AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gmail: ನಿಮ್ಮ ಜಿಮೇಲ್​ನಲ್ಲಿ ಸ್ಟೋರೇಜ್ ಫುಲ್ ಆಗಿದೆಯೇ?: ದೊಡ್ಡ ಘಾತ್ರದ ಫೈಲ್​​ಗಳನ್ನು ಸೆಕೆಂಡ್​ಗಳಲ್ಲಿ ಡಿಲೀಟ್ ಮಾಡಿ

ಜಿಮೇಲ್​ನಲ್ಲಿ 15GB ವರೆಗೆ ಮಾತ್ರ ಫೋಟೋ, ವಿಡಿಯೋ ಅಥವಾ ಇತರೆ ಏನಾದರು ಫೈಲ್​ಗಳು ಇಡಲು ಸಾಧ್ಯ. ಸ್ಟೋರೇಜ್ ಫುಲ್ ಆದರೆ ಯಾವುದೇ ಫೈಲ್ ಅಪ್ಲೋಡ್ ಮಾಡಲು ಆಗುವುದಿಲ್ಲ.

Gmail: ನಿಮ್ಮ ಜಿಮೇಲ್​ನಲ್ಲಿ ಸ್ಟೋರೇಜ್ ಫುಲ್ ಆಗಿದೆಯೇ?: ದೊಡ್ಡ ಘಾತ್ರದ ಫೈಲ್​​ಗಳನ್ನು ಸೆಕೆಂಡ್​ಗಳಲ್ಲಿ ಡಿಲೀಟ್ ಮಾಡಿ
Gmail
TV9 Web
| Updated By: Vinay Bhat|

Updated on:Jul 25, 2022 | 3:13 PM

Share

ಗೂಗಲ್ (Google) ಒಡೆತನದ ಜೀಮೇಲ್ ಅನ್ನು ವಿಶ್ವದಲ್ಲಿ ಕೋಟಿಗಟ್ಟಲೆ ಜನರು ಉಪಯೋಗಿಸುತ್ತಿದ್ದಾರೆ. ಅದು ವೈಯಕ್ತಿಕ ಕೆಸಲಕ್ಕೆ ಆಗಿರಬಹುದು ಅಥವಾ ಕಛೇರಿ ಕೆಲಸದ ವಿಚಾರವಾಗಿ ಆಗಿರಬಹುದು. ಹಾಗಂತ ಜಿಮೇಲ್ (Gmail)​ನಲ್ಲಿ ನಮಗೆ ಬೇಕಾದ ಎಲ್ಲ ಫೈಲ್​ಗಳ್ನು ತುಂಬಿಸಿ ಇಡಲು ಸಾಧ್ಯವಿಲ್ಲ. ಯಾಕೆಂದರೆ ಇದರಲ್ಲಿ 15GB ವರೆಗೆ ಮಾತ್ರ ಫೋಟೋ, ವಿಡಿಯೋ ಅಥವಾ ಇತರೆ ಏನಾದರು ಫೈಲ್​ಗಳು ಇಡಲು ಸಾಧ್ಯ. ಸ್ಟೋರೇಜ್ ಫುಲ್ ಆದರೆ ಯಾವುದೇ ಫೈಲ್ ಅಪ್ಲೋಡ್ ಮಾಡಲು ಆಗುವುದಿಲ್ಲ. 15 ಜಿಬಿ ವರೆಗೆ ಉಚಿತ ಸಂಗ್ರಹಣೆಯನ್ನು ಬಳಸಿದ ನಂತರ ಸ್ಪೇಸ್ ಇಲ್ಲ ಎಂಬ ನೋಟಿಫಿಕೇಶನ್ ಬರುತ್ತದೆ. ಹೀಗಿರುವಾಗ ಕೆಲವೊಂಡು ಟ್ರಿಕ್ಸ್ (Tricks) ಉಪಯೋಗಿಸಿ ಗೂಗಲ್ ಸ್ಟೋರೇಜ್ ಅನ್ನು ಉಪಯೋಗಿಸಬಹುದು. ಅದು ಹೇಗೆ?, ಇಲ್ಲಿದೆ ನೋಡಿ ಮಾಹಿತಿ.

ಮೊದಲು ನೀವು ನಿಮ್ಮ ಜಿಮೇಲ್​ನಲ್ಲಿರುವ ದೊಡ್ಡ ಘಾತ್ರದ ಫೈಲ್ ಅನ್ನು ಡಿಲೀಟ್ ಮಾಡಬೇಕು. ಇದಕ್ಕಾಗಿ ನೀವು ನಿಮ್ಮ ಜಿಮೇಲ್ ಖಾತೆಗೆ ಲಾಗಿನ್ ಆಗಿ ಮತ್ತು ಸರ್ಚ್ ಬಾರ್​ನಲ್ಲಿ (Search mail) ‘has: attachment larger:10M’ ನಲ್ಲಿ ಎಂದು ಟೈಪ್ ಮಾಡಿ. ಈಗ 10MB ಗಾತ್ರದ ಅಟ್ಯಾಚ್ ಮೆಂಟ್ ಗಳಿರುವ ಎಲ್ಲಾ ಇಮೇಲ್‌ಗಳು ನಿಮಗೆ ಲಭಿಸುತ್ತವೆ. ಇವುಗಳಲ್ಲಿ ಅನಗತ್ಯವಾದ ಎಲ್ಲಾ ಇಮೇಲ್‌ಗಳನ್ನು ಆಯ್ಕೆಮಾಡಿ ಡಿಲೀಟ್ ಮಾಡಿ. ಕೇವಲ ಡಿಲೀಟ್ ಮಾಡಿ ಬಿಟ್ಟರೆ ಸಾಲದು ಇದಾದ ನಂತರ Trashನಲ್ಲಿರುವ ಇಮೇಲ್ ಗಳನ್ನು, Spam ಫೋಲ್ಡರ್​​ನಲ್ಲಿರುವ ಇಮೇಲ್ ಗಳನ್ನೂ ಡಿಲೀಟ್ ಮಾಡಬೇಕು.

ಇನ್ನು ನಿಮಗೆ ಅನೇಕ ಜಾಹೀರಾತುಗಳ ಮೇಲ್ ಅಥವಾ ಕೆಲವು ನ್ಯೂಸ್ ಲೆಟರ್ಸ್ ಈರೀತಿಯ ಮೇಲ್​ಗಳು ಬರುತ್ತಲೇ ಇರುತ್ತದೆ. ಇದನ್ನು ಅನ್‌ಸಬ್‌ಸ್ಕ್ರೈಬ್ ಮಾಡಬಹುದು ಮತ್ತು ಗೂಗಲ್ ಸಂಗ್ರಹ ಸ್ಥಳವನ್ನು ಮುಕ್ತಗೊಳಿಸಲು ಹಳೆಯದನ್ನು ಅಳಿಸಬಹುದು. ಉದಾಹರಣೆಗೆ, ಈ ಇಮೇಲ್‌ಗಳನ್ನು ಪಡೆಯುವುದನ್ನು ನಿಲ್ಲಿಸಲು ನಿಮಗ ಬರುವ ನ್ಯೂಸ್ ಲೆಟರ್​ಗಳನ್ನು ನೀವು ಅನ್‌ಸಬ್‌ಸ್ಕ್ರೈಬ್ ಮಾಡಿ.

ಇದನ್ನೂ ಓದಿ
Image
WhatsApp: ಬಹುಮುಖ್ಯವಾದ ಕಾಂಟೆಕ್ಟ್ ಅನ್ನು ವಾಟ್ಸ್​ಆ್ಯಪ್ ಚಾಟ್​ನಲ್ಲಿ ಪಿನ್ ಮಾಡುವುದು ಹೇಗೆ?
Image
Best Camera Phone: ಆಕರ್ಷಕ ಟ್ರಿಪಲ್ ಕ್ಯಾಮೆರಾ ಹೊಂದಿರುವ 15,000 ರೂ. ಒಳಗಿನ ಬೆಸ್ಟ್​ ಫೋನ್ ಇಲ್ಲಿದೆ ನೋಡಿ
Image
Oppo Reno 8: ಐಫೋನ್ 12 ಡಿಸೈನ್ ಹೊಂದಿರುವ ಬೆಸ್ಟ್​​ ಕ್ಯಾಮೆರಾ ಫೋನ್ ಒಪ್ಪೋ ರೆನೋ 8 ಇಂದು ಮಾರಾಟ
Image
BSNL: ಬಿಎಸ್​ಎನ್​ಎಲ್​ನ 100 ರೂ. ಒಳಗಿನ ಈ ಮೂರು ಪ್ಲಾನ್​ನಲ್ಲಿದೆ ಬಂಪರ್ ಆಫರ್

ಗೂಗಲ್ ನೀತಿಗಳ ಪ್ರಕಾರ ಮೇಲಿಂಗ್ ಪಟ್ಟಿಯು ನಿಮಗೆ ಅನಗತ್ಯ ಇಮೇಲ್‌ಗಳನ್ನು ಕಳುಹಿಸುವುದನ್ನು ನಿಲ್ಲಿಸಲು ಕೆಲವು ದಿನಗಳು ತೆಗೆದುಕೊಳ್ಳಬಹುದು. ಅನಗತ್ಯ ಇಮೇಲ್‌ಗಳಿಂದ ಅನ್‌ಸಬ್‌ಸ್ಕ್ರೈಬ್ ಮಾಡಲು, ನಿಮ್ಮ Gmail ಖಾತೆಯನ್ನು ತೆರೆಯಿರಿ ಮತ್ತು ನೀವು ಅನ್‌ಸಬ್‌ಸ್ಕ್ರೈಬ್ ಮಾಡಲು ಬಯಸುವ ಯಾವುದೇ ಇಮೇಲ್ ಅನ್ನು ತೆರೆಯಿರಿ. ಕಳುಹಿಸುವವರ ಹೆಸರಿನ ಬಳಿ ಇರುವ ಅನ್‌ಸಬ್‌ಸ್ಕ್ರೈಬ್ ಬಟನ್ ಅನ್ನು ಈಗ ಟ್ಯಾಪ್ ಮಾಡಿ.

Published On - 3:11 pm, Mon, 25 July 22

ರೆಬೆಲ್ ನಾಯಕರಲ್ಲಿ ಕುಮಾರ ಬಂಗಾರಪ್ಪ ಉಳಿದವರಿಗಿಂತ ಜಾಸ್ತಿ ಜನಪ್ರಿಯ
ರೆಬೆಲ್ ನಾಯಕರಲ್ಲಿ ಕುಮಾರ ಬಂಗಾರಪ್ಪ ಉಳಿದವರಿಗಿಂತ ಜಾಸ್ತಿ ಜನಪ್ರಿಯ
ಅಘೋಷಿತ ಬಂದ್ ಸ್ಥಿತಿಯಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳು
ಅಘೋಷಿತ ಬಂದ್ ಸ್ಥಿತಿಯಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳು
ಮಂತ್ರಿ ಸ್ಥಾನ ಬೇಕಿಲ್ಲ, ಶಿವಕುಮಾರ್ ಮುಖ್ಯಮಂತ್ರಿಯಾದರೆ ಸಾಕು: ಯೋಗೇಶ್ವರ್
ಮಂತ್ರಿ ಸ್ಥಾನ ಬೇಕಿಲ್ಲ, ಶಿವಕುಮಾರ್ ಮುಖ್ಯಮಂತ್ರಿಯಾದರೆ ಸಾಕು: ಯೋಗೇಶ್ವರ್
ಅಮ್ಮನಿಗೆ ಕಾರು ಗಿಫ್ಟ್ ಕೊಟ್ಟ ಪ್ರತಾಪ್, ಬಿಕ್ಕಿ ಬಿಕ್ಕಿ ಅತ್ತ ತಾಯಿ
ಅಮ್ಮನಿಗೆ ಕಾರು ಗಿಫ್ಟ್ ಕೊಟ್ಟ ಪ್ರತಾಪ್, ಬಿಕ್ಕಿ ಬಿಕ್ಕಿ ಅತ್ತ ತಾಯಿ
Video: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ರಕ್ಷಿಸಿದ ಕಾಡಾನೆ ಹಿಂಡು
Video: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ರಕ್ಷಿಸಿದ ಕಾಡಾನೆ ಹಿಂಡು
ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ
ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ
ಸುಬ್ರಹ್ಮಣ್ಯನ ಲಹರಿಗಳಿರುವ ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸುಬ್ರಹ್ಮಣ್ಯನ ಲಹರಿಗಳಿರುವ ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!