Google Pixel 6a: ಸದ್ದಿಲ್ಲದೆ ಭಾರತದಲ್ಲಿ ಗೂಗಲ್‌ ಪಿಕ್ಸೆಲ್‌ 6a ಬಿಡುಗಡೆ: ಖರೀದಿಗೆ ಯಾವಾಗ ಲಭ್ಯ?, ಬೆಲೆ ಎಷ್ಟು?

ಇದೀಗ ಸದ್ದಿಲ್ಲದೆ ಗೂಗಲ್‌ ಕಂಪನಿ ದೇಶದಲ್ಲಿ ಗೂಗಲ್‌ ಪಿಕ್ಸೆಲ್‌ 6a ಸ್ಮಾರ್ಟ್​​ಫೋನನ್ನು ಬಿಡುಗಡೆ ಮಾಡಿದೆ. ಜಾಗತೀಕ ಮಾರುಕಟ್ಟೆಯಲ್ಲಿ ಗೂಗಲ್‌ ಪಿಕ್ಸೆಲ್‌ 6a ಸ್ಮಾರ್ಟ್‌ಫೋನ್‌ ಬೆಲೆ $449 ಆಗಿದೆ. ಹಾಗಾದ್ರೆ ಭಾರತದಲ್ಲಿ ಬೆಲೆ ಎಷ್ಟು?

Google Pixel 6a: ಸದ್ದಿಲ್ಲದೆ ಭಾರತದಲ್ಲಿ ಗೂಗಲ್‌ ಪಿಕ್ಸೆಲ್‌ 6a ಬಿಡುಗಡೆ: ಖರೀದಿಗೆ ಯಾವಾಗ ಲಭ್ಯ?, ಬೆಲೆ ಎಷ್ಟು?
Google Pixel 6a
Follow us
TV9 Web
| Updated By: Vinay Bhat

Updated on:Jul 21, 2022 | 2:52 PM

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ (Google) ತನ್ನ ವಾರ್ಷಿಕ ಸಮ್ಮೆಳನ ಗೂಗಲ್‌ I/O ನಲ್ಲಿ ಬಹುನಿರೀಕ್ಷಿತ ಗೂಗಲ್‌ ಪಿಕ್ಸೆಲ್‌ 6(Google Pixel 6a) ಸ್ಮಾರ್ಟ್‌ಪೋನನ್ನು ಬಿಡುಗಡೆ ಮಾಡಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಹಿಂದಿನ ಪಿಕ್ಸೆಲ್ 6 ಮತ್ತು ಪಿಕ್ಸೆಲ್ 6 ಪ್ರೊ ಸ್ಮಾರ್ಟ್‌ಫೋನ್‌ಗಳಿಗೆ (Smartphone) ಹೋಲಿಸಿದರೆ ಅತ್ಯಂತ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಆದರೆ, ಇದು ಭಾರತದಲ್ಲಿ ಅನಾವರಣಗೊಳ್ಳುವ ಬಗ್ಗೆ ಕಂಪನಿ ಬಹಿರಂಗ ಪಡಿಸಿರಲಿಲ್ಲ. ಇದೀಗ ಸದ್ದಿಲ್ಲದೆ ಕಂಪನಿ ದೇಶದಲ್ಲಿ ಗೂಗಲ್‌ ಪಿಕ್ಸೆಲ್‌ 6a ಸ್ಮಾರ್ಟ್​​ಫೋನನ್ನು ಬಿಡುಗಡೆ ಮಾಡಿದೆ. ಜಾಗತೀಕ ಮಾರುಕಟ್ಟೆಯಲ್ಲಿ ಗೂಗಲ್‌ ಪಿಕ್ಸೆಲ್‌ 6a ಸ್ಮಾರ್ಟ್‌ಫೋನ್‌ ಬೆಲೆ $449 ಆಗಿದೆ. ಹಾಗಾದ್ರೆ ಭಾರತದಲ್ಲಿ ಬೆಲೆ ಎಷ್ಟು? ಏನೆಲ್ಲ ವಿಶೇಷತೆ ಇದೆ ಎಂಬುದನ್ನು ನೋಡೋಣ.

  1. ಭಾರತದಲ್ಲಿ ಗೂಗಲ್‌ ಪಿಕ್ಸೆಲ್‌ 6a ಸ್ಮಾರ್ಟ್​​ಫೋನ್ 6GB +128GB ಸ್ಟೋರೇಜ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗುತ್ತದೆ. ಇದರ ಬೆಲೆ 43,999 ರೂ. ಆಗಿದೆ. ಜುಲೈ 28 ರಿಂದ ಫ್ಲಿಪ್​ಕಾರ್ಟ್​ ಮೂಲಕ ಮಾರಾಟ ಕಾಣಲಿದೆ.
  2. ಗೂಗಲ್‌ ಪಿಕ್ಸೆಲ್‌ 6a ಸ್ಮಾರ್ಟ್‌ಫೋನ್‌ 6.1 ಇಂಚಿನ ಫುಲ್‌ HD+ OLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಿಂದ ಕೂಡಿದ್ದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್‌ ಮತ್ತು 90Hz ರಿಫ್ರೆಶ್ ರೇಟ್‌ ಅನ್ನು ಒಳಗೊಂಡಿದೆ.
  3. ಆಕ್ಟಾಕೋರ್ ಗೂಗಲ್ ಟೆನ್ಸರ್ GS101 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್ 12 ಔಟ್ಆಫ್ದಿಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಸ್ಮಾರ್ಟ್‌ಫೋನ್ ಕನಿಷ್ಠ ಐದು ವರ್ಷಗಳ ಭದ್ರತಾ ನವೀಕರಣಗಳನ್ನು ಪಡೆಯುತ್ತದೆ ಎಂದು ಗೂಗಲ್ ಕಂಪೆನಿ ತಿಳಿಸಿದೆ.
  4. ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 12 ಮೆಗಾಪಿಕ್ಸೆಲ್ ಸೆನ್ಸಾರ್‌ ಮತ್ತು ಎರಡನೇ ಕ್ಯಾಮೆರಾ ಕೂಡ 12 ಮೆಗಾಪಿಕ್ಸೆಲ್ ಸೆನ್ಸಾರ್‌ ಅಲ್ಟ್ರಾವೈಡ್ಆಂಗಲ್ ಲೆನ್ಸ್‌ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.
  5. ಇದನ್ನೂ ಓದಿ
    Image
    Nothing Phone (1): ಇಂದಿನಿಂದ ನಥಿಂಗ್ ಫೋನ್ (1) ಸೇಲ್ ಆರಂಭ: ಖರೀದಿಗೆ ಕ್ಯೂ ನಿಂತ ಜನರು, ಆದರೆ…
    Image
    Apple Watch: ಮಹಿಳೆಯ ಪ್ರಾಣ ಉಳಿಸಿದ ಆ್ಯಪಲ್ ಸ್ಮಾರ್ಟ್​​ವಾಚ್: ಹೇಗೆ ಗೊತ್ತೇ?
    Image
    Airte-Vi: ಪ್ರೈಮ್ ಡೇ ಸೇಲ್​ಗೆ ಬಂಪರ್ ಆಫರ್: ಏರ್ಟೆಲ್, ವಿ ಮೂಲಕ ಉಚಿತ ಮೆಂಬರ್​ಶಿಪ್ ಪಡೆಯಿರಿ
    Image
    Redmi K50i 5G: 67W ಫಾಸ್ಟ್ ಚಾರ್ಜಿಂಗ್, ಕಡಿಮೆ ಬೆಲೆ: ಭಾರತದಲ್ಲಿ ಬಹುನಿರೀಕ್ಷಿತ ರೆಡ್ಮಿ K50i ಸ್ಮಾರ್ಟ್‌ಫೋನ್ ಬಿಡುಗಡೆ
  6. ಈ ಫೋನ್‌ನ ರಿಯರ್‌ ಕ್ಯಾಮೆರಾ 30fps ನಲ್ಲಿ 4K ವಿಡಿಯೋ ರೆಕಾರ್ಡಿಂಗ್ ಅನ್ನು ನೀಡುತ್ತದೆ. ಸೆಲ್ಫಿ ಕ್ಯಾಮೆರಾ ಅಂದರೆ ಮುಂಭಾಗದ ಕ್ಯಾಮರಾ 30fps ನಲ್ಲಿ 1080p ವರೆಗೆ ವೀಡಿಯೊ ರೆಕಾರ್ಡಿಂಗ್ ಬೆಂಬಲವನ್ನು ಹೊಂದಿದೆ.
  7. ಗೂಗಲ್‌ ಪಿಕ್ಸೆಲ್‌ 6a ಸ್ಮಾರ್ಟ್‌ಫೋನ್‌ 4,306mAh ಬ್ಯಾಟರಿಯನ್ನುಹೊಂದಿದೆ. ಇದು 24 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಮತ್ತು 72 ಗಂಟೆಗಳವರೆಗೆ ಬ್ಯಾಕಪ್ ಅನ್ನು ಒಳಗೊಂಡಿರುವ ಬ್ಯಾಟರಿ ಸೇವರ್ ಮೋಡ್‌ ಹೊಂದಿದೆ.
  8. ಬ್ಯಾಟರಿಗೆ ತಕ್ಕಂತೆ ಫಾಸ್ಟ್ ಚಾರ್ಜರ್ ಆಯ್ಕೆ ಕೂಡ ನೀಡಲಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6E, ಬ್ಲೂಟೂತ್ 5.2, ಮತ್ತು USB ಟೈಪ್-C ಪೋರ್ಟ್ ಸೇರಿವೆ.

Published On - 2:50 pm, Thu, 21 July 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್