WhatsApp: ಐಫೋನ್ ಬಳಕೆದಾರರಿಗೆ ಸಂತಸದ ಸುದ್ದಿಕೊಟ್ಟ ವಾಟ್ಸ್​ಆ್ಯಪ್​: ಇನ್ನುಂದೆ ಹೀಗೂ ಮಾಡಬಹುದು

ಈ ಬಗ್ಗೆ ಸ್ವತಃ ವಾಟ್ಸ್​ಆ್ಯಪ್ ಮಾಹಿತಿ ನೀಡಿದ್ದು, ಇದೀಗ ಐಫೋನ್ ಬಳಕೆದಾರರು ಆಂಡ್ರಾಯ್ಡ್​ ಫೋನ್​ನಲ್ಲಿದ್ದ ತಮ್ಮ ಡೇಟಾವನ್ನು ಟ್ರಾನ್ಫರ್ ಮಾಡಬಹುದು. ಹಾಗೆಯೆ ಐಫೋನ್​ನಲ್ಲಿದ್ದ ವಾಟ್ಸ್​ಆ್ಯಪ್ ಡಾಟಾವನ್ನು ಐಫೋನ್​ಗೂ ವರ್ಗಾವಣೆ ಮಾಡಬಹುದು ಎಂದು ಹೇಳಿದೆ.

WhatsApp: ಐಫೋನ್ ಬಳಕೆದಾರರಿಗೆ ಸಂತಸದ ಸುದ್ದಿಕೊಟ್ಟ ವಾಟ್ಸ್​ಆ್ಯಪ್​: ಇನ್ನುಂದೆ ಹೀಗೂ ಮಾಡಬಹುದು
WhatsApp
Follow us
TV9 Web
| Updated By: Vinay Bhat

Updated on:Jul 26, 2022 | 12:21 PM

ವಿಶ್ವದಲ್ಲಿ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ (WhatsApp) ಈ ವರ್ಷ ಹಿಂದೆಂದೂ ಬಿಡುಗಡೆ ಮಾಡದ ಅನೇಕ ಫೀಚರ್​ಗಳನ್ನು ಪರಿಚಯಿಸಿದೆ. ಇನ್ನೂ ಕೂಡ ಅನೇಕ ಫೀಚರ್​ಗಳು ಬರಲು ಸಾಲು ನಿಂತಿದ್ದು ಕೆಲವೊಂದು ಪರೀಕ್ಷಾ ಹಂತದಲ್ಲಿದೆ. ಹೀಗಿರುವಾ ಐಫೋನ್ (iPhone) ಬಳಕೆದಾರರಿಗೆ ವಾಟ್ಸ್​ಆ್ಯಪ್ ಉಪಯುಕ್ತವಾದ ಫೀಚರ್ ಒಂದನ್ನು ನೀಡಿದೆ. ಇದೀಗ ಆ್ಯಪಲ್ ಬಳಕೆದಾರರು ಆಂಡ್ರಾಯ್ಡ್​ ಫೋನ್​ನಿಂದ (Android Phone) ತಮ್ಮ ಐಫೋನ್​ಗೆ ವಾಟ್ಸ್​ಆ್ಯಪ್​ನ ಸಂಪೂರ್ಣ ಡಾಟಾವನ್ನು ವರ್ಗಾವಣೆ ಮಾಡಬಹುದು. ಈ ಮೂಲಕ ಐಫೋನ್ ಬಳಕೆದಾರರು ಸಾಕಷ್ಟು ಸಮಯದಿಂದ ಅನುಭವಿಸುತ್ತಿದ್ದ ತೊಂದರೆಗೆ ಕೊನೆಗೂ ಮುಕ್ತಿ ಸಿಕ್ಕಿದೆ.

ಈ ಬಗ್ಗೆ ಸ್ವತಃ ವಾಟ್ಸ್​ಆ್ಯಪ್ ಮಾಹಿತಿ ನೀಡಿದ್ದು, ಇದೀಗ ಐಫೋನ್ ಬಳಕೆದಾರರು ಆಂಡ್ರಾಯ್ಡ್​ ಫೋನ್​ನಲ್ಲಿದ್ದ ತಮ್ಮ ಡೇಟಾವನ್ನು ಟ್ರಾನ್ಫರ್ ಮಾಡಬಹುದು. ಹಾಗೆಯೆ ಐಫೋನ್​ನಲ್ಲಿದ್ದ ವಾಟ್ಸ್​ಆ್ಯಪ್ ಡಾಟಾವನ್ನು ಐಫೋನ್​ಗೂ ವರ್ಗಾವಣೆ ಮಾಡಬಹುದು ಎಂದು ಹೇಳಿದೆ. ನಿಮ್ಮ ಪ್ರೊಫೈಲ್ ಪೋಟೋ, ವೈಯಕ್ತಿಕ ಚಾಟ್, ಗ್ರೂಪ್ ಚಾಟ್, ಚಾಟ್ ಹಿಸ್ಟರಿ, ಮಿಡಿಯಾ ಫೈಲ್ ಮಾತ್ರವಲ್ಲದೆ ಸೆಟ್ಟಿಂಗ್ಸ್​ ಕೂಡ ವರ್ಗಾವಣೆ ಆಗುತ್ತಿದೆ.

ಇದನ್ನೂ ಓದಿ
Image
5G Auctions: ಇಂದಿನಿಂದ 5G ಸ್ಪೆಕ್ಟ್ರಮ್ ಹರಾಜು: ಅಖಾಡದಲ್ಲಿದೆ 4 ಕಂಪನಿಗಳು, ಇಲ್ಲಿದೆ ಎಲ್ಲ ಮಾಹಿತಿ
Image
Gmail: ನಿಮ್ಮ ಜಿಮೇಲ್​ನಲ್ಲಿ ಸ್ಟೋರೇಜ್ ಫುಲ್ ಆಗಿದೆಯೇ?: ದೊಡ್ಡ ಘಾತ್ರದ ಫೈಲ್​​ಗಳನ್ನು ಸೆಕೆಂಡ್​ಗಳಲ್ಲಿ ಡಿಲೀಟ್ ಮಾಡಿ
Image
WhatsApp: ಬಹುಮುಖ್ಯವಾದ ಕಾಂಟೆಕ್ಟ್ ಅನ್ನು ವಾಟ್ಸ್​ಆ್ಯಪ್ ಚಾಟ್​ನಲ್ಲಿ ಪಿನ್ ಮಾಡುವುದು ಹೇಗೆ?
Image
Best Camera Phone: ಆಕರ್ಷಕ ಟ್ರಿಪಲ್ ಕ್ಯಾಮೆರಾ ಹೊಂದಿರುವ 15,000 ರೂ. ಒಳಗಿನ ಬೆಸ್ಟ್​ ಫೋನ್ ಇಲ್ಲಿದೆ ನೋಡಿ

ಆಂಡ್ರಾಯ್ಡ್​ನಿಂದ ಐಫೋನ್​ಗೆ ಡೇಟಾ ವರ್ಗಾವಣೆ ಹೇಗೆ?:

  • ಇದಕ್ಕಾಗಿ ಮೊದಲು ನೀವು ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್​ಫೋನ್​ನಲ್ಲಿ Move to iOS ಆ್ಯಪ್ ಅನ್ನು ಇನ್​ಸ್ಟಾಲ್ ಮಾಡಿಕೊಳ್ಳಬೇಕು.
  • ನಿಮ್ಮ ಐಫೋನ್​ನಲ್ಲಿ ಒಂದು ಕೋಡ್ ಡಿಸ್ ಪ್ಲೇ ಆಗುತ್ತದೆ. ಆಂಡ್ರಾಯ್ಡ್ ಫೋನಲ್ಲಿ ಕೋಡ್ ಕೇಳಿದಾಗ ಅದನ್ನು ಹಾಕಬೇಕು.
  • ಈಗ ವಾಟ್ಸ್​ಆ್ಯಪ್​ನಲ್ಲಿ ಕಾಣಿಸುವ ಟ್ರಾನ್ಫರ್ ಡೇಟಾ ಆಯ್ಕೆಯನ್ನು ಒತ್ತಿರಿ.
  • ನಂತರ ನಿಮ್ಮ ಆಂಡ್ರಾಯ್ಡ್​ ಫೋನನ್ನಲ್ಲಿ START ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಡೇಟಾ ವರ್ಗಾವಣೆಗೆ ತಯಾರಾಗಲು ವಾಟ್ಸ್​ಆ್ಯಪ್ ಕೆಲ ಸಮಯ ತೆಗೆದುಕೊಳ್ಳುತ್ತದೆ.
  • ಡೇಟಾ ಟ್ರಾನ್ಫರ್ ಆಗಲು ತಯಾರಾಗಿದೆ ಎಂಬೊತ್ತಿಗೆ ನಿಮ್ಮ ಆಂಡ್ರಾಯ್ಡ್​ ಫೋನ್​ನಿಂದ ವಾಟ್ಸ್​ಆ್ಯಪ್ ಸೈನ್​ಔಟ್ ಆಗುತ್ತದೆ. ನಂತರ ಅಲ್ಲೆ ಕಾಣಿಸುವ NEXT ಮತ್ತು CONTINUE ಬಟನ್ ಆಯ್ಕೆ ಮಾಡಿ.
  • ನಂತರ ನಿಮ್ಮ ಐಫೋನ್​ನಲ್ಲಿ ಆ್ಯಪ್ ಸ್ಟೋರ್​ಗೆ ತೆರಳಿ ವಾಟ್ಸ್ಆ್ಯಪ್ ಹೊಸ ವರ್ಷನ್ ಅನ್ನು ಡೌನ್​ಲೋಡ್ ಮಾಡಬೇಕು.
  • ಇನ್​ಸ್ಟಾಲ್ ಮಾಡಿದ ಬಳಿಕ ವಾಟ್ಸ್​ಆ್ಯಪ್ ಓಪನ್ ಮಾಡಿ ಆಂಡ್ರಾಯ್ಡ್ ಫೋನ್​ನಲ್ಲಿದ್ದ ವಾಟ್ಸ್​ಆ್ಯಪ್ ನಂಬರ್ ಅನ್ನು ಹಾಕಿ ಲಾಗಿನ್ ಆಗಿ.
  • ನಂತರ ಸ್ಟಾರ್ಟ್​ ಬಟನ್ ಒತ್ತಿ ಮುಂದಿನ ಸವಾಲವನ್ನು ಓದಿ ಮುಂದುವರೆಯಿರಿ. ಎಲ್ಲ ಅಧಿಸೂಷನೆಗಳು ಮುಗಿದ ನಂತರ ವಾಟ್ಸ್​ಆ್ಯಪ್ ಪೂರ್ಣವಾಗಿ ತೆರೆದು ನಿಮ್ಮ ಹಳೆಯ ಚಾಟ್​ಗಳು ಕಾಣಿಸಲು ಪ್ರಾರಂಭವಾಗುತ್ತದೆ.

Published On - 12:21 pm, Tue, 26 July 22

ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್