Galaxy Z Fold 3 5G: ಒಂದೂವರೆ ಲಕ್ಷದ ಈ ಸ್ಯಾಮ್​ಸಂಗ್ ಮಡಚುವ ಫೋನ್ ಮೇಲೆ ಬಂಪರ್ ಡಿಸ್ಕೌಂಟ್

Galaxy Z Fold 3 5G Price Cut: ಗ್ಯಾಲಕ್ಸಿ Z ಫೋಲ್ಡ್ 3 5G ಸ್ಮಾರ್ಟ್​​ಫೋನ್ ಕಳೆದ ವರ್ಷ ಆಗಸ್ಟ್​​ನಲ್ಲಿ ದೇಶದಲ್ಲಿ ರಿಲೀಸ್ ಆಗಿತ್ತು. ಇದರ 12GB RAM ಮತ್ತು 256GB ಸ್ಟೋರೇಜ್ ಆಯ್ಕೆಗೆ 1,49,999 ರೂ. ಇತ್ತು.

Galaxy Z Fold 3 5G: ಒಂದೂವರೆ ಲಕ್ಷದ ಈ ಸ್ಯಾಮ್​ಸಂಗ್ ಮಡಚುವ ಫೋನ್ ಮೇಲೆ ಬಂಪರ್ ಡಿಸ್ಕೌಂಟ್
Galaxy Z Fold3 5G
Follow us
TV9 Web
| Updated By: Vinay Bhat

Updated on:Jul 26, 2022 | 2:22 PM

ಸ್ಯಾಮ್​ಸಂಗ್ (Samsung) ಕಂಪನಿ ಇತ್ತೀಚೆಗಷ್ಟೆ ತನ್ನ ಅತಿ ದೊಡ್ಡ ಗ್ಯಾಲಕ್ಸಿ ಅನ್​ಪ್ಯಾಕ್ಡ್​ ಈವೆಂಟ್ ದಿನಾಂಕವನ್ನು ಘೋಷಿಸಿದೆ. ಇದು ಆಗಸ್ಟ್ 10 ರಂದು ನಡೆಯಲಿದೆ. ಇದರಲ್ಲಿ ಕಂಪನಿ ತನ್ನ ಮುಂದಿನ ವರ್ಷನ್​ನ ಫೋಲ್ಡೆಬಲ್ ಸ್ಮಾರ್ಟ್​​ಫೋನನ್ನು (Smartphone) ಅನಾವರಣ ಮಾಡುವ ಸಂಭವವಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸ್ಯಾಮ್​ಸಂಗ್ ಒಂದು ಹಿಂಟ್ ಕೊಟ್ಟಿದ್ದು ಕಳೆದ ವರ್ಷ ಬಿಡುಗಡೆ ಆದ ದುಬಾರಿ ಬೆಲೆಯ ಗ್ಯಾಲಕ್ಸಿ ಝಡ್ ಫೋಲ್ಡ್ 3 5ಜಿ (Galaxy Z Fold 3 5G) ಫೋನ್ ಬೆಲೆಯಲ್ಲಿ ಬಂಪರ್ ಡಿಸ್ಕೌಂಟ್ ಘೋಷಿಸಿದೆ. ಈ ಸ್ಮಾರ್ಟ್​​ಫೋನ್ ಭಾರತದಲ್ಲಿ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಅನಾವರಣಗೊಂಡಿತ್ತು. ಇದೀಗ ಈ ಎರಡೂ ಆವೃತ್ತಿ ಆಕರ್ಷಕ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡದೆ. ಹಾಗಾದ್ರೆ ಗ್ಯಾಲಕ್ಸಿ Z ಫೋಲ್ಡ್ 3 ಈಗ ಎಷ್ಟು ರೂಪಾಯಿಗೆ ದೊರೆಯುತ್ತಿದೆ?, ಇದರ ವಿಶೇಷತೆ ಏನೇನು? ಎಂಬುದನ್ನು ನೋಡೋಣ.

ಗ್ಯಾಲಕ್ಸಿ Z ಫೋಲ್ಡ್ 3 5G ಸ್ಮಾರ್ಟ್​​ಫೋನ್ ಕಳೆದ ವರ್ಷ ಆಗಸ್ಟ್​​ನಲ್ಲಿ ದೇಶದಲ್ಲಿ ರಿಲೀಸ್ ಆಗಿತ್ತು. ಇದರ 12GB RAM ಮತ್ತು 256GB ಸ್ಟೋರೇಜ್ ಆಯ್ಕೆಗೆ 1,49,999 ರೂ. ಇತ್ತು. ಅಂತೆಯೆ 12GB RAM ಮತ್ತು 512GB ಸ್ಟೋರೇಜ್ ರೂಪಾಂತರಕ್ಕೆ 1,57,999 ರೂ. ಇತ್ತು. ಇದೀಗ ಈ ಎರಡೂ ವೇರಿಯಂಟ್​ನಲ್ಲಿ 10,000 ರೂ. ಗಳ ಆಕರ್ಷಕ ಡಿಸ್ಕೌಂಟ್ ನೀಡಲಾಗಿದೆ. ಸದ್ಯ ಈ ಫೋನಿನ 12GB RAM ಮತ್ತು 256GB ಸ್ಟೋರೇಜ್ 1,39,999 ರೂ. ಗೆ ಮಾರಾಟ ಕಾಣುತ್ತಿದೆ. ಅಂತೆಯೆ 12GB RAM ಮತ್ತು 512GB ಸ್ಟೋರೇಜ್ ರೂಪಾಂತವು 1,47,999 ರೂ. ಗೆ ಸಿಗುತ್ತಿದೆ.

ಗ್ರಾಹಕರು ಈ ಫೋನನ್ನು ಪ್ಯಾಂಥಮ್ ಬ್ಲಾಕ್, ಪ್ಯಾಂಥಮ್ ಗ್ರೀನ್ ಮತ್ತು ಪ್ಯಾಂಥಮ್ ಸಿಲ್ವರ್ ಕಲರ್​ನಲ್ಲಿ ಖರೀದಿಸಬಹುದು. ಸ್ಯಾಮ್​ಸಂಗ್ ಕಂಪನಿಯ ಅಧಿಕೃತ ವೆಬ್​ಸೈಟ್​ನಲ್ಲೂ ಈ ಆಫರ್ ನೀಡಲಾಗಿದೆ. ಜೊತೆಗೆ ನೋ ಕಾಸ್ಟ್ ಇಎಮ್​ಐ ಆಯ್ಕೆ ಇದೆ. ಇದರ ಜೊತೆಗೆ ಗ್ಯಾಲಕ್ಸಿ ವಾಚ್ ಅನ್ನು ಕೇವಲ 2,999 ರೂ. ಗೆ ನಿಮ್ಮದಾಗಿಸಬಹುದು.

ಇದನ್ನೂ ಓದಿ
Image
WhatsApp: ಐಫೋನ್ ಬಳಕೆದಾರರಿಗೆ ಸಂತಸದ ಸುದ್ದಿಕೊಟ್ಟ ವಾಟ್ಸ್​ಆ್ಯಪ್​: ಇನ್ನುಂದೆ ಹೀಗೂ ಮಾಡಬಹುದು
Image
5G Auctions: ಇಂದಿನಿಂದ 5G ಸ್ಪೆಕ್ಟ್ರಮ್ ಹರಾಜು: ಅಖಾಡದಲ್ಲಿದೆ 4 ಕಂಪನಿಗಳು, ಇಲ್ಲಿದೆ ಎಲ್ಲ ಮಾಹಿತಿ
Image
Gmail: ನಿಮ್ಮ ಜಿಮೇಲ್​ನಲ್ಲಿ ಸ್ಟೋರೇಜ್ ಫುಲ್ ಆಗಿದೆಯೇ?: ದೊಡ್ಡ ಘಾತ್ರದ ಫೈಲ್​​ಗಳನ್ನು ಸೆಕೆಂಡ್​ಗಳಲ್ಲಿ ಡಿಲೀಟ್ ಮಾಡಿ
Image
WhatsApp: ಬಹುಮುಖ್ಯವಾದ ಕಾಂಟೆಕ್ಟ್ ಅನ್ನು ವಾಟ್ಸ್​ಆ್ಯಪ್ ಚಾಟ್​ನಲ್ಲಿ ಪಿನ್ ಮಾಡುವುದು ಹೇಗೆ?

ಗ್ಯಾಲಕ್ಸಿ ಫೋಲ್ಡ್‌ 3 ಸ್ಮಾರ್ಟ್‌ಫೋನ್ 7.6 ಇಂಚಿನ ಡೈನಾಮಿಕ್ AMOLED 2X ಇನ್ಫಿನಿಟಿ ಫ್ಲೆಕ್ಸ್ ಡ್ಯುಯಲ್ ಡಿಸ್‌ಪ್ಲೇ ರಚನೆಯನ್ನು ಹೊಂದಿದೆ. ಡಿಸ್‌ಪ್ಲೇ ಅನುಪಾತವು 22.5:18 ಆಗಿದೆ. ಹಾಗೆಯೇ ಫೋನಿನ ಕವರ್‌ ಸ್ಕ್ರೀನ್ 6.2-ಇಂಚಿನ HD+ (832×2,268 ಪಿಕ್ಸೆಲ್‌ಗಳು) ಡೈನಾಮಿಕ್ AMOLED 2X ಡಿಸ್‌ಪ್ಲೇ 120Hz ರಿಫ್ರೆಶ್ ದರದಲ್ಲಿದೆ.

ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 888 ಪ್ರೊಸೆಸರ್ ಹೊಂದಿದ್ದು, ಅದಕ್ಕೆ ಪೂರಕವಾಗಿ ಒನ್ UI ಬೆಂಬಲಿತ ಆಂಡ್ರಾಯ್ಡ್‌ 11 ಓಎಸ್‌ ಸಪೋರ್ಟ್ ಇದೆ. ಹಿಂಬದಿಯಲ್ಲಿ ಒಟ್ಟು ಮೂರು ರಿಯರ್‌ ಕ್ಯಾಮೆರಾ ನೀಡಲಾಗಿದೆ. ಇದರಲ್ಲಿನ ಮೂರು ಕ್ಯಾಮೆರಾಗಳು ಕ್ರಮವಾಗಿ 12 ಮೆಗಾ ಪಿಕ್ಸಲ್ ಸೆನ್ಸಾರ್‌ ಪಡೆದಿವೆ. ಇನ್ನು ಸೆಲ್ಫಿ ಕ್ಯಾಮೆರಾ 10 ಎಂಪಿ ಸೆನ್ಸಾರ್‌ನಲ್ಲಿದೆ. 4,400mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದ್ದು, ಇದರೊಂದಿಗೆ 25W ಫಾಸ್ಟ್‌ ಚಾರ್ಜಿಂಗ್ ಬೆಂಬಲವನ್ನು ಸಹ ಹೊಂದಿದೆ. ಅಮೆಜಾನ್​ ಮತ್ತು ಫ್ಲಿಪ್​ಕಾರ್ಟ್​ನಲ್ಲೂ ಈ ಸ್ಮಾರ್ಟ್​​ಫೋನ್ ಮಾರಾಟ ಕಾಣುತ್ತಿದೆ.

Published On - 2:22 pm, Tue, 26 July 22

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ