Google Pixel 6a: ಫ್ಲಿಪ್​ಕಾರ್ಟ್​ನಿಂದ ಬಂಪರ್ ಆಫರ್: ಕೇವಲ 27,699 ರೂ. ಗೆ ಖರೀದಿಸಿ ಗೂಗಲ್ ಪಿಕ್ಸೆಲ್ 6a

| Updated By: Vinay Bhat

Updated on: Sep 10, 2022 | 2:09 PM

Flipkart Big Billion Days sale 2022: ಇದೀಗ ಅಚ್ಚರಿ ಎಂಬಂತೆ ಈ ಬಾರಿಯ ಬಿಗ್ ಬಿಲಿಯನ್ ಡೇಸ್ ಸೇಲ್​ನಲ್ಲಿ ಇತ್ತೀಚೆಗಷ್ಟೆ ಬಿಡುಗಡೆ ಆದ ಗೂಗಲ್ ಪಿಕ್ಸೆಲ್ 6a (Google Pixel 6a) ಸ್ಮಾರ್ಟ್​ಫೋನ್ ಬಂಪರ್ ಡಿಸ್ಕೌಂಟ್​ನಲ್ಲಿ ಖರೀದಿಸಬಹುದಂತೆ.

Google Pixel 6a: ಫ್ಲಿಪ್​ಕಾರ್ಟ್​ನಿಂದ ಬಂಪರ್ ಆಫರ್: ಕೇವಲ 27,699 ರೂ. ಗೆ ಖರೀದಿಸಿ ಗೂಗಲ್ ಪಿಕ್ಸೆಲ್ 6a
Google Pixel 6a
Follow us on

ವಾಲ್ಮಾರ್ಟ್ ಒಡೆತನದ ಪ್ರಸಿದ್ಧ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ (Flipkart) ತನ್ನ ವಾರ್ಷಿಕ ಬಿಗ್ ಬಿಲಿಯನ್ ಡೇಸ್ ಸೇಲ್ 2022 ಅನ್ನು (Flipkart annual Big Billion Days sale 2022) ಘೋಷಿಸಿದೆ. ಈ ಬಾರಿ ಕೂಡ ಹಲವು ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿ ನೀಡುವುದಾಗಿ ತಿಳಿಸಿರುವ ಫ್ಲಿಪ್​ಕಾರ್ಟ್​ ಶೀಘ್ರದಲ್ಲೇ ಬಿಗ್ ಬಿಲಿಯನ್ ಡೇಸ್ ದಿನಾಂಕವನ್ನು ತಿಳಿಸಲಿದೆ. ಹೀಗಿರುವಾಗ ಒಂದೊಂದೆ ಆಫರ್​ಗಳ ಬಗ್ಗೆ ಮಾಹಿತಿ ಹೊರಬೀಳುತ್ತಿದೆ. ಇದೀಗ ಅಚ್ಚರಿ ಎಂಬಂತೆ ಈ ಬಾರಿಯ ಬಿಗ್ ಬಿಲಿಯನ್ ಡೇಸ್ ಸೇಲ್​ನಲ್ಲಿ ಇತ್ತೀಚೆಗಷ್ಟೆ ಬಿಡುಗಡೆ ಆದ ಗೂಗಲ್ ಪಿಕ್ಸೆಲ್ 6a (Google Pixel 6a) ಸ್ಮಾರ್ಟ್​ಫೋನ್ ಬಂಪರ್ ಡಿಸ್ಕೌಂಟ್​ನಲ್ಲಿ ಖರೀದಿಸಬಹುದಂತೆ.

ಭಾರತದಲ್ಲಿ ಗೂಗಲ್‌ ಪಿಕ್ಸೆಲ್‌ 6a ಸ್ಮಾರ್ಟ್​​ಫೋನ್ 6GB +128GB ಸ್ಟೋರೇಜ್ ಆಯ್ಕೆಯೊಂದಿಗೆ 43,999 ರೂ. ಗೆ ಬಿಡುಗಡೆ ಆಗಿತ್ತು. ಬಿಗ್ ಬಿಲಿಯನ್ ಡೇಸ್ ಸೇಲ್​ನಲ್ಲಿ ಈ ಫೋನನ್ನು ನೀವು ಕೇವಲ 27,699 ರೂ. ಗೆ ನಿಮ್ಮದಾಗಿಸಬಹುದು. ಈ ಸಂದರ್ಭ ಐಸಿಐಸಿಐ ಮತ್ತು ಹೆಚ್​ಡಿಎಫ್​ಸಿ ಬ್ಯಾಂಕ್ ಕಾರ್ಡ್​ ಮೂಲಕ ಈ ಫೋನನ್ನು ಖರೀದಿಸಿದರೆ ಶೇ. 10 ರಷ್ಟು ಡಿಸ್ಕೌಂಟ್ ಸಿಗಲಿದೆ. ಇದರ ಜೊತೆಗೆ 20,000 ರೂ. ವರೆಗೆ ಎಕ್ಸ್​ಚೇಂಜ್ ಆಫರ್ ನೀಡಲಾಗಿದೆ.

ಏನು ವಿಶೇಷತೆ?:

ಇದನ್ನೂ ಓದಿ
Motorola Edge 30 Fusion: 50MP ಕ್ಯಾಮೆರಾ, 68W ಫಾಸ್ಟ್ ಚಾರ್ಜರ್: ಬಹುನಿರೀಕ್ಷಿತ ಮೋಟೋ ಎಡ್ಜ್‌ 30 ಫ್ಯೂಷನ್‌ ಬಿಡುಗಡೆ
ಭಾರತದಲ್ಲಿ ರಿಯಲ್‌ ಮಿ ನಾರ್ಜೋ 50i ಪ್ರೈಮ್ ಬಿಡುಗಡೆಗೆ ದಿನಾಂಕ ನಿಗದಿ: ಯಾವಾಗ?, ಬೆಲೆ ಎಷ್ಟು?
iPhone 14 Series: ಆ್ಯಪಲ್ ಐಫೋನ್ 14 ಅನ್ನು ಮತ್ತೆ ಟ್ರೋಲ್ ಮಾಡಿದ ಪ್ರಸಿದ್ಧ ಸ್ಯಾಮ್​ಸಂಗ್ ಕಂಪನಿ
Motorola Edge 30 Ultra: 200MP ಕ್ಯಾಮೆರಾ, 125W ಫಾಸ್ಟ್ ಚಾರ್ಜರ್: ಮಾರುಕಟ್ಟೆಗೆ ಅಪ್ಪಳಿಸಿದೆ ಹೊಸ ಸ್ಮಾರ್ಟ್​ಫೋನ್: ಬೆಲೆ?

ಗೂಗಲ್‌ ಪಿಕ್ಸೆಲ್‌ 6a ಸ್ಮಾರ್ಟ್‌ಫೋನ್‌ 6.1 ಇಂಚಿನ ಫುಲ್‌ HD+ OLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಿಂದ ಕೂಡಿದ್ದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್‌ ಮತ್ತು 90Hz ರಿಫ್ರೆಶ್ ರೇಟ್‌ ಅನ್ನು ಒಳಗೊಂಡಿದೆ. ಆಕ್ಟಾ–ಕೋರ್ ಗೂಗಲ್ ಟೆನ್ಸರ್ GS101 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್ 12 ಔಟ್ ಆಫ್ ದಿ ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಸ್ಮಾರ್ಟ್‌ಫೋನ್ ಕನಿಷ್ಠ ಐದು ವರ್ಷಗಳ ಭದ್ರತಾ ನವೀಕರಣಗಳನ್ನು ಪಡೆಯುತ್ತದೆ ಎಂದು ಗೂಗಲ್ ಕಂಪೆನಿ ತಿಳಿಸಿದೆ.

ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 12 ಮೆಗಾಪಿಕ್ಸೆಲ್ ಸೆನ್ಸಾರ್‌ ಮತ್ತು ಎರಡನೇ ಕ್ಯಾಮೆರಾ ಕೂಡ 12.2 ಮೆಗಾಪಿಕ್ಸೆಲ್ ಸೆನ್ಸಾರ್‌ ಅಲ್ಟ್ರಾ–ವೈಡ್–ಆಂಗಲ್ ಲೆನ್ಸ್‌ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಈ ಫೋನ್‌ನ ರಿಯರ್‌ ಕ್ಯಾಮೆರಾ 30fps ನಲ್ಲಿ 4K ವಿಡಿಯೋ ರೆಕಾರ್ಡಿಂಗ್ ಅನ್ನು ನೀಡುತ್ತದೆ. ಸೆಲ್ಫಿ ಕ್ಯಾಮೆರಾ ಅಂದರೆ ಮುಂಭಾಗದ ಕ್ಯಾಮರಾ 30fps ನಲ್ಲಿ 1080p ವರೆಗೆ ವೀಡಿಯೊ ರೆಕಾರ್ಡಿಂಗ್ ಬೆಂಬಲವನ್ನು ಹೊಂದಿದೆ.

ಗೂಗಲ್‌ ಪಿಕ್ಸೆಲ್‌ 6a ಸ್ಮಾರ್ಟ್‌ಫೋನ್‌ 4,306mAh ಬ್ಯಾಟರಿಯನ್ನುಹೊಂದಿದೆ. ಇದು 24 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಮತ್ತು 72 ಗಂಟೆಗಳವರೆಗೆ ಬ್ಯಾಕಪ್ ಅನ್ನು ಒಳಗೊಂಡಿರುವ ಬ್ಯಾಟರಿ ಸೇವರ್ ಮೋಡ್‌ ಹೊಂದಿದೆ. ಬ್ಯಾಟರಿಗೆ ತಕ್ಕಂತೆ ಫಾಸ್ಟ್ ಚಾರ್ಜರ್ ಆಯ್ಕೆ ಕೂಡ ನೀಡಲಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6E, ಬ್ಲೂಟೂತ್ 5.2, ಮತ್ತು USB ಟೈಪ್-C ಪೋರ್ಟ್ ಸೇರಿವೆ.

Published On - 2:09 pm, Sat, 10 September 22