Google Pixel 6a: ಫ್ಲಿಪ್​ಕಾರ್ಟ್​​ನಲ್ಲಿ ಬಹುನಿರೀಕ್ಷಿತ ಗೂಗಲ್‌ ಪಿಕ್ಸೆಲ್‌ 6a ಖರೀದಿಗೆ ಲಭ್ಯ: ಭರ್ಜರಿ ಸೇಲ್ ಖಚಿತ

Google Pixel 6a Sale: ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​​ನಲ್ಲಿ ಗೂಗಲ್‌ ಪಿಕ್ಸೆಲ್‌ 6a ಫೋನ್ ಸೇಲ್ ಕಾಣುತ್ತಿದೆ. ಹಿಂದಿನ ಪಿಕ್ಸೆಲ್ 6 ಮತ್ತು ಪಿಕ್ಸೆಲ್ 6 ಪ್ರೊ ಸ್ಮಾರ್ಟ್‌ಫೋನ್‌ಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಇದು ಎಂಟ್ರಿ ನೀಡಿದೆ.

Google Pixel 6a: ಫ್ಲಿಪ್​ಕಾರ್ಟ್​​ನಲ್ಲಿ ಬಹುನಿರೀಕ್ಷಿತ ಗೂಗಲ್‌ ಪಿಕ್ಸೆಲ್‌ 6a ಖರೀದಿಗೆ ಲಭ್ಯ: ಭರ್ಜರಿ ಸೇಲ್ ಖಚಿತ
Google Pixel 6a
Follow us
| Updated By: Vinay Bhat

Updated on: Jul 29, 2022 | 6:45 AM

ಗೂಗಲ್ ಕಂಪನಿಯ ಬಹುನಿರೀಕ್ಷಿತ ಗೂಗಲ್‌ ಪಿಕ್ಸೆಲ್‌ 6(Google Pixel 6a) ಸ್ಮಾರ್ಟ್‌ಪೋನ್ ಇದೀಗ ಭಾರತದಲ್ಲಿ ಖರೀದಿಗೆ ಸಿಗುತ್ತಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​​ನಲ್ಲಿ (Flipkart) ಈ ಫೋನ್ ಸೇಲ್ ಕಾಣುತ್ತಿದೆ. ಹಿಂದಿನ ಪಿಕ್ಸೆಲ್ 6 ಮತ್ತು ಪಿಕ್ಸೆಲ್ 6 ಪ್ರೊ ಸ್ಮಾರ್ಟ್‌ಫೋನ್‌ಗಳಿಗೆ (Smartphone) ಹೋಲಿಸಿದರೆ ಅತ್ಯಂತ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಇದು ಎಂಟ್ರಿ ನೀಡಿದೆ. ಕ್ಯಾಮೆರಾದಿಂದಲೇ ಕಣ್ಣು ಕುಕ್ಕುತ್ತಿರುವ ಈ ಫೋನ್ ಖರೀದಿಗೆ ಕ್ಯೂ ನಿಲ್ಲುವುದು ಗ್ಯಾರೆಂಟಿ ಎನ್ನಲಾಗುತ್ತಿದೆ. ಹಾಗಾದ್ರೆ ಭಾರತದಲ್ಲಿ ಗೂಗಲ್‌ ಪಿಕ್ಸೆಲ್‌ 6a ಸ್ಮಾರ್ಟ್​​ಫೋನ್ ಬೆಲೆ ಎಷ್ಟು? ಏನೆಲ್ಲ ವಿಶೇಷತೆ ಇದೆ?, ಆಫರ್ ಏನಿದೆ? ಎಂಬುದನ್ನು ನೋಡೋಣ.

  1. ಭಾರತದಲ್ಲಿ ಗೂಗಲ್‌ ಪಿಕ್ಸೆಲ್‌ 6a ಸ್ಮಾರ್ಟ್​​ಫೋನ್ 6GB +128GB ಸ್ಟೋರೇಜ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗುತ್ತದೆ. ಇದರ ಬೆಲೆ 43,999 ರೂ. ಆಗಿದೆ.
  2. ಫ್ಲಿಪ್​ಕಾರ್ಟ್​ನಲ್ಲಿ ಮೊದಲ ಸೇಲ್ ಪ್ರಮುಕ್ತ ಆಫರ್ ನೀಡಲಾಗಿದ್ದು​ ಆ್ಯಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್​ ಮೂಲಕ ಪಡೆದುಕೊಂಡರೆ 2,000 ರೂ. ಗಳ ರಿಯಾಯಿತಿ ಸಿಗಲಿದೆ.
  3. ಗೂಗಲ್‌ ಪಿಕ್ಸೆಲ್‌ 6a ಸ್ಮಾರ್ಟ್‌ಫೋನ್‌ 6.1 ಇಂಚಿನ ಫುಲ್‌ HD+ OLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಿಂದ ಕೂಡಿದ್ದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್‌ ಮತ್ತು 90Hz ರಿಫ್ರೆಶ್ ರೇಟ್‌ ಅನ್ನು ಒಳಗೊಂಡಿದೆ.
  4. ಆಕ್ಟಾ–ಕೋರ್ ಗೂಗಲ್ ಟೆನ್ಸರ್ GS101 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್ 12 ಔಟ್ ಆಫ್ ದಿ ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಸ್ಮಾರ್ಟ್‌ಫೋನ್ ಕನಿಷ್ಠ ಐದು ವರ್ಷಗಳ ಭದ್ರತಾ ನವೀಕರಣಗಳನ್ನು ಪಡೆಯುತ್ತದೆ ಎಂದು ಗೂಗಲ್ ಕಂಪೆನಿ ತಿಳಿಸಿದೆ.
  5. ಇದನ್ನೂ ಓದಿ
    Image
    ಉದ್ಯಮದಲ್ಲಿ ಇದೇ ಮೊದಲ ಬಾರಿ: Refyne ನಿಂದ ವಾಟ್ಸ್​ಆ್ಯಪ್​ನಲ್ಲಿ ಸ್ಯಾಲರಿ ಆನ್-ಡಿಮ್ಯಾಂಡ್
    Image
    Redmi 10A Sport: ಬಜೆಟ್ ಬೆಲೆ, ಬಂಪರ್ ಫೀಚರ್: ಭಾರತದಲ್ಲಿ ರೆಡ್ಮಿಯ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ
    Image
    Google Meet: ಗೂಗಲ್ ಮೀಟ್​ನಲ್ಲಿ ಹೊಸ ವೈಶಿಷ್ಟ್ಯ: ಯೂಟ್ಯೂಬ್ ಮೂಲಕ ಲೈವ್​ಸ್ಟ್ರೀಮ್ ಮಾಡಿ
    Image
    Google Street View: ಬೆಂಗಳೂರು ಸೇರಿದಂತೆ ಭಾರತದ 10 ನಗರಗಳಲ್ಲಿ ಗೂಗಲ್ ಸ್ಟ್ರೀಟ್ ವ್ಯೂ ಆರಂಭ
  6. ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 12 ಮೆಗಾಪಿಕ್ಸೆಲ್ ಸೆನ್ಸಾರ್‌ ಮತ್ತು ಎರಡನೇ ಕ್ಯಾಮೆರಾ ಕೂಡ 12.2 ಮೆಗಾಪಿಕ್ಸೆಲ್ ಸೆನ್ಸಾರ್‌ ಅಲ್ಟ್ರಾ–ವೈಡ್–ಆಂಗಲ್ ಲೆನ್ಸ್‌ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.
  7. ಈ ಫೋನ್‌ನ ರಿಯರ್‌ ಕ್ಯಾಮೆರಾ 30fps ನಲ್ಲಿ 4K ವಿಡಿಯೋ ರೆಕಾರ್ಡಿಂಗ್ ಅನ್ನು ನೀಡುತ್ತದೆ. ಸೆಲ್ಫಿ ಕ್ಯಾಮೆರಾ ಅಂದರೆ ಮುಂಭಾಗದ ಕ್ಯಾಮರಾ 30fps ನಲ್ಲಿ 1080p ವರೆಗೆ ವೀಡಿಯೊ ರೆಕಾರ್ಡಿಂಗ್ ಬೆಂಬಲವನ್ನು ಹೊಂದಿದೆ.
  8. ಗೂಗಲ್‌ ಪಿಕ್ಸೆಲ್‌ 6a ಸ್ಮಾರ್ಟ್‌ಫೋನ್‌ 4,306mAh ಬ್ಯಾಟರಿಯನ್ನುಹೊಂದಿದೆ. ಇದು 24 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಮತ್ತು 72 ಗಂಟೆಗಳವರೆಗೆ ಬ್ಯಾಕಪ್ ಅನ್ನು ಒಳಗೊಂಡಿರುವ ಬ್ಯಾಟರಿ ಸೇವರ್ ಮೋಡ್‌ ಹೊಂದಿದೆ.
  9. ಬ್ಯಾಟರಿಗೆ ತಕ್ಕಂತೆ ಫಾಸ್ಟ್ ಚಾರ್ಜರ್ ಆಯ್ಕೆ ಕೂಡ ನೀಡಲಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6E, ಬ್ಲೂಟೂತ್ 5.2, ಮತ್ತು USB ಟೈಪ್-C ಪೋರ್ಟ್ ಸೇರಿವೆ.