7 ಅಪ್ಲಿಕೇಶನ್ ಬ್ಯಾನ್ ಮಾಡಿದ ಗೂಗಲ್: ನಿಮ್ಮ ಮೊಬೈಲ್​ನಲ್ಲಿ ಈ ಆ್ಯಪ್ ಇದ್ದರೆ ತಕ್ಷಣವೇ ಡಿಲೀಟ್ ಮಾಡಿ

| Updated By: ಝಾಹಿರ್ ಯೂಸುಫ್

Updated on: Nov 18, 2021 | 7:22 PM

Google Apps: ಈ ಹೆಸರಿನಲ್ಲಿರುವ ಅಪ್ಲಿಕೇಶನ್​ನಲ್ಲಿ ಮಾಲ್ವೇರ್​ ಇದ್ದು, ಈ ಮೂಲಕ ಹ್ಯಾಕರುಗಳು ನಿಮ್ಮ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ. ಅಷ್ಟೇ ಅಲ್ಲದೆ ನಿಮ್ಮ ಡೇಟಾವನ್ನು ಸಂಗ್ರಹಿಸಿ ಬ್ಯಾಂಕ್ ಖಾತೆ ಸೇರಿದಂತೆ ಪ್ರಮುಖ ಖಾತೆಗಳಲ್ಲಿ ಕನ್ನ ಹಾಕುತ್ತಿದ್ದಾರೆ.

7 ಅಪ್ಲಿಕೇಶನ್ ಬ್ಯಾನ್ ಮಾಡಿದ ಗೂಗಲ್: ನಿಮ್ಮ ಮೊಬೈಲ್​ನಲ್ಲಿ ಈ ಆ್ಯಪ್ ಇದ್ದರೆ ತಕ್ಷಣವೇ ಡಿಲೀಟ್ ಮಾಡಿ
ಸಾಂದರ್ಭಿಕ ಚಿತ್ರ
Follow us on

ಗೂಗಲ್ ಮತ್ತೊಮ್ಮೆ ತನ್ನ ಸ್ಮಾರ್ಟ್​ಫೋನ್ ಬಳಕೆದಾರರ ಸುರಕ್ಷತೆಗಾಗಿ 7 ಅಪ್ಲಿಕೇಶನ್​ಗಳನ್ನು ಪ್ಲೇಸ್ಟೋರ್​ನಿಂದ ಡಿಲೀಟ್ ಮಾಡಿದೆ. ಈ ಆ್ಯಪ್​ಗಳಲ್ಲಿ ಜೋಕರ್ ಮಾಲ್ವೇರ್ ಕಂಡು ಬಂದ ಹಿನ್ನೆಲೆಯಲ್ಲಿ ಗೂಗಲ್ ಈ ಕ್ರಮ ಕೈಗೊಂಡಿದೆ. ಈ ಏಳು ಅಪ್ಲಿಕೇಶನ್‌ಗಳು ‘ಟ್ರೋಜನ್’ ಜೋಕರ್‌ನಂತಹ ಮಾಲ್‌ವೇರ್‌ನಿಂದ ಪ್ರಭಾವಿತವಾಗಿವೆ ಎಂದು ಸೈಬರ್ ತಂತ್ರಜ್ಞರು ಪತ್ತೆಹಚ್ಚಿದ್ದರು. ಇತ್ತೀಚೆಗೆ, ಅನೇಕ ಗೇಮಿಂಗ್​ ಬಳಕೆದಾರರು ಇಂತಹ ಮಾಲ್ವೇರ್‌ ದಾಳಿಗೆ ಒಳಗಾಗಿದ್ದು, ಹೀಗಾಗಿ ಅನೇಕರು ದೂರು ದಾಖಲಿಸಿದ್ದರು.

ಈ ಸಮಸ್ಯೆ ಮುಂಚೂಣಿಗೆ ಬಂದ ನಂತರ, ಗೂಗಲ್ ಈಗಾಗಲೇ ಆ ಎಲ್ಲಾ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿದೆ. ಆತಂಕಕಾರಿ ಸಂಗತಿಯೆಂದರೆ, ಲಕ್ಷಾಂತರ ಜನರು ಈಗಾಗಲೇ ಈ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿದ್ದಾರೆ. ಅಲ್ಲದೆ ಈ ಆ್ಯಪ್​ಗಳನ್ನು ಬಳಸುತ್ತಿದ್ದಾರೆ. ಹೀಗಾಗಿ ಇಂತಹ ಅಪ್ಲಿಕೇಶನ್​ಗಳು ನಿಮ್ಮ ಮೊಬೈಲ್​ನಲ್ಲಿದ್ದರೆ ತಕ್ಷಣವೇ ಡಿಲೀಟ್ ಮಾಡುವಂತೆ ಸೈಬರ್ ಸೆಕ್ಯುರಿಟಿ ತಜ್ಞರು ತಿಳಿಸಿದ್ದಾರೆ.

7 ಅಪಾಯಕಾರಿ Android ಅಪ್ಲಿಕೇಶನ್‌ಗಳ ಪಟ್ಟಿ ಹೀಗಿದೆ:

>>Now QRcode Scan

>>EmojiOne Keyboard

>>Battery Charging Animations Battery Wallpaper

>>Dazzling Keyboard

>>Volume Booster Louder Sound Equalizer

>>Super Hero-Effect

>>Classic Emoji Keyboard

ಈ ಹೆಸರಿನಲ್ಲಿರುವ ಅಪ್ಲಿಕೇಶನ್​ನಲ್ಲಿ ಮಾಲ್ವೇರ್​ ಇದ್ದು, ಈ ಮೂಲಕ ಹ್ಯಾಕರುಗಳು ನಿಮ್ಮ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ. ಅಷ್ಟೇ ಅಲ್ಲದೆ ನಿಮ್ಮ ಡೇಟಾವನ್ನು ಸಂಗ್ರಹಿಸಿ ಬ್ಯಾಂಕ್ ಖಾತೆ ಸೇರಿದಂತೆ ಪ್ರಮುಖ ಖಾತೆಗಳಲ್ಲಿ ಕನ್ನ ಹಾಕುತ್ತಿದ್ದಾರೆ. ಹೀಗಾಗಿ ಈ ಆ್ಯಪ್​ ಅನ್ನು ಬಳಸುತ್ತಿರುವ ಬಳಕೆದಾರರು ಕೂಡಲೇ ಈ 7 ಅಪ್ಲಿಕೇಶನ್ ಡಿಲೀಟ್ ಮಾಡುವಂತೆ ತಿಳಿಸಲಾಗಿದೆ. ಅಷ್ಟೇ ಅಲ್ಲದೆ ಬಳಕೆದಾರರು ಹೆಚ್ಚು ಜಾಗರೂಕರಾಗಿರಬೇಕೆಂದು ಮತ್ತು ಅನುಮಾನಾಸ್ಪದವಾಗಿ ಕಾಣುವ ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡದಂತೆ ಸೈಬರ್ ತಜ್ಞರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: Mahindra Roxor: ಮಹೀಂದ್ರಾ ರೋಕ್ಸರ್: ಜಬರ್ದಸ್ತ್ ಎಸ್​ಯುವಿ ಬಿಡುಗಡೆ

ಇದನ್ನೂ ಓದಿ: 18 GB RAM, 1000 GB ಸ್ಟೋರೇಜ್‌: ದಾಖಲೆ ನಿರ್ಮಿಸಲಿದೆ ಹೊಸ ಸ್ಮಾರ್ಟ್​ಫೋನ್

ಇದನ್ನೂ ಓದಿ: IPL 2022: ರಾಜಸ್ಥಾನ್ ರಾಯಲ್ಸ್​ ತಂಡದಿಂದ ಪ್ರಮುಖ ಆಟಗಾರ ಔಟ್: ಬೇರೆ ತಂಡಕ್ಕೆ ನಾಯಕ?