Meta Tuned: ಟ್ಯೂನ್ಡ್ ಆ್ಯಪ್​ಗೆ ಗುಡ್​ ಬೈ ಹೇಳಲಿರುವ ಫೇಸ್​ಬುಕ್

Meta is shutting down Tuned: ಈ ಅಪ್ಲಿಕೇಶನ್​ ಅನ್ನು ಸ್ಥಗಿತಗೊಳಿಸಲು ಮೆಟಾ ಕಂಪೆನಿ ಮುಂದಾಗಿದ್ದು, ಹೀಗಾಗಿ ಟ್ಯೂನ್ಡ್ ಬಳಕೆದಾರರಿಗೆ ಸೆಪ್ಟೆಂಬರ್ 19 ರ ಮೊದಲು ತಮ್ಮ ಡೇಟಾವನ್ನು ಡೌನ್‌ಲೋಡ್ ಮಾಡಿಟ್ಟುಕೊಳ್ಳುವಂತೆ ತಿಳಿಸಲಾಗಿದೆ.

Meta Tuned: ಟ್ಯೂನ್ಡ್ ಆ್ಯಪ್​ಗೆ ಗುಡ್​ ಬೈ ಹೇಳಲಿರುವ ಫೇಸ್​ಬುಕ್
meta tuned
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jul 27, 2022 | 1:12 PM

ಮೆಟಾ ಕಂಪೆನಿಯು ಪರಿಚಯಿಸಿದ ಟ್ಯೂನ್ಡ್​ ಆ್ಯಪ್ ಶೀಘ್ರದಲ್ಲೇ ಸ್ಥಗಿತಗೊಳಿಸಲಿದೆ. ಮೆಟಾ ಒಡೆತನದ ಫೇಸ್​ಬುಕ್ ಹಾಗೂ ಇನ್​ಸ್ಟಾಗ್ರಾಮ್ ಹೆಚ್ಚು ಜನಪ್ರಿಯವಾಗುತ್ತಿದ್ದಂತೆ, ಟ್ಯೂನ್ಡ್​ ಹೆಸರಿನ ವಿಶೇಷ ಅಪ್ಲಿಕೇಶನ್​ ಅನ್ನು ಕಂಪೆನಿ ಪರಿಚಯಿಸಿತ್ತು. ಅದರಂತೆ ಕಳೆದ ಎರಡು ವರ್ಷಗಳಿಂದ ಟ್ಯೂನ್ಡ್ ಆ್ಯಪ್​ ಅನ್ನು 9 ಲಕ್ಷಕ್ಕೂ ಅಧಿಕ ಮಂದಿ ಬಳಸುತ್ತಿದ್ದಾರೆ. ಆದರೆ ಫೇಸ್​ಬುಕ್ ಹಾಗೂ ಇನ್​ಸ್ಟಾಗ್ರಾಮ್ ಜನಪ್ರಿಯತೆಗೆ ಹೋಲಿಸಿದರೆ ಇದು ತುಂಬಾ ಕಡಿಮೆ. ಹೀಗಾಗಿ ಕಂಪೆನಿಯು ತನ್ನ ನೂತನ ಆ್ಯಪ್​ ಅನ್ನು ಸ್ಥಗಿತಗೊಳಿಸಲು ಮುಂದಾಗಿದೆ ಎಂದು ವರದಿಯಾಗಿದೆ.

ಕಪಲ್ಸ್ ಆ್ಯಪ್ ಎಂದೇ ಜನಪ್ರಿಯವಾಗಿದ್ದ ಟ್ಯೂನ್ಡ್​ ಅಪ್ಲಿಕೇಶನ್ ಮೂಲಕ ದಂಪತಿಗಳು ದೂರವಿರುವಾಗಲೂ ಸಂಪರ್ಕದಲ್ಲಿರಲು ನೆರವಾಗುತ್ತಿತ್ತು. ಅಲ್ಲದೆ ಇದರಲ್ಲಿ ಕಪಲ್ಸ್ ಚಾಟಿಂಗ್​, ಫೋಟೊ ಶೇರಿಂಗ್, ಮ್ಯೂಸಿಕ್ ಹಂಚಿಕೊಳ್ಳುವ ಆಯ್ಕೆಗಳನ್ನು ಇದರಲ್ಲಿ ನೀಡಲಾಗಿತ್ತು. ಅಂದರೆ ಇಲ್ಲಿ ಕಪಲ್ಸ್​ಗಳು ತಮ್ಮ ವಿಚಾರಗಳನ್ನು ಖಾಸಗಿಯಾಗಿ ಹಂಚಿಕೊಳ್ಳಬಹುದಿತ್ತು. ಈ ಮೂಲಕ ಜೋಡಿಗಳು ಪರಸ್ಪರ ತಿಳಿದುಕೊಳ್ಳಲು, ಹೊಂದಾಣಿಕೆಯಿಂದ ಇರಲು ಇದು ಸಹಾಯ ಮಾಡಲಿದೆ ಎಂದು ನಿರೀಕ್ಷಿಸಲಾಗಿತ್ತು.

ಮೆಟಾದ ಹೊಸ ಉತ್ಪನ್ನ ಪ್ರಯೋಗ (NPE) ತಂಡವು  ದಂಪತಿ ಹಾಗೂ ಜೋಡಿಗಳನ್ನು ಕೇಂದ್ರೀಕರಿಸಿ ಈ ವಿಶೇಷ ಆ್ಯಪ್​ ಅನ್ನು ಪರಿಚಯಿಸಿತ್ತು. 2020 ರಿಂದ ಆ್ಯಪ್​ ಚಾಲ್ತಿಯಲ್ಲಿದ್ದರೂ ಅತೀ ಹೆಚ್ಚು ಇಂಟರ್​ನೆಟ್​ ಬಳಕೆದಾರರನ್ನು ಹೊಂದಿರುವ ಭಾರತದಲ್ಲಿ ಈ ಅಪ್ಲಿಕೇಶನ್ ಜನಪ್ರಿಯವಾಗಿರಲಿಲ್ಲ ಎಂಬುದೇ ಇಲ್ಲಿ ವಿಶೇಷ.

ಇದನ್ನೂ ಓದಿ
Image
Lady Singham: ಕೊನೆಗೂ ಲೇಡಿ ಸಿಂಗಮ್ ಅರೆಸ್ಟ್​..!
Image
Viral Video: ಒಳಗೆ ಸೇರಿದರೆ ಗುಂಡು…ಕುಡಿದ ಮತ್ತಿನಲ್ಲಿ ರಸ್ತೆಯಲ್ಲೇ ಯುವತಿಯ ರಂಪಾಟ..!
Image
Crime Story: ಪೊಲೀಸ್ ಮಗ, ಎಲ್​ಎಲ್​ಬಿ ಪದವೀಧರ: ಯಾರು ಈ ಡಾನ್ ಲಾರೆನ್ಸ್ ಬಿಷ್ಣೋಯ್?
Image
Crime Story: ಕಿಂಗ್ ಆಫ್ ಕ್ರೈಮ್: ದಾವೂದ್ ಇಬ್ರಾಹಿಂಗೆ ನಡುಕ ಹುಟ್ಟಿಸಿದ್ದ ಸ್ಲಂ ಡಾನ್

ಇದೀಗ ಈ ಅಪ್ಲಿಕೇಶನ್​ ಅನ್ನು ಸ್ಥಗಿತಗೊಳಿಸಲು ಮೆಟಾ ಕಂಪೆನಿ ಮುಂದಾಗಿದ್ದು, ಹೀಗಾಗಿ ಟ್ಯೂನ್ಡ್ ಬಳಕೆದಾರರಿಗೆ ಸೆಪ್ಟೆಂಬರ್ 19 ರ ಮೊದಲು ತಮ್ಮ ಡೇಟಾವನ್ನು ಡೌನ್‌ಲೋಡ್ ಮಾಡಿಟ್ಟುಕೊಳ್ಳುವಂತೆ ತಿಳಿಸಲಾಗಿದೆ. ಹೀಗಾಗಿ ಸೆ.19 ರ ಬಳಿಕ ಟ್ಯೂನ್ಡ್ ತನ್ನ ಕಾರ್ಯವನ್ನು ಸ್ಥಗಿತಗೊಳಿಸಲಿದೆ ಎಂದು ದಿ ವರ್ಜ್​ ವರದಿ ಮಾಡಿದೆ.

9 ಮಿಲಿಯನ್ ಬಳಕೆದಾರರು: ಟೆಕ್​ಕ್ರಂಚ್ ಸೆನ್ಸಾರ್ ಟವರ್ ಡೇಟಾ ಪ್ರಕಾರ, ಟ್ಯೂನ್ಡ್ ಆ್ಯಪ್ ಅನ್ನು Android ಮತ್ತು iOS ನಲ್ಲಿ ಸುಮಾರು 900,000 ಮಂದಿ ಡೌನ್‌ಲೋಡ್ ಮಾಡಿದ್ದಾರೆ. ಅದರಲ್ಲೂ ವಿದೇಶಗಳಲ್ಲಿ ಈ ಆ್ಯಪ್ ಜನಪ್ರಿಯತೆ ಪಡೆಯುತ್ತಾ ಬಂದಿತ್ತು. ಆದರೀಗ ದಿಢೀರಣೆ ಸ್ಥಗಿತಗೊಳಿಸಲು ಮುಂದಾಗುತ್ತಿರುವುದು ಬಳಕೆದಾರರ ಅಚ್ಚರಿಗೆ ಕಾರಣವಾಗಿದೆ. ಇದಾಗ್ಯೂ ಇಂತಹದೊಂದು ನಿರ್ಧಾರಕ್ಕೆ ಕಾರಣವೇನು ಎಂಬುದಕ್ಕೆ ಮೆಟಾ ಕಂಪೆನಿ ಸ್ಪಷ್ಟನೆ ನೀಡಿಲ್ಲ. ಇಲ್ಲಿ ಕುತೂಹಲಕಾರಿ ವಿಷಯೆಂದರೆ, ಇದೀಗ ಟ್ಯೂನ್ಡ್ ಸ್ಥಗಿತಗೊಳ್ಳಲಿದೆ ಎಂಬ ಸುದ್ದಿಯ ಮೂಲಕ ಈ ಆ್ಯಪ್ ವಿಶ್ವದಾದ್ಯಂತ ಸೋಷಿಯಲ್ ಮೀಡಿಯಾ ಪ್ರಿಯರ ಗಮನ ಸೆಳೆದಿದೆ.