Google Meet: ಗೂಗಲ್ ಮೀಟ್ನಲ್ಲಿ ಹೊಸ ವೈಶಿಷ್ಟ್ಯ: ಯೂಟ್ಯೂಬ್ ಮೂಲಕ ಲೈವ್‌ಸ್ಟ್ರೀಮ್ ಮಾಡಿ
YouTube Live Stream: ಗೂಗಲ್ ಮೀಟ್ನಲ್ಲಿ ಮೀಟಿಂಗ್ ಪ್ರಾರಂಭವಾದ ತಕ್ಷಣ ಯೂಟ್ಯೂಬ್ ಲೈವ್ಸ್ಟ್ರೀಮಿಂಗ್ ಆಯ್ಕೆ ಆ ಸಭೆಯನ್ನು ಏರ್ಪಡಿಸಿದ ಅಡ್ಮಿನ್ಗೆ ಕಾಣಿಸುತ್ತದಂತೆ. ಯಾವ ಚಾನೆಲ್ನಲ್ಲಿ ಲೈವ್ ಹೋಗಬೇಕು ಎಂಬ ಆಯ್ಕೆ ಕೂಡ ಅಡ್ಮಿನ್ನದ್ದೇ ಆಗಿರುತ್ತದೆ.
ಪ್ರಸಿದ್ಧ ಗೂಗಲ್ (Google) ಕಂಪನಿ ತನ್ನ ಮೀಟ್ ಆ್ಯಪ್ನಲ್ಲಿ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲು ಮುಂದಾಗಿದೆ. ಅದೇನೆಂದರೆ ಬಳಕೆದಾರರು ಗೂಗಲ್ ಮೀಟ್ನಲ್ಲಿ ನಡೆಯುವ ಮೀಟಿಂಗ್ ಅನ್ನ ಯೂಟ್ಯೂಬ್ನಲ್ಲಿ (YouTube) ಲೈವ್ ಸ್ಟ್ರೀಮ್ ಮಾಡಬಹುದಾಗಿದೆ. ಗೂಗಲ್ ಮೀಟ್ ಇತರ ಗೂಗಲ್ ಉತ್ಪನ್ನಗಳೊಂದಿಗೆ ಇದನ್ನು ಅಭಿವೃದ್ದಿ ಪಡಿಸುತ್ತಿದೆ. ಇದರ ಮೂಲಕ ಗೂಗಲ್ ಮೀಟ್ನಲ್ಲಿ (Google Meet) ನಡೆಯುವ ಯಾವುದೇ ಸಭೆಗಳನ್ನು ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಲೈವ್‌ಸ್ಟ್ರೀಮ್ ಮಾಡಲು ಅನುಮತಿಸುತ್ತದೆ. ಈ ಆಯ್ಕೆ ಗೂಗಲ್ ಮೀಟ್ನ ಅಡ್ಮಿನ್ಗೆ ಇರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಗೂಗಲ್ ಮೀಟ್ನಲ್ಲಿ ಮೀಟಿಂಗ್ ಪ್ರಾರಂಭವಾದ ತಕ್ಷಣ ಯೂಟ್ಯೂಬ್ ಲೈವ್ಸ್ಟ್ರೀಮಿಂಗ್ ಆಯ್ಕೆ ಆ ಸಭೆಯನ್ನು ಏರ್ಪಡಿಸಿದ ಅಡ್ಮಿನ್ಗೆ ಕಾಣಿಸುತ್ತದಂತೆ. ಯಾವ ಚಾನೆಲ್ನಲ್ಲಿ ಲೈವ್ ಹೋಗಬೇಕು ಎಂಬ ಆಯ್ಕೆ ಕೂಡ ಅಡ್ಮಿನ್ನದ್ದೇ ಆಗಿರುತ್ತದೆ. ಈ ಬಗ್ಗೆ ಮಾಹಿತಿ ನೀಡಿರುವ ಗೂಗಲ್, “ಈ ಲೈವ್ ಸ್ಟ್ರೀಮಿಂಗ್ ಆಯ್ಕೆ ಬಳಕೆದಾರರು ತಮ್ಮ ಸಂಸ್ಥೆಗೆ ಮಾತ್ರವಲ್ಲದೆ ಹೆಚ್ಚಿನ ಹೊರಗಿನ ಪ್ರೇಕ್ಷಕರಿಗೆ ಮಾಹಿತಿಯನ್ನು ಪ್ರಸ್ತುತಪಡಿಸಲು ಬಯಸುವ ಸಂದರ್ಭಗಳಲ್ಲಿ ಉಪಯುಕ್ತವಾಗಿದೆ,” ಎಂದು ಗೂಗಲ್ ಹೇಳಿದೆ. ಇದರಲ್ಲಿ ಮೀಟಿಂಗ್ ಅನ್ನು pause ಮಾಡಬಹುದು ಅಥವಾ replay ನೋಡಬಹುದು. ಜೊತೆಗೆ ಕೆಲ ಸಮಯದ ಬಳಿಕವೂ ವೀಕ್ಷಿಸಬಹುದಾಗಿದೆ.
ಈ ಆಯ್ಕೆಯನ್ನು ಹಂತ ಹಂತದಲ್ಲಿ ಬಿಡುಗಡೆಗೊಳಿಸಲು ಗೂಗಲ್ ಯೋಚಿಸಿದೆ. ಈಗಾಗಲೇ ಡೊಮೇನ್ಗಳನ್ನು ಆಯ್ಕೆ ಮಾಡಲು ಈ ವೈಶಿಷ್ಟ್ಯ ಹೊರ ತಂದಿದೆ. ಯೂಟ್ಯೂಬ್ನಲ್ಲಿ ನಿಮ್ಮ ಮೀಟಿಂಗ್ ಲೈವ್ ಸ್ಟ್ರೀಮ್ ಆಗಬೇಕು ಎಂದರೆ ಮೊದಲು ಯೂಟ್ಯೂಬ್ನಲ್ಲಿ ಒಂದು ಚಾನೆಲ್ ಅನ್ನು ತೆರೆಯಬೇಕಾಗುತ್ತಿದೆ. ಇದಕ್ಕೆ ಯೂಟ್ಯೂಬ್ ಅನುಮತಿ ನೀಡಬೇಕು. ಮೀಟಿಂಗ್ ಪ್ರಾರಂಭಿಸಿ ನೇರವಾಗಿ ಲೈವ್ಟ್ರೀಮ್ ಎಂಬ ಆಯ್ಕೆ ಮೇಲೆ ಕ್ಲಿಕ್ ಕೊಟ್ಟರೆ ಇದು ಸಾಧ್ಯವಾಗುವುದಿಲ್ಲ. ಅನೇಕರು ಇದನ್ನು ದುರುಪಯೋಗ ಪಡಿಸುವ ಸಾಧ್ಯತೆ ಇದೆ. ಹೀಗಾಗಿ ಫೂಲ್ ಪ್ರೂಫ್ ನೀಡಬೇಕಾದ ಅಗತ್ಯವಿದೆ.
ಮೀಟಿಂಗ್ ಅನ್ನು ಹೋಸ್ಟ್ ಮಾಡಿದವರು ಮತ್ತು ಸಹ–ಹೋಸ್ಟ್ ಮಾಡಿವರು ಮಾತ್ರ ಲೈವ್ ಸ್ಟ್ರೀಮಿಂಗ್ ಅನ್ನು ಪ್ರಾರಂಭಿಸಲು ಸಾಧ್ಯವಾಗುತ್ತದೆ. ಇದನ್ನು ಖಚಿತಪಡಿಸಿಕೊಳ್ಳಲು, ಅವರು ಸೆಟ್ಟಿಂಗ್‌ಗಳಲ್ಲಿ ಲಭ್ಯವಿರುವ ಹೋಸ್ಟ್ ನಿರ್ವಹಣೆ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಬೇಕು. ಆದಾಗ್ಯೂ, ಹೋಸ್ಟ್ ಆಯ್ಕೆಯನ್ನು ಸಕ್ರಿಯಗೊಳಿಸದಿದ್ದರೆ, ಮೀಟಿಂಗ್ನಲ್ಲಿ ಹಾಜರಾಗುವ ಯಾರಾದರೂ ಲೈವ್ ಸ್ಟ್ರೀಮ್ ಅನ್ನು ಪ್ರಾರಂಭಿಸಬಹುದು.