WhatsApp: ಬಹುಮುಖ್ಯವಾದ ಕಾಂಟೆಕ್ಟ್ ಅನ್ನು ವಾಟ್ಸ್ಆ್ಯಪ್ ಚಾಟ್ನಲ್ಲಿ ಪಿನ್ ಮಾಡುವುದು ಹೇಗೆ?
WhatsApp Tips and Tricks: ವಾಟ್ಸ್ಆ್ಯಪ್ನಲ್ಲಿ ಚಿಕ್ಕದೊಂದು ಟ್ರಿಕ್ ಉಪಯೋಗಿಸಿ ನೀವು ಹೆಚ್ಚಾಗಿ ಚಾಟ್ ಮಾಡುವಂತಹ ಕಾಂಟೆಕ್ಟ್ ಅನ್ನು ಟಾಪ್ನಲ್ಲಿ ಕಾಣಿಸುವಂತೆ ಮಾಡಬಹುದು.
ಯಾರಿಗಾದರು ತಕ್ಷಣ ಮೆಸೇಜ್ ಮಾಡಬೇಕು ಅಥವಾ ಫೋಟೋ, ವಿಡಿಯೋವನ್ನು ಕಳುಹಿಸಬೇಕು ಎಂದಾಗ ನಮಗೆ ಕೂಡಲೇ ನೆನಪಾಗುವುದು ವಾಟ್ಸ್ಆ್ಯಪ್ (WhatsApp). ಅದು ಆಂಡ್ರಾಯ್ಡ್ ಆಗಿರಬಹುದು ಅಥವಾ ಐಫೋನ್ ಬಳಕೆದಾರರಿಗೆ ಆಗಿರಬಹುದು. ವಾಟ್ಸ್ಆ್ಯಪ್ ಅನ್ನು ಚಾಟ್ ಮಾಡಲು, ಫೋಟೋ (Photo), ವಿಡಿಯೋ ಅಥವಾ ಡಾಕ್ಯುಮೆಂಟ್ ಕಳುಹಿಸಲು, ಸ್ಟೇಟಸ್ ಹಂಚಿಕೊಳ್ಳಲು ಮುಖ್ಯವಾಗಿ ಉಪಯೋಗಿಸುತ್ತಾರೆ. ಕೆಲವರಿಗೆ ವಾಟ್ಸ್ಆ್ಯಪ್ನಲ್ಲಿ ಅನೇಕ ಜನರು ಸಂಪರ್ಕ ಇರುತ್ತದೆ. ವಾಟ್ಸ್ಆ್ಯಪ್ನಲ್ಲಿ ಮೆಸೇಜ್ (Message) ಬರುತ್ತಾ ಇದ್ದರೆ ನಮಗೆ ಅಗತ್ಯವಿರುವ ಮುಖ್ಯವಾದ ಕಾಂಟೆಕ್ಟ್ಗಳು ಕೆಳಗಡೆ ಸಾಗಿ ಅವರನ್ನು ಹುಡುಕುವುದೇ ದೊಡ್ಡ ಸವಾಲಾಗುತ್ತದೆ. ಈ ಸಂದರ್ಭ ಚಿಕ್ಕದೊಂದು ಟ್ರಿಕ್ ಉಪಯೋಗಿಸಿ ನೀವು ಹೆಚ್ಚಾಗಿ ಚಾಟ್ ಮಾಡುವಂತಹ ಕಾಂಟೆಕ್ಟ್ ಅನ್ನು ಟಾಪ್ನಲ್ಲಿ ಕಾಣಿಸುವಂತೆ ಮಾಡಬಹುದು.
ಹೌದು, ವಾಟ್ಸ್ಆ್ಯಪ್ನಲ್ಲಿ ಪಿನ್ ಚಾಟ್ ಎಂಬ ವಿಶೇಷ ಫೀಚರ್ ಇದೆ. ಇದರ ಮೂಲಕ ನಿಮಗೆ ಅಗತ್ಯವಿರುವ ಕಾಂಟೆಕ್ಟ್ ಅನ್ನು ಯಾವಾಗಲು ಮೊದಲಿಗೆ ಸಿಗುವಂತೆ ಮಾಡಬಹುದು. ಇದು ವಾಟ್ಸ್ಆ್ಯಪ್ ತೆರೆದ ಕೂಡಲೇ ಮೇಲ್ಬಾಗದಲ್ಲಿ ಕಾಣಿಸುತ್ತದೆ. ಈ ಪಿನ್ ಚಾಟ್ ಆಯ್ಕೆ ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಗೆ ಲಭ್ಯವಿದೆ.
ಈ ಆಯ್ಕೆಯನ್ನು ಬಳಸಲು ಮೊದಲು ನೀವು ವಾಟ್ಸ್ಆ್ಯಪ್ ತೆರೆಯಿರಿ ಮತ್ತು ಆಂಡ್ರಾಯ್ಡ್ ಬಳಕೆದಾರರಾಗಿದ್ದರೆ ಅಗತ್ಯವಿರುವ ಚಾಟ್ ಅನ್ನು 2 ಸೆಕೆಂಡ್ ಹೋಲ್ಡ್ ಮಾಡಿಕೊಟ್ಟುಕೊಳ್ಳಿ. ನಂತರ ಮೇಲೆ ಕಾಣುವ ಪಿನ್ ಆಯ್ಕೆ ಅನ್ನು ಸೆಲೆಕ್ಟ್ ಮಾಡಿ. ಅಂತೆಯೆ ಐಫೋನ್ ಬಳಕೆದಾರರು ಚಾಟ್ ಅನ್ನು ಸ್ವೈಪ್ ಮಾಡುವ ಮೂಲಕ ಈ ಫೀಚರ್ನ ಪ್ರಯೋಜನ ಪಡೆಯಬಹುದು. ಇನ್ನು ಅನ್ಪಿನ್ ಮಾಡಲು ಅದೇರೀತಿ ಮೆಸೇಜ್ ಅನ್ನು ಕೆಲ ಸೆಕೆಂಡ್ ಒತ್ತಿ ಹಿಡಿದು ಅನ್ಪಿನ್ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಸ್ಟಾರ್ ಮೆಸೇಜ್:
ವಾಟ್ಸ್ಆ್ಯಪ್ ಸ್ಟಾರ್ ಮೆಸೆಜ್ ಆಯ್ಕೆಯನ್ನು ಹೊಂದಿದ್ದು, ಬಳಕೆದಾರರು ಪ್ರಮುಖ ಎನಿಸುವ ಮೆಸೆಜ್‌ಗಳನ್ನು ಸ್ಟಾರ್ ಮಾರ್ಕ್ ಮಾಡುವ ಮೂಲಕ ಅವುಗಳನ್ನು ಸೇವ್ ಮಾಡಬಹುದಾಗಿದೆ. ಈ ಆಯ್ಕೆಗಾಗಿ ನೀವು ಸಂದೇಶಗಳನ್ನು ಹೊಂದಿರುವ ಸಂಭಾಷಣೆಯನ್ನು ತೆರೆಯಬೇಕು. ಈಗ ಆ ಮೆಸೇಜ್ ಮೇಲೆ ದೀರ್ಘವಾಗಿ ಒತ್ತುವ ಮೂಲಕ ನಿಮಗೆ ಬೇಕಾದ ಸಂದೇಶವನ್ನು ಆಯ್ಕೆ ಮಾಡಿ. ನೀವು ಈ ರೀತಿ ಅನೇಕ ಮೆಸೇಜ್ ಆಯ್ಕೆ ಮಾಡಬಹುದು. ಒಮ್ಮೆ ಬೇಕಾದ ಮೆಸೇಜ್ ಆಯ್ಕೆ ಮಾಡಿದರೆ, ಚಾಟ್ ವಿಂಡೋದ ಮೇಲಿನ ಟ್ಯಾಬ್‌ನಲ್ಲಿ ಸ್ಟಾರ್ ಐಕಾನ್ ಅನ್ನು ಕಾಣುತ್ತೀರಿ. ಹೀಗೆ ಪ್ರಮುಖ ಎನಿಸುವ ಮೆಸೆಜ್‌ಗಳನ್ನು ಸ್ಟಾರ್ ಮಾರ್ಕ್ ಮಾಡುವ ಮೂಲಕ ಅವುಗಳನ್ನು ಸೇವ್ ಮಾಡಬಹುದಾಗಿದೆ.
ಅಂತೆಯೆ ವಾಟ್ಸ್ಆ್ಯಪ್ನಲ್ಲಿ ನೀವು ಸ್ಟಾರ್ ಮಾರ್ಕ್ ಮಾಡಿದ ಮೆಸೆಜ್ ಮತ್ತೆ ವೀಕ್ಷಿಸಲು ಪರದೆಯ ಮೇಲಿನ ಬಲ ಭಾಗ ದಲ್ಲಿರುವ ಮೂರು–ಡಾಟ್ ಮೆನುವನ್ನು ಟ್ಯಾಪ್ ಮಾಡಿ. ಡ್ರಾಪ್–ಡೌನ್ ಮೆನುವಿನಲ್ಲಿ ನೀವು “ಸ್ಟಾರ್ ಮಾರ್ಕ್ ಮಾಡಿದ ಮೆಸೆಜ್‌ಗಳು” ಆಯ್ಕೆಯನ್ನು ನೋಡುತ್ತೀರಿ. ಇದನ್ನು ಟ್ಯಾಪ್ ಮಾಡುವುದರಿಂದ ಸಂಪರ್ಕಗಳು ಮತ್ತು ಸಂಭಾಷಣೆಗಳಲ್ಲಿ ನಿಮ್ಮ ಸ್ಟಾರ್ ಹಾಕಿದ ಎಲ್ಲಾ ಸಂದೇಶಗಳನ್ನು ತೋರಿಸುತ್ತದೆ.