AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Flipkart Smartphones Carnival Sale 2021: ಫ್ಲಿಪ್​ಕಾರ್ಟ್​ನಲ್ಲಿ ಕಾರ್ನಿವಲ್ ಸೇಲ್: ಬಂಪರ್ ಡಿಸ್ಕೌಂಟ್​ಗೆ ಹೊಚ್ಚ ಹೊಸ ಸ್ಮಾರ್ಟ್​ಫೋನ್​ಗಳು

ಫ್ಲಿಪ್‌ಕಾರ್ಟ್‌ ಸ್ಮಾರ್ಟ್‌ಫೋನ್ ಕಾರ್ನಿವಲ್ ಸೇಲ್‌ನಲ್ಲಿ ಐಫೋನ್ 12 ಫೋನ್ ಬಿಗ್ ಡಿಸ್ಕೌಂಟ್‌ನಲ್ಲಿ ಕಾಣಿಸಿಕೊಂಡಿದೆ. 79,900ರೂ. ಗಳಿದ್ದ ಈ ಐಫೋನ್ ರಿಯಾಯಿತಿ ನಂತರ ಈಗ 66,999 ರೂ. ಗಳ ಬೆಲೆಯಲ್ಲಿ ಲಭ್ಯವಾಗಲಿದೆ

Flipkart Smartphones Carnival Sale 2021: ಫ್ಲಿಪ್​ಕಾರ್ಟ್​ನಲ್ಲಿ ಕಾರ್ನಿವಲ್ ಸೇಲ್: ಬಂಪರ್ ಡಿಸ್ಕೌಂಟ್​ಗೆ ಹೊಚ್ಚ ಹೊಸ ಸ್ಮಾರ್ಟ್​ಫೋನ್​ಗಳು
Flipkart Smartphones Carnival Sale 2021
TV9 Web
| Edited By: |

Updated on: Sep 04, 2021 | 12:04 PM

Share

ಗ್ರಾಹಕರಿಗೆ ವಿಶೇಷ ಸೇಲ್‌ಗಳ ಮೂಲಕ ಆಕರ್ಷಿಸುತ್ತಿರುವ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್‌ ಇದೀಗ ಸ್ಮಾರ್ಟ್‌ಫೋನ್ ಕಾರ್ನಿವಲ್ ಮೇಳವನ್ನು (Flipkart Smartphones Carnival Sale 2021) ಆಯೋಜಿಸಿದೆ. ಈ ಮೇಳದಲ್ಲಿ ಜನಪ್ರಿಯ ಫೋನ್‌ ಮಾಡೆಲ್‌ಗಳಿಗೆ ಜೊತೆಗೆ ಇತ್ತೀಚಿಗಿನ ಕೆಲವು ನೂತನ ಫೋನ್‌ಗಳಿಗೂ ಭರ್ಜರಿ ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿದೆ. ಈ ಮೇಳವು ಸೆಪ್ಟೆಂಬರ್ 2ರಿಂದ ಶುರುವಾಗಿದ್ದು, ಸೆಪ್ಟಂಬರ್ 8ರ ವರೆಗೂ ಚಾಲ್ತಿಯಲ್ಲಿ ಇರಲಿದೆ. ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು, ಎಲೆಕ್ಟ್ರಾನಿಕ್ ಸಾಧನಗಳ ಬೆಲೆಯನ್ನು ಕಡಿತಗೊಳಿಸಿ ಮಾರಾಟ ಮಾಡುತ್ತಿದೆ. ಪ್ರಮುಖವಾಗಿ ಐಫೋನ್​ಗಳ (iPhone) ಮೇಲೂ ಬಂಪರ್ ಡಿಸ್ಕೌಂಟ್ ಘೋಷಿಸಿದೆ.

ಫ್ಲಿಪ್‌ಕಾರ್ಟ್‌ ಸ್ಮಾರ್ಟ್‌ಫೋನ್ ಕಾರ್ನಿವಲ್ ಸೇಲ್‌ನಲ್ಲಿ ಐಫೋನ್ 12 ಫೋನ್ ಬಿಗ್ ಡಿಸ್ಕೌಂಟ್‌ನಲ್ಲಿ ಕಾಣಿಸಿಕೊಂಡಿದೆ. 79,900ರೂ. ಗಳಿದ್ದ ಈ ಐಫೋನ್ ರಿಯಾಯಿತಿ ನಂತರ ಈಗ 66,999 ರೂ. ಗಳ ಬೆಲೆಯಲ್ಲಿ ಲಭ್ಯವಾಗಲಿದೆ. ಹಾಗೆಯೇ ಫ್ಲಿಪ್‌ಕಾರ್ಟ್‌ 15,000ರೂ.ಗಳ ವರೆಗೆ ಎಕ್ಸ್‌ಚೇಂಜ್ ಆಫರ್‌ ಸಹ ನೀಡಿದೆ.

ಗೂಗಲ್ ಪಿಕ್ಸೆಲ್ 4A ಯ 6GB RAM ಮತ್ತು128GB ಸ್ಟೋರೆಜ್ ಸಾಮರ್ಥ್ಯದ ಸ್ಮಾರ್ಟ್​ಫೋನ್ ಕಾರ್ನಿವಲ್ ಸೇಲ್​ನಲ್ಲಿ 31,999 ರೂ. ಗೆ ಮಾರಾಟಮಾಡುತ್ತಿದೆ. ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು ಶೇ. 5ರಷ್ಟು ಕ್ಯಾಶ್‌ಬ್ಯಾಕ್ ಅನ್ನು ಸಹ ಪಡೆಯಬಹುದಾಗಿದೆ. ಸ್ಟ್ಯಾಂಡರ್ಡ್ ಡೆಬಿಟ್ ಕಾರ್ಡ್ EMI ಆಯ್ಕೆಯನ್ನು ಈ ಸ್ಮಾರ್ಟ್​ಫೋನ್​ ಮೇಲೆ ನೀಡುತ್ತಿದ್ದು, ತಿಂಗಳಿಗೆ 2,694 ರೂ.ಗೆ ಪಾವತಿಸಬೇಕಿದೆ.

ಇನ್ನೂ ಐಫೋನ್ 12 ಮಿನಿ ಸಹ 9,901 ರೂ. ಗಳ ಆಕರ್ಷಕ ರಿಯಾಯಿತಿ ಪಡೆದಿದೆ. ಸದ್ಯ ಫ್ಲಿಪ್‌ಕಾರ್ಟ್‌ನ ಸೇಲ್‌ನಲ್ಲಿ 59,999 ರೂ. ಬೆಲೆಯಲ್ಲಿ ಕಾಣಿಸಿಕೊಂಡಿದೆ. ಹಾಗೆಯೇ ಆ್ಯಪಲ್ ಐಫೋನ್‌ 11 ಸಹ ಭರ್ಜರಿ ಡಿಸ್ಕೌಂಟ್‌ನಲ್ಲಿ ಕಾಣಿಸಿಕೊಂಡಿದ್ದು, 51,999 ರೂ. ಗಳ ದರದಲ್ಲಿ ಗ್ರಾಹಕರಿಗೆ ಲಭ್ಯ ಆಗುತ್ತದೆ. ಜೊತೆಗೆ ಐಫೋನ್ XR ಕೂಡಾ ರಿಯಾಯಿತಿ ಪಡೆದಿದ್ದು, 42,999 ರೂ. ಗೆ ಮಾರಾಟವಾಗುತ್ತಿದೆ.

ವಿವೋ X60 ಸ್ಮಾರ್ಟ್​ಫೋನ್​ 34,990 ರೂಪಾಯಿಗೆ ಫ್ಲಿಪ್​ಕಾರ್ಟ್​ ಮಾರಾಟ ಮಾಡುತ್ತಿದೆ. ಜೊತೆಗೆ ಗ್ರಾಹಕರಿಗಾಗಿ ಎಕ್ಸ್‌ಚೇಂಜ್ ಆಫರ್ ಮತ್ತು ನೋ-ಕಾಸ್ಟ್ ಇಎಂಐ ಆಯ್ಕೆಯನ್ನು ನೀಡಿದೆ. ಅಷ್ಟು ಮಾತ್ರವಲ್ಲದೆ ಸ್ಮಾರ್ಟ್​ಫೋನ್​ ಖರೀದಿ ವೇಳೆ ಗೂಗಲ್ ಹೋಮ್ ಮಿನಿಯಲ್ಲಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.

ರಿಯಲ್​ಮಿ ಎಕ್ಸ್​7 Max ​5G ಸ್ಮಾರ್ಟ್​ಫೋನ್ 26,999 ರೂ. ಗೆ ಖರೀದಿಗೆ ಸಿಗಲಿದೆ. ಇದು 6.43-inch Full-HD+ sAMOLED ಡಿಸ್‌ಪ್ಲೇಯನ್ನು ಹೊಂದಿದ್ದು, 120Hz ರಿಫ್ರೆಶ್ ರೇಟ್ ಹೊಂದಿದೆ. ಹಿಂಭಾಗದಲ್ಲಿ 64 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 1200 SoCಯ ಬೆಂಬಲ ಪಡೆದಿದೆ. ಇದರಲ್ಲಿ 4,500mAh ಬ್ಯಾಟರಿಯು 50W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಗ್ರಾಹಕರಿಗಾಗಿ ಈ ಸ್ಮಾರ್ಟ್​ಫೋನ್​ 18,000 ರೂ. ವಿನ ಎಕ್ಸ್ ಚೇಂಜ್ ಆಫರ್​ನಲ್ಲಿ ಸಿಗಲಿದೆ. ಜೊತೆಗೆ ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನೊಂದಿಗೆ ಶೇಕಡಾ 5 ರಷ್ಟು ಕ್ಯಾಶ್ ಬ್ಯಾಕ್ ನಂತಹ ಡೀಲ್ ಗಳೊಂದಿಗೆ ಲಭ್ಯವಿದೆ. ಇದರ ಜೊತೆಗೆ ಶವೋಮಿ Mi 10T 5G ಸ್ಮಾರ್ಟ್​ಫೋನ್​ ಫ್ಲಿಪ್‌ಕಾರ್ಟ್​ನಲ್ಲಿ 34,999 ರೂ. ಗೆ ಖರೀದಿಗೆ ಸಿಗುತ್ತಿದೆ.

Airtel DisneyPlus Hotstar: ಐಪಿಎಲ್ ಹತ್ತಿರವಾಗುತ್ತಿದ್ದಂತೆ ಏರ್ಟೆಲ್​ನಿಂದ ಬಂಪರ್ ಆಫರ್: ಗ್ರಾಹಕರು ಫುಲ್ ಖುಷ್

Redmi Note 10T: ಸದ್ದಿಲ್ಲದೆ ರೆಡ್ಮಿಯ ಮತ್ತೊಂದು ಸ್ಮಾರ್ಟ್​ಫೋನ್ ಬೆಲೆಯನ್ನು ಹೆಚ್ಚಿಸಿದ ಶವೋಮಿ

(Flipkart Smartphones Carnival Sale 2021 Up to Rs 12901 discount on iPhone 12 Realme X7 Max Vivo X60 offer)

Follow Us
TV9 Web
TV9 Web

TV9 Kannada

Read More
ರಾಷ್ಟ್ರಪತಿ, ಉಪರಾಷ್ಟ್ರಪತಿಗಳನ್ನು ಭೇಟಿಯಾದ ಸಿಎಂ ಡಿಕೆಶಿ
ರಾಷ್ಟ್ರಪತಿ, ಉಪರಾಷ್ಟ್ರಪತಿಗಳನ್ನು ಭೇಟಿಯಾದ ಸಿಎಂ ಡಿಕೆಶಿ
ಊಟದಲ್ಲಿ ಹುಳ ಕಂಡು ಹೌಹಾರಿದ ಯುವತಿಯರು: ಪಿಜಿ ವಿರುದ್ಧ ಪ್ರತಿಭಟನೆ
ಊಟದಲ್ಲಿ ಹುಳ ಕಂಡು ಹೌಹಾರಿದ ಯುವತಿಯರು: ಪಿಜಿ ವಿರುದ್ಧ ಪ್ರತಿಭಟನೆ
ಕೊಲ್ಲೂರಿಗೆ ತಮಿಳುನಾಡು ಸಿಎಂ: ಅರ್ಚಕ ನಿತ್ಯಾನಂದ ಅಡಿಗ ಮಹತ್ವದ ಮಾಹಿತಿ
ಕೊಲ್ಲೂರಿಗೆ ತಮಿಳುನಾಡು ಸಿಎಂ: ಅರ್ಚಕ ನಿತ್ಯಾನಂದ ಅಡಿಗ ಮಹತ್ವದ ಮಾಹಿತಿ
ಕಬಿನಿ ಡ್ಯಾಂ ನೀರಿನಮಟ್ಟ ಭಾರೀ ಕುಸಿತ: ಭೀಕರ ಬರಗಾಲದ ಮುನ್ಸೂಚನೆಯಾ?
ಕಬಿನಿ ಡ್ಯಾಂ ನೀರಿನಮಟ್ಟ ಭಾರೀ ಕುಸಿತ: ಭೀಕರ ಬರಗಾಲದ ಮುನ್ಸೂಚನೆಯಾ?
ತುಂಗಭದ್ರಾ ಒಡಲು ಖಾಲಿ ಖಾಲಿ! ಜಲಾಶಯಲ್ಲಿ ಕೇವಲ 9 TMC ನೀರು ಸಂಗ್ರಹ
ತುಂಗಭದ್ರಾ ಒಡಲು ಖಾಲಿ ಖಾಲಿ! ಜಲಾಶಯಲ್ಲಿ ಕೇವಲ 9 TMC ನೀರು ಸಂಗ್ರಹ
ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ?
ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಆರ್ಥಿಕ ವಿಷಯದಲ್ಲಿ ಸ್ವಲ್ಪ ತೊಂದರೆ ಕಾಡಬಹುದು
ಇಂದು ಈ ರಾಶಿಯವರ ಆರ್ಥಿಕ ವಿಷಯದಲ್ಲಿ ಸ್ವಲ್ಪ ತೊಂದರೆ ಕಾಡಬಹುದು
ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ!
ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ!
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್