Fire-Boltt Quantum: ಬ್ಲೂಟೂತ್ ಕಾಲಿಂಗ್ ಇರುವ ಫೈರ್ ಬೋಲ್ಟ್ ಸ್ಮಾರ್ಟ್​ವಾಚ್ ಬಿಡುಗಡೆ

ಸ್ಮಾರ್ಟ್​ವಾಚ್ ಮತ್ತು ಫಿಟ್ನೆಸ್ ಗ್ಯಾಜೆಟ್​ಗಳು ಹೊಸ ಟ್ರೆಂಡ್ ಸೃಷ್ಟಿಸಿರುವ ಜತೆಗೇ, ಯುವಜನತೆಯ ಫ್ಯಾಷನ್ ಸ್ಟೇಟ್​ಮೆಂಟ್​ಗೂ ಸೈ ಎನ್ನಿಸುವಂತಹ ವಿನ್ಯಾಸದಲ್ಲಿ ಮಾರುಕಟ್ಟೆಗೆ ಲಗ್ಗೆ ಇರಿಸುತ್ತಿವೆ. ಈ ಬಾರಿ ಬೋಲ್ಟ್, ಆಕರ್ಷಕ ವಿನ್ಯಾಸದಲ್ಲಿ ನೂತನ ಸ್ಮಾರ್ಟ್​ವಾಚ್ ಪರಿಚಯಿಸಿದೆ.

Fire-Boltt Quantum: ಬ್ಲೂಟೂತ್ ಕಾಲಿಂಗ್ ಇರುವ ಫೈರ್ ಬೋಲ್ಟ್ ಸ್ಮಾರ್ಟ್​ವಾಚ್ ಬಿಡುಗಡೆ
ಫೈರ್ ಬೋಲ್ಟ್​ ಕ್ವಾಂಟಂ ಸ್ಮಾರ್ಟ್​ವಾಚ್
ಕಿರಣ್​ ಐಜಿ

Updated on: Feb 15, 2023 | 6:48 PM

ಗ್ಯಾಜೆಟ್ ಮಾರುಕಟ್ಟೆಯಲ್ಲಿ ಈಗ ಹೆಚ್ಚು ಸುದ್ದಿಯಲ್ಲಿರುವುದು ಸ್ಮಾರ್ಟ್​ವಾಚ್ (Smartwatch) ಮತ್ತು ಫಿಟ್ನೆಸ್ ಟ್ರ್ಯಾಕರ್ ಗ್ಯಾಜೆಟ್​ಗಳು. ಅದರಲ್ಲೂ, ವಿವಿಧ ವಿನ್ಯಾಸದ, ಹಲವು ಫೀಚರ್, ಫಿಟ್ನೆಸ್ ಟ್ರ್ಯಾಕಿಂಗ್, ಉಡುಪಿಗೆ ಒಪ್ಪುವ ಬಣ್ಣದ ಬ್ಯಾಂಡ್ ಮತ್ತು ಸ್ಮಾರ್ಟ್​ ಎನ್ನಿಸುವ ವಾಚ್ ಫೇಸ್ ಇರುವ ಸ್ಮಾರ್ಟ್​ವಾಚ್​​ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಜತೆಗೆ ವಾಟರ್ ರೆಸಿಸ್ಟ್, ಬ್ಲೂಟೂತ್ ಕಾಲಿಂಗ್ ಇರುವ ಸ್ಮಾರ್ಟ್​ವಾಚ್​ಗಳನ್ನು ಯುವಜನತೆ ಹೆಚ್ಚು ಇಷ್ಟಪಡುತ್ತಾರೆ.

ಸ್ಮಾರ್ಟ್​ವಾಚ್​ಗಳು ಕೇವಲ ನೋಟಿಫಿಕೇಶನ್ ನೀಡುವುದಲ್ಲದೇ, ಅದರ ಜತೆಗೇ, ಆರೋಗ್ಯದ ಬಗ್ಗೆ, ಮತ್ತು ದೇಹಸ್ಥಿತಿಯಲ್ಲಿನ ವ್ಯತ್ಯಾಸದ ಕುರಿತು ಕೂಡ ಮಾಹಿತಿ ನೀಡುತ್ತವೆ. ಹೀಗಾಗಿ ಸ್ಮಾರ್ಟ್​ವಾಚ್​ಗಳು ಇಂದಿನ ದಿನಗಳಲ್ಲಿ ಎಲ್ಲರ ಮೆಚ್ಚಿನ ಗ್ಯಾಜೆಟ್ ಆಗಿದೆ. ಭಾರತದ ಸ್ಮಾರ್ಟ್​ವಾಚ್ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿರುವ ಫೈರ್ ಬೋಲ್ಟ್ (Fire Boltt), ಆಕರ್ಷಕ ವಿನ್ಯಾಸದ ಫೈರ್ ಬೋಲ್ಟ್ ಕ್ವಾಂಟಮ್ ಸ್ಮಾರ್ಟ್​ವಾಚ್ ಅನ್ನು ಬಿಡುಗಡೆ ಮಾಡಿದೆ.

ಫೈರ್ ಬೋಲ್ಟ್​ ಕ್ವಾಂಟಂ ಸ್ಮಾರ್ಟ್​ವಾಚ್ 

ಫೈರ್ ಬೋಲ್ಟ್ ಬಿಡುಗಡೆ ಮಾಡಿರುವ ಹೊಸ ಕ್ವಾಂಟಂ ಸ್ಮಾರ್ಟ್​ವಾಚ್, 1.28 ಇಂಚಿನ ಡಿಸ್​ಪ್ಲೇ ಹೊಂದಿದೆ. ಜತೆಗೆ ಬ್ಲೂಟೂತ್ ಕಾಲಿಂಗ್ ಇದ್ದು, ಹೃದಯ ಬಡಿತ ಮಾಪನ, ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಹಾಗೂ ವಿವಿಧ ಸ್ಪೋರ್ಟ್ಸ್ ಮೋಡ್ ಇದರ ವಿಶೇಷತೆಯಾಗಿದೆ. IP67 ವಾಟರ್ ಮತ್ತು ಡಸ್ಟ್ ರೇಟಿಂಗ್ ಇದ್ದು, ಉತ್ತಮ ಬಾಳಿಕೆ ಬರುತ್ತದೆ ಎಂದು ಕಂಪನಿ ಹೇಳಿದೆ.

ಬೆಲೆ ಮತ್ತು ಲಭ್ಯತೆ 

ಫೈರ್ ಬೋಲ್ಟ್ ಕ್ವಾಂಟಂ ಅಮೆಜಾನ್ ಇಂಡಿಯಾ ಮತ್ತು ಫೈರ್ ಬೋಲ್ಟ್​ ವೆಬ್​ಸೈಟ್ ಮೂಲಕ ಫೆಬ್ರವರಿ 20ರಿಂದ ಲಭ್ಯವಾಗಲಿದೆ. ಕಪ್ಪು, ನೀಲಿ, ಹಸಿರು ಮತ್ತು ಕಪ್ಪು -ಕೆಂಪು ಬಣ್ಣದ ಸಂಯೋಜನೆಯಲ್ಲಿ ಹೊಸ ಸ್ಮಾರ್ಟ್​ವಾಚ್ ಲಭ್ಯವಾಗಲಿದೆ. ಗೂಗಲ್ ವಾಯ್ಸ್ ಅಸಿಸ್ಟ್ ಮತ್ತು ಸಿರಿ ಬೆಂಬಲವನ್ನು ಹೊಸ ಕ್ವಾಂಟಂ ಸ್ಮಾರ್ಟ್​ವಾಚ್ ಹೊಂದಿದೆ. ಬ್ಲೂಟೂತ್ ವಿ 5.1 ಬೆಂಬಲ ಇದ್ದು, ಆ್ಯಂಡ್ರಾಯ್ಡ್ 5.0 ಮತ್ತು ನಂತರದ ಓಎಸ್ ಹಾಗೂ ಐಫೋನ್​ಗಳಲ್ಲಿ ಐಓಎಸ್ 9.0 ಮತ್ತು ನಂತರದ ಆವೃತ್ತಿಗಳಲ್ಲಿ ಬೆಂಬಲ ದೊರೆಯಲಿದೆ. ಫೈರ್ ಬೋಲ್ಟ್ ವೆಬ್​ಸೈಟ್ ಮೂಲಕ ಸೇಲ್ ಪ್ರೈಸ್ ಆಗಿ ₹4,999 ದರಕ್ಕೆ ಲಭ್ಯವಾಗಲಿದೆ.

50ಕ್ಕೂ ಹೆಚ್ಚಿನ ವಾಚ್ ಫೇಸ್, 350mAh ಬ್ಯಾಟರಿ, 128MB ಸ್ಟೋರೇಜ್, ಮ್ಯೂಸಿಕ್ ಕಂಟ್ರೋಲ್, ಸ್ಟೈನ್​ಲೆಸ್ ಸ್ಟೀಲ್ ಸ್ಟ್ರ್ಯಾಪ್, ವೃತ್ತಾಕಾರದ ಡಯಲ್ (33ಎಂಎಂ) ನೂತನ ಫೈರ್ ಬೋಲ್ಟ್ ಕ್ವಾಂಟಂ ಸ್ಮಾರ್ಟ್​ವಾಚ್​ನ ವಿಶೇಷತೆಯಾಗಿದೆ.

Published On - 6:48 pm, Wed, 15 February 23

ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.

Loading...
Unable to load recommendations.
Follow Us