BSNL: ಬಿಎಸ್​ಎನ್​ಎಲ್​ನ 100 ರೂ. ಒಳಗಿನ ಈ ಮೂರು ಪ್ಲಾನ್​ನಲ್ಲಿದೆ ಬಂಪರ್ ಆಫರ್

ಬಿಎಸ್ ​ಎನ್​ ಎಲ್ ಸೈಲೆಂಟ್ ಆಗಿ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಇದರಲ್ಲೂ ಬಜೆಟ್ ಬೆಲೆಯ ಆಕರ್ಷಕ ಯೋಜನೆಗಳು ಇವೆ. ಅವುಗಳಲ್ಲಿ ಮೂರು ಮುಖ್ಯ ಪ್ರಿಪೇಯ್ಡ್ ಪ್ಲಾನ್ ಬಗ್ಗೆ ಇಲ್ಲಿ ತಿಳಿಸಲಾಗಿದೆ.

TV9 Web
| Updated By: Vinay Bhat

Updated on: Jul 24, 2022 | 2:15 PM

ಟೆಲಿಕಾಂ ಮಾರುಕಟ್ಟೆಯಲ್ಲಿ ಇಂದು ಖಾಸಗಿ ಕಂಪನಿಗಳ ಹಾವಳಿ ಹೆಚ್ಚಾಗಿದೆ. ರಿಲಯನ್ಸ್ ಜಿಯೋ, ಭಾರ್ತಿ ಏರ್ಟೆಲ್ ಹಾಗೂ ವೊಡಾಫೋನ್ ಐಡಿಯಾ (ವಿ) ನಡುವೆ ಸರ್ಕಾರಿ ಸಾಮ್ಯದ ಬಿಎಸ್ ​ಎನ್​ ಎಲ್ ಸಂಸ್ಥೆಗೆ ದೊಡ್ಡ ಮಟ್ಟದಲ್ಲಿ ಯಶಸ್ಸು ಸಿಗುತ್ತಿಲ್ಲ.

1 / 6
ಆದರೂ ತನ್ನ ಬಳಕೆದಾರರಿಗೆ ಆಕರ್ಷಕ ಆಫರ್​ ಗಳನ್ನು ಕೊಡುವುದರಲ್ಲಿ ಬಿಎಸ್​ ಎನ್​ ಎಲ್ ಹಿಂದೆಬಿದ್ದಿಲ್ಲ. ಒಂದುಕಡೆ ಜಿಯೋವನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟಕ್ಕೇರಲು ಏರ್ಟಲ್ ಹರಸಾಹಸ ಪಡುತ್ತಿದ್ದರೆ ಇತ್ತ ಬಿಎಸ್ ​ಎನ್​ ಎಲ್ ಸೈಲೆಂಟ್ ಆಗಿ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಇದರಲ್ಲೂ ಬಜೆಟ್ ಬೆಲೆಯ ಆಕರ್ಷಕ ಯೋಜನೆಗಳು ಇವೆ. ಅವುಗಳಲ್ಲಿ ಮೂರು ಮುಖ್ಯ ಪ್ರಿಪೇಯ್ಡ್ ಪ್ಲಾನ್ ಬಗ್ಗೆ ಇಲ್ಲಿ ತಿಳಿಸಲಾಗಿದೆ.

2 / 6
ಬಿಎಸ್ ​ಎನ್​ ಎಲ್ 87 ರೂ. ಪ್ರಿಪೇಯ್ಡ್ ಪ್ಲಾನ್: ಬಿಎಸ್ ​ಎನ್​ ಎಲ್​ ನ ಈ 87 ರೂಪಾಯಿಯ ಪ್ರಿಪೇಯ್ಡ್ ಪ್ಲಾನ್ 14 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಇದರಲ್ಲಿ ಅನಿಯಮಿತ ವಾಯ್ಸ್ ಕರೆ ಸೌಲಭ್ಯ ನೀಡಲಾಗಿದೆ. ಪ್ರತಿ ದಿನ 1 ಜಿಬಿ ಡೇಟಾ ಸಿಗಲಿದ್ದು, 40Kbps ಸ್ಪೀಡ್​ನಲ್ಲಿ ಕಾರ್ಯನಿರ್ವಹಿಸುತ್ತದೆ. ದಿನಕ್ಕೆ 100 ಎಸ್​ ಎಮ್ ​ಎಸ್ ಉಚಿತ. ಇದು ಬಿಎಸ್​ ಎನ್ ​ಎಲ್ ​ನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿರುವ ಅತ್ಯುತ್ತಮ ಯೋಜನೆಯಾಗಿದೆ.

3 / 6
ಬಿಎಸ್ ​ಎನ್​ ಎಲ್ 97 ರೂ. ಪ್ರಿಪೇಯ್ಡ್ ಪ್ಲಾನ್: ಬಿಎಸ್ ​ಎನ್​ ಎಲ್​ 100 ರೂ. ಒಳಗಡೆ ಇರುವ ಯೋಜನೆಯಲ್ಲಿ 97 ರೂಪಾಯಿಯ ಪ್ರಿಪೇಯ್ಡ್ ಪ್ಲಾನ್ ಕೂಡ ಒಂದಾಗಿದ್ದು ಇದು 18 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಇದರಲ್ಲಿ ಅನಿಯಮಿತ ವಾಯ್ಸ್ ಕರೆ ಸೌಲಭ್ಯ ನೀಡಲಾಗಿದೆ.

4 / 6
ಈ 97 ರೂ. ಪ್ಲಾನ್ ನಲ್ಲಿ ಪ್ರತಿ ದಿನ 2 ಜಿಬಿ ಡೇಟಾ ಸಿಗಲಿದ್ದು, ಡೇಟಾ ಮುಗಿದ ಬಳಿಕ 80Kbps ಸ್ಪೀಡ್ ​ನಲ್ಲಿ ಕಾರ್ಯನಿರ್ವಹಿಸುತ್ತದೆ. ಆದರೆ, ಇದರಲ್ಲಿ ಯಾವುದೇ ಉಚಿತ ಎಸ್ ​ಎಮ್​ ಎಸ್ ಪ್ಯಾಕ್ ಇರುವುದಿಲ್ಲ.

5 / 6
ಬಿಎಸ್ ​ಎನ್​ ಎಲ್ 99 ರೂ. ಪ್ರಿಪೇಯ್ಡ್ ಪ್ಲಾನ್: ಬಿಎಸ್ ​ಎನ್​ ಎಲ್​ ನ 99 ರೂಪಾಯಿಯ ಪ್ರಿಪೇಯ್ಡ್ ಪ್ಲಾನ್ 18 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಇದರಲ್ಲಿ ಅನಿಯಮಿತ ವಾಯ್ಸ್ ಕರೆಯನ್ನು ಮಾಡಬಹುದು. PRBT ಸೌಲಭ್ಯ ಕೂಡ ಇದೆ. ಆದರೆ, ಇದರಲ್ಲಿ ಯಾವುದೇ ಇತರೆ ಪ್ಲಾನ್​ ಗಳು ಇರುವುದಿಲ್ಲ.

6 / 6
Follow us