Instagram Down: ವಾಟ್ಸ್ಆ್ಯಪ್ ಆಯ್ತು, ಈಗ ಇನ್‌ಸ್ಟಾಗ್ರಾಂ ಸರ್ವರ್ ಕೂಡ ಡೌನ್!
ಫೋಟೊ ಹಾಗೂ ವಿಡಿಯೋ ಶೇರಿಂಗ್ ಜಾಲತಾಣವಾದ ಇನ್‌ಸ್ಟಾಗ್ರಾಂ ಸರ್ವರ್ ಸಹ ಡೌನ್ (Instagram Down) ಆಗಿದೆ ಎನ್ನಲಾಗುತ್ತಿದೆ. ಈ ಕುರಿತು ಇದುವರೆಗೆ ಇನ್‌ಸ್ಟಾಗ್ರಾಂನಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ.
ನವದೆಹಲಿ: ಕೆಲ ದಿನಗಳ ಹಿಂದಷ್ಟೇ ವಾಟ್ಸ್ಆ್ಯಪ್ ಸರ್ವರ್ ಡೌನ್ ಆಗಿದ್ದು, ಕೋಟ್ಯಂತರ ಜನ ಸಂದೇಶ ಕಳುಹಿಸಲು ಮತ್ತು ರವಾನಿಸಲು ಆಗದೇ ತೊಂದರೆ ಅನುಭವಿಸಿದ್ದರು. ಸದ್ಯ ಅದೇ ರೀತಿಯಾಗಿ ಈಗ ಫೋಟೊ ಹಾಗೂ ವಿಡಿಯೋ ಶೇರಿಂಗ್ ಜಾಲತಾಣವಾದ ಇನ್‌ಸ್ಟಾಗ್ರಾಂ ಸರ್ವರ್ ಸಹ ಡೌನ್ (Instagram Down) ಆಗಿದೆ ಎನ್ನಲಾಗುತ್ತಿದ್ದು, ಫೋಟೊ, ಪೋಸ್ಟ್, ರೀಲ್ಸ್ಗಳಿಲ್ಲದೆ ಜನ ಪೇಚಾಟಕ್ಕೆ ಸಿಲುಕಿದ್ದಾರೆ. ಈ ಕುರಿತು ಇದುವರೆಗೆ ಇನ್‌ಸ್ಟಾಗ್ರಾಂನಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ.
Y’all needs to fix Instagram it’s buggin again @instagram
— Ig: 1marktoofunny (@markrealquotes) October 27, 2022
ಭಾರತ ಮತ್ತು ಬ್ರಿಟನ್ ಸೇರಿ ಹಲವೆಡೆ ಇನ್‌ಸ್ಟಾಗ್ರಾಂ ಸರ್ವರ್ ಡೌನ್ ಆಗಿದ್ದು, ಈ ಕುರಿತು ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ದೂರುತ್ತಿದ್ದಾರೆ. ಅದರಲ್ಲೂ, ಬ್ರಿಟನ್‌ನ 1,500 ಮಂದಿ ಇನ್‌ಸ್ಟಾಗ್ರಾಂ ಡೌನ್ ಕುರಿತು ಟ್ವಿಟ್ ಮಾಡಿ, ದೂರಿದ್ದಾರೆ. ಸ್ಟೋರಿಗಳನ್ನು ನೋಡಲು ಆಗದ ಕುರಿತು ಹೆಚ್ಚಿನ ಜನ ತಮ್ಮ ಆಕ್ರೋಶವನ್ನು ಟ್ವಿಟ್ ಮೂಲಕ ಹೊರಹಾಕಿದ್ದಾರೆ.
instagram caiu ??? ou é minha internet de centavos que tá fazendo essa graça ?
— loira odonto sem hb20 (@maxadojay) October 27, 2022
ಕಳೆದ ಮಂಗಳವಾರವಷ್ಟೇ ಎರಡು ಗಂಟೆ ವಾಟ್ಸ್‌ಆ್ಯಪ್ ಡೌನ್ ಆಗಿತ್ತು. ಇದರಿಂದ ಕೋಟ್ಯಂತರ ಜನರಿಗೆ ತೊಂದರೆಯಾಗಿತ್ತು. ವಾಟ್ಸ್‌ಆ್ಯಪ್ ಹಾಗೂ ಇನ್‌ಸ್ಟಾಗ್ರಾಂಗೆ ಮೆಟಾ ಮಾತೃಸಂಸ್ಥೆಯಾಗಿದೆ.
ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.