆದಾರರು ತಕ್ಷಣವೇ ಡಿಲೀಟ್ ಮಾಡುವಂತೆ ಕೇಳಿಕೊಂಡಿದೆ. ಅದರಂತೆ ನೀವು ಜಾಗರೂಕರಾಗಿರಬೇಕಾದ 13 ಅಪಾಯಕಾರಿ ಅಪ್ಲಿಕೇಶನ್‌ಗಳ ಪಟ್ಟಿ ಹೀಗಿದೆ.

ಇದನ್ನೂ ಓದಿ
WhatsApp: ವಾಟ್ಸ್​ಆ್ಯಪ್​ನಲ್ಲಿ ಹೊಸ ಫೀಚರ್: ಫೋಟೋ, ವಿಡಿಯೋ ಫಾರ್ವರ್ಡ್ ಮಾಡೋವಾಗ ಸಿಗುತ್ತೆ ಈ ಆಯ್ಕೆ
Redmi Note 12 series: ಬಿಡುಗಡೆ ಆಯಿತು 200MP ಕ್ಯಾಮೆರಾ, 210W ಫಾಸ್ಟ್ ಚಾರ್ಜರ್​ನ ರೆಡ್ಮಿ ನೋಟ್ 12 ಸರಣಿ: ಬೆಲೆ ಎಷ್ಟು?
Online Job: ಮನೆಯಲ್ಲೇ ಕುಳಿತು ಆನ್​ಲೈನ್ ಮೂಲಕ ಹಣ ಗಳಿಸುವುದು ಹೇಗೆ?: ಇಲ್ಲಿದೆ ನೋಡಿ ಟ್ರಿಕ್ಸ್
Tech Tips: ನಿಮ್ಮ ಖಾತೆಯಲ್ಲಿ ಎಷ್ಟು ಹಣವಿದೆ ಎಂದು ವಾಟ್ಸ್​ಆ್ಯಪ್​ನಲ್ಲಿ ನೋಡುವುದು ಹೇಗೆ?: ಇಲ್ಲಿದೆ ಟ್ರಿಕ್ಸ್

1. BusanBus (com.kmshack.BusanBus)

2. Currency Converter (com.smartwho.SmartCurrencyConverter)

3. EzDica (com.joysoft.ezdica)

4. EzNotes (com.meek.tingboard)

5. Flashlight+ (com.candlencom.candleprotest)

6. Flashlight+ (com.dev.imagevault)

7. Flashlight+ (kr.caramel.flash_plus)

8. High-Speed Camera (com.hantor.CozyCamera)

9. Instagram Profile Downloader (com.schedulezero.instapp)

10. Joycode (com.joysoft.barcode)

11. K-Dictionary (com.joysoft.wordBook)

12. Quick Note (com.movinapp.quicknote)

13. Smart Task Manager (com.james.SmartTaskManager)

ಹೆಚ್ಚಿನ ನಕಲಿ ಆ್ಯಪ್ ತಯಾರಕರು ತಮ್ಮ ಆ್ಯಪ್ ಅನ್ನು ಹೆಚ್ಚು ಜಾಹಿತಾರುಗೊಳಿಸಿರುತ್ತಾರೆ. ಜಾಹಿರಾತು ಮೂಲಕ ಅಥವಾ ಪಾಪ್ ಅಪ್ ವಿಂಡೋಗಳ ಮೂಲಕ ಬೇರೆಯೇ ಹಲವು ಆ್ಯಪ್​ಗಳನ್ನು ಇನ್​ಸ್ಟಾಲ್ ಮಾಡುವಂತೆ ಬಳಕೆದಾರರನ್ನು ಪ್ರಚೋದಿಸುತ್ತಲೇ ಇರುತ್ತವೆ. ಇಂತಹುಗಳು ಬಹುತೇಕ ದುರುದ್ದೇಶಪೂರಿತ ಕಿರು ತಂತ್ರಾಂಶಗಳೇ ಆಗಿರುತ್ತವೆ. ನಮ್ಮ ಮೊಬೈಲ್​​ನ ನಿರ್ವಹಣೆಗೆ ಬೇಕಾದ ಸೆಕ್ಯುರಿಟಿ ಆ್ಯಪ್​​ಗಳ ರೂಪದಲ್ಲಿಯೇ ಫೇಕ್ ಆ್ಯಪ್ ಗಳ ಕೂಡ ಸೇರಿಕೊಳ್ಳುತ್ತವೆ. ಆ್ಯಂಟಿ ವೈರಸ್ ರೀತಿಯಲ್ಲಿ, ಕ್ಯಾಚೆ ಕ್ಲಿಯರಿಂಗ್ ರೂಪದಲ್ಲಿ ಫೇಕ್ ಆ್ಯಪ್ ಗಳು ಮೊಬೈಲ್ ಬಳಕೆದಾರರನ್ನು ವಂಚಿಸುತ್ತವೆ. ಇಂತಹ ವೈರಸ್ ಆ್ಯಪ್ ಗೇಮ್ಸ್ ಮತ್ತು ಶೈಕ್ಷಣಿಕ ರೂಪದಲ್ಲಿಯೂ ತಲೆಮರೆಸಿಕೊಂಡು ಕುಳಿತಿರುತ್ತವೆ. ಹೀಗಾಗಿ ಇವುಗಳಿಂದ ಎಚ್ಚರ ವಹಿಸಿ.