- Kannada News Photo gallery Best Smartphone Check best triple camera phones under Rs 15000 in India right now
Best Camera Phone: ಆಕರ್ಷಕ ಟ್ರಿಪಲ್ ಕ್ಯಾಮೆರಾ ಹೊಂದಿರುವ 15,000 ರೂ. ಒಳಗಿನ ಬೆಸ್ಟ್ ಫೋನ್ ಇಲ್ಲಿದೆ ನೋಡಿ
Best Triple Cameras Phone: ಭಾರತದಲ್ಲಿ ಬಿಡುಗಡೆ ಆಗುವ ಬಹುತೇಕ ಎಲ್ಲ ಸ್ಮಾರ್ಟ್ ಫೋನ್ ಗಳು ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಅದು ಕಡಿಮೆ ಬೆಲೆಗೆ ಕೂಡ ಲಭ್ಯವಿದೆ. ಹಾಗಾದ್ರೆ ದೇಶದಲ್ಲಿ ಆಕರ್ಷಕ ಟ್ರಿಪಲ್ ಕ್ಯಾಮೆರಾ ಹೊಂದಿರುವ 15,000 ರೂ. ಒಳಗಿನ ಬೆಸ್ಟ್ ಫೋನ್ ಗಳು ಯಾವುವು ಎಂಬುದನ್ನು ನೋಡೋಣ.
Updated on:Jul 25, 2022 | 12:09 PM

ಭಾರತದಲ್ಲಿ ಈಗಂತು ಕ್ಯಾಮೆರಾ ಫೋನ್ ಗಳಿಗೆ ಭರ್ಜರಿ ಬೇಡಿಕೆ ಶುರುವಾಗಿದೆ. ಒಪ್ಪೋ ಸಂಸ್ಥೆ ಯಾವಾಗ ಕಡಿಮೆ ಬೆಲೆಗೆ ಅತ್ಯುತ್ತಮ ಕ್ಯಾಮೆರಾ ಫಿಲ್ಟರ್ ಇರುವ ಸ್ಮಾರ್ಟ್ ಫೋನನ್ನು ತಯಾರಿಸಿ ಬಿಡುಗಡೆ ಮಾಡಿತೋ ಅವಾಗಿನಿಂದ ಇತರೆ ಮೊಬೈಲ್ ಬ್ರ್ಯಾಂಡ್ ಕೂಡ ಪೈಪೋಟಿಗೆ ಬಿದ್ದಂತೆ ಬೆಸ್ಟ್ ಕ್ಯಾಮೆರಾ ಕ್ವಾಲಿಟಿ ಇರುವ ಫೋನನ್ನು ಅನಾವರಣ ಮಾಡುತ್ತಿದೆ.

ಈಗ ಭಾರತದಲ್ಲಿ 108 ಮೆಗಾಫಿಕ್ಸೆಲ್ ಸಾಮರ್ಥ್ಯದ ಸೆನ್ಸಾರ್ ಇರುವ ಫೋನ್ ಬರುವುದು ಮಾಮೂಲಾಗಿ ಬಿಟ್ಟಿದೆ. ಭಾರತದಲ್ಲಿ ಬಿಡುಗಡೆ ಆಗುವ ಬಹುತೇಕ ಎಲ್ಲ ಸ್ಮಾರ್ಟ್ ಫೋನ್ ಗಳು ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಅದು ಕಡಿಮೆ ಬೆಲೆಗೆ ಕೂಡ ಲಭ್ಯವಿದೆ. ಹಾಗಾದ್ರೆ ದೇಶದಲ್ಲಿ ಆಕರ್ಷಕ ಟ್ರಿಪಲ್ ಕ್ಯಾಮೆರಾ ಹೊಂದಿರುವ 15,000 ರೂ. ಒಳಗಿನ ಬೆಸ್ಟ್ ಫೋನ್ ಗಳು ಯಾವುವು ಎಂಬುದನ್ನು ನೋಡೋಣ.

ಒಪ್ಪೋ K10: ಈ ಸ್ಮಾರ್ಟ್ ಫೋನ್ ನ ಬೆಲೆ 14,990 ರೂ. ಆಗಿದೆ. ಇದರಲ್ಲಿ 50 ಮೆಗಾಫಿಕ್ಸೆಲ್ ನ ಮುಖ್ಯ ಕ್ಯಾಮೆರಾ ಇದ್ದು, ಎರಡು 2 ಮೆಗಾಫಿಕ್ಸೆಲ್ ನ ಪ್ರೈಮರಿ ಸೆನ್ಸಾರ್ ಕ್ಯಾಮೆರಾ ನೀಡಲಾಗಿದೆ. 16 ಮೆಗಾಫಿಕ್ಸೆಲ್ ಸೆಲ್ಫೀ ಕ್ಯಾಮೆರಾ ಕೂಡಿದೆ. 5000mAh ಸಾಮರ್ಥ್ಯದ ಬ್ಯಾಟರಿ ಸೌಲಭ್ಯವಿದೆ.

ಗ್ಯಾಲಕ್ಸಿ F13: ಸ್ಯಾಮ್ ಸಂಗ್ ಕಂಪನಿಯ ಗ್ಯಾಲಕ್ಸಿ F13 ಫೋನಿನ ಬೆಲೆ 11,999 ರೂ. ಇದರಲ್ಲಿ 50MP + 5MP + 2 MP ಪ್ರೈಮರಿ ಸೆನ್ಸಾರ್ ಕ್ಯಾಮೆರಾ ಅಳವಡಿಸಲಾಗಿದೆ. 6.6 ಇಂಚಿನ ಡಿಸ್ ಪ್ಲೇ ಹೊಂದಿದ್ದು, ಬರೋಬ್ಬರಿ 6000mAh ಸಾಮರ್ಥ್ಯ ಬಲಿಷ್ಠ ಬ್ಯಾಟರಿ ಲೈಫ್ ನೀಡಲಾಗಿದೆ.

ಪೋಕೋ M3 ಪ್ರೊ: 5G ಬೆಂಬಲ ಪಡೆದುಕೊಂಡಿರುವ ಈ ಸ್ಮಾರ್ಟ್ ಫೋನಿನ ಬೆಲೆ 13,999 ರೂ. ಇದರಲ್ಲಿ 48MP + 2MP + 2 MP ಸಾಮರ್ಥ್ಯದ ಟ್ರಿಪಲ್ ಕ್ಯಾಮೆರಾ ನೀಡಲಾಗಿದೆ. 5000mAh ಸಾಮರ್ಥ್ಯದ ಬ್ಯಾಟರಿ ಇದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 700 ಪ್ರೊಸೆಸರ್ ಅಳವಡಿಸಲಾಗಿದೆ.

ರೆಡ್ಮಿ ನೋಟ್ 10T: ಈ ಫೋನಿನ ಬೆಲೆ 11,999 ರೂ. ಇದು 48MP + 2MP + 2 MP ಸಾಮರ್ಥ್ಯದ ಟ್ರಿಪಲ್ ಕ್ಯಾಮೆರಾ ನೀಡಲಾಗಿದೆ. 5000mAh ಸಾಮರ್ಥ್ಯದ ಬ್ಯಾಟರಿ ಇದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 700 ಪ್ರೊಸೆಸರ್ ಅಳವಡಿಸಲಾಗಿದೆ.

ರೆಡ್ಮಿ ನೋಟ್ 10T: ಈ ಫೋನಿನ ಬೆಲೆ 11,999 ರೂ. ಇದು 48MP + 2MP + 2 MP ಸಾಮರ್ಥ್ಯದ ಟ್ರಿಪಲ್ ಕ್ಯಾಮೆರಾ ನೀಡಲಾಗಿದೆ. 5000mAh ಸಾಮರ್ಥ್ಯದ ಬ್ಯಾಟರಿ ಇದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 700 ಪ್ರೊಸೆಸರ್ ಅಳವಡಿಸಲಾಗಿದೆ.

ರಿಯಲ್ ಮಿ ನಾರ್ಜೊ 50A: ಈ ಫೋನಿನ ಬೆಲೆ 11,499 ರೂ. ಇದು 50MP + 2MP + 2 MP ಸಾಮರ್ಥ್ಯದ ಟ್ರಿಪಲ್ ಕ್ಯಾಮೆರಾ ನೀಡಲಾಗಿದೆ. 6000mAh ಸಾಮರ್ಥ್ಯದ ಬ್ಯಾಟರಿ ಇದೆ. ಮೀಡಿಯಾ ಟೆಕ್ ಹೀಲಿಯೊ G85 ಪ್ರೊಸೆಸರ್ ಅಳವಡಿಸಲಾಗಿದೆ.
Published On - 12:09 pm, Mon, 25 July 22









