Google Street View: ಬೆಂಗಳೂರು ಸೇರಿದಂತೆ ಭಾರತದ 10 ನಗರಗಳಲ್ಲಿ ಗೂಗಲ್ ಸ್ಟ್ರೀಟ್ ವ್ಯೂ ಆರಂಭ

Google Maps: ಸ್ಟ್ರೀಟ್‌ ವ್ಯೂ (Street View) ಆಯ್ಕೆ ಇದೀಗ ಕೊನೆಗೂ ಭಾರತದಲ್ಲಿ ಬಳಕೆಗೆ ಲಭ್ಯವಾಗಿದೆ. ಈ ಫೀಚರ್ ನಾವು ನೋಡಲು ಬಯಸುವ ಸ್ಥಳದ ರಸ್ತೆಯ ಮಟ್ಟದಿಂದ ಫೋಟೋಗಳನ್ನು ಒದಗಿಸುತ್ತದೆ. ಪ್ರವಾಸಿಗರು ಮುಖ್ಯವಾಗಿ ಮೊದಲ ಬಾರಿ ಯಾವುದಾದರೂ ಒಂದು ಸ್ಥಳಕ್ಕೆ ಭೇಟಿ ನೀಡುವ ಸಂದರ್ಭ ಈ ಫೀಚರ್ ಉಪಯುಕ್ತವಾಗಲಿದೆ.

Google Street View: ಬೆಂಗಳೂರು ಸೇರಿದಂತೆ ಭಾರತದ 10 ನಗರಗಳಲ್ಲಿ ಗೂಗಲ್ ಸ್ಟ್ರೀಟ್ ವ್ಯೂ ಆರಂಭ
Google Maps
Follow us
TV9 Web
| Updated By: Vinay Bhat

Updated on: Jul 28, 2022 | 12:34 PM

ಬಳಕೆದಾರು ಗೂಗಲ್ ಮ್ಯಾಪ್ಸ್​​ನಲ್ಲಿ (Google Maps) ಬಹಳ ಸಮಯದಿಂದ ಕಾಯುತ್ತಿದ್ದ ಸ್ಟ್ರೀಟ್‌ ವ್ಯೂ (Street View) ಆಯ್ಕೆ ಇದೀಗ ಕೊನೆಗೂ ಭಾರತದಲ್ಲಿ ಬಳಕೆಗೆ ಲಭ್ಯವಾಗಿದೆ. ಆರಂಭಿಕ ಹಂತದಲ್ಲಿ ಭಾರತದ 10 ಪ್ರಮುಖ ನಗರಗಳ ಬಳಕೆದಾರರು ಇದನ್ನು ಉಪಯೋಗಿಸಬಹುದಾಗಿದೆ. ಈ ಫೀಚರ್ 2016ರಲ್ಲೇ ಭಾರತದಲ್ಲಿ ಪ್ರಾರಂಭವಾಗಬೇಕಿತ್ತು. ಆದರೆ ಭಾರತ ಸರ್ಕಾರ ಈ ಫೀಚರ್ ಭದ್ರತಾ ಹಿತಾಸಕ್ತಿಗೆ ಧಕ್ಕೆ ತರುತ್ತದೆ ಎಂಬ ಕಾರಣಕ್ಕೆ ಅದನ್ನು ಪ್ರಾರಂಭಿಸಲು ವಿರೋಧ ವ್ಯಕ್ತಪಡಿಸಿತ್ತು. ಆದರೀಗ ಈ ಫೀಚರ್ ಕೊನೆಗೂ ಭಾರತಕ್ಕೂ ಲಗ್ಗೆಯಿಟ್ಟಿದೆ. ಬೆಂಗಳೂರು (Bengaluru), ಚೆನ್ನೈ, ದೆಹಲಿ, ಮುಂಬೈ, ಹೈದರಾಬಾದ್, ಪುಣೆ, ನಾಸಿಕ್, ವಡೋದರಾ, ಅಹಮದ್‌ನಗರ ಮತ್ತು ಅಮೃತಸರ ನಗರಗಳಲ್ಲಿ ಈ ಫೀಚರ್ ಆರಂಭಿಕ ಹಂತದಲ್ಲಿ ಸಿಗಲಿದ್ದು, ಶೀಘ್ರವೇ ದೇಶದ ಎಲ್ಲ ನಗರಗಳಲ್ಲಿ ಈ ಸೇವೆ ಲಭ್ಯವಾಗಲಿದೆ ಎಂದು ಕಂಪನಿ ಹೇಳಿದೆ.

ಗೂಗಲ್​ನ ಈ ಸ್ಟ್ರೀಟ್‌ ವ್ಯೂ ಫೀಚರ್ ಮೂಲಕ ಬಳಕೆದಾರರು ಮನೆಯಲ್ಲಿ ಕುಳಿತುಕೊಂಡು ಲ್ಯಾಂಡ್‌ ಮಾರ್ಕ್‌ಗಳನ್ನು ಎಕ್ಸ್‌ಪ್ಲೋರ್‌ ಮಾಡಬಹುದು. ಅದೇ ರೀತಿ, ವರ್ಚುವಲ್‌ ಆಗಿ ಯಾವುದೇ ರೆಸ್ಟೋರೆಂಟ್‌ ಅಥವಾ ಪ್ರದೇಶಗಳನ್ನು ಸುತ್ತಾಡಬಹುದು. ಇದರ ಮೂಲಕ ಅಲ್ಲೆಲ್ಲ ಸುತ್ತಾಡಿದ ಅನುಭವವನ್ನು ಪಡೆಯಬಹುದಾಗಿದೆ. ಸ್ಥಳೀಯ ಟ್ರಾಫಿಕ್ ಅಧಿಕಾರಿಗಳ ಸಹಭಾಗಿತ್ವದಲ್ಲಿ ಆಯಾ ರಸ್ತೆಯಲ್ಲಿನ ವೇಗದ ಮಿತಿ, ರಸ್ತೆ ತಡೆ, ಮತ್ತು ಅಡ್ಡಿಗಳ ಮಾಹಿತಿ ಮತ್ತು ಉತ್ತಮ ಆಪ್ಟಿಮೈಸ್ಡ್ ಟ್ರಾಫಿಕ್ ಲೈಟ್‌ಗಳನ್ನು ತೋರಿಸಲು ಗೂಗಲ್‌ ಮ್ಯಾಪ್ಸ್‌ ಈಗ ಸಹಾಯ ಮಾಡುತ್ತದೆ.

ಗೂಗಲ್ ಸ್ಟ್ರೀಟ್ ವ್ಯೂ ಫೀಚರ್ ನಾವು ನೋಡಲು ಬಯಸುವ ಸ್ಥಳದ ರಸ್ತೆಯ ಮಟ್ಟದಿಂದ ಫೋಟೋಗಳನ್ನು ಒದಗಿಸುತ್ತದೆ. ಪ್ರವಾಸಿಗರು ಮುಖ್ಯವಾಗಿ ಮೊದಲ ಬಾರಿ ಯಾವುದಾದರೂ ಒಂದು ಸ್ಥಳಕ್ಕೆ ಭೇಟಿ ನೀಡುವ ಸಂದರ್ಭ ಈ ಫೀಚರ್ ಬಹು ಉಪಯುಕ್ತವಾಗಲಿದೆ. ನಾವು ನೋಡಬಯಸುವ ಸ್ಥಳ ಮುಂಚಿತವಾಗಿಯೇ ಹೇಗೆ ಕಾಣಿಸುತ್ತದೆ ಎಂಬುದನ್ನು ನಾವು ರಸ್ತೆಯ ಮಟ್ಟದಿಂದಲೇ ನೋಡಬಹುದು. ಮಾತ್ರವಲ್ಲದೇ ಅದು ತೋರಿಸುವ ಒಂದೇ ಫೋಟೋ 360 ಡಿಗ್ರಿ ಆಂಗಲ್‌ನಿಂದಲೂ(ಪನರೊಮಾ) ವೀಕ್ಷಿಸಬಹುದು.

ಇದನ್ನೂ ಓದಿ
Image
Meta Tuned: ಟ್ಯೂನ್ಡ್ ಆ್ಯಪ್​ಗೆ ಗುಡ್​ ಬೈ ಹೇಳಲಿರುವ ಫೇಸ್​ಬುಕ್
Image
Vivo T1x: ಸದ್ದಿಲ್ಲದೆ ವಿವೋ T1X ಸ್ಮಾರ್ಟ್​​ಫೋನ್ ಮಾರಾಟ ಆರಂಭ: ಬೆಲೆ ಕೇವಲ 11,999 ರೂ.
Image
Reliance JIO: 56 GB ಡೇಟಾ, ಅನ್ಲಿಮಿಟೆಡ್ ಕಾಲ್: ಇದು ಜಿಯೋ ಕಂಪನಿಯ ಬಂಪರ್ ಆಫರ್
Image
Galaxy Z Fold 3 5G: ಒಂದೂವರೆ ಲಕ್ಷದ ಈ ಸ್ಯಾಮ್​ಸಂಗ್ ಮಡಚುವ ಫೋನ್ ಮೇಲೆ ಬಂಪರ್ ಡಿಸ್ಕೌಂಟ್

ಸ್ಟ್ರೀಟ್ ವ್ಯೂ ವೈಶಿಷ್ಟ್ಯದೊಂದಿಗೆ ರಸ್ತೆ ಹೇಗಿರುತ್ತದೆ? ಆ ಬೀದಿಯಲ್ಲಿ ಯಾವ ಅಂಗಡಿಗಳಿವೆ? ಎಂಬುದನ್ನು ತೋರಿಸುತ್ತದೆ. ಉದಾಹರಣೆಗೆ, ಬೆಂಗಳೂರಿನಲ್ಲಿ ಬೀದಿ ವೀಕ್ಷಣೆ ವೈಶಿಷ್ಟ್ಯವನ್ನು ಬಳಸಿದರೆ, ನೀಲಿ ಬಣ್ಣದಲ್ಲಿ ಕೆಲವು ಹೊಸ ಚುಕ್ಕೆಗಳು ನಕ್ಷೆಯಲ್ಲಿ ಕಾಣಿಸಿಕೊಳ್ಳುತ್ತವೆ. ನೀವು ಅವುಗಳ ಮೇಲೆ ಕ್ಲಿಕ್ ಮಾಡಿದರೆ, ಆ ಪ್ರದೇಶಕ್ಕೆ ಸಂಬಂಧಿಸಿದ ಬೀದಿಗಳು, ಅಂಗಡಿಗಳು ಮತ್ತು ಮನೆಗಳ ಉತ್ತಮ ಗುಣಮಟ್ಟದ 360 ಡಿಗ್ರಿ ಚಿತ್ರಗಳನ್ನು ನೀವು ನೋಡಬಹುದು.

ಭಾರತದಲ್ಲಿ ಗೂಗಲ್‌ ಸ್ಟ್ರೀಟ್‌ ವ್ಯೂ ಅನುಷ್ಠಾನಗೊಳಿಸುವುದಕ್ಕಾಗಿ ಜಿನೆಸಿಸ್ ಇಂಟರ್‌ನ್ಯಾಶನಲ್ ಜತೆಗೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದೆ. ಸುಧಾರಿತ ಮ್ಯಾಪಿಂಗ್ ಪರಿಹಾರಗಳ ಕಂಪನಿ ಮತ್ತು ಡಿಜಿಟಲ್ ರೂಪಾಂತರಕ್ಕಾಗಿ ಸಲಹಾ ಮತ್ತು ವ್ಯಾಪಾರ ಮರುಇಂಜಿನಿಯರಿಂಗ್ ಸೇವೆಗಳು ಮತ್ತು ಪರಿಹಾರಗಳ ಪ್ರಮುಖ ಪೂರೈಕೆದಾರ ಕಂಪನಿ ಟೆಕ್ ಮಹಿಂದ್ರಾ ಸಹಭಾಗಿತ್ವವನ್ನು ಪಡೆದುಕೊಂಡಿದೆ.