Redmi 10A Sport: ಬಜೆಟ್ ಬೆಲೆ, ಬಂಪರ್ ಫೀಚರ್: ಭಾರತದಲ್ಲಿ ರೆಡ್ಮಿಯ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ

Redmi 10A Sport Price: ಶವೋಮಿ ಇದೀಗ ಭಾರತದಲ್ಲಿ ರೆಡ್ಮಿ 10ಎ ಸ್ಪೋರ್ಟ್ (Redmi 10A Sport) ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಿದೆ. ಇದು ಕಳೆದ ಏಪ್ರಿಲ್​ನಲ್ಲಿ ಬಿಡುಗಡೆ ಆದ ರೆಡ್ಮಿ 10A ಫೋನಿನ ಮುಂದಿನ ವರ್ಷನ್ ಇದಾಗಿದೆ.

Redmi 10A Sport: ಬಜೆಟ್ ಬೆಲೆ, ಬಂಪರ್ ಫೀಚರ್: ಭಾರತದಲ್ಲಿ ರೆಡ್ಮಿಯ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ
Redmi 10A Sport
TV9kannada Web Team

| Edited By: Vinay Bhat

Jul 28, 2022 | 2:05 PM

ವಿಶ್ವದ ಸ್ಮಾರ್ಟ್​​ಫೋನ್ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮೊಬೈಲ್​ಗಳನ್ನು ಬಿಡುಗಡೆ ಮಾಡಿ ನಂಬರ್ ಒನ್ ಸ್ಥಾನದಲ್ಲಿರುವ ಶವೋಮಿ (Xiaomi) ಕಂಪನಿಯ ರೆಡ್ಮಿ ಫೋನ್​ಗಳಿಗೆ ಬೇಡಿಕೆ ಏರಿಕೆಯಾಗುತ್ತಿದೆ. ಅತ್ಯಂತ ಕಡಿಮೆ ಬೆಲೆಗೆ ಒಂದರ ಹಿಂದೆ ಒಂದರಂತೆ ರೆಡ್ಮಿ ಫೋನ್​ಗಳನ್ನು ಬಿಡುಗಡೆ ಮಾಡುತ್ತಿರುವ ಶವೋಮಿ ಇದೀಗ ಭಾರತದಲ್ಲಿ ರೆಡ್ಮಿ 10ಎ ಸ್ಪೋರ್ಟ್ (Redmi 10A Sport) ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಿದೆ. ಇದು ಕಳೆದ ಏಪ್ರಿಲ್​ನಲ್ಲಿ ಬಿಡುಗಡೆ ಆದ ರೆಡ್ಮಿ 10A ಫೋನಿನ ಮುಂದಿನ ವರ್ಷನ್ ಇದಾಗಿದೆ. ಆಕರ್ಷಕ ಫೀಚರ್​​ಗಳನ್ನು ಪಡೆದುಕೊಂಡಿರುವ ರೆಡ್ಮಿ 10A ಸ್ಪೋರ್ಟ್ ಫೋನ್​ನಲ್ಲಿ 5000mAh ಬ್ಯಾಟರಿ ಬ್ಯಾಕ್‌ಅಪ್‌, ಮೀಡಿಯಾ ಟೆಕ್ ಹಿಲಿಯೋ ಪ್ರೊಸೆಸರ್‌, ಆಕರ್ಷಕ ಕ್ಯಾಮೆರಾ ಸೇರಿದಂತೆ ಅನೇಕ ಆಯ್ಕೆಗಳಿವೆ. ಹಾಗಾದ್ರೆ ಈ ಸ್ಮಾರ್ಟ್​ಫೋನ್​ನ (Smartphone) ಬೆಲೆ ಎಷ್ಟು?, ಏನು ವಿಶೇಷತೆ ಎಂಬ ಬಗೆಗಿನ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ.

ಇದನ್ನೂ ಓದಿ

  1. ರೆಡ್ಮಿ 10A ಸ್ಪೋರ್ಟ್ ಸ್ಮಾರ್ಟ್‌ಫೋನ್‌ ಸದ್ಯಕ್ಕೆ ಒಂದು ಸ್ಟೋರೆಜ್ ಮಾದರಿಯಲ್ಲಿ ಬಿಡುಗಡೆ ಆಗಿದೆ. ಇದರ 6GB RAM ಮತ್ತು 128GB ಸ್ಟೋರೆಜ್ ರೂಪಾಂತರಕ್ಕೆ ಕೇವಲ 10,999 ರೂ. ನಿಗದಿ ಮಾಡಲಾಗಿದೆ.
  2. ಈ ಸ್ಮಾರ್ಟ್​​ಫೋನ್ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಮತ್ತು ಶವೋಮಿಯ ಅಧಿಕೃತ ವೆಬ್​ಸೈಟ್​ ಎಂಐ.ಕಾಮ್​ನಲ್ಲಿ ಖರೀದಿಗೆ ಸಿಗಲಿದೆ.
  3. ರೆಡ್ಮಿ 10A ಸ್ಪೋರ್ಟ್ ಸ್ಮಾರ್ಟ್‌ಫೋನ್​ನ ವಿಶೇಷತೆ ಬಗ್ಗೆ ನೋಡುವುದಾದರೆ ಇದು 1600*720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.53 ಇಂಚಿನ ಫುಲ್‌ ಹೆಚ್‌ಡಿ + ಐಪಿಎಸ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 20:9 ರಚನೆಯ ಅನುಪಾತವನ್ನು ಪಡೆದುಕೊಂಡಿದೆ.
  4. ಮೀಡಿಯಾ ಟೆಕ್ ಹಿಲಿಯೋ G25 ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸುತ್ತದೆ. ಇದಕ್ಕೆ ಪೂರಕವಾಗಿ ಇತ್ತೀಚಿನ ಆಂಡ್ರಾಯ್ಡ್ ಓಎಸ್‌ ಸಪೋರ್ಟ್‌ ಪಡೆದಿದೆ. 512GB ಮೆಮೋರಿಯನ್ನು ವಿಸ್ತರಿಸಬಹುದಾಗಿದೆ.
  5. ವಿಶೇಷವಾದ ಸಿಂಗಲ್ ಕ್ಯಾಮೆರಾ ಹೊಂದಿದೆ. ಈ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಿಂದ ಕೂಡಿದೆ. f/2.2 ಅಪಾರ್ಚರ್ ಜೊತೆಗೆ ಎಲ್​ಇಡಿ ಫ್ಲಾಶ್ ನೀಡಲಾಗದೆ. ಇದಲ್ಲದೆ 5 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.
  6. ದೀರ್ಘ ಸಮಯ ಬಾಳಿಕೆ ಬರುವ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಇದರಲ್ಲಿದೆ. ಇದಕ್ಕೆ ಪೂರಕವಾಗಿ 10W ಚಾರ್ಜಿಂಗ್ ಸಪೋರ್ಟ್‌ ಸಹ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಯಲ್ಲಿ 4G LTE, Wi-Fi, ಬ್ಲೂಟೂತ್ v5.0, ಜಿಪಿಎಸ್/ A-ಜಿಪಿಎಸ್ ನೀಡಲಾಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada